ಗುರುವಾರ, ಜುಲೈ 3, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Darshan: ಅರ್ಜುನನ ಹೆಸರಲ್ಲಿ ಇದೆಂತಹ ಮೋಸ- ಚಾಲೆಂಜಿಂಗ್‌ ಸ್ಟಾರ್‌ಗೂ ದೋಖಾ..!

Bharathi Javalliby Bharathi Javalli
27/05/2024
in Majja Special
Reading Time: 1 min read
Darshan: ಅರ್ಜುನನ ಹೆಸರಲ್ಲಿ ಇದೆಂತಹ ಮೋಸ- ಚಾಲೆಂಜಿಂಗ್‌ ಸ್ಟಾರ್‌ಗೂ ದೋಖಾ..!

Darshan: ಮೈಸೂರು ಅರಮನೆಯಲ್ಲಿ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತ ಅರ್ಜುನ ಆನೆ ಸಾವು ಕರುನಾಡ ಕರುಳ ಹಿಂಡಿದ್ದು ಗೊತ್ತಿರುವ ವಿಚಾರ. ಆದ್ರೆ ಅದರ ಸಾವಿನಲ್ಲೂ ರಾಜಕೀಯ ಮಾಡೋರಿಗೆ, ಅರ್ಜುನ ಆನೆ ಸಾವಿನ ಸಿಂಪತಿಯಲ್ಲಿ ಹಣ ಕೀಳುವವರನ್ನು ಏನೆನ್ನಬೇಕು. ಮನುಷತ್ವ ಕಳೆದಕೊಂಡ ಮನಸ್ಥಿತಿಗೆ ಹಿಡಿ ಶಾಪಹಾಕಬೇಕಾ..? ಹಣಕ್ಕಾಗಿ ಹೆಣವನ್ನು ಬಳಸಿಕೊಳ್ಳುತ್ತಾರೆಂದರೆ ಸಮಾಜ ಎತ್ತ ಸಾಗುತ್ತಿದೆ ಎಂದು ಮರುಕ ಪಡಬೇಕಾ..? ಇಂತಹದ್ದೊಂದು ಹಂತಕ್ಕೆ ಎಲ್ಲರನ್ನು ಕೊಂಡೊಯ್ದಿದ್ದಾನೆ ಮೈಸೂರಿನ ಯುವಕ.

ಅರ್ಜುನನ ಸಮಾಧಿ ಆದಷ್ಟು ಬೇಗ ಮಾಡಿ, ಮಳೆಗಾಲದೊಳಗೆ ಅದಕ್ಕೊಂದು ನೆಲೆ ಕಾಣಿಸಿ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌(Darshan) ಮನವಿ ಮಾಡಿಕೊಂಡಿದ್ರು. ತಾವೇ ನಿಂತು ಒಂದಿಷ್ಟು ಸಹಾಯ ಹಸ್ತ ನೀಡೋದಾಗಿ ತಿಳಿಸಿದ್ರು. ಈ ಹೇಳಿಕೆಯನ್ನು ಬಳಸಿಕೊಂಡ ಮೈಸೂರಿನ ನವೀನ ಎಂಬಾತ ಅರ್ಜುನ ಸಮಾಧಿಗೆ ಹಣ ಕೇಳಲು ಆರಂಭಿಸಿದ್ದಾನೆ. ಸಮಾಧಿ ಮಾಡುತ್ತೇನೆಂದು ತನ್ನ ಅಕೌಂಟ್‌ಗೆ ಹಣವನ್ನು ಜಮಾ ಮಾಡಿಕೊಂಡಿದ್ದಾನೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಳಿಯೂ ಹಣ ಪಡೆದಿದ್ದಾನೆ. ಸಮಾಧಿಗೆಂದು ದರ್ಶನ್‌ ಕಲ್ಲುಗಳನ್ನು ನೀಡಿದ್ದಾರೆ. ಆದರೆ ಈತ ಅದನ್ನೂ ಮಾರಿಕೊಂಡು ದೋಖಾ ಮಾಡಿದ್ದಾನೆ. ಅರಣ್ಯ ಇಲಾಖೆಗೂ ಯಾಮಾರಿಸಿದ್ದಾನೆ.

ದರ್ಶನ್(Darshan) ಹೆಸರಲ್ಲಿ ಇದೆಲ್ಲಾ ನಡೆಯುತ್ತಿದೆ ಎಂದು ಗೊತ್ತಾದಾಗ ಅವ್ರ ಅಭಿಮಾನಿಗಳು ಈ ಮೋಸದ ಜಾಲವನ್ನು ಬಟಾ ಬಯಲು ಮಾಡಿ. ಯಾರೂ ಕೂಡ ಹಣ ನೀಡದಂತೆ ಮನವಿ ಮಾಡಿದ್ದಾರೆ. ಅರ್ಜುನ ಪಡೆ ವಾಟ್ಸಾಪ ಗ್ರೂಪ್‌ ಮೂಲಕ ದರ್ಶನ್‌ ಅಭಿಮಾನಿ ನವೀನ್‌ ಹಣ ಸಂಗ್ರಹಿಸಿ ಯಾಮಾರಿಸಿದ್ದಾನೆ. ಇತ್ತ ಅರಣ್ಯ ಇಲಾಖೆ ಕೂಡ ಅರ್ಜುನ ಆನೆ ಸಮಾಧಿಗೆ ತಲೆ ಕೆಡಿಸಿಕೊಂಡಿಲ್ಲ, ಅತ್ತ ದರ್ಶನ್‌(Darshan) ಅಭಿಮಾನಿಗಳಿಗೂ ಸಮಾಧಿ ಮಾಡಲು ಬಿಡುತ್ತಿಲ್ಲ. ಇಂತಹ ಸನ್ನಿವೇಶವನ್ನು ಬಳಸಿಕೊಂಡು ಅಭಿಮಾನಿ ಹೆಸರಲ್ಲಿ ಹಣ ಸಂಗ್ರಹಿಸಿ ದಾಸನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ ನವೀನ್.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Prem: ಅಬ್ಬಬ್ಬಾ ‘ಕೆಡಿ’ ಆಡಿಯೋ ರೈಟ್ಸ್‌ ಸೇಲಾಗಿದ್ದು ಎಷ್ಟು ಕೋಟಿಗೆ – ‘ಕೆಡಿ’ ಪ್ರಚಾರಕ್ಕೆ ಕಿಕ್‌ ಸ್ಟಾರ್ಟ್‌

Prem: ಅಬ್ಬಬ್ಬಾ 'ಕೆಡಿ' ಆಡಿಯೋ ರೈಟ್ಸ್‌ ಸೇಲಾಗಿದ್ದು ಎಷ್ಟು ಕೋಟಿಗೆ – 'ಕೆಡಿ' ಪ್ರಚಾರಕ್ಕೆ ಕಿಕ್‌ ಸ್ಟಾರ್ಟ್‌

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.