ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

wonders of earth: ಮೊಗೆದಷ್ಟೂ ಮುಗಿಯದ ಭೂಮಿಯ ಅಚ್ಚರಿ!

Majja Webdeskby Majja Webdesk
21/02/2025
in Majja Special
Reading Time: 1 min read
wonders of earth: ಮೊಗೆದಷ್ಟೂ ಮುಗಿಯದ ಭೂಮಿಯ ಅಚ್ಚರಿ!

-ಭೂಮಿ ಹೇಗೆ ಸೃಷ್ಟಿಯಾಯ್ತು ಗೊತ್ತೇ?

-ಭೂಮಿ ದುಂಡಗಿದೆ ಅನ್ನೋದೇ ಸುಳ್ಳಾ?  

 

ನಾವೂ ಸೇರಿದಂತೆ ಕೋಟ್ಯಂತರ ಜೀವರಾಶಿಗೆ ಆಶ್ರಯ ನೀಡಿರುವ ಅದ್ಭುತವಾದ ಶಕ್ತಿ ಭೂಮಿ. ಇಂಥಾ ಭೂಮಿ ಹೇಗೆ ಸೃಷ್ಟಿಯಾಯ್ತು? ಅದು ರೂಪುಗೊಂಡ ಹೊಸತರಲ್ಲಿ ಅದರ ರೂಪುರೇಷೆಗಳು ಹೇಗಿದ್ದವು?ರಂಭದಿಂದ ಇಲ್ಲಿಯವರೆಗೂ ಭೂಮಿಯ ಬಗ್ಗೆ ಎಂತೆಂಥಾ ಅಧ್ಯಯನ, ಸಂಶೋಧನೆಗಳು ನಡೆದಿವೆ? ಹೀಗೆ ಪ್ರಶೆಗಳು ಸಾವಿರ ಸಂಖ್ಯೆಯಲ್ಲಿವೆ. ಅದಕ್ಕೆ ಉತ್ತರ ಹುಡುಕುತ್ತಾ ಹೋದಷ್ಟೂ ಭೂಮಿಯ ಅದ್ಭುತ ಅಚ್ಚರಿಗಳು ನಮ್ಮನ್ನೆಲ್ಲ ತಮ್ಮೊಳಗೆ ಲೀನವಾಗಿಸಿಕೊಳ್ಳುತ್ತವೆ. ಅಷ್ಟಕ್ಕೂ ಈ ಜಗತ್ತಿನ ಅಷ್ಟೂ ವಿಜ್ಞಾನಿಗಳ ಪಾಲಿಗೆ ಭೂಮಿ ಎಂಬುದು ಸದಾ ಕಾಲವೂ ಅಚ್ಚರಿಯಾಗಿ ಕಾಡಿದೆ. ಅದರ ಸೆಳೆತಕ್ಕೆ ಸಿಕ್ಕ ಅನೇಕ ವಿಜ್ಞಾನಿಗಳು ವರ್ಷಗಟ್ಟಲೆ ಬೆಂಬಿದ್ದು, ಧ್ಯಾನಸ್ಥರಾಗಿ ಸಂಶೋಧನೆ ನಡೆಸಿದ್ದಾರೆ. ಈ ಮೂಲಕ ಅನೇಕ ವಿಚಾರಗಳನ್ನು ಜಗತ್ತಿನೆದುರು ತೆರೆದಿಟ್ಟಿದ್ದಾರೆ.


