ಮಂಗಳವಾರ, ಜೂನ್ 3, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Jyothi Rai: ಧೈರ್ಯ ಇದ್ರೆ ಈ ವೀಡಿಯೋ ವೈರಲ್‌ ಮಾಡಿ ಎಂದಿದ್ಯಾಕೆ ಜ್ಯೋತಿ ರೈ

Bharathi Javalliby Bharathi Javalli
11/05/2024
in Majja Special
Reading Time: 2 mins read
Jyothi Rai: ಧೈರ್ಯ ಇದ್ರೆ ಈ ವೀಡಿಯೋ ವೈರಲ್‌ ಮಾಡಿ ಎಂದಿದ್ಯಾಕೆ ಜ್ಯೋತಿ ರೈ

Jyothi Rai: ಕನ್ನಡ, ತೆಲುಗು ಕಿರುತೆರೆಯಲ್ಲಿ ಅಪಾರ ಖ್ಯಾತಿ ಹೊಂದಿರುವ ಖ್ಯಾತ ನಟಿ ಜ್ಯೋತಿ ರೈ. ಕಳೆದೆರಡು ದಿನದ ಹಿಂದೆ ಈಕೆಯದ್ದೇ ಎಂದು ಹೇಳಲಾದ ನೀಲಿ ಚಿತ್ರವೊಂದು ವೈರಲ್‌ ಆಗಿತ್ತು. ವೈರಲ್‌ ವಿಡಿಯೋ ಬಗ್ಗೆ ಸ್ಪಷ್ಟೀಕರಣ ನೀಡಿ ಸೈಬರ್‌ ಕ್ರೈಂ ಮೆಟ್ಟಿಲ್ಲೇರಿದ ಈಕೆ ಇದೀಗ ಚಾಲೆಂಜ್‌ವೊಂದನ್ನು ಮಾಡಿದ್ದಾರೆ.

ಜ್ಯೋತಿ ರೈ(Jyothi Rai) ಕನ್ನಡಿಗರಿಗೆ ಜೋಗುಳ, ಕಿನ್ನರಿ, ಮೂರುಗಂಟು, ಕನ್ಯಾಧಾನ ಧಾರಾವಾಹಿ ಮೂಲಕ ಚಿರಪರಿಚಿತೆ. ಕನ್ನಡ ಹಾಗೂ ತೆಲುಗು ಟೆಲಿವಿಶನ್‌ನಲ್ಲಿ ಅಪಾರ ಖ್ಯಾತಿ ಗಳಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಈಕೆ ಸಕ್ರಿಯರಾಗಿದ್ದಾರೆ. ವೆಬ್‌ ಸೀರೀಸ್‌, ಸೀರಿಯಲ್‌, ಸಿನಿಮಾ ಎಂದು ಬ್ಯುಸಿಯಾಗಿದ್ದಾರೆ. ಆಗಾಗ ಹಾಟ್‌ ಫೋಟೋಸ್‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಮರು ಮದುವೆಯಾಗಿ ಸುದ್ದಿಯಾಗಿದ್ದ ಈಕೆಗೆ ಡೀಪ್‌ ಫೇಕ್‌ ವಿಡಿಯೋ ನಿದ್ದೆ ಗೆಡಿಸಿತ್ತು.

