Hema: ಮೊನ್ನೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಹಲವು ನಟ-ನಟಿಯರಿಗೆ ಕುತ್ತು ತಂದಿದೆ. ಟಾಲಿವುಡ್ ಅಂಗಳದ ಕಿರುತೆರೆ, ಹಿರಿತೆರೆಯ ನಟ-ನಟಿಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆಂದು ಈಗಾಗಲೇ ಗುಲ್ಲೇದಿದೆ. ಒಬ್ಬೊಬ್ಬರಾಗಿ ನಾನವನಲ್ಲ, ನಾನವಳಲ್ಲ ಎಂದು ವಿಡಿಯೋ ಮುಖಾಂತರ ಜಾರಿ ಕೊಳ್ತಿದ್ದಾರೆ. ನಟಿ ಹೇಮಾ ಕೂಡ ಈ ಲಿಸ್ಟ್‌ನಲ್ಲಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ(Hema) ಕೂಡ ಭಾಗಿಯಾಗಿದ್ರು ಎನ್ನಲಾಗಿದೆ. ಈ ಸುದ್ದಿ ಪಸರ್ ಆಗ್ತಿದ್ದಂತೆ ನಾನು ಅವಳಲ್ಲ. ನಾನು ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ವಿಡಿಯೋ ಹಂಚಿಕೊಂಡಿದ್ರು. ಆದ್ರೆ ಈಗ ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸರು ನಟಿ ಹೇಮಾ ಕೂಡ ಪಾರ್ಟಿಯಲ್ಲಿದ್ರು ಎಂದು ತಿಳಿಸಿದ್ದಾರೆ. ಇದ್ರಿಂದ ಹೇಮಾಗೆ ಅವಮಾನವಾಗಿದೆ. ಮುಖಮುಚ್ಚಿಕೊಳ್ಳೊ ಪರಿಸ್ಥಿತಿ ಎದುರಾಗಿದೆ. ಇದರ ಬೆನ್ನಲ್ಲೇ ಹೇಮಾ ವಿರುದ್ದ ನಟಿ ಕರಾಟೆ ಕಲ್ಯಾಣಿ ಶಾಕಿಂಗ್ ಹೇಳಿಕೆಯೊಂದು ನೀಡಿದ್ದಾರೆ.
ವಿಡಿಯೋ ಮೂಲಕ ಕರಾಟೆ ಕಲ್ಯಾಣಿ(Karate Kalyani) ಹೇಮಾ ಮುಖವಾಡ ಕಳಚಿಟ್ಟಿದ್ದಾರೆ. ಬೆಂಗಳೂರು ರೇವ್ ಪಾರ್ಟಿಯಲ್ಲಿ ಹೇಮಕ್ಕ ಸಿಕ್ಕಿಬಿದ್ದಿದ್ದಾರೆ. ಅವರು ನಕಲಿ ಎಂದು ನಾನು ಮೊದಲೇ ಹೇಳಿದ್ದೆ. ನಾನು ಉದ್ಯಮವನ್ನು ಉಳಿಸುತ್ತಿದ್ದೇನೆ, ಮಹಾನ್ ಮಹಿಳೆ ಎನ್ನುತ್ತಿದ್ದರು. ಈಗ ಏನಾಯಿತು, ನೀವು ಈಗ ಏನು ಮಾಡಿದ್ದೀರಿ ಎಂದು ಕಲ್ಯಾಣಿ ಪ್ರಶ್ನೆ ಮಾಡಿದ್ದಾರೆ. ಯಾರನ್ನು ಬಿಡದೇ ತೊಂದರೆ ಕೊಟ್ಟಿದ್ದೀರಿ, ನನಗೂ ತೊಂದರೆ ಕೊಟ್ಟಿದ್ದೀರಿ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸಿಕ್ಕಿದೆ. ಪೊಲೀಸರು ನಿಮಗೆ ಶಿಕ್ಷೆ ಕೊಟ್ಟೆ ಕೊಡುತ್ತಾರೆ. ಶಿಕ್ಷೆ ಪಡೆಯಲು ರೆಡಿಯಾಗಿ. ನಾವು ಮಾಡಿದ್ದು ನಮಗೆ ತಿರುಗಿ ಬರುತ್ತೆ ಅದನ್ನು ಕರ್ಮ ಎನ್ನುತ್ತೇವೆ. ಇನ್ಮುಂದೆ ಜಾಗೃತರಾಗಿರಿ ಎಂದಿದ್ದಾರೆ. ನಟಿ ಕಲ್ಯಾಣಿ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಹಳೆಯ ಸೇಡು ಎನ್ನುತ್ತಿದ್ದಾರೆ ಟಿಟೌನ್ ಮಂದಿ.