ನಮ್ಮದು ಎಲ್ಲವನ್ನೂ ಅಧ್ಯಾತ್ಮಿಕ ಭೂಮಿಕೆಯಲ್ಲಿಯೇ ವಿಶ್ಲೇಷಿಸಿ ನಂಬುವ ದೇಶ. ಈ ಕಾರಣದಿಂದಲೇ ಭೂಮಿಯ ಹುಟ್ಟಿನ ಬಗ್ಗೆ, ಅದರ ಆಚೀಚೆ ಇರುವ ಅಂಶಗಳ ಬಗ್ಗೆ ಥರ ಥರದ ಕಥೆಗಳಿದ್ದಾವೆ. ಅದಕ್ಕೊಂದಷ್ಟು ಪೌರಾಣಿಕ ಕಥೆಗಳೂ ಸಾಥ್ ಕೊಡುವಂತಿವೆ. ನಮ್ಮ ದೇಶದ ವಿಚಾರಕ್ಕೆ ಬಂದರೆ, ಅದೆಷ್ಟೋ ವೈಜ್ಞಾನಿಕ ಸಂಶೋಧನೆಗಳು ನಡೆದು ಭೂಮಿಯ ಹುಟ್ಟು ಸಂಭವಿಸಿದ್ದು ಹೀಗೆಯೇ ಎಂಬ ವರದಿಗಳು ಹೊರ ಬಂದರೂ ಕೂಡಾ ಜನ ಮಾನಸದಲ್ಲಿ ಅಚ್ಚಾಗಿರೋದು ಪುರಾಣ ಪುಣ್ಯ ಕಥೆಗಳನ್ನು ಆಧರಿಸಿದ ನಂಬಿಕೆಗಳೇ. ಈ ಭೂಮಿ ದೇವರ ಸೃಷ್ಟಿ ಎಂಬ ಬಲವಾದ ನಂಬಿಕೆ ನಮ್ಮ ದೇಶದಲ್ಲಿದೆ. ಯಾವುದು ಸರಿ, ಯಾವುದು ತಪ್ಪೆಂಬ ಬಗ್ಗೆ ಚರ್ಚೆ ಇಲ್ಲಿ ಅಗತ್ಯವಿಲ್ಲ. ಸದ್ಯಕ್ಕೆ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ತೆರೆದಿಟ್ಟಿರುವ ನಾನಾ ವಿಚಾರಗಳತ್ತ ಕಣ್ಣರಳಿಸಿ ನೋಡಿದರೆ ನಿಜಕ್ಕೂ ಅವಾಕ್ಕಾಗುವಂತಾಗುತ್ತೆ.

