ಸೋಮವಾರ, ಜುಲೈ 7, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Aniruddha Jatkar: ‘ಚೆಫ್ ಚಿದಂಬರ್‌’ಗೆ ರಮೇಶ್‌ ಅರವಿಂದ್‌ ಸಾಥ್ – ಜೂ.14 ಅನಿರುದ್ದ್‌ ಬಡಿಸಲಿದ್ದಾರೆ ಮನರಂಜನೆಯ ನಳಪಾಕ

Bharathi Javalliby Bharathi Javalli
03/06/2024
in Majja Special
Reading Time: 1 min read
Aniruddha Jatkar: ‘ಚೆಫ್ ಚಿದಂಬರ್‌’ಗೆ ರಮೇಶ್‌ ಅರವಿಂದ್‌ ಸಾಥ್ – ಜೂ.14 ಅನಿರುದ್ದ್‌ ಬಡಿಸಲಿದ್ದಾರೆ ಮನರಂಜನೆಯ ನಳಪಾಕ

Aniruddha Jatkar: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ಼್ ಸೃಷ್ಟಿಸಿದ ನಟ ಅನಿರುದ್ದ್ ಜತ್ಕರ್(Aniruddha Jatkar).‌ ಸಿನಿಮಾ, ಸೀರಿಯಲ್‌ ಎರಡಲ್ಲೂ ಬ್ಯುಸಿಯಿರುವ ನಟ ‘ಚೆಫ್ ಚಿದಂಬರ್‌’(Chef Chidambara) ನಾಗಿ ಮನರಂಜನೆಯನ್ನು ಉಣ ಬಡಿಸಲು ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಬಿಡುಗಡೆಯ ಸನಿಹದಲ್ಲಿರುವ ಈ ಚಿತ್ರದ ಟ್ರೇಲರ್‌ ಖ್ಯಾತ ನಟ ರಮೇಶ್‌ ಅರವಿಂದ್‌(Ramesh Aravind) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್‌ ನೀಡಿದ್ದಾರೆ.

ರೂಪ ಡಿ.ಎನ್ ನಿರ್ಮಾಣಲ್ಲಿ ಮೂಡಿ ಬಂದಿರುವ ‘ಚೆಫ್ ಚಿದಂಬರ್‌’(Chef Chidambara) ಚಿತ್ರಕ್ಕೆ ‘ರಾಘು’ ಸಿನಿಮಾ ಖ್ಯಾತಿಯ ಆನಂದರಾಜ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಜೂನ್ 14 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆರಂಭದ ದಿನದಿಂದ ಸಿನಿಮಾಗಳಲ್ಲೇ ಗುರುತಿಸಿಕೊಂಡಿರುವ ಅನಿರುದ್ಧ್‌ ಸೀರಿಯಲ್‌ ನಿಂದಾಗಿ ಸಿನಿಮಾದಿಂದ ಕೋಂಚ ಬ್ರೇಕ್‌ ಪಡೆದುಕೊಂಡಿದ್ರು. ಐದು ವರ್ಷದ ಬ್ರೇಕ್‌ ಬಳಿಕ ನಟಿಸಿರುವ ಸಿನಿಮಾ ಇದಾಗಿದ್ದು, ಡಾರ್ಕ್‌ ಕಾಮಿಡಿ ಸಬ್ಜೆಕ್ಟ್‌ ಒಳಗೊಂಡ ಚಿತ್ರದಲ್ಲಿ ಚೆಫ್‌ ಪಾತ್ರಕ್ಕೆ ಅನಿರುದ್ಧ್‌ ಜೀವ ತುಂಬಿದ್ದಾರೆ. ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ರಮೇಶ್‌ ಅರವಿಂದ್‌(Ramesh Aravind) ಅನಿರುದ್ದ್ ನನ್ನ ನಿರ್ದೇಶನದ ‘ರಾಮ ಶ್ಯಾಮ ಭಾಮ’ ಸೇರಿದಂತೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಪ್ರತಿಭಾವಂತ ನಟ. ಈ ಚಿತ್ರದ ಟ್ರೇಲರ್ ಸಹ ಚೆನ್ನಾಗಿದೆ.  ಡಾರ್ಕ್ ಕಾಮಿಡಿ ಜಾನರ್ ಕುತೂಹಲ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಚಿತ್ರತಂಡದ ಶ್ರಮ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಲಿ ಎಂದಿದ್ದಾರೆ.

