Ranveer Sing: ತೆಲುಗಿನ ಹನುಮಾನ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆ ಬರೆದಿದ್ದು ಎಲ್ಲರಿಗೂ ಗೊತ್ತೆ ಇದೆ. ಮುನ್ನೂರೈವತ್ತು ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಕಮಾಲ್ ಮಾಡಿತ್ತು. ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್(Ranveer Sing) ಹನುಮಾನ್(Hanu-Man) ಸಿನಿಮಾವನ್ನು ಅತಿಯಾಗಿ ಮೆಚ್ಚಿಕೊಂಡಿದ್ರು. ಪ್ರಶಾಂತ್ ವರ್ಮಾ(Prashanth Varma) ನಿರ್ದೇಶನಕ್ಕೆ ಫಿದಾ ಆಗಿದ್ರು. ಪ್ರಶಾಂತ್ ವರ್ಮಾ, ರಣವೀರ್ ಸಿನಿಮಾ ಮಾಡ್ತಾರೆ ಎಂಬ ಗುಲ್ಲೆದ್ದಿತ್ತು. ಇಬ್ಬರ ಚಿತ್ರಕ್ಕೆ ರಾಕ್ಷಸ್ ಎಂದು ಟೈಟಲ್ ಇಡಲಾಗಿತ್ತು. ಆದ್ರೀಗ ಹೊರ ಬಂದಿರುವ ಸುದ್ದಿ ಈ ಸಿನಿಮಾ ಸೆಟ್ಟೇರೋದಿಲ್ಲ ಅಂತಿದೆ.
ರಣವೀರ್ ಈಗಾಗಲೇ ಕಥೆ ಕೇಳಿದ್ದಾರೆ, ಫೈನಲ್ ಮಾತುಕತೆ ನಡೆದಿದೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಅಂಗಳದಲ್ಲಿ ಹರಿದಾಡಿತ್ತು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಬಿಗ್ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆ ಎಲ್ಲಾ ಸುದ್ದಿ ನಿಜವೇ ಆಗಿದ್ರು ಕೂಡ ಸದ್ಯಕ್ಕೆ ಈ ಇಬ್ಬರ ಸಿನಿಮಾ ಸೆಟ್ಟೇರೋದಿಲ್ಲ ಎನ್ನುವುದನ್ನು ನಟ ರಣವೀರ್(Prashanth Varma), ನಿರ್ದೇಶಕ ಪ್ರಶಾಂತ್ ವರ್ಮಾ Prashanth Varma) ಹಾಗೂ ನಿರ್ಮಾಣ ಸಂಸ್ಥೆ ಮೈತ್ರಿ ಮೂವು ಮೇಕರ್ಸ್ ಕನ್ಫರ್ಮ್ ಮಾಡಿದೆ.
ರಣವೀರ್(Ranveer Sing), ಪ್ರಶಾಂತ್ ವರ್ಮಾ ಚಿತ್ರಕ್ಕೆ ರಾಕ್ಷಸ್ ಎಂದು ಹೆಸರಿಡಲಾಗಿತ್ತು. ಆದ್ರೀಗ ಈ ಬಹು ನಿರೀಕ್ಷಿತ ಪ್ರಾಜೆಕ್ಟ್ ನಿಂತು ಹೋಗಿದೆ. ಮೈತ್ರಿ ಮೂವಿ ಮೇಕರ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಕಾರಣ ತಿಳಿಸಿದೆ. ಈ ಪ್ರಾಜೆಕ್ಟ್ ಮಾಡಲು ಇದು ಸರಿಯಾದ ಸಮಯವಲ್ಲ ಭವಿಷ್ಯದಲ್ಲಿ ಈ ಸಿನಿಮಾ ಖಂಡಿತಾ ಸೆಟ್ಟೇರಲಿದ ಎಂದು ತಿಳಿಸಿದೆ. ರಣವೀರ್ ಹಾಗೂ ಪ್ರಶಾಂತ್ ವರ್ಮಾ ಕೂಡ ಸಿನಿಮಾ ಸದ್ಯಕ್ಕೆ ಆರಂಭವಾಗೋದಿಲ್ಲ ಎನ್ನುವುದರ ಬಗ್ಗೆ ಓಪನ್ ತಮ್ಮ ಸ್ಟೇಟ್‌ಮೆಂಟ್ ನೀಡಿದ್ದಾರೆ.