Double Ismart: ಪುರಿ ಜಗನ್ನಾಥ್(Puri Jagannath) ಸಾರಥ್ಯದಲ್ಲಿ ಬರ್ತಿರುವ ಟಾಲಿವುಡ್ ಬಹು ನಿರೀಕ್ಷಿತ ಸಿನಿಮಾ ಡಬಲ್ ಇಸ್ಮಾರ್ಟ್(Double Ismart) ಬ್ಲಾಕ್ ಬಸ್ಟರ್ ಹಿಟ್ ‘ಇಸ್ಮಾರ್ಟ್ ಶಂಕರ್’ ಸೀಕ್ವೆಲ್ ಆದ್ದರಿಂದ ನಿರೀಕ್ಷೆಯೂ ದುಪ್ಪಟ್ಟಿದೆ. ಈ ಎಲ್ಲಾ ನಿರೀಕ್ಷೆಯನ್ನು ನಿಜ ಮಾಡುತ್ತೇ ಎನ್ನುವ ಹಿಂಟ್ ನೀಡಿದೆ ಚಿತ್ರತಂಡ.
‘ಡಬಲ್ ಇಸ್ಮಾರ್ಟ್’(Double Ismart) ಸಿನಿಮಾದ ಕ್ರೇಜಿ಼ ಟೀಸರ್ ಬಿಡುಗಡೆಯಾಗಿದೆ. ನಟ ರಾಮ್ ಪೋತಿನೇನಿ(Ram Pothineni) ಹುಟ್ಟುಹಬ್ಬವಾದ್ದರಿಂದ ಚಿತ್ರತಂಡ ಫವರ್ ಫುಲ್ ಹಾಗೂ ಮಾಸ್ ಟೀಸರ್ ಬಿಡುಗಡೆ ಮಾಡಿದೆ. ಟೀಸರ್ ಝಲಕ್ ಕಂಡವರು ಡಬಲ್ ಇಸ್ಮಾರ್ಟ್ ಪಕ್ಕಾ ಡಬಲ್ ಮನರಂಜನೆ ನೀಡುತ್ತೆ ಎನ್ನುವ ಮಾತುಗಳನ್ನಾಡಲು ಆರಂಭಿಸಿದ್ದಾರೆ. ಟೀಸರ್ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿದೆ. ಪುರಿ ಜಗ್ನನಾಥ್ ಪಕ್ಕಾ ಈ ಬಾರಿ ಗೆಲುವು ಕಂಡೆ ಕಾಣುತ್ತಾರೆ ಎನ್ನುವುದು ಟೀಸರ್ ನೋಡಿದವರ ಉವಾಚ. ರಾಮ್ ಪೋತಿನೇನಿ, ಸಂಜಯ್ ದತ್(Sanjay Dutt) ಕಾಂಬೋ, ರಾಮ್ ಪೋತಿನೇನಿ ಎನರ್ಜಿ, ಪುರಿ ಜಗನ್ನಾಥ್ ಡೈರೆಕ್ಷನ್ ಸ್ಟೈಲ್ ಎಲ್ಲವೂ ಸಾಲಿಡ್ ಟೀಸರ್ ಝಲಕ್‌ನಲ್ಲಿ ಧೂಳ್ ಎಬ್ಬಿಸಿದೆ.
ಮಣಿ ಶರ್ಮಾ ಮ್ಯೂಸಿಕ್ ಮ್ಯಾಜಿಕ್ ಇರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮವಾಗಿ ತೆರೆ ಕಾಣಲಿದೆ. ಸಂಜಯ್ ದತ್(Sanjay Dutt) ವಿಲನ್ ರೋಲ್‌ನಲ್ಲಿ ಮಿಂಚಲಿದ್ದು, ಅಲಿ, ಕಾವ್ಯ ತಾಪರ್, ಗೆಟಪ್ ಸೀನು, ಸಯ್ಯಜಿ ಶಿಂದೆ ಸೇರಿದಂತೆ ಹಲವರ ತಾರಾಗಣ ಚಿತ್ರದಲ್ಲಿದೆ. ಪ್ರೀಕ್ವೆಲ್‌ಗೆ ಕಂಪೇರ್ ಮಾಡಿದ್ರೆ ಅದ್ದೂರಿತನ, ಸಿನಿಮಾ ಸ್ಕೇಲ್ ಎಲ್ಲವೂ ದೊಡ್ಡದಿದೆ ಅನ್ನೋದಕ್ಕೆ ಟೀಸರ್ ಸಾಕ್ಷಿಯಾಗಿದೆ. ಟೆಕ್ನಿಕಲಿ ಕೂಡ ಸಿನಿಮಾ ಸ್ಟ್ರಾಂಗ್ ಆಗಿದೆ ಅನ್ನೋದಕ್ಕೂ ಉತ್ತರದಂತಿದೆ ಟೀಸರ್. ಚಾರ್ಮೆ ಕೌರ್, ಪುರಿ ಜಗನ್ನಾಥ್(Puri Jagannath) ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರ್ತಿದ್ದು, ಹೈದ್ರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ.