-ಏಲಿಯನ್ ಅಸ್ತಿತ್ವದ ಬಗ್ಗೆ ವಿಜ್ಞಾನಿಗಳು ಏನಂತಾರೆ?
-ಏಲಿಯನ್ನುಗಳ ಸುತ್ತ ಭ್ರಮೆ ಮತ್ತು ವಾಸ್ತವ!
ನಮ್ಮನ್ನೆಲ್ಲ ಭೂಮಿಯ ಅಗಾಧ ವಿಸ್ತಾರವೇ ಅಚ್ಚರಿಗೀಡು ಮಾಡುತ್ತೆ. ಭೂಮಿ ದುಂಡಗಿದೆಯಾ, ಚಪ್ಪಟೆಯಾಗಿದೆಯಾ ಅನ್ನೋದರಿಂದ ಮೊದಲ್ಗೊಂಡು ಆದಿ ಅಂತ್ಯಗಳ ಸುತ್ತಾ ನಾನಾ ಚರ್ಚೆಗಳು ನಡೆದಿವೆ. ನಡೆಯುತ್ತಲೂ ಇದ್ದಾವೆ. ಈ ಜಗತ್ತಿನ ಅಷ್ಟೂ ದೇಶಗಳು, ಅಲ್ಲಿನ ಜನ ಜೀವನ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬದಲಾಗೋ ಜೀವನಕ್ರಮ, ಅಲ್ಲೆಲ್ಲ ಹಬ್ಬಿಕೊಂಡಿರುವ ಸಂಸ್ಕೃತಿ, ನಾನಾ ದೇಶಗಳ ಕಾಡೊಳಗೆ ಅಗೋಚರವಾಗಿ ಚದುರಿಕೊಂಡಿರೋ ಬುಡಕಟ್ಟು ಜನಾಂಗಗಳು… ಹೀಗೆ ಈ ವಿಶ್ವದ ಬಗೆಗಿನ ಕುತೂಹಲ ಅನ್ನೋದು ಅವರವರ ಭಾವಕ್ಕೆ ತಕ್ಕಂತೆ ಬೊಗಸೆ ತುಂಬುತ್ತದೆ. ಇಲ್ಲಿ ನೆಲೆ ಕಂಡುಕೊಂಡಿರುವ ಜೀವರಾಶಿ, ಪರಿಸರವಂತೂ ಕುತೂಹಲದ ಅಕ್ಷಯಪಾತ್ರೆಯಿದ್ದಂತೆ. ಇದರತ್ತ ಕಣ್ಣುಹಾಯಿಸುತ್ತಾ, ಕೆಲವನ್ನು ಕಣ್ಣಾರೆ ಕಂಡು, ಮತ್ತೆ ಕೆಲವನ್ನು ದೂರದಿಂದಲೇ ದಿಟ್ಟಿಸಿ ಆಂದಿಸಲೇ ಈ ಜನುಮ ಸಾಲೋದು ಕಷ್ಟ. ಇಂಥಾ ಹೊತ್ತಿನಲ್ಲಿ ಎಲ್ಲರನ್ನು ಅಸೀಮ ಅಚ್ಚರಿಗೆ ದೂಡಿರುವ ಮಾಯೆ ಅಂತರಿಕ್ಷ!

ಅಂತರಿಕ್ಷದ ಬಗ್ಗೆ ಈಗಾಗಲೇ ವಿಶ್ವದ ನಾನಾ ದೇಶಗಳ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಬೇರೆ ಗ್ರಹಗಳಿಗೆ ರಾಕೆಟ್ ಗಳನ್ನು ಉಡ್ಡಯನ ಮಾಡುವ ಮೂಲಕ ಸದಾ ಅದರತ್ತ ಕಣ್ಣು ನೆಟ್ಟು ಕೂತಿದ್ದಾರೆ. ಅಂತರಿಕ್ಷದ ನಿಗೂಢಗಳನ್ನು ಬಯಲಾಗಿಸುವ ನಿಟ್ಟಿನಲ್ಲಿ ಈಗಾಗಲೇ ವಿಜ್ಞಾನಿಗಳ ತಂಡ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದರಲ್ಲಿ ಭಾರತೀಯ ವಿಜ್ಞಾನಿಗಳ ಪಾಲು ಗಣನೀಯವಾಗಿದೆ ಅನ್ನೋದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ಸಂಗತಿ. ಇಂಥಾ ಬಹುತೇಕ ವಿಜ್ಞಾನಿಗಳ ಪಾಲಿಗೆ ಅಂತರಿಕ್ಷದ ಅಚ್ಚರಿಗಳು ಸಾಮಾನ್ಯರಿಗಿಂತ ಹೆಚ್ಚೇ ಕಾಡುತ್ತೆ. ಆದರೆ, ಬಹು ಕಾಲದಿಂದಲೂ ಈ ಜಗತ್ತಿನ ಬಹುಪಾಲು ಮಂದಿಯನ್ನು ಕಾಡುತ್ತಿರುವ ಏಲಿಯನ್ನುಗಳ ವಿಚಾರದಲ್ಲಿ ಮಾತ್ರ ವಿಜ್ಞಾನಿಗಳೂ ಕೂಡಾ ಜನಸಾಮಾನ್ಯರಂತೆಯೇ ಬೆರಗಿಟ್ಟುಕೊಂಡು, ಆ ಕುರಿತಾಗಿ ಸಣ್ಣ ಸುಳಿವು ಸಿಗಲು ಸಾಧ್ಯವಾ? ಈ ಜಗತ್ತಿನಲ್ಲಿ ಭೂಮಿಯನ್ನು ಹೊರತಾಗಿಸಿ ಅನ್ಯಗ್ರ ಜೀವಿಗಳಿದ್ದಾವಾ? ಮುಂದ್ಯಾವತ್ತೋ ಅವುಗಳನ್ನು ಪತ್ತೆ ಹಚ್ಚಬಹುದಾ? ಇಂಥಾ ಅನೇಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರಕ್ಕಾಗಿ ತಡಕಾಡುತ್ತಿದ್ದಾರೆ.
ಏಲಿಯನ್ಸ್!