ಮಾರ್ಪಿಂಗ್‌ ತಂತ್ರಜ್ಞಾನದ ಮೂಲಕ ಈಕೆಯ ಫೋಟೋಗಳನ್ನು ಅಶ್ಲೀಲ ವಿಡಿಯೋಗಳಲ್ಲಿ ಬಳಸಿ ವೈರಲ್‌ ಮಾಡಲಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಗಜ್ಜಾಹೀರು ಆಗ್ತಿದ್ದಂತೆ ಎಚ್ಚೆತ್ತ ನಟಿ ಹಾಗೂ ಆಕೆಯ ಫ್ಯಾನ್ಸ್‌ ಕಿಡಿಗೇಡಿಗಳ ವಿರುದ್ದ ಕೆಂಡ ಕಾರಿದ್ರು. ಜ್ಯೋತಿ ರೈ(Jyothi Rai) ಕೂಡ ಇದರಿಂದ ಬೇಸರಗೊಂಡು ಸುದೀರ್ಘ ಪತ್ರದ ಮೂಲಕ ವಿಡಿಯೋದಲ್ಲಿರುವಾಕೆ ನಾನಲ್ಲ ಎಂದಿದ್ರು. ಡೀಫ್‌ ಫೇಕ್‌ ತಂತ್ರಜ್ಙಾನದಿಂದ ಆದ ಮಾನಹಾನಿಗೆ ಸೈಬರ್‌ ಕ್ರೈಂ ಮೆಟ್ಟಿಲೇರಿ ಕಂಪ್ಲೇಂಟ್‌ ಮಾಡಿದ್ರು, ನನ್ನ ಮಾನ ಕುಟುಂಬದ ಗೌರವ ಅಪಾಯದಲ್ಲಿದೆ ಎಂದು ಆತಂಕ ಹೊರ ಹಾಕಿದ್ರು, ಇದೀಗ ಅದೇ ವೈರಲ್‌ ಮಾಡೋ ಪ್ರಜೆಗಳಿಗೆ ತಾವೇ ಸವಾಲ್‌ವೊಂದನ್ನು ನೀಡಿದ್ದಾರೆ. ಇಂತಹ ವೀಡಿಯೋ ವೈರಲ್‌ ಮಾಡಿ ಎಂದಿದ್ದಾರೆ.

 

View this post on Instagram

 

A post shared by Jyothi Poorvaj (Jayashree Rai K K) (@jyothipoorvaj)

ಜ್ಯೋತಿ ರೈ(Jyothi Rai) ಎಲ್ಲರೂ ಮೆಚ್ಚುವಂತ ಕೆಲಸವೊಂದನ್ನು ಮಾಡಿದ್ದಾರೆ. ಈಕೆಯ ಈ ಕೆಲಸ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಪದ್ಮಶ್ರೀ ಪುರಸ್ಕೃತ ಕಿನ್ನೇರ ಮೊಗಲಯ್ಯ ಆರ್ಥಿಕವಾಗಿ ಎದುರಿಸುತ್ತಿರುವ ಸಂಕಷ್ಟ ತಿಳಿದ ಜ್ಯೋತಿ ರೈ  ಸಹಾಯಹಸ್ತ ಚಾಚಿದ್ದಾರೆ. 50 ಸಾವಿರ ಹಣವನ್ನು ಕಿನ್ನೇರ ಮೊಗಲಯ್ಯಗೆ ನೀಡಿ ನನ್ನಿಂದಾದ ಆರ್ಥಿಕ ಸಹಾಯ ಮಾಡಿದ್ದೇನೆ. ಸಹಾಯ ಮಾಡುವ ಇಚ್ಚೆ ಇದ್ದರೆ ತಿಳಿಸಿ ಎಂದಿದ್ದಾರೆ. ಕಿನ್ನೇರ ಮೊಗಲಯ್ಯ ಭೇಟಿ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ರಿಯಲ್‌ ವಿಡಿಯೋ ಧೈರ್ಯವಿದ್ರೆ ಇದನ್ನು ವೈರಲ್‌ ಮಾಡಿ ಎಂದು ಅಶ್ಲೀಲ ವಿಡಿಯೋ ವೈರಲ್‌ ಮಾಡೋ ಪುಂಡರಿಗೆ ಸವಾಲ್‌ ಹಾಕಿದ್ದಾರೆ. ಈ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ನಟಿಯ ಬೋಲ್ಡ್‌ ಆಕ್ಷನ್‌ಗೆ ಬೆಂಬಲ ವ್ಯಕ್ತವಾಗಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Abdu Rozik: ಬಿಗ್‌ ಬಾಸ್‌ ಖ್ಯಾತಿಯ ಸಿಂಗರ್‌ ಅಬ್ದು ರೊಜಿಕ್‌ ಮದುವೆಗೆ ರೆಡಿ – ಸಲ್ಮಾನ್‌ ಖಾನ್ ಹಾಜರಿ ಖಾತ್ರಿ

Abdu Rozik: ಬಿಗ್‌ ಬಾಸ್‌ ಖ್ಯಾತಿಯ ಸಿಂಗರ್‌ ಅಬ್ದು ರೊಜಿಕ್‌ ಮದುವೆಗೆ ರೆಡಿ – ಸಲ್ಮಾನ್‌ ಖಾನ್ ಹಾಜರಿ ಖಾತ್ರಿ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.