Darshan: ಕಾಟೇರ(Katera) ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಬಿಗ್ ಹಿಟ್ ನೀಡಿದವರು ಡಿಬಾಸ್ ದರ್ಶನ್. ಆ ಮೂಲಕ ತಮ್ಮ ಬೃಹತ್ ಅಭಿಮಾನಿ ಬಳಗವನ್ನು ಸಂತೃಪ್ತಿಗೊಸಿದ್ರು. ಚಾಲೆಂಜಿಂಗ್ ಸ್ಟಾರ್ ಡೆವಿಲ್(Devil) ಅವತಾರ ತಾಳಿರೋದು ಗೊತ್ತೇ ಇದೆ. ಇದೀಗ ಅದೇ ತಂಡ ಸ್ವೀಟ್ ಸರ್ಪ್ರೈಸ್ ನೀಡಿದ್ದು, ಎಕ್ಸ್‌ಪೆಕ್ಟ್ ಮಾಡದೇ ನೀಡುತ್ತಿರುವ ಉಡುಗೊರೆಗೆ ಡಿಬಾಸ್(DBoss) ಭಕ್ತಗಣ ದಿಲ್ ಖುಷ್ ಆಗಿದೆ.
ಅರೇ,, ಶೂಟಿಂಗ್ ಶುರುವಾಗಿ ಬೆರಳೆಣಿಕೆ ದಿನವಾಗಿದೆ. ಅಷ್ಟರಲ್ಲೇ ದರ್ಶನ್ ಇಂಜ್ಯೂರಿಗೆ ಒಳಗಾಗಿದ್ರು. ಇದರ ಮಧ್ಯೆ ಅಂತಹದ್ದೇನು ಸರ್ಪ್ರೈಸ್ ಅಂತ ಲೆಕ್ಕಾಚಾರ ಮೂಡೋದು ಸಹಜ. ಅದಕ್ಕೆಲ್ಲ ಉತ್ತರ ಮೇಕಿಂಗ್ ವೀಡಿಯೋ. ಹೌದು, ಡೆವಿಲ್ ಚಿತ್ರತಂಡ ಸಿನಿಮಾ ಎಕ್ಸ್‌ಕ್ಲ್ಯೂಸಿವ್ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡ್ತಿದೆ. ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಮೇ ೧೦ರಂದು ಬಿಡುಗಡೆಯಾಗಿ ಕಮಾಲ್ ಮಾಡಲಿದೆ.
ಈ ಸುದ್ದಿ ಡಿ ಬಾಸ್ ಭಕ್ತಗಣವನ್ನು ಥ್ರಿಲ್ ಆಗಿಸಿದೆ. ಸುದ್ದಿ ಪಸರ್ ಆದಲ್ಲಿಂದ ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ಮೇಕಿಂಗ್ ತುಣುಕಿಕಾಗಿ ಜಪ ಮಾಡಲು ಶುರುವಿಟ್ಟಿದ್ದಾರೆ. ಆದ್ರೆ ಸಡನ್ ಆಗಿ ಸಿಕ್ಕಿರೋ ಸರ್ಪ್ರೈಸ್ ಕೂಡ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಇದಕ್ಕೆ ಕಾರಣ ಹುಡುಕಲು ಹೊರಟರೆ ಸಿಗೋದು ದರ್ಶನ್(Darshan) ಕೈಗೆ ಆಗಿರೋ ಆಪರೇಶನ್.
ಹೌದು, ಡೆವಿಲ್(Devil) ಶೂಟಿಂಗ್ ಮಾರ್ಚ್‌ನಲ್ಲಿ ಆರಂಭವಾಗಿತ್ತು ಡೆವಿಲ್‌ಗಾಗಿ ದರ್ಶನ್ ನಯಾ ಅವತಾರ ತಾಳಿದ್ರು. ಅವರ ಲುಕ್, ಸ್ಟೈಲ್ ಎಲ್ಲವೂ ಬದಲಾಗಿತ್ತು. ಡೆವಿಲ್ ಟೀಸರ್ ತುಣುಕು ನೋಡಿ ದಾಸನ ಭಕ್ತಗಣ ಕಿಕ್ಕೇರಿಸಿಕೊಂಡಿತ್ತು. ಸರಸು ಅಂತೇಳಿ ಟ್ರೇಂಡ್ ಸೃಷ್ಟಿಸಿದ್ರು. ಶೂಟಿಂಗ್ ಆರಂಭಿಸಿದ ಚಾಲೆಂಜಿಂಗ್ ಸ್ಟಾರ್(Challenging Star) ಅಕ್ಟೋಬರ್‌ನಲ್ಲಿ ಬಂದೇ ಬರ್ತೀವಿ ಅಂತ ಪರ್ಮಾನು ಹೊರಡಿಸಿದ್ರು. ಆದ್ರೆ ಚಿತ್ರೀಕರಣದಲ್ಲಿ ಎಡಗೈಗೆ ಆದ ಇಂಜ್ಯೂರಿ ಆಪರೇಶನ್‌ವರೆಗೂ ಕೊಂಡ್ಯೂಯ್ದು ರೆಸ್ಟ್‌ಗೆ ಹೇಳಲಾಗಿತ್ತು. ಶೂಟಿಂಗ್ ಕೂಡ ಸ್ಥಗಿತಗೊಳಿಸಿತ್ತು. ಪರಿಣಾಮ ಅಕ್ಟೋಬರ್‌ನಲ್ಲಿ ಸಿನಿಮಾ ತೆರೆಗೆ ಬರ್ತಿಲ್ಲ. ಇದ್ರಿಂದ ದಾಸನ ಭಕ್ತಗಣ ಕೂಡ ಬೇಸರಗೊಂಡಿತ್ತು. ಆದ್ರಿಂದ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಒಂದಿಷ್ಟು ಸಮಾಧಾನ ಮಾಡುವುದರ ಜೊತೆಗೆ ಸೋಶಿಯಲ್ ಮೀಡಿಯಾ ಬಝ್ ಸೃಷ್ಟಿಸಲು ಸಕಲ ರೀತಿಯಲ್ಲೂ ರೆಡಿಯಾಗಿದೆ.
ಸದ್ಯದಲ್ಲೇ ದರ್ಶನ್(Darshan) ಕೂಡ ಶೂಟಿಂಗ್ ಅಖಾಡಕ್ಕೆ ಮರಳಲಿದ್ದು, ಡೆವಿಲ್ ಚಿತ್ರತಂಡ ಮತ್ತೆ ಮೈಕೊಡವಿಕೊಂಡು ಚಿತ್ರೀಕರಣ ಆರಂಭಿಸಿಲಿದೆ. ಆದೇನೆ ಇರಲಿ ಸದ್ಯ ಮೇಕಿಂಗ್ ಝಲಕ್ ಬಿಡುಗಡೆ ಮಾಡೋ ಸುದ್ದಿ ಹಬ್ಬದ ವಾತಾವರಣ ಸೃಷ್ಟಿಸಿರೋದಂತೂ ಸತ್ಯ.