ಅದು ಭೂಮಿ


ಭೂಮಿಯನ್ನು ವಿಜ್ಞಾನಿಗಳು ಒಂದಷ್ಟು ಭಾಗಗಳಾಗಿ ವಿಂಗಡಿಸುವ ಮೂಲಕ ಸಂಶೋಧನೆಗೊ ಹೊರಪದರ, ಗರ್ಭ, ಹೊg ತಿರುಳು ಮತ್ತು ಒ ತಿರುಳು ಅದರಲ್ಲಿ ಪ್ರಧಾನವಾದದ್ದು. ಪ್ರತಿಯೊಂದು ಪದರ ಸಹ ವಿಶಿಷ್ಟವಾದ ರಾಸಾಯನಿಕ ಸಂಯೋಜನೆ, ಭೌತಿಕ ಸ್ಥಿತಿಯನ್ನು ಒಳಗೊಂಡಿದೆ. ಅದುವೇ ಭೂಮಿಯ ಮೇಲ್ಮೈಯಲ್ಲಿ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ಮಧ್ಯಭಾಗದಲ್ಲಿ ಶಾಖದಲ್ಲಿನ ವ್ಯೆತ್ಯಾಸಗಳಿಂದ ಉಂಟಾಗುವ ನಿಲುವಂಗಿಯಲ್ಲಿನ ಚಲನೆ ಆಗಾಗ ಫಥವನ್ನು ಬದಲಾಯಿಸಲು ಕಾರಣವಾಗುತ್ತದೆ. ಇದರಿಂದಲೇ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಕಾರಣವಾಗಬಹುದು. ಈ ನೈಸರ್ಗಿಕ ಅಪಾಯಗಳು ನಂತರ ನಮ್ಮ ಭೂದೃಶ್ಯವನ್ನು ಬದಲಾಯಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಅದರ ತೀವ್ರತೆ ಹೆಚ್ಚಾದಾಗ ದೊಡ್ಡ ಮಟ್ಟದಲ್ಲಿ ಜೀವ ಬಲಿ ಪಡೆದರೂ ಅಚ್ಚರಿಯೇನಿಲ್ಲ. ಇಂಥಾ ಭೂಮಿ ತನ್ನನ್ನು ತಾನು ಹೇಗೆಲ್ಲ ರೂಪಿಸಿಕೊಂಡಿದೆ ಅನ್ನೋದು ನಿಜಕ್ಕೂ ಅಧ್ಯಯನಯೋಗ್ಯ ವಿಚಾರ!
ಭೂಮಿ ಎಂಬುದು ಸೌರಮಂಡಲದಲ್ಲಿ ಐದನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ಮೂರನೇ ಗ್ರಹವಾಗಿ ಗುರುತಿಸಿಕೊಂಡಿದೆ. ಸೌರಮಂಡಲದ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ ಮಾತ್ರವಲ್ಲದೇ, ನಮಗೆಲ್ಲ ಈಗ ತಿಳಿದಿರುವಂತೆ ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯವೆಂದರೆ ಅದು ಭೂಮಿ ಮಾತ್ರ. ಇದರ ಸಾಂದ್ರತೆ ಕೂಡಾ ಅತಿ ಹೆಚ್ಚು. ಇಂಥಾ ಭೂಮಿಯ ಚಿಪ್ಪು ಹಲವು ಪದರಗಳಾಗಿ ಒಡೆದಿದೆ. ಈ ಭೂ ಫಲಕಗಳು ನಿಧಾನವಾಗಿ ಭೂಮಿಗೋಳದಲ್ಲಿ ನಮ್ಮ ಅರಿವಿಗೆ ಬಾರದಂತೆ ಅತ್ತಿಂದಿತ್ತ ಚಲಿಸುತ್ತವೆ. ಭೂಮಿಯ ಅತ್ಯಂತ ಮೇಲಿನ ಪದರ ಬೇರೆಯದ್ದೇ ಮಣ್ಣಿನಿಂದ ಕಲ್ಲುಗಳಿಂದ ಆವೃತವಾಗಿದೆ. ಇದು ಸಿಲಿಕಾ ಮತ್ತು ಅಲ್ಯುಮಿನಿಯಂನಿಂದಾದ ಹೊರ ಪದರ ಸಿಲಿಕ ಮತ್ತು ಮೆಗ್ಮೀಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಭೂಗರ್ಭ ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇರುವುದು ಸದರಿ ಪದರದಲ್ಲಿಯೇ. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನ ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಮೇಲ್ಮೈನ ಸುಮಾರು ಎಪ್ಪತ್ತರಷ್ಟು ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ. ಉಳಿದ ಮೇಲ್ಮೈ ಪ್ರದೇಶ ಭೂಖಂಡಗಳು ಮತ್ತು ದ್ವೀಪಗಳಿಂದ ಮೈ ಕೈ ತುಂಬಿಕೊಂಡಿದೆ.

ಭೂಮಿ ಹುಟ್ಟಿದ್ದು ಹೇಗೆ?


ಅಷ್ಟಕ್ಕೂ ಈ ಭೂಮಿ ಹುಟ್ಟಿದ್ದು ಹೇಗೆ? ಇಂಥಾದ್ದೊಂದು ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಎಲ್ಲರನ್ನೂ ಕಾಡೋದಿದೆ. ಇದೀಗ ಸಂಶೋಧನೆಗಳ ಮೂಲಕ ಕಲೆ ಹಾಕಿರುವ ಪುರಾವೆಗಳನ್ನು ಆಧರಿಸಿ ಭೂಮಿ ಎಂಬೋ ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರು ರೂಪಿಸಿದ್ದಾರೆ. ಸುಮಾರು ನಾಲಕ್ಕು ನೂರಾ ಅರವತ್ತು ಕೋಟಿ ವರ್ಷಗಳ ಹಿಂದೆ ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿ ನಿಹಾರಿಕೆಯಿಂದ ಉದ್ಭವವಾಯಿತು. ಭೂಮಿ ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈ ಘನರೂಪಕ್ಕೆ ತಿರುಗಿತು. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಅಖಂಡವಾದ ವಾಯುಮಂಡಲ ಸೃಷ್ಟಿಯಾಗಿತ್ತು. ಅದು ಜೀವಸ್ನೇಹಿ ಆಗಿದ್ದರಿಂದ ಈ ಭೂಮಿ ಮೇಲೆ ಜೀವಿಗಳ ಉಗಮವಾಗುತ್ತಾ ಸಾಗಿತ್ತು.
ಅದಾದ ಬಳಿಕ ಕೋಟ್ಯಂತರ ವರ್ಷಗಳಿಂದಲೂ ಈ ಭೂಮಿ ಅನೇಕ ರೂಪಾಂತರಗಳನ್ನು ಕಂಡಿದೆ. ಈಗಲೂ ನಮ್ಮ ಅರಿವಿಗೆ ಬಾರದಂತೆ ಅಂಥಾ ಒಂದಷ್ಟು ಚಟುವಟಿಕೆಗಳು ನಡೆಯುತ್ತಿವೆ. ಕ್ರಮೇಣ ಧೂಮಕೇತುಗಳಿಂದ ಸೃಷ್ಟಿಯಾದ ಮಂಜು ಮತ್ತು ಸಾಂದ್ರೀಕೃತವಾಗುತ್ತಿದ್ದ ನೀರಾವಿಗಳಿಂದ ಮೊದಲು ಸಾಗರಗಳು ರೂಪುಗೊಂಡವು. ಸುಮಾರು ನಾನೂರು ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಾಸಾಯನಿಕ ಕ್ರಿಯೆಯೊಂದು ಘಟಿಸಿತ್ತು. ಅದರ ಫಲವಾಗಿಯೇ ಕಾರ್ಬನ್ ಸೃಷ್ಟಿಯಾಯಿತೆಂಬ ಸತ್ಯವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮುಂದೆ ಇದೇ ಜೀವಕೋಗಳ ಉಗಮಕ್ಕೂ ಕಾರಣವಾಗಿತ್ತು. ಸುಮಾರು ಐವತ್ತು ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿ ಈ ಭೂಮಿಯ ಮೇಲೆ ಉಗಮವಾಗಿತ್ತು. ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು. ಈ ಕ್ರಿಯೆಯಿಂದ ಹೊರಬಂದ ಆಮ್ಲಜನಕ ವಾಯುಮಂಡಲದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು.ದುವೇ ಇದುವರೆಗೂ ಈ ಭೂಮಿಯನ್ನು, ಅದರ ಮೇಲೆ ಬೀಡು ಬಿಟ್ಟಿರುವ ಕೋಟಿ ಕೋಟಿ ಜೀವರಾಶಿಯನ್ನು ಪೊರೆಯುತ್ತಿರೋದು ಕಣ್ಣ ಮುಂದಿನ ಸತ್ಯ.
ಈ ಭೂಮಿಯಿಂದ ನಾನಾ ಸ್ವರೂಪಗಳಲ್ಲಿ ಉತ್ಪತ್ತಿಯಾಗುವಂಥಾ ಅಪಾಯಕಾರಿ ಕಿರಣಗಳನ್ನು ಓಜೋನ್ ಪದg ಹೀರಿಕೊಳ್ಳಲು ಆರಂಭಿಸಿದ ನಂತರ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ವಿಕಾಸವಾಗತೊಡಗಿದವು. ಈ ಕೋಟ್ಯಂತರ ವರ್ಷಗಳ ಅವಧಿಯಲ್ಲಿ ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ ಮೇಲ್ಮೈ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತ ಮತ್ತೆ ಛಿದ್ರಗೊಳ್ಳುತ್ತ ಬಂದಿವೆ. ಆ ಪ್ರಕ್ರಿಯೆಯೇ ಭೂಕಂಪನ, ಜ್ವಾಲಾಮುಖಿಗಳ ಸ್ವರೂಪದಲ್ಲಿ ಈ ಕ್ಷಣಕ್ಕೂ ಚಾಲ್ತಿಯಲ್ಲಿವೆ. ಅಚ್ಚರಿಯ ವಿಚಾರವೆಂದರೆ, ಇಂಥಾ ಸೂಕ್ಷ್ಮ ಚಟುವಟಿಕೆಗಳು ಭೂಮಿಯನ್ನು ಮತ್ಯಾವುದೋ ಆಕಾರಕ್ಕೆ ಒಗ್ಗಿಸುತ್ತಾ, ಬೇರೆ ಬೇರೆ ಜೀವಿಗಳ ಸೃಷ್ಟಿಯ ಸೂಚನೆರಯಾಗಿರಲೂ ಬಹುದು. ಅಂಥಾದ್ದೊಂದು ಅಚ್ಚರಿ ಸಾಧ್ಯವಾ ಎಂಬ ನಿಟ್ಟಿನಲ್ಲಿ ಜಗತ್ತಿನ ಅದೆಷ್ಟೋ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಭೂಮಿ ದುಂಡಗಿರೋದು ಸುಳ್ಳಾ?


ಭೂಮಿಯ ವಿಚಾರದಲ್ಲಿ ಮೊಗೆದಷ್ಟೂ ಮುಗಿಯದ ಕೌತುಕ ಜನಮಾನಸದಲ್ಲಿದೆ. ಈ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳೂ ಕೂಡಾ ಚಾಲ್ತಿಯಲ್ಲಿವೆ. ಅದರಲ್ಲಿಯೂ ವಿಶೇಷವಾಗಿ ಭೂಮಿ ಯಾವ ಆಕಾರದಲ್ಲಿದೆ ಎಂಬ ಬಗ್ಗೆ ಚರ್ಚೆ ಮತ್ತು ವಾಗ್ವಾದಗಳೇ ನಡೆಯುತ್ತಿವೆ. ಈ ಕಮ್ಷಣಕ್ಕೂ ಭೂಮಿ ಹೇಗಿದೆ ಅಂತೊಂದು ಪ್ರಶ್ನೆ ಇಟ್ಟರೆ ದುಂಡಗಿದೆ ಎಂಬ ಉತ್ತರದ್ದೇ ಮೆಜಾರಿಟಿ ಇರುತ್ತೆ. ಆದರೆ ವಿಜ್ಞಾನ ಬೇರೆಯದ್ದೇ ಸತ್ಯವನ್ನ ಕಂಡುಕೊಂಡಿದೆ. ಭೂಮಿಯ ಆಕಾರ ಧ್ರುವದಿಂದ ಧ್ರುವಕ್ಕೆ ದಿಟ್ಟಿಸಿದಾಗ ಚಪ್ಪಟೆಯಾಗಿರೋ ಸತ್ಯ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಸಮಭಾಜಕ ವೃತ್ತದಲ್ಲಿ ಅದು ಉಬ್ಬಿದೆ. ಭೂಮಿಯ ಚಲನೆಯಿಂದಾಗಿಯೇ ಆ ಉಬ್ಬು ಸೃಷ್ಟಿಯಾಗಿದೆ ಅಂತ ವಿಜ್ಞಾನಿಗಳು ನಿಖರವಾಗಿ ಹೇಳುತ್ತಿದ್ದಾರೆ.
ಭೂಮಿ ಎಂಬ ಗ್ರಹದ ಬಗ್ಗೆ ನಮಗೆಲ್ಲ ಮನೆ ಎಂಬಷ್ಟೇ ಆಪ್ತವಾದ ಭಾವವಿದೆ. ಆಧುನಿಕ ಜಗತ್ತಿನಲ್ಲಿ ವಿಜ್ಞಾನಿಗಳು ಭೂಮಿಯ ಆZಗೂ ಜೀವಿಗಳಿರುವ ಸುಳಿವುಗಳನ್ನು ನಿರಂತರವಾಗಿ ಹುಡುಕುತ್ತಿದ್ದಾರೆ. ಆದರೆ ಭೂಮಿ ಇಡೀ ವಿಶ್ವದಲ್ಲಿ ಜೀವಿಗಳು ಗುರುತಿಸಲ್ಪಡುವ ಪ್ರಮುಖ ಗ್ರಹವಾಗಿ ಸದ್ಯಕ್ಕೆ ಉಳಿದಿದೆ. ಹಾಗಾದರೆ ಭೂಮಿಗೆ ಈ ಹೆಸರು ಬಂದಿದ್ಯಾವಾಗ? ಭೂಮಿಯ ಹೆಸರು ಒಂದು ಸಾವಿರ ವರ್ಷಗಳಿಗಿಂತ ಹಳೆಯದು. ವಿಜ್ಞಾನಿಗಳು ಭೂಮಿ ಸುಮಾರು ಶತಕೋಟಿ ವರ್ಷಗಳ ಹಿಂದೆ, ಸೌರವ್ಯೂಹದ ಉಳಿದ ಗ್ರಹಗಳಂತೆಯೇ ರೂಪುಗೊಂಡಿತು ಎಂದು ನಂಬುತ್ತಾರೆ. ಬಾಹ್ಯಾಕಾಶದಿಂದ ಭೂಮಿ ಬಿಳಿ ಸುಳಿಗಳೊಂದಿಗೆ ನೀಲಿ ಅಮೃತ ಶಿಲೆಯಂತೆ ಕಾಣುತ್ತದೆ ಮತ್ತು ಕೆಲವು ಭಾಗಗಳು ಕಂದು, ಹಳದಿ, ಹಸಿರು ಮತ್ತು ಬಿಳಿ ಬಣ್ಣದಲ್ಲಿ ಕಾಣುತ್ತವೆ. ಇಂಥಾ ಚಹರೆಗಳ ಬಗ್ಗೆಯೂ ನಾನಾ ಚರ್ಚೆಗಳು ನಡೆದಿವೆ. ನಡೆಯುತ್ತಲೂ ಇದ್ದಾವೆ.
ಒಟ್ಟಾರೆ ಸೌರವ್ಯೂಹ ಎಂಟು ಗ್ರಹಗಳನ್ನು ಒಳಗೊಂಡಿದೆ. ಅವುಗಳಲ್ಲಿ ಭೂಮಿ ಕೂಡಾ ಒಂದಾಗಿ ದಾಖಲಾಗುತ್ತದೆ. ಸೂರ್ಯನಿಂದ ಇರುವ ದೂರದಿಂದಾಗಿ ಬುಧ ಮತ್ತು ಶುಕ್ರ ನಂತರ ಮತ್ತು ಮಂಗಳ ಗ್ರಹಕ್ಕಿಂತ ಮೊದಲು ಮೂರನೇ ಸ್ಥಾನದಲ್ಲಿದೆ. ಭೂಮಿ ಐದನೇ ಅತಿದೊಡ್ಡ ಗ್ರಹವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಮ್ಮ ಸೌರವ್ಯೂಹದಲ್ಲಿ ನಾಲ್ಕು ಅನಿಲ ದೈತ್ಯ ಗ್ರಹಗಳಾಗಿ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಭೂಮಿಗಿಂತ ದೊಡ್ಡದಾಗಿವೆ. ಆದರೆ ಬುಧ, ಮಂಗಳ ಮತ್ತು ಶುಕ್ರ ಭೂಮಿಗಿಂತ ಚಿಕ್ಕದಾಗಿವೆ. ನಮ್ಮ ಭೂಮಿ ಹತ್ತು ಹಲವು ಕಾರಣಗಳಿಂದ ಅಸಾಧಾರಣವಾಗಿದೆ. ನೀರು ಮತ್ತು ಆಮ್ಲಜನಕವೇ ಭೂಮಿಯನ್ನು ಜೀವನಾಡಿಯಾಗಿಸಿರೋದು ಸತ್ಯ. ಭೂಮಿಯ ಮೇಲ್ಮೈಯ ಸುಮಾರು ಎಪ್ಪತ್ತೊಂದು ಭಾಗ ನೀರಿನಿಂದ ಆವೃತವಾಗಿದೆ. ಆ ನೀರಿನ ಬಹುಪಾಲು ಸಾಗರಗಳಲ್ಲಿದೆ. ಭೂಮಿಯ ವಾತಾವರಣ ಆಮ್ಲಜನಕದಿಂದ ಸಮೃದ್ಧವಾಗಿದೆ. ಹೆಚ್ಚಾಗಿ ಸಾರಜನಕ ಮತ್ತು ಆಮ್ಲಜನಕದಿಂದ ಈ ವಾತಾವರಣ ತುಂಬಿಕೊಂಡಿದೆ. ಭೂಮಿ ಅನೇಕ ಪರ್ವತಗಳು, ಕಣಿವೆಗಳು, ಬಯಲು ಪ್ರದೇಶಗಳು ಮತ್ತು ಕಣಿವೆಗಳೂ ಸೇರಿದಂತೆ ಅಗೋಚರ ಅಚ್ಚರಿಗಳನ್ನು ತನ್ನ ಮೇಲೆ ಹೊತ್ತುಕೊಂಡಿದೆ.

