Darshan: ತಾರಕ್ ಸಿನಿಮಾ ನಂತರ ಮಿಲನ ಪ್ರಕಾಶ್(Milana Prakash), ದರ್ಶನ್(Darshan) ಒಂದಾಗಿರುವ ಸಿನಿಮಾ ಡೆವಿಲ್(Devil). ಟೈಟಲ್, ದರ್ಶನ್ ಲುಕ್, ಟೀಸರ್ ಝಲಕ್ ಎಲ್ಲವೂ ‘ಡೆವಿಲ್’ ಬಗ್ಗೆ ಥ್ರಿಲ್ ಆಗುವಂತೆ ಮಾಡಿದೆ. ದಸರಾಗೆ ಸಿನಿಮಾ ತೆರೆಗೆ ಬಂದೆ ಬರುತ್ತೆ ಎಂದಿದ್ದ ಚಿತ್ರತಂಡ ಇದೀಗ ಲೇಟೆಸ್ಟ್ ಅಪ್ಡೇಟ್ ನೀಡಿದ್ದು, ಕಿಸ್‌ಮಸ್‌ಗೆ ಮಿಸ್ಸೇ ಇಲ್ಲ ಎಂದಿದೆ.
ಡೆವಿಲ್(Devil) ಅಖಾಡಕ್ಕೆ ಇಳಿದಿರುವ ದಚ್ಚುಗೆ ಶೂಟಿಂಗ್ ಸಮಯದಲ್ಲಿ ಎಡಗೈಗೆ ಪೆಟ್ಟಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಇದ್ರಿಂದ ಡೆವಿಲ್ ಶೂಟಿಂಗ್ ನಿಲ್ಲಿಸಲಾಗಿತ್ತು. ಆದ್ರೀಗ ಎಲ್ಲವೂ ಲಯಕ್ಕ ಬಂದಿದೆ. ಈ ಹಿಂದೆ ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದಿದ್ದ ಚಿತ್ರತಂಡ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ಗೆ ಸಿನಿಮಾವನ್ನು ಬಿಡುಗಡೆ ಮಾಡೋದಾಗಿ ಕನ್ಫರ್ಮ್ದ ಮಾಡಿದೆ. ಸಿನಿಮಾದ ಅಪ್ಡೇಟ್ ಕೇಳಿ ದಚ್ಚು ಅಭಿಮಾನಿ ಬಳಗ ಥ್ರಿಲ್ ಆಗಿದೆ.
ಚಿತ್ರದಲ್ಲಿ ನಾಯಕಿಯಾಗಿ ಪುತ್ತೂರಿನ ಬೆಡಗಿ ರಚನಾ ರೈ(Rachana Rai) ನಟಿಸುತ್ತಿದ್ದಾರೆ. ಕಳೆದ ವಾರ ಮೇಕಿಂಗ್ ಝಲಕ್ ಬಿಡುಗಡೆ ಮಾಡಿ ಚಿತ್ರತಂಡ ಎಲ್ಲರ ಗಮನ ಸೆಳೆದಿದೆ. ಚಿತ್ರದ ನಾಯಕಿ ಬಗ್ಗೆಯೂ ಮಾಹಿತಿ ನೀಡಿದೆ. ದರ್ಶನ್ ಕೂಡ ಶೂಟಿಂಗ್‌ಗೆ ಮರಳಲಿದ್ದು, ಸದ್ಯದಲ್ಲೇ ಡೆವಿಲ್ ಚಿತ್ರೀಕರಣ ಮತ್ತೆ ಆರಂಭವಾಗಲಿದೆ. ಚಿತ್ರದ ತಾರಾಬಳಗದಲ್ಲಿ ಯಾರಿರುತ್ತಾರೆ ಇದೆಲ್ಲದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. ದರ್ಶನ್(Darshan) ಎದುರು ವಿಲನ್ ಆಗಿ ಅಬ್ಬರಿಸುವರ್ಯಾರು ಅನ್ನೋದನ್ನ ಕಾದು ನೋಡಬೇಕು. ಸದ್ಯ ಸಿನಿಮಾದ ಲೇಟೆಸ್ಟ್ ಅಪ್ಡೇಟ್ ದಾಸನ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.