ನಾಯಕ ನಟ ಅನಿರುದ್ದ್(Aniruddha Jatkar). ಮಾತನಾಡಿ ನಿರ್ಮಾಪಕಿ ರೂಪ ಅವರ ಪತಿ ಸರ್ವೋತಮ್ ಹಾಗೂ ನಾನು ಬಹಳ ವರ್ಷಗಳ ಸ್ನೇಹಿತರು. ಅವರು ಸಿನಿಮಾ‌ ಮಾಡೋಣ ಎಂದಾಗ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಆನಂದರಾಜ್ ಅವರು ಹೇಳಿದ ಈ ಕಥೆ ಇಷ್ಟವಾಯಿತು. ನಂತರ ಡಾ|ವಿಷ್ಣುವರ್ಧನ್ ಸ್ಮಾರಕದ ಬಳಿ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು. ಮುಹೂರ್ತದ ದಿನ ಭಾರತಿ ವಿಷ್ಣುವರ್ಧನ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಕಿಚ್ಚ ಸುದೀಪ್ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದರು. ಈಗ ರಮೇಶ್ ಅರವಿಂದ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ‌. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ‌. ನೋಡಿ ಹಾರೈಸಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಚಿತ್ರೀಕರಣ ಎಲ್ಲರ ಸಹಕಾರದಿಂದ ಕೇವಲ 29 ದಿನಗಳಲ್ಲಿ ಮುಕ್ತಾಯವಾಗಿದೆ. ಚಿತ್ರದಲ್ಲಿ ಮೂರು ಹಾಡುಗಳಿದೆ. ಅದರಲ್ಲಿ ಒಂದು ಹಾಡನ್ನು ಅನಿರುದ್ಧ್ ಹಾಡಿದ್ದಾರೆ. ನಿರ್ಮಾಪಕಿ ರೂಪ ಡಿ.ಎನ್  ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಕ್ ಕಾಮಿಡಿ ಜಾನರ್ ಒಳಗೊಂಡ ಈ ಚಿತ್ರ ಎಲ್ಲಾ ಪ್ರೇಕ್ಷಕರಿಗೂ ಪ್ರಿಯವಾಗಲಿದೆ ಎಂದು ನಿರ್ದೇಶಕ ಆನಂದರಾಜ್ ಸಿನಿಮಾ ಬಗ್ಗೆ ತಿಳಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ “ಲವ್ ಮಾಕ್ಟೇಲ್” ಖ್ಯಾತಿಯ ರೆಚೆಲ್ ಡೇವಿಡ್ ನಟಿಸಿದ್ದಾರೆ. ಶಿವಮಣಿ, ಶರತರ್‌ ಲೋಹಿತಾಶ್ವ ಒಳಗೊಂಡ ಕಲಾವಿದರು ಚಿತ್ರದಲ್ಲಿದ್ದಾರೆ. ರಿತ್ವಿಕ್ ಮುರಳಿಧರ್‌ ಸಂಗೀತ ನಿರ್ದೇಶನ, ಉದಯ್ ಲೀಲ ಕ್ಯಾಮೆರಾ ವರ್ಕ್‌, ವಿಜೇತ್ ಚಂದ್ರ ಸಂಕಲನ ‘ಚೆಫ್ ಚಿದಂಬರ್‌’ ಚಿತ್ರಕ್ಕಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Duniya Vijay: ಎಸ್. ನಾರಾಯಣ್ ಹೊಸ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು

Duniya Vijay: ಎಸ್. ನಾರಾಯಣ್ ಹೊಸ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.