Darshan: ಚಾಲೆಂಜಿಂಗ್ ಸ್ಟಾರ್ ನಟನೆಯ ಬಹು ನಿರೀಕ್ಚಿತ ಡೆವಿಲ್(Devil) ಸಿನಿಮಾ ಮೇಕಿಂಗ್ ಬಿಡುಗಡೆಯಾಗಿದೆ. ಕಳೆದೆರಡು ದಿನದ ಹಿಂದೆ ಮೇಕಿಂಗ್ ಝಲಕ್ ಬಿಡುಗಡೆ ಮಾಡೋದಾಗಿ ಮಾತು ಕೊಟ್ಟಿದ್ದ ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಡೆವಿಲ್ ಲುಕ್‌ನಲ್ಲಿ ದಾಸನ ಅವತಾರ, ಶೂಟಿಂಗ್ ಸೆಟ್ ಕಂಡ ಭಕ್ತಗಣ ಥ್ರಿಲ್ ಆಗಿದೆ.
ಮೇಕಿಂಗ್ ಝಲಕ್, ಡಿಬಾಸ್(DBoss) ಡೆವಿಲ್ ಲುಕ್, ಗತ್ತು ಕಂಡು ಅಭಿಮಾನಿಗಳು ಪುನೀತರಾಗಿದ್ದಾರೆ, ಡೆವಿಲ್ ಟೀಸರ್ ಮೇಕಿಂಗ್ ಸಮಯದ ವಿಡಿಯೋ ತುಣುಕು ಇದು ಎಂದು ಒಮ್ಮೆಲೆ ನೋಡಿದಾಕ್ಷಣ ತಿಳಿದು ಬರ್ತಿದೆ. ಚಿತ್ರದಲ್ಲಿ ದರ್ಶನ್ ಲುಕ್ ಕಂಪ್ಲೀಟ್ ಡಿಫ್ರೆಂಟ್ ಆಗಿದೆ, ಗೆಟಪ್ ಕೂಡ ಬದಲಾಗಿದೆ. ಡೆವಿಲ್ ಟೈಟಲ್ ಒಂದಿಟು ಕ್ಯೂರಿಯಾಸಿಟಿಯನ್ನು ಮೂಡಿಸಿದೆ. ಡೆವಿಲ್ ಆಗಿ ಕಾಡಲು ಹೊರಟ್ಟಿದ್ದು ಯಾರಿಗೆ ಎಂಬ ಕೌತುಕವೂ ಇದೆ. ಇದೆಲ್ಲ ಕೌತುಕ, ಕುತೂಹಲದ ನಡುವೆ ಅಕ್ಷಯ ತೃತೀಯದಂದು ಬಿಡುಗಡೆಯಾದ ಮೇಕಿಂಗ್ ವಿಡಿಯೋ ದಾಸನ ಭಕ್ತಗಣಕ್ಕೆ ಸಮೃದ್ಧಿ, ಸಂತೋಷ ತಂದಿದ್ದಂತೂ ನಿಜ.
ಶೂಟಿಂಗ್ ಸಮಯದಲ್ಲಿ ಎಡಗೈಗೆ ಆದ ಪೆಟ್ಟಿನಿಂದ ದರ್ಶನ್(Darshan) ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಆದ್ರಿಂದ ಡೆವಿಲ್(Devil) ಚಿತ್ರೀಕರಣವನ್ನೂ ನಿಲ್ಲಿಸಲಾಗಿದೆ. ಶೂಟಿಂಗ್ ಆರಂಭದಲ್ಲೇ ಎದುರಾಗಿರುವ ವಿಘ್ನದಿಂದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಬೇಕಾದ ಸಿನಿಮಾ ಕೂಡ ಮುಂದೂಡಲಾಗಿದೆ. ಇದೆಲ್ಲದರ ನಡುವೆ ಡೆವಿಲ್ ಸಿನಿಮಾದಲ್ಲಿ ದಾಸನ ಜೊತೆ ನಾಯಕಿಯಾಗಿ ಮಿಂಚೋರು ಯಾರು ಅನ್ನೋದು ಸದ್ಯದ ಪ್ರಶ್ನೆ, ಅದಕ್ಕೆ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ. ಇತ್ತ, ಚಿತ್ರದ ತಾರಾಬಳಗದಲ್ಲಿ ಯಾರ್ಯಾರು ಇರ್ತಾರೆ ಅನ್ನೋದು ಮಾಹಿತಿ ಹೊರಬಿದ್ದಿಲ್ಲ.