ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Vinodh Prabhakar: ವಿನೋದ್-ಸೋನಲ್ ಪ್ರೇಮಗೀತೆ: ‘ಮಾದೇವ’ನ ಮೊದಲ ಹಾಡು ರಿಲೀಸ್

Bharathi Javalliby Bharathi Javalli
04/06/2024
in Majja Special
Reading Time: 1 min read
Vinodh Prabhakar: ವಿನೋದ್-ಸೋನಲ್ ಪ್ರೇಮಗೀತೆ: ‘ಮಾದೇವ’ನ ಮೊದಲ ಹಾಡು ರಿಲೀಸ್

Vinodh Prabhakar: ಸ್ಯಾಂಡಲ್‌ವುಡ್‌ ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಮಾದೇವ ಸಿನಿಮಾದಿಂದ ಹೊಸ ಅಪ್‌ಡೇಟ್‌ ಸಿಕ್ಕಿದೆ. ಮಾಸ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್, ನಟಿ ಸೋನಲ್ ಮೊಂಥೆರೋ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ವಿನೋದ್ ಪ್ರಭಾಕರ್(Vinodh Prabhakar) ಮಾತನಾಡಿ, ನನ್ನ ಕರಿಯರ್ ಬೆಸ್ಟ್ ಸಿನಿಮಾ ಇದು. ಚಿತ್ರದಲ್ಲಿ ನನ್ನದು ಡಿ-ಗ್ಲಾಮರ್ ಪಾತ್ರ. ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಬಹಳಷ್ಟಿದೆ. ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಈ ಸಿನಿಮಾ ಖಂಡಿತ ಹಿಟ್ ಆಗುತ್ತದೆ. ಕೊನೆಯ 40 ನಿಮಿಷ ಪ್ರತಿಯೊಬ್ಬರಿಗೂ ಮಾದೇವನಾಗಿ ಸಿನಿಮಾ ನೋಡುತ್ತಾರೆ. ನಾನೇ ಈ ರೀತಿ ಸಿನಿಮಾವನ್ನು ಮತ್ತೊಮ್ಮೆ ಮಾಡಲು ಆಗುವುದಿಲ್ಲ. ಈ ಕಥೆ ಬಹಳಷ್ಟು ಜನರನ್ನು ಒಳಗಡೆ ಕರೆದುಕೊಂಡು ಬಂದಿದೆ. ಈ ಚಿತ್ರಕ್ಕಾಗಿ ಬಹಳಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಆಂಗ್ರಿ ಯಂಗ್ ಮೆನ್ ಆಗಿ ನಟಿಸಿದ್ದೇನೆ ಎಂದರು.

ನಟಿ ಸೋನಲ್ ಮೊಂಥೆರೋ(Sonal Monterio) ಮಾತನಾಡಿ, ಮಾದೇವ(Madeva) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾನು ಕಲಾವಿದೆಯಾಗಿ ಅಲ್ಲ ಆಡಿಯನ್ಸ್ ಆಗಿ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನು ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಹೃದಯಕ್ಕೆ ಹತ್ತಿರವಾಗಿದೆ. ನಾನು ಈ ರೀತಿ ಪಾತ್ರದಲ್ಲಿ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ನನ್ನ ವಿನೋದ್ ಸರ್ ಕೆಮಿಸ್ಟ್ರೀ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರು ಈ ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ ಎಂದು ತಿಳಿಸಿದರು.

ಎದೆಯಲ್ಲಿ ತಂಗಾಳಿ ಎಂಬ ಪ್ರೇಮಗೀತೆಗೆ ಪ್ರಸನ್ನ ಕುಮಾರ್ ಎಂ ಪದ ಗೀಚಿದ್ದು, ಅನನ್ಯ ಭಟ್ ಧ್ವನಿಯಾಗಿದ್ದು, ಪ್ರದ್ದ್ಯೋತ್ತನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ವಿನೋದ್ ಪ್ರಭಾಕರ್ Vinodh Prabhakar)  ಹಾಗೂ ಸೋನಲ್ Sonal Monterio) ಜೋಡಿ ನೋಡುಗರಿಗೆ ಇಷ್ಟವಾಗುತ್ತಾರೆ. ಖಾಕಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನವೀನ್ ರೆಡ್ಡಿ ಮಾದೇವನಿಗೆ ಸೂತ್ರಧಾರರು. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯುತ್ತದೆ. ಹಿಂದೆಂದೂ ಕಂಡಿರದಂತಹ ವಿಭಿನ್ನವಾದ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಗರಕಿಟ್ಟಿ ಖಳನಾಯಕನಾಗಿ ನಟಿಸುತ್ತಿರುವುದು ವಿಶೇಷ. ನಟಿ ಶ್ರುತಿ ಮತ್ತು ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ ತೋಟ ‘ಮಾದೇವ’ ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಜಯ್ ಎಂ ಕುಮಾರ್ ಸಂಕಲನ,  ಪ್ರದ್ದ್ಯೋತ್ತನ್ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Prabhas: ಬಹು ನಿರೀಕ್ಷಿತ ‘ಕಲ್ಕಿ’ ಟ್ರೇಲರ್‌ ಬಿಡುಗಡೆಗೆ ಡೇಟ್‌ ಫಿಕ್ಸ್‌ – ಜೂನ್ 10 ಪ್ರಭಾಸ್‌ ಫ್ಯಾನ್ಸ್‌ಗೆ ಹಬ್ಬ

Prabhas: ಬಹು ನಿರೀಕ್ಷಿತ 'ಕಲ್ಕಿ' ಟ್ರೇಲರ್‌ ಬಿಡುಗಡೆಗೆ ಡೇಟ್‌ ಫಿಕ್ಸ್‌ - ಜೂನ್ 10 ಪ್ರಭಾಸ್‌ ಫ್ಯಾನ್ಸ್‌ಗೆ ಹಬ್ಬ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.