ಆಗಾಗ ಹಾರುವ ತಟ್ಟೆಗಳ ಓಡಾಟ, ಅಂಥಾ ಹಾರುವ ತಟ್ಟೆಗಳು ಕಣ್ಣಿಗೆ ಬಿದ್ದು ಸುದ್ದಿ ಹಬ್ಬುತ್ತಲೇ ಇರುತ್ತದೆ. ವಿಜ್ಞಣ ಇಷ್ಟೊಂದು ಮುಂದುವರೆಯದಿದ್ದ ದಿನಗಳಲ್ಲಿಯೇ, ಅನ್ಯ ಗ್ರಹ ಜೀವಿಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವಿಲ್ಲದ ಕಾಲದಲ್ಲಿಯೇ ಇಂಥಾ ಸುದ್ದಿಗಳು ಹಬ್ಬಿಕೊಳ್ಳುತ್ತಿದ್ದವು. ನಮ್ಮ ದೇಶದಲ್ಲಿಯಂತೂ ಹಾಗೆ ಹಾರಿ ಬಂದ ಭ್ರಾಮಕ ಹಾರುವ ತಟ್ಟೆಗಳಿಗೆ ದೇವರು, ದೇವತೆಗಳ ಸ್ಪರ್ಶ ಸಿಕ್ಕಿದ್ದೂ ಇದೆ. ಇಂಥಾ ಸುದ್ದಿ ಹಬ್ಬಿಕೊಂಡ ನಂತರ ಒಂದಷ್ಟು ದಿನ ತಮ್ಮದೇ ಹೊಲ ಗದ್ದೆಗಳಲ್ಲಿ ಏಲಿಯನ್ನುಗಳಿದ್ದರೆ ಏನು ಗತಿ, ಕೈ ಸಿಕ್ಕವರನ್ನು ಹಾರುವ ತಟ್ಟೆಯಲ್ಲಿ ಕೂರಿಸಿಕೊಂಡು ಯಾವುದೋ ಗ್ರಹಕ್ಕೆ ಕೊಂಡೊಯ್ದರೆ ಏನು ಮಾಡೋದು ಅಂತೆಲ್ಲ ಜನ ಭೀತರಾಗುತ್ತಿದ್ದರು. ಅದರ ಆಸುಪಾಸಲ್ಲಿ ಹುಟ್ಟಿಕೊಳ್ಳುತ್ತಿದ್ದ ಕಪೋಲ ಕಲ್ಪಿತ ಕಥೆಗಳಂತೂ ಭೀತಿಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದವು.
ಹೀಗೆ ಹಾರುವ ತಟ್ಟೆಯಲ್ಲಿರುವ ಅಗೋಚರ ಜೀವಿಗಳಿಗೆ ಏಲಿಯನ್ಸ್ ಎಂಬ ಹೆಸರಿಡಲಾಗಿದೆ. ಹಾಗಂತ ಈ ಏಲಿಯನ್ಸುಗಳು ನಮ್ಮ ದೇಶದಲ್ಲಿ ಮಾತ್ರವೇ ಭೀತಿ ಹುಟ್ಟಿಸಿವೆ ಅಂದುಕೊಳ್ಳುವಂತಿಲ್ಲ. ಈ ಹಾರುವ ತಟ್ಟೆಯ ಕಥನಗಳು ನಮ್ಮ ದೇಶದಲ್ಲಿ ಮಾತ್ರ ಇದೆ, ನಮ್ಮಲ್ಲಿ ಮೂಢ ನಂಬಿಕೆ ಹೆಚ್ಚಾಗಿರೋದರಿಂದಾಗಿ ಆ ಬಗ್ಗೆ ಹೆಚ್ಚೆಚ್ಚು ಕಥೆಗಳು ಹಬ್ಬಿಕೊಂಡಿವೆ ಅಂತೆಲ್ಲ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಮುಂದುವರೆದ ದೇಶಗಳೆನ್ನಿಸಿಕೊಂಡಿರುವ ಕಡೆಗಳಲ್ಲಿಯೂ ಕೂಡಾ ಹಾರುವ ತಟ್ಟೆಗಳು ಮತ್ತು ಅದರಿಂದಿಳಿದು ಬರುವಂಥಾ ಏಲಿಯನ್ನುಗಳ ಬಗ್ಗೆ ನಾನಾ ಕಥೆಗಳು ಹಬ್ಬಿಕೊಂಡಿವೆ. ಇಲ್ಲಿ ನಾವು ಹೇಗೆ ಭೀತರಾಗಿದ್ದೇವೇ ಅಂಥಾದ್ದೇ ಭಯವೊಂದು ಮುಂದುವರೆದ ದೇಶ ವಾಸಿಗಳನ್ನೂ ಕೂಡಾ ಆವರಿಸಿಕೊಂಡಿದೆ. ನಮ್ಮಲ್ಲಿ ಎಂತೆಂಥಾ ಕಥೆಗಳು ಹಬ್ಬಿಕೊಂಡಿವೆಯೋ ಅದನ್ನೆಲ್ಲ ನಿವಾಳಿಸಿ ಎಸೆಯುವಂಥಾ ಕಥೆಗಳು ಬೇರೆ ದೇಶಗಳಲ್ಲಿಯೂ ಮನೆ ಮಾತಾಗಿವೆ.
ಕಥೆಗಳಲ್ಲಿದೆ ಸಾಮ್ಯತೆ!

