Mohanlal: ಡಾ.ರಾಜ್ ಕುಮಾರ್ ಸಿನಿಮಾ, ಹಾಡು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಅದೆಂತದೇ ಸಮಯ ಸಂದರ್ಭವಿರಲಿ ರಾಜ್ ಕಂಠದಲ್ಲಿ ಅರಳಿರೋ ಹಾಡುಗಳನ್ನು ಕೇಳಿದ್ರೆ ಏನೋ ಒಂದು ರೀತಿಯ ನೆಮ್ಮದಿ. ಅದಕ್ಕೇ ಇಂದಿಗೂ ಕೂಡ ಅಣ್ಣಾವ್ರ ಸಿನಿಮಾ ಹಾಡು ಎವರ್ ಗ್ರೀನ್ ಆಗಿರೋದು. ನಮ್ಮಲ್ಲಿ ಮಾತ್ರವಲ್ಲ ಬೇರೆ ರಾಜ್ಯದ ಸೂಪರ್ ಸ್ಟಾರ್‌ಗಳಿಗೂ ನಟ ಸಾರ್ವಭೌಮನ ಹಾಡುಗಳಂದ್ರೆ ಪಂಚಪ್ರಾಣ ಅಂದ್ರೆ ನೀವ್ ನಂಬ್ತಿರಾ..? ನಂಬಲೇಬೇಕು ಅಂತಿದೆ ವೈರಲ್ ಆಗಿರೋ ವಿಡಿಯೋ.
ಸೋಶಿಯಲ್ ಮೀಡಿಯಾದಲ್ಲಿ ಡಾ.ರಾಜ್(Dr.Rajkumar) ಮಂಜುಳ ಜೋಡಿಯ ಹಾಡೊಂದು ವೈರಲ್ ಆಗಿದೆ. ಹಾಡನ್ನು ಮತ್ತೆ ಮತ್ತೆ ಕೇಳುತ್ತಾ ತಾವೂ ಆ ಹಾಡನ್ನು ಹಾಡುತ್ತ ದನಿಯಾಗೋ ವಿಡಿಯೋವದು. ಆತ ಬೇರಾರು ಅಲ್ಲ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್(Mohanlal). ಹೌದು. 1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ ‘ಎಂದೆಂದೂ ನಿನ್ನನು ಮರೆತು’ ಸಾಂಗ್ ಎಲ್ಲರ ಫೇವರೇಟ್ ಆದಂತೆ ಸೂಪರ್ ಸ್ಟಾರ್ ಮೋಹನ್ ಲಾಲ್‌ಗೂ ಬಲು ಇಷ್ಟವಂತೆ. ಆ ಹಾಡನ್ನು ಯಾವಾಗಲೂ ನೋಡುತ್ತಾ, ಕೇಳುತ್ತಾ ಎಂಜಾಯ್ ಮಾಡ್ತಿರ್ತಾರಂತೆ. ಸದ್ಯ ಮೋಹನ್ ಲಾಲ್ ಟ್ಯಾಬ್‌ನಲ್ಲಿ ಸಾಂಗ್ ಕೇಳುತ್ತ ಹಾಡಲು ಪ್ರಯತ್ನಿಸುತ್ತಾ ಎಂಜಾಯ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕನ್ನಡ ಸಿನಿರಸಿಕರ ಮನಗೆದ್ದಿದೆ. ದೊಡ್ಮನೆ ಅಭಿಮಾನಿಗಳು ಈ ವಿಡಿಯೋವನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
https://twitter.com/appudynasty1/status/1792214082688544787
ಅದ್ಭುತ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಾಲಿವುಡ್ ಸೂಪರ್ ಸ್ಟಾರ್ ನಟರಲ್ಲೊಬ್ಬರು ಮೋಹನ್ ಲಾಲ್(Mohanlal). ಕನ್ನಡ ಸಿನಿರಸಿಕರಿಗೆ ಇವರು ಪುನೀತ್ ರಾಜ್ ಕುಮಾರ್(Puneeth Rajkumar) ಅಭಿನಯದ ಮೈತ್ರಿ ಹಾಗೂ ಆದಿತ್ಯ ಅಭಿನಯದ ಲವ್ ಸಿನಿಮಾಗಳ ಮೂಲಕ ಪರಿಚಿತರಾಗಿದ್ದಾರೆ. ಇವರ ಸೂಪರ್ ಹಿಟ್ ಸಿನಿಮಾಗಳು ಕನ್ನಡಲ್ಲಿ ರಿಮೇಕ್ ಆಗಿ ಸಕ್ಸಸ್ ಕಂಡಿವೆ.