Upendra: ಉಪ್ಪಿ ಹೆಚ್ಚಿಸಿದ್ರು ‘UI’ ಮೇಲಿನ ನಿರೀಕ್ಷೆ – ಹಂಗೇರಿಯಲ್ಲಿ ಅರಳಲಿದೆ UI ಮ್ಯೂಸಿಕ್Upendra: UI ಸಿನಿಮಾ ಕನ್ನಡ ಚಿತ್ರರಂಗಕ್ಕೆ ಸಿಕ್ಕಾಪಟ್ಟೆ ಸ್ಪೆಷಲ್. ಕಾರಣ, ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ಉಪೇಂದ್ರ…ಅಭಿಮಾನಿಗಳ ಪ್ರೀತಿಯ ಉಪ್ಪಿ ಡೈರೆಕ್ಷನ್ ಅಂದ್ರೇನೆ ಒಂದು ರೀತಿ ಊಹೆಗೆ ನಿಲುಕದ ಕ್ರೇಜ಼್. ಅದು ಬುದ್ದಿವಂತನ ಡೈರೆಕ್ಷನ್‌ಗಿರುವ ತಾಕತ್ತು. ಆ ತಾಕತ್ತು, ಕ್ರೇಜಿ಼ನೆಸ್ ಒಪ್ಪಿ ಅಪ್ಪಿಕೊಂಡಿರುವ ಅಭಿಮಾನಿ ಬಳಗ ಬಹು ವರ್ಷದ ನಂತರ ಅವರ ನಿರ್ದೇಶನದಲ್ಲಿ ಬರ್ತಿರುವ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ರೀಚ್ ಮಾಡಲು ಹಗಲು ರಾತ್ರಿ ತಲೆ ಕೆಡಿಸಿಕೊಂಡಿರುವ ಉಪ್ಪಿ ಯುರೋಪ್ ಫ್ಲೈಟ್ ಹತ್ತಿದ್ದಾರೆ.
ಬರೋಬ್ಬರಿ ಎಂಟು ವರ್ಷದ ಬಳಿಕ ಡೈರೆಕ್ಷಟ್ ಕ್ಯಾಪ್ ತೊಟ್ಟಿರುವ ಉಪೇಂದ್ರ ‘ಯುಐ’(‘UI’) ಮೂಲಕ ಹೊಸ ಜಗತ್ತಿಗೆ ಕೊಂಡೊಯ್ಯಲು ಸಿದ್ದರಾಗಿದ್ದಾರೆ. ಅವರ ನಿರ್ದೇಶನದ ಸವಿಯುಂಡವರು ‘UI’ ಬಗ್ಗೆ ಕೌತುಕಗೊಂಡಿದ್ದಾರೆ. ಕುತೂಹಲದ ಕಣ್ಣಿಟ್ಟಿದ್ದಾರೆ. ಯಾವ ರೀತಿ ಮ್ಯಾಜಿಕ್ ಮಾಡಿರಬಹುದೆಂಬ ಊಹೆಗೆ ಬಿದ್ದಿದ್ದಾರೆ. ಆ ಊಹೆಗೂ ಮೀರಿ ಸಿನಿಮಾ ಕಟ್ಟಿಕೊಡಲು ಉಪೇಂದ್ರ(Upendra) ಕೂಡ ಬೆವರು ಹರಿಸುತ್ತಿದ್ದಾರೆ. ತಮ್ಮ ಅನುಭವಗಳನ್ನೆಲ್ಲ ಧಾರೆ ಎರೆಯುತ್ತಿದ್ದಾರೆ. ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.
ಈಗಾಗಲೇ ಚಿತ್ರದ ಎರಡು ಹಾಡುಗಳು ಯೂಟ್ಯೂಬ್‌ನಲ್ಲಿ ಹಲ್ ಚೆಲ್ ಎಬ್ಬಿಸಿವೆ, ವೈರಲ್ ಆಗಿವೆ, ಹಿಟ್ ಆಗಿವೆ, ಅದರ ಖುಷಿಯಲ್ಲೇ ಮುಂದಿನ ಹಾಡುಗಳನ್ನು ಇನ್ನಷ್ಟು ಸೊಗಸಾಗಿ, ಎಫೆಕ್ಟಿವ್ ಆಗಿ ಕಟ್ಟಿಕೊಡಲು ತಂತ್ರಜ್ಞಾನದ ಮೊರೆ ಹೋಗಿರುವ ಉಪ್ರೇಂದ್ರ(Upendra) ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆ ಹಂಗೇರಿಗೆ ಪ್ರಯಾಣ ಬೆಳೆಸಿದ್ದಾರೆ. ಇಬ್ಬರು ಹಂಗೇರಿಯಲ್ಲಿರುವ ವಿಡಿಯೋ, ಪೋಟೋಗಳು ವೈರಲ್ ಆಗಿದ್ದು ಸಿನಿಮಾ ಮೇಲೆ ಕ್ಯೂರಿಯಾಸಿಟಿ ಹೆಚ್ಚಿಸಿದೆ.
ಗುಣಮಟ್ಟದ ಆಲ್ಬಂವೊಂದನ್ನು ಯುಐ ಮೂಲಕ ಕನ್ನಡ ಸಿನಿರಸಿಕರಿಗೆ ಉಣ ಬಡಿಸಲು ಹೊರಟ ಉಪ್ಪಿ(Upendra) ಹಾಗೂ ಅಜನೀಶ್ ಲೋಕನಾಥ್ ಹಂಗೇರಿ ಸ್ಟುಡಿಯೋದಲ್ಲಿ ಲೈವ್ ಮ್ಯೂಸಿಕ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ‘ಮೇಕಿಂಗ್ ಇಟ್ ಫರ್ ಯೂ ಇಂಟರ್ ನ್ಯಾಶನಲಿ’ ಎಂದಿರುವ ಚಿಕ್ಕ ವಿಡಿಯೋ ಝಲಕ್ ಚಿತ್ರತಂಡ ಶೇರ್ ಮಾಡಿಕೊಂಡು ಯುಐ ಮೇಲಿ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಮ್ಯೂಸಿಕ್ ಜೊತೆಗೆ ಸಿನಿಮಾದ ಬ್ಯಾಗ್‌ಗ್ರೌಂಡ್ ಸ್ಕೋರ್ ಹಾಗೂ ಒಂದಿಷ್ಟು ಪೋಸ್ಟ್ ಪೊಡಕ್ಷನ್ ಕೆಲಸವನ್ನು ಉಪ್ಪಿ ಹಂಗೇರಿಯಲ್ಲಿ ಮಾಡಿಸುವ ಉದ್ದೇಶ ಹೊಂದಿದ್ದಾರಂತೆ.