ಹೀಗೆ ದೇಶ ವಿದೇಶಗಳಲ್ಲಿ ಹಾರುವ ತಟ್ಟೆಗಳನ್ನು ಏರಿ ಬರುವ ಏಲಿಯನ್ನುಗಳ ಬಗ್ಗೆ ನಾನಾ ದಿಕ್ಕಿನಲ್ಲಿ ಕಥೆಗಳು ಹುಟ್ಟಿಕೊಂಡಿವೆ. ಅಂಥಾ ಕಥಾನಕಗಳನ್ನು ಸೂಕ್ಷ್ಮವಾಗಿ ಗಮನಿಸಿದೆ ನಿಜಕ್ಕೂ ಅಚ್ಚರಿಯಾಗುವಂಥಾ ಒಂದಷ್ಟು ವಿಚಾರಗಳು ತೆರೆದುಕೊಳ್ಳುತ್ತವೆ. ಇಡೀ ಜಗತ್ತಿನಲ್ಲಿ ಈ ಹಾರುವ ತಟ್ಟೆಗಳ ಬಗ್ಗೆ ಹಬ್ಬಿಕೊಂಡಿರೋ ಕಥೆಗಳು, ಜನರು ಅವುಗಳ ಬಗ್ಗೆ ನಡೆಸುತ್ತಾ ಬಂದಿರುವಂಥಾ ಕಥೆಗಳು ಮತ್ತು ಅವುಗಳ ಮೂಲಕ ಮೂಡಿಕೊಳ್ಳುವ ಏಲಿಯನ್ನುಗಳ ಚಿತ್ರಗಳನ್ನು ಪರಾಮರ್ಶೆ ನಡೆಸಿದರೆ, ಇಡೀ ಜಗತ್ತಿನ ಏಲಿಯನ್ನುಗಳ ಕಥೆಗಳು ಒಂದಕ್ಕೊಂದು ಪೂರಕ ಎಂಬಂಥಾ ಅಚ್ಚರಿಯ ವಿಚಾರ ಜಾಹೀರಾಗುತ್ತೆ. ಈ ವಿಚಾರವನ್ನು ನಿರಂತರವಾದ ಅಧ್ಯಯನಗಳ ಮೂಲಕ ಖುದ್ದು ವಿಜ್ಞಾನಿಗಳೇ ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ವಿಶ್ವದ ಒಂದ್ಯಾವುದೋ ಭೂಭಾಗದಲ್ಲಿ ಇಂಥಾ ಕಥೆಗಳು ಹುಟ್ಟಿಕೊಂಡಿದ್ದರೆ, ಅದುಉ ಭ್ರಮೆಗಳ ಹಾರರ್ ಕಥೆಗಳಾಗಿ ಕಳೆದು ಹೋಗುತ್ತಿದ್ದವೇನೋ. ಆದರೆ, ಈ ಏಲಿಯನ್ ಮತ್ತು ಹಾರುವ ತಟ್ಟೆಗಳ ಹಾರರ್ ಕಥೆಗಳು ಮೊದಲು ಹುಟ್ಟಿಕೊಂಡಿದ್ದೇ ಅಮೆರಿಕಾದಂಥಾ ಮುಂದುವರೆದ ದೇಶಗಳಲ್ಲಿ. ಒಂದು ವೇಳೆ ಭಾರತದಂಥಾ ಆ ಕಾಲದ ಬಡ ದೇಶದಲ್ಲಿ ಇಂಥಾ ಸುದ್ದಿ ಹಬ್ಬಿದ್ದರೆ ಅಮೆರಿಕಾದ ಮಂದಿಯೇ ಆಡಿಕೊಂಡು ನಗುತ್ತಿದ್ದರು. ಎಷ್ಟು ಸಾಧ್ಯವೋ ಅಷ್ಟು ಮೂದಲಿಸುತ್ತಿದ್ದರು. ಆದರೆ, ಏಲಿಯನ್ನುಗಳ ಕಥನಗಳು ಮೊದಲು ಸೃಷ್ಟಿಯಾಗಿದ್ದೇ ಅಮೆರಿಕಾದಂಥಾ ರಾಷ್ಟ್ರಗಳಲ್ಲಿ. ಆ ಕಾಲಕ್ಕೆ ದೊಡ್ಡಣ್ಣ ಅನ್ನಿಸಿಕೊಂಡಿದ್ದ ಅಮೆರಿಕಾದಲ್ಲೇ ಇಂಥಾದ್ದು ನಡೆದಿದ್ದರಿಂದಾಗಿ ಬಹು ಬೇಗನೆ ಏಲಿಯನ್ನುಗಳು ವಿಶ್ವಾಧ್ಯತಂತ ಭಯ ಮೂಡಿಸಿದ್ದವು. ಆ ಕ್ಷಣದಿಂದಲೇ ಅನ್ಯ ಗ್ರಹ ಜೀವಿಗಳ ಬಗ್ಗೆ ವಿಜ್ಞಾನಿಗಳು ತಲೆ ಕೆಡಿಸಿಕೊಂಡು ಕೆಲಸ ಆರಂಭಿಸಿದ್ದರು.ದಕ್ಕೆ ಕಾರಣವಾದದ್ದುಉ ಜಗತ್ತಿನಾಧ್ಯಂತ ಏಲಿಯನ್ನುಗಳ ಕಥೆಗಳಲ್ಲಿ ಕಂಡು ಬಂದ ಸಾಮ್ಯತೆ!
ಅದು ಆರಂಭದ ಆಘಾತ

ಈ ಏಲಿಯನ್ನುಗಳ ಬಗ್ಗೆ ಇಡೀ ಜಗತ್ತಿಗೇ ಆಘಾತವಾಗುವಂಥಾ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿದ್ದು ೧೯೭೮ರಲ್ಲಿ. ಆಗಿನ್ನೂ ವಿಜ್ಞಾನ ಲೋಕ ಅಂಬೆಗಾಲಿಡುತ್ತಿತ್ತು. ಅಂಥಾ ಹೊತ್ತಿನಲ್ಲಿಯೇ ಪೋಲೆಂಡಿನ ದಿಕ್ಕಿನಿಂದ ಬೆಚ್ಚಿ ಬೀಳಿಸುವಂಥಾ ಸುದ್ದಿ ಹಬ್ಬಿಕೊಂಡಿತ್ತು. ಇಲ್ಲಿನ ರೈತನೋರ್ವ ಹಾರುವ ತಟ್ಟೆಗಳಲ್ಲಿ ಹೊಲಕ್ಕೆ ಬಂದಿಳಿದ ವಿಚಿತ್ರ ಜೀವಿಗಳುಇ ತನ್ನನ್ನು ಅಪಹರಿಸಿದ್ದಾಗಿ ಹೇಳಿಕೊಂಡಿದ್ದ. ಒಂದಷ್ಟು ಕಾಲ ನಾಪತ್ತೆಯಾಗಿದ್ದ ಈ ರೈತ ಏಕಾಏಕಿ ಪ್ರತ್ಯಕ್ಷಗೊಂಡವನೇ ಮೊದಲ ಸಲ ಜಗತ್ತನ್ನೇ ಬೆಚ್ಚಿ ಬೀಳಿಸುವಂಥಾ ವಿಚಾರಗಳನ್ನು ಹೇಳಿಕೊಂಡಿದ್ದ. ಆ ವಿಚಿತ್ರ ಜೀವಿಗಳು ತನ್ನನ್ನು ಅಪಹರಿಸಿ ವೈದ್ಯಕೀಯ ತಪಾಸಣೆಯಂಥಾ ಪರೀಕ್ಷೆಗಳಿಗೂ ಒಳಪಡಿಸಿದ್ದವೆಂದು ಬಾಂಬು ಹಾಕಿದ್ದ.
