Darshan: ನಟ ದರ್ಶನ್(Darshan) ಪರ್ಸನಲ್ ಲೈಫ್ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಒಮ್ಮೊಮ್ಮೆ ದರ್ಶನ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಪತ್ನಿ ಜೊತೆ ಅಷ್ಟಕಷ್ಟೇ ಅನ್ನುವ ಅಂತೆ ಕಂತೆ ಸುದ್ದಿಗಳು ಕೇಳಿ ಬರುತ್ತೆ. ದರ್ಶನ್ ಹೆಸರಿನೊಂದಿಗೆ ಈ ನಡುವೆ ಪವಿತ್ರ ಗೌಡ(Pavithra Gowda) ಹೆಸರು ತಳುಕು ಹಾಕಿಕೊಂಡಿದೆ. ದರ್ಶನ್ ಪತ್ನಿ ಹಾಗೂ ಪವಿತ್ರ ಗೌಡ ನಡುವಿನ ಮುಸುಕಿನ ಗುದ್ದಾಟ ಆಗಾಗ ಸಖತ್ ಮುನ್ನೆಲೆಗೆ ಬಂದು ಎಲ್ಲರ ಗಮನ ಸೆಳೆಯುತ್ತೆ. ಇದೀಗ ಮತ್ತೊಮ್ಮೆ ಪವಿತ್ರ ಗೌಡ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ.
ನಟ ದರ್ಶನ್(Darshan) ಹಾಗೂ ವಿಜಯಲಕ್ಷ್ಮಿ(Vijaya Lakshmi) ತಮ್ಮ ವಿವಾಹವಾರ್ಷಿಕೋತ್ಸವವನ್ನು ದುಬೈನಲ್ಲಿ ಸ್ನೇಹಿತರೊಡಗೂಡಿ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಫೋಸ್ಟ್‌ನಲ್ಲಿ ಶೇರ್ ಮಾಡಿದ್ದಾರೆ ಪವಿತ್ರಾ ಗೌಡ ಇದರ ಜೊತೆಗೆ ಸಿನಿಮಾ ಸಂದರ್ಶನವೊಂದರಲ್ಲಿ ಕರ್ಮ ರಿಟನ್ಸ್ ಬಗ್ಗೆ ದರ್ಶನ್ ಮಾತನಾಡಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಕಷ್ಟು ಗೊಂದಲ ಹುಟ್ಟುಹಾಕಿದೆ.
ಕರ್ಮ ಮುಂದಿನ ಜನ್ಮಕ್ಕೆ ಕ್ಯಾರಿಯಾಗುತ್ತೆ ಅಂತ ಹಿಂದೆಲ್ಲಾ ಹೇಳ್ತಿದ್ರು ಆದ್ರೆ ಈಗ ಹಾಗಲ್ಲ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂದು ದರ್ಶನ್ ಹೇಳಿರುವ ವಿಡಿಯೋ ತುಣುಕು ಇದಾಗಿದೆ. ಅಷ್ಟಕ್ಕೂ ಪವಿತ್ರಾ ಗೌಡ ವಿಜಯಲಕ್ಷ್ಮಿಗೆ ಟಾಂಗ್ ಕೊಟ್ರಾ. ದರ್ಶನ್‌ಗೆ ಹೇಳಿದ್ರಾ..? ನಿರ್ಮಾಪಕಿ ಶೈಲಾಜಾ ನಾಗ್ ಅವರಿಗಾ ಅನ್ನೋದೇ ಎಲ್ಲರ ಚರ್ಚೆಗೆ ಗ್ರಾಸವಾಗಿದೆ.