Prem: ನಿರ್ದೇಶಕ ಪ್ರೇಮ್(Prem) ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಕಾಂಬಿನೇಶನ್‌ನಲ್ಲಿ ಮೂಡಿ ಬರ್ತಿರುವ ಸಿನಿಮಾ ಕೆಡಿ(KD). ಚಿತ್ರವನ್ನು ಈ ವರ್ಷವೇ ಚಿತ್ರಮಂದಿರಕ್ಕೆ ತರಬೇಕುನ್ನವ ಪ್ರೇಮ್ ನಿರ್ಧಾರದಂತೆ ಸಿನಿಮಾ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾ ಆರಂಭದಿಂದಲೂ ಬಿಗ್ ಅಪ್ಡೇಟ್ ನೀಡುತ್ತಾ ಬಂದಿರುವ ಪ್ರೇಮ್ ಮತ್ತೊಂದು ಬಿಗ್ ಅನೌನ್ಸ್‌ಮೆಂಟ್ ಬಗ್ಗೆ ಸುಳಿವು ನೀಡಿದ್ದಾರೆ.
ಕರಿಯ, ಜೋಗಿ ನಂತರ ಮತ್ತೊಮ್ಮೆ ರೌಡಿಸಂ ಕಥೆಯ ಜಾಡು ಹಿಡಿದಿರುವ ಪ್ರೇಮ್ 70ರ ದಶಕದ ರೌಡಿಸಂ ಕಹಾನಿಯನ್ನು ‘ಕೆಡಿ’(KD)ಯಲ್ಲಿ ಕಟ್ಟಿಕೊಡಲು ಹೊರಟಿದ್ದಾರೆ. ಫಸ್ಟ್ ಲುಕ್, ಟೈಟಲ್ ಟೀಸರ್ ಥ್ರಿಲ್ ಹೆಚ್ಚಿಸಿದೆ. ಇದೀಗ 26 ಭಾನುವಾರದಂದು ದೊಡ್ಡ ಅನೌನ್ಸ್‌ಮೆಂಟ್ ಇದೆ ಪರ್ಮಾನು ಹೊರಡಿಸಿದೆ ಸಿನಿಮಾ ತಂಡ. ಆ ದೊಡ್ಡ ಸುದ್ದಿ ಸಿನಿಮಾ ರಿಲೀಸ್ ಬಗ್ಗೆಯಾ, ಸಾಂಗ್ ಬಗ್ಗೆಯಾ ಅಥವಾ ಸ್ಟಾರ್ ನಟ ನಟಿಯ ಆಗಮನದ ಬಗ್ಗೆಯಾ ಅನ್ನೋದು ಎಲ್ಲರ ಲೆಕ್ಕಾಚಾರ. ಅದಕ್ಕಾಗಿ ಭಾನುವಾರದವರೆಗೆ ಕಾಯಬೇಕಾಗಿದೆ.
‘ಕೆಡಿ’(KD) ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರ್ತಿರುವ ಸಿನಿಮಾ. ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದೆ. ಇದಕ್ಕೆ ಸಾಕ್ಷಿ ಸಿನಿಮಾದ ತಾರಾಬಳಗ. ಬಿಟೌನ್ ಖ್ಯಾತ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಒಳಗೊಂಡ ಸ್ಟಾರ್ ತಾರೆಯರ ಚಿತ್ರದಲ್ಲಿದ್ದಾರೆ. ಚಿತ್ರಕ್ಕಾಗಿ ರೆಟ್ರೋ ಅವತಾರ ತಾಳಿರುವ ಧ್ರುವ ಸರ್ಜಾ(Dhruva Sarja) ತೂಕ ಇಳಿಸಿಕೊಂಡು ಸಣ್ಣ ಆಗಿದ್ದಾರೆ. ರೌಡಿಸಂ ಪಾತ್ರಕ್ಕೆ ಜೀವ ತುಂಬಲಿದ್ದಾರೆ.