Kamal Haasan: ಖ್ಯಾತ ನಿರ್ದೇಶಕ ಮಣಿರತ್ನಂ(Mani ratnam) ಹಾಗೂ ಕಮಲ್ ಹಾಸನ್ ಕಾಂಭಿನೇಶನ್ ಸಿನಿಮಾ ‘ಥಗ್ ಲೈಫ್’(Thug Life). ನಾಯಗನ್ ಸಿನಿಮಾ ನಂತರ ಸೂಪರ್ ಹಿಟ್ ಜೋಡಿ ಮೋಡಿ ಮಾಡೋಕೆ ರೆಡಿಯಾಗಿದೆ. ಸಿನಿಮಾದ ಚಿತ್ರೀಕರಣ ನ್ಯೂ ಡೆಲ್ಲಿಯಲ್ಲಿ ಭರದಿಂದ ನಡೆಯುತ್ತಿದ್ದು. ನಟ ಸಿಂಬು ಪಾತ್ರದ ಪರಿಚಯ ಮಾಡಿಸಿದೆ ಚಿತ್ರತಂಡ.
ಥಗ್ ಲೈಪ್ ಕಮಲ್ ಹಾಸನ್(Kamal Haasan) ಮುಖ್ಯ ಭೂಮಿಕೆ ಚಿತ್ರವಾದರೂ ಈ ಸಿನಿಮಾ ಬಹುತಾರಾಗಣದಿಂದ ಕೂಡಿದೆ. ಸೌತ್ ಇಂಡಿಯಾದ ಸ್ಟಾರ್ ನಟ-ನಟಿಯರು ಈ ಚಿತ್ರದ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ. ತಮಿಳು ನಟ ಸಿಂಬು(Simbu) ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಸಿಗುತ್ತಿದ್ದಾರೆ. ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗಿಯಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಮನ ಸೆಳೆದಿದ್ವು.
ಚಿತ್ರತಂಡ ನಟ ಸಿಂಬು(Simbu) ಇಂಟ್ರಡಕ್ಷನ್ ಪ್ರೋಮೋ ಬಿಡುಗಡೆ ಮಾಡಿದೆ. ‘ನ್ಯೂ ಥಗ್ ಇನ್ ಟೌನ್’ ಎಂದು ಕ್ಯಾಪ್ಷನ್ ನೀಡಿ ಇಂಟ್ರಡಕ್ಷನ್ ಪ್ರೋಮೋ ಬಿಡುಗಡೆ ಮಾಡಲಾಗಿದ್ದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ ಸಿಂಬು. ಪ್ರೋಮೋ ನೋಡುತ್ತಿದ್ರೆ ಸಿನಿಮಾ ಮೇಕಿಂಗ್ ಎಷ್ಟು ರಿಚ್ ಆಗಿದೆ ಎಂದು ತಿಳಿದು ಬರುತ್ತಿದೆ. ಗ್ಯಾಂಗ್ ಸ್ಟಾರ್ ಆಗಿ ಸಿಂಬು ಗನ್ ಹಿಡಿದು ಫೈರ್ ಮಾಡುವ ದೃಶ್ಯ ಸಖತ್ ಸ್ಟೈಲಿಶ್ ಆಗಿ ಮೂಡಿ ಬಂದಿದೆ.
ಕಮಲ್ ಹಾಸನ್ ಕಥೆಯಲ್ಲಿ ಅರಳಿರುವ ಥಗ್ ಲೈಫ್‌ಗೆ ಮಣಿರತ್ನಂ ತಮ್ಮ ನಿರ್ದೇಶನದ ಚಮತ್ಕಾರ ತುಂಬುತ್ತಿದ್ದಾರೆ. ಅಶೋಕ್ ಸೆಲ್ವನ್, ದುಲ್ಕರ್ ಸಲ್ಮಾನ್, ತ್ರಿಶಾ(Trisha Krishnan), ಅಭಿರಾಮಿ, ಗೌತಮ್ ಕಾರ್ತಿಕ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ. ಎ.ಆರ್.ರೆಹಮಾನ್(AR.Rahman) ಸಂಗೀತ ನಿರ್ದೇಶನ ಚಿತ್ರಕ್ಕಿದೆ.