ಜೊತೆಗೆ ತಾನು ಕಣ್ಣಾರೆ ಕಂಡಿದ್ದ ಆ ವಿಚಿತ್ರ ಜೀವಿಗಳ ಚಹರೆಯನ್ನೂ ಹೇಳಿಕೊಂಡಿದ್ದ. ಸಣ್ಣ ಆಕಾದರ, ಹಸಿರು ಮುಖ ಮತ್ತು ದೊಡ್ಡ ಕಣ್ಣುಗಳನ್ನು ಆ ಜೀವಿಗಳು ಹೊಂದಿದ್ದವೆಂದೂ ಹೇಳಿದ್ದ. ಜೊತೆಗೆ ಆ ಜೀವಿಗಳು ಇದುವರೆಗೂ ಕಂಡು ಕೇಳರಿಯದಂಥಾ ಚಿತ್ರ ವಿಚಿತ್ರ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದವೆಂದೂ ಹೇಳಿಕೊಂಡಿದ್ದ. ಆರಂಭದಲ್ಲಿ ಆ ರೈತ ಆಡಿದ್ದ ಮಾತುಗಳನ್ನು ಕೇಳಿದ ಅಲ್ಲಿನ ಜನರೇ ಈತನಿಗೆ ಭ್ರಮೆ ಅಡರಿಕೊಂಡಿದೆ, ಮಾನಸಿಕವಾಗಿ ಸಮಸ್ಯೆ ಕಾಡಿದ್ದರಿಂದಲೇ ಹೀಗೆಲ್ಲ ಮಾತಾಡುತ್ತಿದ್ದಾನೆ ಅಂತೆಲ್ಲ ಹಬ್ಬಿಸಿದ್ದರು. ಆದರೆ ಆತನ ಮಾತುಗಳು ವಿಜ್ಞಾನಿಗಳ ಗಮನ ಸೆಳೆದಿದ್ದವು. ಬೇರೆ ಬೇರೆ ದೇಶಗಳ ವಿಜ್ಞಾನಿಗಳು ಆತನನ್ನು ಮಾತಾಡಿಸಿ ನಾನಾ ದಿಕ್ಕಿನಲ್ಲಿ ಮಾಹಿತಿ ಪಡೆದುಕೊಂಡಿದ್ದರು.
ಹಾಗೆ ಆ ರೈತನನ್ನು ಮಾತಾಡಿಸಿದ ವಿಜ್ಞಾನಿಗಳೆಲ್ಲ ನಿಜಕ್ಕೂ ಕಂಗಾಲಾಗಿದ್ದರು. ಯಾಕಂದ್ರೆ, ಆತ ಮಾನಸಿಕ ಅಸ್ವಸ್ಥತೆಯಿಂದ ಹಾಗೆ ಮಾತಾಡುತ್ತಿರಲಿಲ್ಲ ಅನ್ನೋದು ಅವರೆಲ್ಲರಿಗೂ ಖಾತರಿಯಾಗಿ ಹೋಗಿತ್ತು. ಅತ್ಯಂತ ನಿಖರವಾಗಿ, ತುಂಬಾನೇ ಸ್ಪಷ್ಟವಾಗಿ ಹೇಳಲಾರಂಭಿಸಿದ್ದ. ತನ್ನನ್ನು ಅಪಹರಿಸಿದ್ದ ಏಲಿಯನ್ನುಗಳ ಚಹರೆಯನ್ನಂತೂ ಅತ್ಯಂತ ನಿಖರವಾಗಿಯೇ ನಿರೂಪಿಸಿದ್ದ. ಈತನ ಮೂಲಕ ಆಧುನಿಕ ಜಗತ್ತಿನಲ್ಲಿ ಏಲಿಯನ್ನುಗಳ ಬಗ್ಗೆ ಸಂಚಲನ ಸೃಷ್ಟಿಯಾಗಿತ್ತು. ಹಾಗಂತ ವಿಜ್ಞಾನಿಗಳನ್ನೇನು ಆ ವಿಚಾರ ತೀರಾ ಆಘಾತ, ಅಚ್ಚರಿಗೀಡು ಮಾಡಿರಲಿಲ್ಲ. ಯಾಕಂದ್ರೆ ಅವರಾಗಲೇ ಈ ಭೂಮಿಯನ್ನು ಹೊರತು ಪಡಿಸಿ ಮತ್ಯಾವುದೋ ಗ್ರಹದಲ್ಲಿ ಜೀವಿಗಳಿದ್ದಾವೆಂಬ ಗುಮಾನಮಿಯೊಂದಿಗೆ ಸಂಶೋಧನೆಗಿಳಿದಿದ್ದರು. ಈ ರೈತನ ಅಪಹರಣ ಪುರಾಣದ ಮೂಲಕ ಆ ಸಂಶೋಧನೆಗೆ ಮತ್ತಷ್ಟು ತೀವ್ರತೆ ಸಿಕ್ಕಂತಾಗಿತ್ತು.
ಚಿತ್ರ ವಿಚಿತ್ರ ಬೆಳಕಿನ ಕಿರಣ

ಹೀಗೆ ೧೯೭೮ರಲ್ಲಿ ಪೋಲೆಂಡಿನ ರೈತ ಏಲೀಯನ್ನುಗಳಿಂದ ಅಪಹರಣ ಗೊಂಡ ವೃತ್ತಾಂತ ನಡೆಯುವ ಮುನ್ನವೇ ೧೯೪೦-೫೦ರ ದಶಕದಲ್ಲಿಯೇ ಹಾರುವ ತಟ್ಟೆಗಳು ಅಮೆರಿಕ ಭಾಗದಲ್ಲಿ ಸಂಚಲನ ಸೃಷ್ಟಿಸಿದ್ದವು. ಅಮೆರಿಕದ ಕೆಲ ಭಾಗಗಳಲ್ಲಿ ಇಂಥಾ ಹಾರುವ ತಟ್ಟೆಗಳು ಮತ್ತು ಏಲಿಯನ್ನುಗಳ ಬಗ್ಗೆ ಮೊದಲು ಸುಳಿವು ಸಿಗಲಾರಂಭಿಸಿತ್ತು. ಅಮೆರಿಕಾದ ಕೆಲವೆಡೆಗಳಲ್ಲಿ ಹಾರುವ ತಟ್ಟೆಗಳು ಸದ್ದು ಮಾಡಲಾರಂಭಿಸಿದ್ದವು. ರಾತ್ರಿ ಹೊತ್ತಿನಲ್ಲಿ ಅಲ್ಲಿನ ನಾನಾ ಭಾಗಗಳಲ್ಲಿ ಅಂತರಿಕ್ಷದಿಂದ ವಿಚಿತ್ರ ಸದ್ದು ಕೇಳಲಾರಂಭಿಸಿತ್ತು. ಕೆಲ ಸಂದರ್ಭದಲ್ಲಿ ಚಿತ್ರ ವಿಚಿತ್ರ ಸದ್ದಿನೊಂದಿಗೆ ವೃತ್ತಾಕಾರದ ರಾಕೆಟ್ಟಿನಂಥಾ ವಸ್ತು ಶರವೇಗದಲ್ಲಿ ಅಡ್ಡಾಡಲಾರಂಭಿಸಿತ್ತು.
ಆ ದಶದ ತುಂಬೆಲ್ಲ ಅಮೆರಿಕಾದ ನಾನಾ ಭಾಗಗಳಲ್ಲಿ ಇಂಥಾ ಹಾರುವ ತಟ್ಟೆಗಳು ಕಾಣಿಸಿಕೊಂಡ ವರದಿಗಳು ಹರಿದಾಡಲಾರಂಭಿಸಿದ್ದವು. ಆ ಕಾಲಕ್ಕದು ಒಂದಷ್ಟು ಬೆರಗು ಮತ್ತು ಭೀತಿಯ ಭಾವ ಮೂಡಿಸಿದ್ದದ್ದು ನಿಜ. ಒಂದಲ್ಲ ಎರಡಲ್ಲ, ಆ ಕಾಲದ ಮಾಧ್ಯಮಗಳ ಮೂಲಕ ದಿನಕ್ಕೊಂದೊಂದು ಹಾರುವ ತಟ್ಟೆಗಳ ವರದಿಗಳು ಪ್ರಚುರವಾಗಲಾರಂಭಿಸಿದ್ದವು. ಇದಕ್ಕೆ ಸರಿಯಾಗಿ ನಿರಂತರವಾಗಿ ಆಕಾಶದಲ್ಲಿ ನಡೆಯುತ್ತಿದ್ದ ಘಟನಾವಳಿಗಳಿಂದಾಗಿ ಜನ ತಬ್ಬಿಬ್ಬುಗೊಂಡಿದ್ದರು. ಅದು ಯಾವ ಹಂತಕ್ಕೆ ಹೋಗಿತ್ತೆಂದರೆ, ಆ ಭಾಗದ ಮಂದಿ ರಾತ್ರಿ ಹೊತ್ತು ಒಬ್ಬರೇ ನಿಂತು ಆಕಾಶದತ್ತ ದಿಟ್ಟಿಸಲೂ ಹಿಂಜರಿಯುತ್ತಿದ್ದರು. ಒಬ್ಬೊಬ್ಬರೇ ಓಡಾಡಿದರೆ ಏಲಿಯನ್ನುಗಳು ಬಂದು ಅಪಹರಿಸಿಕೊಂಡು ಹೋಗುತ್ತವೆ ಎಂಬಂಥಾ ಭಯವೊಂದು ಅಮೆರಿಕನ್ನರನ್ನು ಆವರಿಸಿಕೊಂಡು ಬಿಟ್ಟಿತ್ತು.
ಹಾರುವ ತಟ್ಟೆಗಳ ಸಿನಿಮಾ

ಸಾಮಾನ್ಯವಾಗಿ ನಾಗರಿಕ ಜಗತ್ತಿನಲ್ಲಾಗುವ ಯಾವುದೇ ವಿದ್ಯಮಾನಗಳತ್ತ ಥಟಕ್ಕನೆ ಸಿನಿಮಾ ಮಂದಿಯ ಗಮನ ಕೇಂದ್ರೀಕರಿಸಿಕೊಳ್ಳುತ್ತೆ. ಹಾಗಿರುಉವಾಗ ಅಮೆರಿಕೆಯಲ್ಲಿ ನಡೆಯುತ್ತಿದ್ದ ಹಾರುವ ತಟ್ಟೆಗಳ ವಿದ್ಯಮಾನ ಸಿನಿಮಾದವರನ್ನು ಸೆಳೆಯದಿರಲು ಸಾಧ್ಯವೇ? ಹೇಳಿಕೇಳಿ ಸಾಮಾನ್ಯ ಮಂದಿ ಕಲ್ಪಿಸಲೂ ಸಾಧ್ಯವಾಗದಂಥಾ ಕಥೆಗಳ ಮೂಲಕ ಕಮಾಲ್ ಮಾಡುತ್ತಾ ಬಂದವರು ಹಾಲಿವುಡ್ ಸಿನಿಮಾ ಜಗತ್ತಿನ ಜನ. ಅಂಥಾ ಹಾಲಿವುಡ್ಡಿನವರೇ ಅಮೆರಿಕಾ ಭಾಗದಲ್ಲಿ ನಡೆಯುತ್ತಿದ್ದ ಹಾರುವ ತಟ್ಟೆಗಳ ಹಾರರ್ ಕಥನಗಳನ್ನು ಕಂಡು ಕಂಗಾಲಾಗಿದ್ದರು. ಯಾಕಂದ್ರೆ, ಜಗತ್ತಿಗೆ ಸಿನಿಮಾ ತೋರಿಸುತ್ತಿದ್ದವರ ಕಣ್ಣ ಮುಂದೆಯೇ ಪ್ರಕೃತಿಯ ನಿಗೂಢ ಸಿನಿಮಾವೊಂದು ಪ್ರದರ್ಶನಗೊಳ್ಳಲಾರಂಭಿಸಿತ್ತು.
ಕಡೆಗೂ ಒಂದಷ್ಟು ಅಧ್ಯಯನ ನಡೆಸಿದ್ದ ಹಾಲಿವುಡ್ ಸಿನಿಮಾ ನಿರ್ಮಾತೃಗಳು ೧೯೫೬ರಲ್ಲಿ ಅರ್ಥ್ ವರ್ಸಸ್ ಫೈಯಿಂಗ್ ಸಾಸರ್ಸ್ ಎಂಬ ಸಿನಿಮಾವನ್ನು ರೂಪಿಸಿದ್ದರು. ಅದರ ಪೋಸ್ಟರುಗಳೇ ಜನಸಾಮಾನ್ಯರನ್ನು ಮತ್ತಷ್ಟು ಭೀತಗೊಳಿಸುವಂತಿದ್ದದ್ದು ಸುಳ್ಳಲ್ಲ. ಈ ಹಾರುವ ತಟ್ಟೆಗಳ ನಿಗೂಢವನ್ನು ಹೇಗೆಲ್ಲ ಬಳ:ಸಿಕೊಳ್ಳಬಹುದೋ ಅದೆಲ್ಲವನ್ನೂ ಕೂಡಾ ಹಾಲಿವುಡ್ ಮಂದಿ ಅತ್ಯಂತ ಯಶಸ್ವಿಯಾಗಿಯೇ ಮಾಡಿ ಮುಗಿಸಿದ್ದರು. ಈ ಸಿನಿಮಾದಲ್ಲಿ ಏನು ತೋರಿಸಿರಬಹುದೆಂಬ ಕುತೂಹಲವೇ ಆ ಸಿನಿಮಾವನ್ನು ಹಿಟ್ ಆಗಿಸಿದ್ದೀಗ ಇತಿಹಾಸ. ಆ ಕಾಲಘಟ್ಟದಲ್ಲಿ ಹಾಲಿವುಡ್ ಮಂದಿ ರೂಪಿಸಿದ್ದ ಹಾರುವ ತಟ್ಟೆಗಳ ಸುತ್ತಲಿನ ಸಿನಿಮಾ ಬಗ್ಗೆ ಈ ಆಧುನಿಕ ವಾತಾವರಣದಲ್ಲಿಯೂ ಕೂಡಾ ಚರ್ಚೆಗಳಾಗುತ್ತಿವೆ.
ಏಲಿಯನ್ನುಗಳಿರೋದು ನಿಜವೇ?

ಹಾಗೆ ಐವತ್ತರ ದಶಕದ ಆಚೀಚೆ ಶುರುವಾದ ಏಲಿಯನ್ನುಗಳ ನಿಗೂಢ ಸಂಚಾರ ಈ ಆಧುನಿಕ ವಿಶ್ವವನ್ನೂ ಕೂಡಾ ಬಹುಉವಾಗಿ ಕಾಡುತ್ತಿದೆ. ಈಗ ನಾನಾ ಕ್ಷೇತ್ರಗಳಲ್ಲಿ, ನಾನಾ ದಿಕ್ಕಿನಲ್ಲಿ ವೈಜ್ಞಾನಿಕ ಸಂಶೋಧನೆಗಳಾಗಿವೆ. ಇಂಥಾ ಸುದೀರ್ಘವಾದ ಸಂಶೋಧನೆಗಳ ಫಲವಾಗಿಯೇ ಯಾವುದಕ್ಕೇ ಆದರೂ ವಿಜ್ಞಾನ ಜಗತ್ತಿನಲ್ಲಿ ನಿಖರವಾದ ಉತ್ತರ ಸಿದ್ಧವಿದೆ. ಆದರೆ ಹೊಸಾ ಶತಮಾನ ಕಾಲು ಭಾಗ ಮುಗಿದರೂ ಕೂಡಾ ಏಲಿಯನ್ನುಗಳ ಬಗ್ಗೆ ವಿಜ್ಞಾನಿಗಳು ನಿಖರವಾದ ಉತ್ತರ ಕಂಡುಕೊಳ್ಳುವಲ್ಲಿ ಸೋತಿದ್ದಾರೆ. ಆದರೆ, ಈ ಜಗತ್ತಿನಲ್ಲಿ ಏಲಿಯನ್ನುಗಳಿಲ್ಲ ಅಂತ ಹೇಳಲು ಹಿಂಜರಿಯುತ್ತಾರೆ. ಯಾಕೆಂದರೆ, ಈ ಏಲಿಯನ್ನುಗಳು ಇರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಬಲವಾದ ಸಾಕ್ಷಿಗಳು ಸಿಗಲಾರಂಭಿಸಿವೆ.
ಇದೀಗ ಚಂದ್ರನ ಮೇಲೆ ಉಪಗ್ರಹಗಳನ್ನು ಕಳಿಸಿ ಅದರ ಮೇಲೈ ಮೇಲಿನ ಅಸಲೀಯತ್ತನ್ನು ಕಂಡುಕೊಳ್ಳುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿದೆ. ಮಂಗಳ ಗ್ರಹದ ಬಗ್ಗೆಯೂ ವ್ಯಾಪಕವಾಗಿಯೇ ವಿಜ್ಞಾನಿಗಳು ಕಣ್ಣಿಟ್ಟಿದ್ದಾರೆ. ಮಂಗಳ ಗ್ರಹದಲ್ಲಿಯಂತೂ ನೀರಿನ ಕಾಲುವೆಯ ಗುರುತುಗಳು ಪತ್ತೆಯಾಗಿವೆ. ಯಾವುದೇ ಒಂದು ಭಾಗದಲ್ಲಿ ನೀರಿನ ಇರುವಿಕೆ ಕಾಣಿಸಿದರೆ, ಅದರ ಆಸುಪಾಸಲ್ಲಿ ಜೀವಿಗಳು ವಾಸವಿರೋದು ಗ್ಯಾರೆಂಟಿ. ಯಾಕೆಂದರೆ, ಈ ಜಗತ್ತಿನ ಬಹುತೇಕ ನಾಗರೀಕತೆಗಳ ಉಗಮವಾದದ್ದು ಇಂಥಾ ನದಿಯ ತಟಗಳಲ್ಲಿಯೇ. ಈ ನಿಟ್ಟಿನಲ್ಲಿ ಕಾಲುವೆಯ ಲಕ್ಷಣ ಕಾಣುವ ಮೂಲಕ ಮಂಗಳ ಗ್ರಹದಲ್ಲಿಯೂ ಕೂಡಾ ಜೀವಿಗಳಿದ್ದಾವೆಂಬ ಸಂದೇಶ ರವಾನೆಯಾಗಿದೆ.
ಅಲ್ಲಿ ಜೀವಿಗಳ ಸುಳಿದಾಟ ಕಾಣಿಸಬಹುದಾ ಅಂತ ವಿಜ್ಞಾನಿಗಳೇ ಕಾತರರರಾಗಿದ್ದಾರೆ. ಹೀಗಿರುವುದರಿಂದಲೇ ಬಹುತೇಕ ವಿಜ್ಞಾನಿಗಳು ಏಲಿಯನ್ನುಉಗಳ ವಿಚಾರದಲ್ಲಿ ಬಲವಾಗಿ ತಲೆ ಕೆಡಿಸಿಕೊಂಡಿದ್ದಾರೆ. ಇಡೀ ಗ್ರಹಗುಚ್ಚಗಳಲ್ಲಿ ಜೀವಿಗಳಿರೋದು ಭೂಮಿಯ ಮೇಲೆ ಮಾತ್ರವೇ ಎಂಬುದು ಈಖಗ ಹಬ್ಬಿಕೊಂಡಿರುವ ವಿಚಾರ. ಆದರೆ ಅದು ಪೂರ್ತಿ ಸತ್ಯವಲ್ಲ ಎಂಬ ವಿಚಾರ ಅದ್ಯಾವತ್ತೋ ವಿಜ್ಞಾನಿಗಳಿಗೆ ಅರಿವಾಗಿದೆ. ಈ ಕಾರಣದಿಂದಲೇ ಏಲಿಯನ್ನುಗಳುಉ ಯಾವುದೋ ಗ್ರಹಗಳಲ್ಲಿ ಖಂಡಿತಾ ಇದ್ದಾವೆಂಬ ಬಗ್ಗೆ ಅವರೆಲ್ಲ ಮಾತಾಡುತ್ತಿದ್ದಾರೆ. ಖುದ್ದು ವಿಜ್ಞಾನಿಗಳೇ ಈ ಸತ್ಯವನ್ನು ಒಪ್ಪಿಕೊಂಡಿರೋದರಿಂದಾಗಿ ಜನಸಾಮಾನ್ಯರ ಕೌತುಕ ಕೂಊಡಾ ಮೇರೆ ಮೀರಿಕೊಂಡಿವೆ.
