Radhika Pandit: ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟಿ ರಾಧಿಕಾ ಪಂಡಿತ್(Radhika Pandit) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಸಕ್ಸಸ್ ಆಗ್ತಿದ್ದಂತೆ ರಾಧಿಕಾ ಕನ್ನಡ ಚಿತ್ರರಂಗಕ್ಕೆ ಲಕ್ಕಿ ಗರ್ಲ್ ಆದ್ರು. ಆ ನಂತರ ಹಿಟ್ ಸಿನಿಮಾಗಳು ಈಕೆಯ ಜೋಳಿಗೆ ಸೇರಿದ್ವು. ರಾಕಿಂಗ್ ಸ್ಟಾರ್ ಯಶ್(Yash) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಧಿಕಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಮತ್ತೆ ಬಣ್ಣ ಹಚ್ಚೋದು ಯಾವಾಗ ಅನ್ನೋರಿಗೆ ರಾಮಾಚಾರಿಯ ಮಾರ್ಗರೇಟ್ ಉತ್ತರ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಶನ್ ಮೂಲಕ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ ರಾಧಿಕಾ ಪಂಡಿತ್(Radhika Pandit). ಹಲವು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಅದರಲ್ಲಿ ಹೆಚ್ಚಾಗಿ ಕೇಳಿದ ಪ್ರಶ್ನೆಯೇ ನಟನೆಗೆ ಮರಳಿ ಯಾವಾಗ ಬರ್ತೀರಾ ಎನ್ನುವುದು. ಈ ಪ್ರಶ್ನೆಗೆ ರಾಧಿಕಾ ಉತ್ತರಿಸಿದ್ದಾರೆ. ಸರಿಯಾದ ಸಮಯ ಬಂದಾಗ ಮತ್ತೆ ನಟನೆಗೆ ಬರುತ್ತೇನೆ ಎಂದಿದ್ದಾರೆ. ಆದ್ರೆ ಫ್ಯಾನ್ಸ್ ಮಾತ್ರ ಈ ಉತ್ತರದಿಂದ ಬೇಸರಗೊಂಡಿದ್ದಾರೆ. ಸರಿಯಾದ ಸಮಯ ಅಂದ್ರೆ ಯಾವಾಗ ಎಂದು ಆಲೋಚಿಸುತ್ತಿದ್ದಾರೆ.
ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿರುವ ರಾಧಿಕಾ ಪಂಡಿತ್(Radhika Pandit) ಆಯ್ರಾ, ಯಥರ್ವ್ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದಿ ಲಕ್ಷ್ಮೀ ಪುರಾಣ ಇವರು ನಟಿಸಿರುವ ಕೊನೆಯ ಸಿನಿಮಾವಾಗಿದ್ದು, ಅಭಿಮಾನಿಗಳು ತೆರೆಮೇಲೆ ರಾಧಿಕಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.