Ashika Ranganath: ʻಕ್ರೇಜಿ಼ಬಾಯ್ʼ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿ ಆಶಿಕಾ ರಂಗನಾಥ್(Ashika Ranganath). ಡಾನ್ಸರ್ ಆಗಿ ಕೆರಿಯರ್ ಆರಂಭಿಸಿ ಹೀರೋಯಿನ್ ಆಗಿ ಬಣ್ಣ ಹಚ್ಚಿದವರು ಆಶಿಕಾ. ʻಕ್ರೇಜಿ಼ಬಾಯ್ʼ ನಂತರ ಮೇಲ್ಮುಕವಾಗಿ ಸಾಗಿದ್ದ ʻಮುಗುಳು ನಗೆʼ ಹುಡುಗಿಯ ಡಿಮ್ಯಾಂಡ್ ಗ್ರ್ಯಾಫ್ ಈಗ್ಯಾಕೋ ಇಳಿಮುಖವಾಗಿದೆ.
ಡಾನ್ಸ್, ಆಕ್ಟಿಂಗ್, ಲುಕ್ ಎಲ್ಲದರಲ್ಲೂ ಪರ್ಫೆಕ್ಟ್ ಈ ಕನ್ನಡದ ಮಿಲ್ಕಿ ಬ್ಯೂಟಿ. ʻಮಾಸ್ ಲೀಡರ್ʼ, ʻಮುಗುಳು ನಗೆʼ, ʻರ್ಯಾಂಬೊ-2ʼ, ʻತಾಯಿಗೆ ತಕ್ಕ ಮಗʼ, ʻಮದಗಜʼʻ, ʻರೇಮೋʼ ಸಿನಿಮಾಗಳಲ್ಲಿ ನಟಿಸಿರುವ ಆಶಿಕಾಗೆ ದೊಡ್ಡದೊಂದು ಗೆಲುವು ಮರೀಚಿಕೆಯಾಗಿ ಉಳಿದಿದೆ. ರ್ಯಾಂಬೊ-2 ಹೆಸರು ತಂದುಕೊಟ್ಟರೂ ನಂತರದ ಸಿನಿಮಾಗಳು ಹೇಳಿಕೊಳ್ಳೋ ಮ್ಯಾಜಿಕ್ ಮಾಡಲಿಲ್ಲ. ಟಾಲಿವುಡ್ ಅಂಗಳದಲ್ಲೊಮ್ಮೆ ಅದೃಷ್ಟ ಪರೀಕ್ಷೆ ಮಾಡೇ ಬಿಡುವ ಎಂದು ʻನಾ ಸಾಮಿ ರಂಗʼ, ʻಅಮಿಗೋಸ್ʼʻ ನಲ್ಲಿ ಬಣ್ಣ ಹಚ್ಚಿದ್ರು ಅದೂ ಗೆಲುವಿನ ಸಿಹಿ ನೀಡಲಿಲ್ಲ. ತಮಿಳಿನ ʻಪಟ್ಟತ್ತು ಅರಸನ್ʼ ಕೂಡ ಕೈ ಹಿಡಿಯಲಿಲ್ಲ. ಕನ್ನಡ, ತೆಲುಗು, ತಮಿಳು ಎಲ್ಲೂ ಕನ್ನಡತಿಗೆ ಗೆಲುವು ಸಿಗುತ್ತಿಲ್ಲ. ಸಾಲು ಸೋಲುಗಳು ಆಶಿಕಾ(Ashika Ranganath) ಕೆರಿಯರನ್ನ ಮಂಕು ಕವಿದಂತೆ ಮಾಡಿದೆ.
ಇದೀಗ ಆಶಿಕಾಗೆ ಮತ್ತೊಂದು ಚಾನ್ಸ್ ಸಿಕ್ಕಿದೆ. ಇದು ಈಕೆಗೊಲಿದ ಅದೃಷ್ಟ ಎನ್ನಬಹುದು. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಜೊತೆ ನಟಿಸೋ ಅವಕಾಶ ಒಲಿದು ಬಂದಿದೆ. ಮೆಗಾಸ್ಟರ್ ನಟಿಸುತ್ತಿರುವ ಬಿಗ್ ಪ್ರಾಜೆಕ್ಟ್ ವಿಶ್ವಂಭರ(Vishwambara). ಈ ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಶಿಕಾ(Ashika Ranganath)ಗೂ ಚಿತ್ರದ ಪ್ರಮುಖ ಪಾತ್ರಕ್ಕೆ ಅವಕಾಶ ಒಲಿದು ಬಂದಿದೆ. ಆಶಿಕಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರತಂಡ ಮೆಗಾಸ್ಟಾರ್ ಚಿತ್ರಕ್ಕೆ ವೆಲ್‌ಕಂ ಹೇಳಿದೆ. ಆಶಿಕಾ ಸೆಕೆಂಡ್ ಇನ್ನಿಂಗ್ಸ್ ಟಿಟೌನ್‌ನಲ್ಲಿ ಆರಂಭವಾಗಿದೆ. ಈ ಚಿತ್ರ ಆಶಿಕಾ ಸಿನಿ ಕೆರಿಯರ್‌ಗೆ ಹೊಸ ಮೈಲೇಜು ತಂದುಕೊಡುತ್ತಾ, ತೆಲುಗಿನಲ್ಲಿ ನೆಲೆ ನಿಲ್ಲುವಂತೆ ಮಾಡುತ್ತಾ ಕಾದು ನೋಡ್ಬೇಕು.
.