Sathyaraj: ಚುನಾವಣೆ ಬಂತೆಂದರೆ ಸಾಕು ಪದೇ ಪದೇ ಮೋದಿ(Modi) ಬಯೋಪಿಕ್ ಸುದ್ದಿ ಮುನ್ನೆಲೆಗೆ ಬರುತ್ತೆ. ಆ ಸ್ಟಾರ್ ನಟ ಮೋದಿ ಪಾತ್ರಕ್ಕೆ ಜೀವ ತುಂಬ್ತಾರೆ, ಈ ಸ್ಟಾರ್ ನಟಿಸ್ತಾರೆ ಎಂಬೆಲ್ಲ ಅಂತೆ ಕಂತೆ ಸುದ್ದಿ ಕೇಳಿ ಬರ್ತಾನೆ ಇರುತ್ತೆ. ಇದೀಗ ಮೋದಿ ಬಯೋಪಿಕ್ ವಿಚಾರದಲ್ಲಿ ಖ್ಯಾತ ತಮಿಳು ನಟನ ಹೆಸರು ಕೇಳಿ ಬಂದಿದೆ.
ಬಾಹುಬಲಿ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತಮಿಳು ನಟ ಸತ್ಯರಾಜ್(Sathyaraj). ವಿಶೇಷ ಅಭಿನಯದ ಮೂಲಕ ಗಮನ ಸೆಳೆಯೋ ಈ ನಟ ಮೋದಿ ಬಯೋಪಿಕ್‌ನಲ್ಲಿ ಮೋದಿ(Modi) ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎನ್ನುವ ಸುದ್ದಿ ಕೇಳಿ ಬರ್ತಿದೆ. ಈ ಅಂತೆ ಕಂತೆ ಸುದ್ದಿ ವೈರಲ್ ಆಗಿ ಸತ್ಯರಾಜ್ ಕಿವಿಗೂ ಬಿದ್ದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸತ್ಯರಾಜ್ ನಾನು ಬಯೋಪಿಕ್ ನಲ್ಲಿ ನಟಿಸುತ್ತಿಲ್ಲ. ಮೋದಿ ಪಾತ್ರಕ್ಕೆ ಬಣ್ಣನೂ ಹಚ್ಚುತ್ತಿಲ್ಲ. ಚಿತ್ರತಂಡ ನನ್ನ ಸಂಪರ್ಕವನ್ನೇ ಮಾಡಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಕೇಳಿ ಬರ್ತಿದ್ದ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಲೆ ಬುಡುವಿಲ್ಲದ ಏನೇನೋ ಸುದ್ದಿಗಳು ಕೇಳಿ ಬರ್ತಿರುತ್ತೆ. ಅದೆಲ್ಲಾ ನಿಜವಲ್ಲ ಎಂದಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಸತ್ಯರಾಜ್(Sathyaraj)ಪೆರಿಯಾರಿಸ್ಟ್ ಆಗಿದ್ದು, ಪೆರಿಯಾರ್ ಸಿದ್ದಾಂತಗಳನ್ನು ಬೆಂಬಲಿಸುವ ಇವರು ಪೆರಿಯಾರ್ ವಿರೋಧಿ ಸಿದ್ದಾಂತಗಳನ್ನು ಪ್ರಚಾರ ಮಾಡುವ ಚಿತ್ರದ ಭಾಗವಾಗೋದಿಲ್ಲ ಎಂದು ಈ ಮೊದಲೇ ಹೇಳಿದ್ದರು.