Pushpa2: ವರ್ಲ್ ವೈಡ್ ಕ್ರೇಜ಼್ ಸೃಷ್ಟಿಸಿರುವ ಪುಷ್ಪಾ2 ಚಿತ್ರಕ್ಕೆ ಐಟಂ ಸಾಂಗ್ ವಿಚಾರವೇ ದೊಡ್ಡ ತಲೆ ನೋವಾಗಿತ್ತು. ಮೊದಲ ಸೀಕ್ವೆಲ್‌ನಲ್ಲಿ ‘ಊ ಅಂಟವಾ’ ಸಾಂಗ್ ಮೂಲಕ ಸ್ಯಾಮ್ ಕಿಕ್ಕೇರಿಸಿದ್ದಳು. ಸಿನಿಮಾಗೆ ದೊಡ್ಡ ಮೈಲೇಜ್ ಈ ಹಾಡು ತಂದುಕೊಟ್ಟಿತ್ತು. ಆದ್ರಿಂದ ಪಾರ್ಟ್2 ನಲ್ಲೂ ಇದನ್ನು ಮೀರಿಸುವ ಸಾಂಗ್‌ವೊಂದನ್ನ ಮಾಡಲು ಸುಕುಮಾರ್ ಪ್ಕ್ಯಾನ್ ಮಾಡಿಕೊಂಡಿದ್ರು. ಆದ್ರೆ ಸ್ಯಾಮ್ ಐಟಂ ಸಾಂಗ್‌ಗೆ ನೋ ಎಂದ ಮೇಲೆ ದೊಡ್ಡ ತಲೆ ನೋವಾಗಿತ್ತು. ಆದ್ರೀಗ ಆ ತಲೆನೋವು ನಿವಾರಣೆಯಾಗಿದೆ.
ಸ್ಯಾಮ್ ‘ಪುಷ್ಪಾ2’(Pushpa2) ಐಟಂ ಸಾಂಗ್ ಮಾಡೋದಿಲ್ಲ ಎಂದ ಮೇಲೆ ಸುಕುಮಾರ್(Sukumar)ಗೆ ದೊಡ್ಡ ಸವಾಲು ಎದುರಾಗಿತ್ತು. ಪುಷ್ಪಾರಾಜ್ ಜೊತೆ ಯಾರನ್ನು ಕುಣಿಯೋಕೆ ಕರೆ ತರೋದು ಅನ್ನೋದೆಂದು ಜಾನ್ವಿ ಕಪೂರ್, ದಿಶಾ ಪಟಾನಿ, ಶ್ರೀಲೀಲಾಗೆರತ್ತ ಕಣ್ಣು ಹಾಯಿಸಿದ್ರು. ಆದ್ರೆ ಅವರೆಲ್ಲರಿಂದ ನೋ ಅನ್ನೋ ಆನ್ಸರ್ ಬಂದ ಮೇಲೆ ಕೊನೆಗೂ ಬಿಟೌನ್ ಹಾಡ್ ಬೆಡಗಿಯನ್ನು ಸುಕುಮಾರ್ ಹಾಗೂ ತಂಡ ಕರೆತಂದಿದೆ. ಆಕೆ ಬೇರಾರು ಅಲ್ಲ ಅನಿಮಲ್ ಸಿನಿಮಾದಲ್ಲಿ ಹಾಟ್ ಅವತಾರವೆತ್ತಿದ್ದ ತೃಪ್ತಿ ದಿಮ್ರಿ(Tripti Dimri)
ಪುಷ್ಪಾ2(Pushpa2) ಸ್ಪೆಷಲ್ ಹಾಡಿನಲ್ಲಿ ಸೊಂಟ ಬಳುಕಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಬಿಟೌನ್ ಬಾಲೆ ತೃಪ್ತಿ ದಿಮ್ರಿ(Tripti Dimri). ಅಲ್ಲು(Allu Arju)- ತೃಪ್ತಿ ದಿಮ್ರಿ ಕಾಂಬೋದ ಕೆಮಿಸ್ಟ್ರಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ ಅಭಿಮಾನಿಗಳು. ತೃಪ್ತಿ ಆಗಮನದಿಂದ ನಿರ್ದೇಶಕ ಸುಕುಮಾರ್ ನಿರಾಳರಾಗಿದ್ದಾರೆ. ಇನ್ನೇನಿದ್ರು ‘ಊ ಅಂಟವಾ ಮಾವ’ ಹಾಡನ್ನು ಮೀರಿಸುವ ಹಾಡೊಂದನ್ನು ಕೊಡೋದರತ್ತ ಚಿತ್ರತಂಡದ ಚಿತ್ತ.