Kannada Industry: ಕನ್ನಡ ಚಿತ್ರರಂಗ ಒಂದೂವರೆ ಎರಡು ವರ್ಷದಿಂದ ನಷ್ಟದಲ್ಲಿ ನಡೆಯುತ್ತಿದೆ. ಈ ಎರಡು ವರ್ಷದಲ್ಲಿ ಕಾಂತರಾ(Kantara), ಕಾಟೇರ(Katera) ಬಿಟ್ಟರೇ ಯಾವುದೇ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿಲ್ಲ. ಚಿತ್ರಮಂದಿರಕ್ಕೆ ಜನರನ್ನು ತಂದಿಲ್ಲ. ಹೊಸಬರ ಸಿನಿಮಾಗಳು ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ. ಇದ್ರಿಂದ ಚಿತ್ರಮಂದಿರಗಳ ಪರಿಸ್ಥಿತಿ ಹೀನಾಯ ಹಂತಕ್ಕೆ ತಲುಪಿದೆ. ಹೀಗೆ ಆದ್ರೆ ಓಟಿಟಿಯಲ್ಲೇ ಸಿನಿಮಾ ನೋಡಬೇಕಂಬ ಆತಂkವನ್ನು ಫಿಲಂ ಚೇಂಬರ್ ಹೊರಹಾಕಿತ್ತು. ಅದಕ್ಕೆಂದೇ ಮಹತ್ವದ ಸಭೆಯನ್ನೂ ಕರೆದಿತ್ತು.
ತೆಲಂಗಾಣದಂತೆ ನಮ್ಮಲ್ಲೂ ಒಂದಷ್ಟು ದಿನ ಚಿತ್ರಮಂದಿರ ಮುಚ್ಚಲಾಗುತ್ತೆ ಎಂಬ ಮಾತಗಳು ಕೇಳಿ ಬಂದಿತ್ತು. ಆದ್ರೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರರಂಗದ ನಿರ್ಮಾಪಕರು ಹಾಗೂ ವಿತರಕರ ಸಮ್ಮುಖದಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿದೆ. ಚಿತ್ರಮಂದಿರ ಮುಚ್ಚಲಾಗುತ್ತೆ ಎಂದು ನಾವು ಹೇಳಿರಲಿಲ್ಲ. ಆದ್ರೆ ಚಿತ್ರಮಂದಿರಕ್ಕೆ ಜನ ಬರದೇ ಆದಾಯವಿಲ್ಲದೆ ಚಿತ್ರರಂಗ ಹಾಗೂ ಚಿತ್ರಮಂದಿರದ ಮಾಲೀಕರು ನಷ್ಟದಲ್ಲಿದ್ದಾರೆ. ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂಬುದು ನಮ್ಮ ಆಲೋಚನೆ ಎಂದಿದೆ, ಆ ಮೂಲಕ ಕನ್ನಡ ಚಿತ್ರಮಂದಿರಗಳು ಒಂದಷ್ಟು ಕಾಲ ಬಾಗಿಲು ಮುಚ್ಚುತ್ತೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ.
ಕೇರಳ ರಾಜ್ಯದಲ್ಲಿ ಅವರದ್ದೇ ಒಟಿಟಿ ಪ್ಲ್ಯಾಟ್ ಫಾರ್ಮ್ ಮಾಡಿದೆ. ಆದ ಯುಎಫ್‌ಓ, ಕ್ಯೂಬ್ ಇದೆ ಇದ್ರಿಂದ ಟ್ಯಾಕ್ಸ್ ಸಿನಿಮಾಗಳಿಗೆ ಕಟ್ಟಬೇಕಾದ ಟ್ಯಾಕ್ಸ್ ಕಡಿಮೆ. ಈ ಮಾದರಿ ಕರ್ನಾಟಕದಲ್ಲಿ ಬಂದರೆ ಈಗ ಎದುರಿಸುತ್ತಿರುವ ಸಮಸ್ಯೆಗೆ ಒಂದಿಷ್ಟು ಪರಿಹಾರ ಸಿಗಬಹುದು ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್(N.M.Suresh) ಅಭಿಪ್ರಾಯ ಹೊರಹಾಕಿದ್ದಾರೆ.