ಹಿರಿಯ ವಿಜ್ಞಾನಿಗಳೇ ಹೇಳುವ ಪ್ರಕಾರವಾಗಿ ನೋಡೋದಾದರೆ, ಯಾವುದೋ ಗ್ರಹದಲ್ಲಿ ಜೀವಿಗಳು ಇರೋದು ನಿಜ. ಏಲಿಯನ್ನುಗಳು ಕೂಡಾ ಇರುವುದನ್ನು ಅಲ್ಲಗಳೆಯಲಾಗುತ್ತಿಲ್ಲ. ಈಗ ನಾವು ಬೇರೆ ಗ್ರಹಗ್ಳಲ್ಲಿ ಜೀವಿಗಳಿದ್ದಾವಾ ಅಂತ ಹುಡುಕುತ್ತಿದ್ದೇವಲ್ಲಾ? ಹಾಗೆಯೇ ಬೇರೆ ಗ್ರಹದ ಜೀವಿಗಳೂ ಕೂಡಾ ಭೂಮಿಯಲ್ಲಿ ಜೀವಿಗಳಿರುವ ಬಗ್ಗೆ ಹುಡುಕುತ್ತಿರಬಹುದು. ಆ ಕಡೆಯಿಂದಲೇ ಆಕಾಶದಲ್ಲಿ ಚಿತ್ರವಿಚಿತ್ರ ಸಂದೇಶಗಳು ರವಾನೆಯಾಗುತ್ತಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಆಕಾಶ ಕಾಯಗಳಲ್ಲಿ ನಡೆಯುವ ಅಚ್ಚರಿದಾಯಕ ಬೆಳವಣಿಗೆಗಳನ್ನು ನಾವೆಲ್ಲ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಿರಬಹುದು. ಆಕಾಶದಲ್ಲಿ ನಮಡೆಯುವ ಒಟ್ಟಾರೆ ಚಮಾತ್ಕಾರಗಳಲ್ಲಿ ಏಲಿಯನ್ನುಗಳ ಕೈವಾಡ ಇದ್ದರೂ ಇರಬಹುದೆಂಬುದನ್ನು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಏಲಿಯನ್ನುಗಳನ್ನು ಪತ್ತೆ ಹಚ್ಚೋದು ಅಷ್ಟು ಸಲೀಸಿನ ಸಂಗತಿಯಲ್ಲ ಎಂಬುದನ್ನೂ ಕೂಡಾ ವಿಜ್ಞಾನಿಗಳು ಒತ್ತಿ ಹೇಳುತ್ತಾ ಬಂದಿದ್ದಾರೆ.
ನಡೆಯಲಿದೆಯಾ ದಾಳಿ?

ಈ ಜಗತ್ತಿನ ಸೂಕ್ಷ್ಮಗಳನ್ನು ಯಾವ ಕೋನದಲ್ಲಿಯೂ ನಿಖರವಾಗಿ ವಿಶ್ಲೇಷಣೆಗೆ ಒಳ ಪಡಿಸಲು ಸಾಧ್ಯವೇ ಇಲ್ಲ. ನಮ್ಮ ಭೂಮಿಯಲ್ಲಿಯೇ ಇನ್ನೂ ಕೂಡಾ ಅನೇಕ ನಿಗೂಢಗಳು ಹುದುಗಿ ಹೋಗಿವೆ. ಅದನ್ನು ಪತ್ತೆ ಹಚ್ಚಲು, ಜೀವ ವೈವಿಧ್ಯದ ಬಗ್ಗೆ ಅರ್ಥ ಮಾಡಿಕೊಳ್ಳಲು ಇನ್ನೆಷ್ಟೋ ಶತಮಾನಗಳು ಬೇಕಾಗಬಹುದು. ಹಾಗಿರುವಾಗ ಅನ್ಯ ಗ್ರಹ ಜೀವಿಗಳ ನಿಗೂಢವನ್ನು ಬೇಧಿಸೋದು ಖಂಡಿತವಾಗಿಯೂ ಸಲೀಸಿನ ಸಂಗತಿ ಅಲ್ಲವೇ ಅಲ್ಲ. ಯಾರಿಗೆ ಗೊತ್ತು? ನಮ್ಮನ್ನೇ ಮೀರಿಸುವಂಥಾ ಬುದ್ಧಿ ಶಕ್ತಿ ಹೊಂದಿರುವ ಜೀವಿಗಳು ಯಾವುದೋ ಗ್ರಹದಲ್ಲಿ ಇರಬಹುದು. ಈವತ್ತಿಗೆ ನಾವೆಲ್ಲ ವೈಜ್ಞಾನಿಕವಾಗಿ ಮುಂದುವರೆದಿದ್ದೇವೆ. ಆದರೆ ನಮ್ಮನ್ನೇ ಮೀರಿಸುವಂಥಾ ಸಂಶೋಧನೆಗಳು ಬೇರ್‍ಯಾವುದೋ ಗ್ರಹ ಲೋಕದಲ್ಲಿ ಆಗಿರಬಹುದು. ನಾವು ಇನ್ನೊಂದು ಶತಮಾನದಾಚೆ ಹೇಗಿರಬಹುದೆಂದು ಈ ಭೂಮಿಯಯನ್ನು ಕಲ್ಪಿಸಿಕೊಳ್ಳುತ್ತೇವೋ ಹಾಗೆಯೇ ಬೇರೆ ಗ್ರಹದಲ್ಲೊಂದು ಲೋಕ ಇದ್ದರೂ ಇರಬಹುದು.
