Darshan: ಬೆಳ್ಳಂಬೆಳಿಗ್ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಆರೋಪಗಳನ್ನೇ ಮೈಮೇಲೆ ಹೊದ್ದವರಂತೆ ಸದಾ ಸುದ್ದಿಯಲ್ಲಿರುವ ದರ್ಶನ್ ಕೊಲೆ ಕೇಸ್ ಒಂದರಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮೈಸೂರಿನಲ್ಲಿ ನಟ ದರ್ಶನ್ರನ್ನು ಬಂಧಿಸಲಾಗಿದ್ದು, ದರ್ಶನ್ ಅರೆಸ್ಟ್ ಸುದ್ದಿ ಸ್ಯಾಂಡಲ್ವುಡ್, ದಾಸನ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರನ್ನು ಕೊಲೆ ಮಾಡಲು ದರ್ಶನ್ ಸುಪಾರಿ ನೀಡಿದ್ದರೆಂದು ಆರೋಪದ ಮೇಲೆ ನಟ ದರ್ಶನ್ ಬಂಧಿಸಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೋಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ದರ್ಶನ್ ಬಹು ಕಾಲದ ಗೆಳತಿ ಪವಿತ್ರಾ ಗೌಡ ಗೆ ಪವಿತ್ರಾ ಗೌಡಗೆ ಸೋಶಿಯಲ್ ಮೀಡಿಯಾದಲ್ಲಿ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದು, ಈ ಹಿನ್ನೆಲೆಯ್ಲಿ ಆರ್ ಆರ್ ನಗರ ಶೆಡ್ ಒಂದರಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜೂ.8ರಂದು ರೇಣುಕಾ ಸ್ವಾಮಿಯನ್ನು ಕರೆಸಿ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ. ಶೆಡ್ನಲ್ಲೇ ರೇಣುಕಾ ಸ್ವಾಮಿಯನ್ನು ಕೊಲೆಗೈದು ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಶವವನ್ನು ಎಸೆಯಲಾಗಿದೆ. ಜೂನ್ 9ರಂದು ಕೊಲೆಗೈದ ಆರೋಪಿಗಳೇ ಗಿರಿನಗರ ಪೊಲೀಸ್ ಸ್ಟೇಶನ್ನಲ್ಲಿ ಶರಣಾಗಿದ್ದಾರೆ. ಕೊಲೆ ಕೇಸ್ನಲ್ಲಿ ಆರೋಪಿಗಳನ್ನು ಕೂಲಂಖುಷವಾಗಿ ವಿಚಾರಣೆ ನಡೆಸಿದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಹೇಳಿದ್ದಾರೆ. ಸೂಕ್ಷ್ಮವಾಗಿ ಎಲ್ಲವನ್ನು ವಿಚಾರಣೆ ಮಾಡಿದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ರನ್ನು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.