Swayambhu: ಟಾಲಿವುಡ್ ಸೂಪರ್ ಹಿಟ್ ಸಿನಿಮಾ ‘ಕಾರ್ತೀಕೇಯ2’ ಈ ಚಿತ್ರದ ಮೂಲಕ ನಟ ನಿಖಿಲ್ ಸಿದ್ದಾರ್ಥ್(Nikhil Siddhartha) ಖ್ಯಾತಿ ಹೆಚ್ಚಿದೆ. ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಿಖಿಲ್ ಸದ್ಯ ‘ಸ್ವಯಂಭು’(Swayambhu) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸಖತ್ ಬಝ್ ಕ್ರಿಯೇಟ್ ಮಾಡಿದ್ದು, ಇದೀಗ ಚಿತ್ರತಂಡದಿಂದ ಹೊರಬಂದ ಸುದ್ದಿ ಎಲ್ಲರೂ ಹೌಹಾರುವಂತೆ ಮಾಡಿದೆ.
‘ಕಾರ್ತಿಕೇಯ2’ ಬಿಗ್ ಸಕ್ಸಸ್ ನಿಖಿಲ್(Nikhil Siddhartha) ಸಿನಿ ಕೆರಿಯರ್‌ಗೆ ಬೂಸ್ಟ್ ನೀಡಿದ್ದು, ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಸ್ವಯಂಭು’(Swayambhu) ಸಿನಿಮಾ ಟಾಲಿವುಡ್‌ನಲ್ಲಿ ಸಖತ್ ಬಝ್‌ನಲ್ಲಿದ್ದು, ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇದೀಗ ಚಿತ್ರದ ಫೈಟಿಂಗ್ ಸೀನ್ ಒಂದಕ್ಕೆ ಚಿತ್ರತಂಡ 8ಕೋಟಿ ಖರ್ಚು ಮಾಡಲು ಹೊರಟಿದೆ. ಚಿತ್ರದ ಪ್ರಮುಖ ಹಂತದಲ್ಲಿ ಬರುವ ಈ ಆಕ್ಷನ್ ಸೀನ್‌ಗೆ 12 ದಿನ ಚಿತ್ರೀಕರಣ ನಡೆಯಲಿದ್ದು, ಬರೋಬ್ಬರಿ 8 ಕೋಟಿ ಈ ಒಂದು ಆಕ್ಷನ್ ಸೀನ್‌ಗೆ ಸುರಿಯಲಾಗ್ತಿದೆಯಂತೆ. ಇದಕ್ಕಾಗಿ ಹೈದ್ರಬಾದ್‌ನಲ್ಲಿ ಎರಡು ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು, 700 ಜನ ಕಲಾವಿದರು, ವಿಯೆಟ್ನಾಂ ಫೈಟರ್ಸ್ ಫೈಟಿಂಗ್ ಸೀನ್‌ನಲ್ಲಿ ಭಾಗಿಯಾಗಲಿದ್ದಾರೆ.
ಭರತ್ ಕೃಷ್ಣಮಾಚಾರಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾ ಪೀರಿಯಾಡಿಕ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡಿದೆ. ನಿಖಿಲ್ ವಾರಿಯರ್ ಅವತಾರವನ್ನು ತಾಳಿದ್ದು, ಪಾತ್ರಕ್ಕಾಗಿ ಸಾಕಷ್ಟು ಕಸರತ್ತು ಮಾಡಿದ್ದಾರೆ. ನಿಖಿಲ್ ಕೆರಿಯರ್‌ನ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ನಭಾ ನಟೇಶ್(Nabha Natesh), ಸಂಯುಕ್ತ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ.