Upendra: ರಿಯಲ್ ಸ್ಟಾರ್ ಉಪೇಂದ್ರ(Upendra) ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ಯುಐ(UI). ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಕನ್ನಡ ಚಿತ್ರರಂಗದಲ್ಲಿದೆ. ಉಪ್ಪಿ ನಿರ್ದೇಶನದಲ್ಲಿ ಬರ್ತಿರೋದ್ರಿಂದ ನಿರೀಕ್ಷೆಯೂ ಹೆಚ್ಚು, ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚು. ಟೀಸರ್, ಹಾಡಿನ ಮೂಲಕ ಕ್ರೇಜ಼್ ಹುಟ್ಟು ಹಾಕಿರುವ ಸಿನಿಮಾ ಅಪ್ಡೇಟ್ ಬಗ್ಗೆ ಕಾಯುತ್ತಿರುವಾಗಲೇ ಉಪ್ಪಿ ಸ್ಟೈಲ್‌ನಲ್ಲಿ ಹೊಸ ಉಡುಗೊರೆ ಸಿಕ್ತಿದೆ.
‘ಯುಐ’(UI) ಸಿನಿಮಾ ಬಗ್ಗೆ ಉಪ್ಪಿ ಅಭಿಮಾನಿಗಳು ಸಿಕ್ಕಾಪಟ್ಟೆ ಕಾತುರರಿಂದ ಕಾಯುತ್ತಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಎಂದು ಎದುರು ನೋಡ್ತಿದ್ದಾರೆ. ಆದ್ರೆ ಸಿನಿಮಾ ಬಗ್ಗೆ ಮಾತ್ರ ಅಪ್ಡೇಟ್ ಸಿಕ್ತಿಲ್ಲ. ಆದ್ರೆ ಉಪ್ಪಿ ನಿರ್ದೇಶಿಸಿ ನಟಿಸಿದ್ದ ಮೊದಲ ಸಿನಿಮಾದ ಹೊಸ ಅಪ್ಡೇಟ್ ಸಿಕ್ಕಿದೆ. ಅರೆ, ಆ ಸಿನಿಮಾ ಅಪ್ಡೇಟ್ ಈಗ್ಯಾಕೆ ಅನ್ನೋ ಪ್ರಶ್ನೆ ಎದುರಾದ್ರು ಇಲ್ಲಿ ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಸಿನಿಮಾ ತರುವ ಪ್ರಯತ್ನ ನಡೆದಿದೆ. ಅದು ಹೊಸ ಟೆಕ್ನಾಲಜಿಯೊಂದಿಗೆ. ಹೌದು. ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬಂದ ಇಂದಿಗೂ ಸಂಚಲನ ಸೃಷ್ಟಿಸಿರುವ ಸಿನಿಮಾಗಳಲ್ಲೊಂದು ‘ಎ’(A)ಸಿನಿಮಾ. ಬಿಡುಗಡೆಯಾಗಿ 25 ವರ್ಷ ಸಂಭ್ರಮ ಆಚರಿಸಿಕೊಂಡ ಸಿನಿಮಾವನ್ನು ಹೊಸ ಟೆಕ್ನಾಲಜಿ ಬಳಸಿ ಡಿಜಿಟಲ್ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದ್ದು, ಮುಂದಿನ ವಾರ ‘ಎ’(A) ಸಿನಿಮಾ ಮರು ಬಿಡುಗಡೆಯಾಗಲಿದೆ.
‘ಯುಐ’(UI) ಸಿನಿಮಾವನ್ನು ಕೆ.ಪಿ. ಶ್ರೀಕಾಂತ್, ಜಿ.ಮನೋಹರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ(Reeshma Nanaiah) ನಾಯಕಿಯಾಗಿ ನಟಿಸುತ್ತಿದ್ದು, ಮುರಳಿ ಶರ್ಮಾ, ಇಂದ್ರಜಿತ್ ಲಂಕೇಶ್ ಒಳಗೊಂಡ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ರೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಸಿನಿಮಾ ಬಿಡುಗಡೆ ಬಗ್ಗೆ ನಯಾ ಸುದ್ದಿ ನೀಡಿಲ್ಲ.