Chandrakanth: ಕಿರುತೆರೆ ಕಲಾವಿದೆ ಮಂಡ್ಯದ ಪವಿತ್ರಾ ಜೈರಾಮ್(Pavithra Jairam) ಕಳೆದ ವಾರ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ರು. ಆಕೆಯ ನೋವಲ್ಲೇ ಕುಟುಂಬ ಹಾಗೂ ಕಿರುತೆರೆ ಲೋಕ ಮರುಗುತ್ತಿರುವಾಗಲೇ ಪವಿತ್ರ ಸ್ನೇಹಿತ ಹಾಗೂ ಕಿರುತೆರೆ ನಟ ಚಂದ್ರಕಾಂತ್ ಕೂಡ ಸಾವನ್ನಪ್ಪಿದ್ದಾರೆ. ಈ ಸುದ್ದಿ ತೆಲುಗು ಕಿರುತೆರೆ ಲೋಕಕ್ಕೆ ಆಘಾತ ನೀಡಿದೆ.
ತ್ರಿನಯಿಸನಿ ಧಾರಾವಾಹಿ ಖ್ಯಾತಿಯ ಪವಿತ್ರ ಜೈರಾಮ್(Pavithra Jairam) ಸಾವಿನ ಸುದ್ದಿ ಮರೆ ಮಾಚುವ ಮುನ್ನವೇ ಆಕೆ ಆತ್ಮೀಯ ಗೆಳೆಯ ಚಂದು ಅಲಿಯಾಸ್ ಚಂದ್ರಕಾಂತ್(Chandrakanth) ಇಂದು ನೇಣಿಗೆ ಶರಣಾಗಿದ್ದಾರೆ. ಹೈದ್ರಾಬಾದ್‌ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಚಂದ್ರಕಾಂತ್ ಎಲ್ಲರಿಗೂ ಆಘಾತ ನೀಡಿದ್ದಾರೆ. ಪವಿತ್ರ ಸಾವನ್ನಪ್ಪುವ ದಿನ ಇಬ್ಬರೂ ಜೊತೆಗೆ ಪಯಣ ಬೆಳೆಸಿದ್ದರು ದುರಾದೃಷ್ಟವಶಾತ್ ಪವಿತ್ರ ಜೈರಾಮ್ ಅಸುನೀಗಿದ್ರು, ಆ ನೋವಲ್ಲಿದ್ದ ಚಂದ್ರಕಾಂತ್ ಕೂಡ ಸಾವಿಗೆ ಶರಣಾಗಿದ್ದಾರೆ.
ತ್ರಿನಯಿನಿ ಧಾರಾವಾಹಿಯಲ್ಲಿ ಚಂದ್ರಕಾಂತ್(Chandrakanth) ಹಾಗೂ ಪವಿತ್ರ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಪ್ರೀತಿ ಆರಂಭವಾಗಿ ಮದುವೆಯಾಗಲು ಬಯಸಿದ್ದರು ಎಂಬ ರೂಮರ್ಸ್ ಜೋರಾಗಿದೆ. ಚಂದ್ರಕಾಂತ್ ಪೋಸ್ಟ್‌ಗಳಲ್ಲೂ ಇಬ್ಬರ ಫೋಟೋಗಳೇ ಹೆಚ್ಚಿದೆ. ಪವಿತ್ರಾ ಹಾಗೂ ಚಂದು ಇಬ್ಬರಿಗೂ ಈ ಮೊದಲೇ ವಿವಾಹವಾಗಿದ್ದು, ಪವಿತ್ರಗಾಗಿ ಮೊದಲ ಹೆಂಡತಿಯಿಂದ ದೂರಾಗಿದ್ದರಂತೆ ಚಂದ್ರಕಾಂತ್. ಇಬ್ಬರು ಒಟ್ಟಿಗೆ ವಾಸವಿದ್ದರು ಎಂದು ಚಂದ್ರಕಾಂತ್ ಮೊದಲ ಪತ್ನಿ ಶಿಲ್ಪಾ ತಿಳಿಸಿದ್ದಾರೆ. ಪವಿತ್ರಾಳಿಂದ ನನ್ನ ಸಂಸಾರ ಹಾಳಾಯ್ತು. ಮಕ್ಕಳಿಗಾಗಿ ಎಲ್ಲವನ್ನು ಸಹಿಸಿಕೊಂಡಿದ್ದೆ. ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ವಿ ಆದ್ರೆ ಲಾಕ್‌ಡೌನ್‌ನಿಂದ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಈಗ ನನಗೂ ಮೋಸ ಮಾಡಿ ಹೋದರು ಎಂದು ಕಣ್ಣೀರಿಟ್ಟಿದ್ದಾರೆ ಶಿಲ್ಪಾ.