Rakhi Sawant: ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಬಿಟೌನ್ ಗರ್ಲ್ ರಾಖಿ ಸಾವಂತ್(Rakhi Sawant). ಈಕೆ ಸುದ್ದಿಯಲ್ಲಿದ್ದಾಳೆ ಅಂದ್ರೆ ಏನೋ ಕಿರಿಕ್ ಆಗಿದೆ ಅಂತಾನೇ ಅರ್ಥ ಅನ್ನೋದು ಸಾಮಾನ್ಯರಿಗೂ ಅರಿವಾಗಿದೆ. ಈಕೆಯ ರಾದ್ದಾಂತಗಳು ಒಂದಲ್ಲಾ, ಎರಡಲ್ಲಾ..ಹೀಗೆ ರಾದ್ದಾಂತಗಳ ರಾಶಿ ಮೂಟೆ ಹೊತ್ತ ರಾಖಿ ಮತ್ತೆ ಸುದ್ದಿಯಲ್ಲಿದ್ದಾಳೆ. ಅದು ಆಸ್ಪತ್ರೆ ಬೆಡ್ ಮೇಲೆ. ಈಕೆ ಕಂಡು ಮತ್ತೇನಾಯ್ತಮ್ಮ ಎಂದು ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ ನೆಟ್ಟಿಗರು.
ರಾಖಿ ಸಾವಂತ್(Rakhi Sawant) ಬೆಳ್ಳಂಬೆಳಿಗ್ಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಈಕೆಯ ಫೋಟೋಗಳ ವೈರಲ್ ಆಗಿವೆ. ಅದೇನು ರಾಮಾಯಣ ಮಾಡಿಕೊಂಡ್ಲೋ ಅದೇನು ರಾದ್ದಾಂತವೋ, ಮತ್ಯಾವ ಹೊಸ ನಾಟಕವೋ ಎಂದು ರಾಖಿ ಫೋಟೋ ನೋಡುತ್ತ ತಲೆ ಚಚ್ಚಿಕೊಳ್ತಿದ್ದಾರೆ ಸೋಶಿಯಲ್ ಮೀಡಿಯಾ ಮಂದಿ. ನಿತ್ರಾಣಗೊಂಡು ಬೆಡ್ ಮೇಲೆ ಬಿದ್ದಿರುವ ಈಕೆಯ ಮೇಲೆ ಕರುಣೆಯೇ ಇಲ್ಲದಂತೆ ಕೊಂಕು ಮಾತುಗಳು ಕೇಳಿ ಬರ್ತಿವೆ.
ರಾಖಿ ಸಾವಂತ್(Rakhi Sawant)ಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆಯಂತೆ, ಹೀಗೆಂದು ಸ್ವತಃ ರಾಖಿ ಪಾಪಾರಾಜಿಗಳಿಗೆ ತಿಳಿಸಿದ್ದಾರಂತೆ. ಈ ಸುದ್ದಿಯನ್ನು ಬಿಟೌನ್ ಪಾಪಾರಾಜಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಜವಾಗಿಯೂ ಈಕೆಗೆ ಆರೋಗ್ಯ ಸಮಸ್ಯೆ ಎದುರಾಗಿದ್ಯೋ, ಅಥವಾ ಮತ್ತೊಂದು ಹೊಸ ನಾಟಕದ ಜಾಲವೋ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ವಿವಾದಗಳನ್ನೇ ಜೀವನವಾಗಿಸಿಕೊಂಡಿರುವ ಈಕೆ ಬಿಟೌನ್ ಐಟಂ ಡಾನ್ಸರ್. ನಟಿಯಾಗಿ ಡಾನ್ಸರ್ ಆಗಿ ಹೆಚ್ಚೇನು ಖ್ಯಾತಿ ಸಿಗದಿದ್ರು. ಈಕೆಯ ವಿವಾದಗಳು, ಹೊಸ ರಾದ್ದಾಂತಗಳು ಈಕೆಯನ್ನು ಪ್ರಚಾರದಲ್ಲಿಟ್ಟಿವೆ. ಖ್ಯಾತಿ ತಂದುಕೊಟ್ಟಿವೆ. ಮೊದಲ ಪತಿಗೆ ಟಾಟಾ ಗುಡ್ ಬೈ ಹೇಳಿ ಮೈಸೂರಿನ ಮೂಲದ ಆದಿಲ್ ಜೊತೆ ಕೈ ಕೈ ಹಿಡಿದು ನಡೆದು, ಸಂಸಾರ ನಡೆಸಿದ್ದಳು. ಏಕಾಏಕಿ ಆದಿಲ್ ವಿರುದ್ದ ತಿರುಗಿ ಬಿದ್ದು, ಆತನನ್ನು ಒಂದಷ್ಟು ದಿನ ಕಂಬಿ ಹಿಂದೆ ಇರುವಂತೆ ಮಾಡಿದ್ಲು. ಆದಿಲ್ ಕೂಡ ಈಕೆಯ ಮೇಲೆ ಒಂದಿಷ್ಟು ಗಂಬೀರ ಆರೋಪ ಮಾಡಿ ಕೇಸು ದಾಖಲು ಮಾಡಿದ್ದ. ಬಂಧನ ಭೀತಿ ಎದುರಾದ ಬೆನ್ನಲ್ಲೇ ಜಾಮೀನಿಗೆ ಮೊರೆ ಹೋಗಿದಳು ಆದ್ರೀಗ ಜಾಮೀನು ನಿರಾಕರಣೆಯಾಗಿದೆ. ಕೋರ್ಟ್ ನಾಲ್ಕು ವಾರದಲ್ಲಿ ಮುಂಬೈ ಪೊಲೀಸರಿಗೆ ಶರಣಾಗಲು ರಾಖಿ(Rakhi Sawant)ಗೆ ನೋಟೀಸ್ ನೀಡಿದೆ. ಜಾಮೀನು ಸಿಗದಿರುವುದೇ ಈಕೆಯನ್ನು ಆಸ್ಪತ್ರೆ ಬಾಗಿಲಿಗೆ ಕೊಂಡೊಯ್ದಿದೆ ಅನ್ನೋದು ಎಲ್ಲರ ಲೆಕ್ಕಾಚಾರ. ಈಕೆ ಹೆಣೆದ ಕಹಾನಿಯಲ್ಲಿ ಮತ್ಯಾವ ಟ್ವಿಸ್ಟ್ ಇದೆಯೋ ಕಾದು ನೋಡ್ಬೇಕು.