Prabhas: ಕಲ್ಕಿ(Kalki), ಪ್ರಭಾಸ್(Prabhas) ಅಭಿನಯದ ಬಿಗ್ ಬಜೆಟ್ ಸಿನಿಮಾ. 600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ದ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಯೂ ಈ ಚಿತ್ರದ್ದು. ಜೂನ್‌ನಲ್ಲಿ ತೆರೆ ಕಾಣಲು ರೆಡಿಯಾಗಿರುವ ಈ ಚಿತ್ರದಿಂದ ಹೊಸ ಸುದ್ದಿ ತೇಲಿ ಬಂದು ಟಾಲಿವುಡ್ ಅಂಗಳದಲ್ಲಿ ಪಸರ್ ಆಗಿ ಕ್ರೇಜ಼್ ಸೃಷ್ಟಿಸಿದೆ.
ಮಲ್ಟಿಸ್ಟಾರಾರ್ ಕಲ್ಕಿ(Kalki) ಇಂಡಿಯನ್ ಸಿನಿಲೋಕದಲ್ಲಿ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಚುನಾವಣೆ ನಿಮಿತ್ತ ಬಿಡುಗಡೆ ಮುಂದೂಡಿ ಜೂನ್ 27ಕ್ಕೆ ಬಂದೇ ಬರ್ತೀವಿ ಎಂದೇಳಿದೆ. ಇತ್ತೀಚೆಗೆ ಬಿಗ್ ಬಿ ಅವತಾರ ರಿವೀಲ್ ಮಾಡಿ ಬಝ್ ಸೃಷ್ಟಿಸಿತ್ತು ಚಿತ್ರತಂಡ. ಡಿ ಏಜಿಂಗ್ ಟೆಕ್ನಾಲಜಿ ಮೂಲಕ ಬಿಗ್‌ಬಿ ಅಮಿತಾಬ್‌ರನ್ನು ಯಂಗ್ ಆಗಿ ತೋರಿಸಲಾಗಿತ್ತು. ಇದು ಸಿನಿಮಾ ಮೇಲಿನ ನಿರೀಕ್ಷೆಯನ್ನೂ ಹೆಚ್ಚು ಮಾಡಿತ್ತು. ಇದೀಗ ಹೊಸ ಸುದ್ದಿಯೊಂದು ಟಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಪಸರ್ ಆಗಿದೆ. ಟ್ರೆಂಡಿಂಗ್‌ನಲ್ಲಿದೆ.
ಹೌದು. ಬಹುಕೋಟಿ ವೆಚ್ಚದ, ಬಹು ತಾರಾಗಣದ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು(Mahesh Babu) ಕೂಡ ವಿಶೇಷವಾಗಿ ಕಾಣಿಸಿಕೊಂಡಿದ್ದಾರಂತೆ. ಈ ಸುದ್ದಿ ಕೇಳಿ ಪ್ರಿನ್ಸ್ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಆದ್ರೆ ಸಿನಿಮಾದಲ್ಲಿ ಪಾತ್ರವಾಗಿ ಅಭಿನಯಿಸದೇ ವಿಶೇಷ ರೋಲ್ ಪ್ಲೇ ಮಾಡಿದ್ದಾರೆ. ಪ್ರಭಾಸ್ ವಿಷ್ಣು ಅವತಾರದ ಪಾತ್ರಕ್ಕೆ ನಟ ಮಹೇಶ್ ಬಾಬು(Mahesh Babu) ದನಿಯಾಗಿದ್ದಾರಂತೆ. ಈ ಸುದ್ದಿಯೀಗ ಸಖತ್ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಚಿತ್ರತಂಡವಾಗಲೀ, ನಿರ್ಮಾಪಕರಾಗಲಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಇದು ನಿಜವೇ ಆದರೆ ಪ್ರಿನ್ಸ್ ಫ್ಯಾನ್ಸ್ ಸಂಭ್ರಮಕ್ಕೆ ಎಲ್ಲೆ ಇರೋದಿಲ್ಲ
ಅಮಿತಾಭ್ ಬಚ್ಚನ್(Amithab Bachchan), ದೀಪಿಕಾ ಪಡುಕೋಣೆ(Deepika Padukone), ದುಲ್ಕರ್ ಸಲ್ಮಾನ್, ದಿಶಾ ಪಟಾನಿ, ಕಮಲ್ ಹಾಸನ್(Kamal Haasan) ಸೇರಿದಂತೆ ಹಲವು ಕಲಾವಿದರು ಕಲ್ಕಿ ತಾರಾಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ಮಹಾನಟಿ ಖ್ಯಾತಿಯ ನಾಗ್ ಅಶ್ಬಿನ್ ನಿರ್ದೇಶನದ ಈ ಚಿತ್ರವನ್ನು ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಸಿ.ಅಸ್ವನಿ ದತ್ ನಿರ್ಮಾಣ ಮಾಡಿದ್ದಾರೆ.