ಇದು ಕುತೂಹಲದ ಪ್ರಶ್ನೆಯಾದರೆ, ಅನ್ಯ ಗ್ರಹ ಜೀವಿಗಳಿ ಇರೋದು ಸತ್ಯವೇ ಎಂಬ ವಿಜ್ಞಾನಿಗಳ ಹೇಳಿಕೆ ಒಂದಷ್ಟು ಭಯವನ್ನೂ ಸೃಷ್ಟಿಸಿದೆ. ಅದರಲ್ಲಿ ಪ್ರಧಾನವಾಗಿ ಭದ್ರತತೆಯ ಭಯ ಎಲ್ಲರನ್ನೂ ಕಾಡುತ್ತದೆ. ಈವತ್ತು ನಾವು ಒಂದು ದೇಶವನ್ನು ಕ್ಷಣಾರ್ಧದಲ್ಲಿ ಭಸ್ಮ ಮಾಡುವಂಥಾ ನ್ಯೂ ಕ್ಲಿಯರ್ ಬಾಂಬುಗಳನ್ನು ಕಂಡು ಹಿಡಿದಿದ್ದೇವೆ. ಬಹುತೇಕ ಎಲ್ಲ ರಾಷ್ಟ್ರಗಳೂ ಕೂಡಾ ಇಂಥಾ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ಬೀಗುತ್ತಿವೆ. ಆದರೆ ಒದು ವೇಳೆ ಅನ್ಯ ಗ್ರಹ ಜೀವಿಗಳು ದಾಳಿ ಮಾಡಿದರೆ ಅವುಗಳನ್ನು ನಮ್ಮ ಶಸ್ತ್ರಗಳಿಂದ ಎದುರಿಸಲು ಸಾಧ್ಯವೇ? ಅಂಥಾ ದಾಳಿಗಳನ್ನು ಎದುರಿಸಲು ಮತ್ತೊಂದು ಬಗೆಯ ಭದ್ರತಾ ವ್ಯವಸ್ಥೆ ಬೇಕಿದೆಯಾ ಎಂಬ ನಿಟ್ಟಿನಲ್ಲಿ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಾಕೆಂದರೆ ನಮ್ಮ ನ್ಯೂಕ್ಲಿಯರ್ ಬಾಂಬು ಅನ್ಯ ಗ್ರಹ ಜೀವಿಗಳ ಮುಂದೆ ಟುಸ್ ಪಟಾಕಿಯಂತಾಗುವ ಅಪಾಯ ಇದ್ದೇ ಇದೆ!
ಸಂಶೋಧನೆಗಳ ಭರಾಟೆ
ಭೂಮಿಯನ್ನು ಹೊರತು ಪಡಿಸಿ ಬೇರೆ ಗ್ರಹದಲ್ಲಿ ಜೀವಿಗಳಿವೆಯಾ ಎಂಬ ಬ ಗ್ಗೆ ಈವರೆಗೂ ಲೆಕ್ಕವಿಲ್ಲದಷ್ಟು ತರ್ಕಗಳು ನಡೆದಿವೆ. ಅಧ್ಯಯನಗಳೂ ಕೂಡಾ ಸಾಧ್ಯವಾಗಿವೆ. ಕಳೆದ ದಶಕದಲ್ಲಿ ಪ್ರತಿಷ್ಠಿತ ಹಾವರ್ಡ್ ವಿಶ್ವವಿದ್ಯಾಲಯ ಭೂಮಾತೀತ ಜೀವಿಗಳ ಇರುವಿಕೆ ಬಗ್ಗೆ ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯಿಂದ ಬೇರೆ ಗ್ರಹಗಳಲ್ಲಿಯೂಊ ಜೀವಿಗಳಿರುವ ಸಾಧ್ಯತೆಯನ್ನೇ ಎತ್ತಿ ತೋರಿಸಲಾಗಿದೆ. ಭೂಮಿಯಂತೆಯೇ ಜೀವಿಗಳನ್ನು ಹೊತ್ತ ಗ್ರಹ ಖಂಡಿತವಾಗಿಯೂ ಇದೆ. ಭೂಮಿ ಮತ್ತು ಚಂದ್ರನ ಒಟ್ಟೊಟ್ಟಿಗೇ ಆ ಜಗತ್ತು ಜೀವಿಸುತ್ತಿದೆ. ಮತ್ತು ಏಲಿಯನ್ನುಗಳ ಬಗ್ಗೆ ಹಬ್ಬಿಕೊಂಡಿರುವ ಅಂತೆ ಕಂತೆಗಳು ಭ್ರಮೆಯಲ್ಲ ವಾಸ್ತವ ಅನ್ನೋದನ್ನೂ ಕೂಡಾ ಆ ಅಧ್ಯಯನ ಪ್ರಚುರಪಡಿಸಿದೆ.
ಏಲಿಯನ್ನುಗಳು ಒಂದ್ಯಾವುದೋ ಗ್ರಹದಲ್ಲಿವೆ. ಏಲಿಯನ್ನುಗಳು ನಮಗಿಂತಲೂ ತಂತ್ರಜ್ಞಾನದಲ್ಲಿ ಮುಉಂದಿರಬಹುದು. ಅವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ನಾವು ಹಾರುವ ತಟ್ಟ ಅಂದುಕೊಂಡಿರುವಂಥಾ ಆಧುನಿಕ ಯಂತ್ರಗಳನ್ನು ಬಳಸುತ್ತಿರಲೂ ಬಹುದು. ಏಲಿಯನ್ನುಗಳು ನಿಜಕ್ಕೂ ಇದ್ದಾವಾ ಅನ್ನೋದಕ್ಕಿಂತಲೂ ಅನ್ಯ ಗ್ರಹದಲ್ಲಿ ಖಂಡಿತಾ ಜೀವಿಗಳಿದ್ದಾವೆ. ಅವು ನಿರಂತರವಾಗಿ ನಮ್ಮಂತತೆಯೇ ಬೇರೆ ಗ್ರಹದಲ್ಲಿನ ಜೀವಿಗಳನ್ನು ಹುಡುಕುವ ಪ್ರಯತ್ನದಲ್ಲಿರುವಂತೆಯೂ ಕಾಣುತ್ತಿದೆ. ಈ ಪ್ರಯತ್ನದಲ್ಲಿ ಮಾನವ ಮೊದಲು ಗೆಲ್ಲುತ್ತಾನೋ, ಏಲಿಯನ್ನುಗಳೇ ಭೂಮಿಯನ್ನು ಹುಡುಕಿ ದಂಡೆತ್ತಿಒ ಬರುತ್ತವೋ ಗೊತ್ತಿಲ್ಲ. ಅದನ್ನು ಕಾಲವೇ ನಿರ್ಣಯಿಸಬೇಕಿದೆ!