ಭೂಮಿಯೇಕೆ ವಾಸಯೋಗ್ಯ?


ಬೇರೆಲ್ಲ ಗ್ರಹಗಳಿಗಿಂತಲೂ ಭೂಮಿಯನ್ನು ಭಿನ್ನವಾಗಿಸಿರೋದು ಇಲ್ಲಿನ ವಾತಾವರಣ ಮತ್ತು ಜೀವ ವೈವಿಧ್ಯ. ಭೂಮಿಯು ಆಮ್ಲಜನಕ ಸಮೃದ್ಧ ವಾತಾವರಣ ಹೊಂದಿದೆ. ಮೇಲ್ಮೈಯ ಸುಮಾರು ಎಪ್ಪತ್ತರಷ್ಟು ಭಾಗ ನೀರಿನಿಂದ ತುಂಬಿದೆ. ಭೂಮಿಗೆ ಒಂದು ರೀತಿಯ ಗುರುತ್ವಾಕರ್ಷಣ ಶಕ್ತಿ ಇದೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ. ಅದರ ಒಂದು ಸುತ್ತು ಪೂರ್ಣಗೊಳ್ಳಲು ಒಂದು ದಿನ ಬೇಕಾಗುತ್ತದೆ. ಭೂಮಿ ಸೂರ್ಯನ ಸುತ್ತ ತನ್ನ ಒಂದು ಸುತ್ತುವನ್ನು ಒಂದು ವರ್ಷದಲ್ಲಿದಿನಗಳಲ್ಲಿ ಪೂರ್ಣಗೊಳಿಸುತ್ತದೆ. ಈ ಹೆಚ್ಚುವರಿ ಕಾಲು ದಿನವನ್ನು ಸೇರಿಸುವುದು ನಮ್ಮ ಕ್ಯಾಲೆಂಡರ್ ವ್ಯವಸ್ಥೆಗೆ ಸವಾಲೊಡ್ಡುತ್ತದೆ. ಯಾಕೆಂದರೆ, ನಮ್ಮ ಕ್ಯಾಲೆಂಡರ್ ಒಂದು ವರ್ಷವನ್ನು ಮುನ್ನೂರಾ ಅರವತೈದು ದಿನಗಳಾಗಿ ಎಣಿಸುತ್ತದೆ. ಸೂರ್ಯನ ಸುತ್ತ ಭೂಮಿ ಕಕ್ಷೆಗೆ ಅನುಗುಣವಾಗಿ ಅದನ್ನು ಇರಿಸಿಕೊಳ್ಳಲು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಮ್ಮ ಕ್ಯಾಲೆಂಡರ್‌ಗಳಿಗೆ ಒಂದು ದಿನವನ್ನು ಸೇರಿಸಲಾಗುತ್ತದೆ. ಆ ಸೇರಿಸಿದ ದಿನವನ್ನು ಅಧಿಕ ದಿನ ಎಂದು ಕರೆಯಲಾಗುತ್ತದೆ. ಅದನ್ನು ಸೇರಿಸಿದ ವರ್ಷವನ್ನು ಅಧಿಕ ವರ್ಷ ಎಂದು ಕರೆಯುವ ಪದ್ಧತಿ ಇದೆ. ನಮ್ಮ ಅಧ್ಯಾತ್ಮಿಕ ನಂಬಿಕೆಗಳಲ್ಲಿಯೂ ಅದು ಹಾಸುಹೊಕ್ಕಾಗಿದೆ.
ಭೂಮಿಯ ಅಚ್ಚರಿಗಳು ಇಲ್ಲಿಗೇ ನಿಲ್ಲುವುದಿಲ್ಲ. ಕ್ರಾಂತಿವೃತ್ತದ ಸಮತಲಕ್ಕೆ ಹೋಲಿಸಿದರೆ ಭೂಮಿಯ ತಿರುಗುವಿಕೆಯ ಅಕ್ಷ ಕೊಂಚ ಓರೆಯಾಗಿದೆ. ಈ ಕ್ರಾಂತಿವೃತ್ತದ ಸಮತಲ ಸೂರ್ಯನ ಸುತ್ತ ಭೂಮಿಯ ಕಕ್ಷೆಯ ಕಾಲ್ಪನಿಕ ಸಮತಲ. ವರ್ಷದ ಒಟ್ಟಾರೆ ಸಮಯವನ್ನು ಅವಲಂಬಿಸಿ, ಉತ್ತರ ಮತ್ತು ದಕ್ಷಿಣ ಗೋಳಾರ್ಧಗಳು ಕೆಲವೊಮ್ಮೆ ಸೂರ್ಯನ ಕಡೆಗೆ ಅಥವಾ ದೂರಕ್ಕೆ ಓರೆಯಾಗಿರುತ್ತವೆ. ಇದು ಅರ್ಧಗೋಳಗಳು ಪಡೆಯುವ ಬೆಳಕಿನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ಋತುಗಳು ಉಂಟಾಗುತ್ತವೆ ಎಂಬ ವಿಚಾರ ಈಗಾಗಲೇ ಜನಜನಿತವಾಗಿದೆ.

ಭೂಮಿಯ ಗಾತ್ರವೆಷ್ಟು?


ಈ ಭೂಮಿಯ ನಿಖರವಾದ ಗಾತ್ರವೆಷ್ಟು? ಇದೊಂದು ಪ್ರಶ್ನೆ ಈ ಭೂಮಿಯ ಬಹುತೇಕರನ್ನು ಕಾಡುತ್ತಾ ಬಂದಿದೆ. ಇದರಿಂದ ಕಾಡಿಸಿಕೊಂಡ ವಿಜ್ಞಾನಿಗಳು ಸಂಶೋಧನೆ ನಡೆಸಿ ಒಂದಷ್ಗಟು ವಿಚಾರಗಳನ್ನು ಕಂಡುಕೊಂಡಿದ್ದಾರೆ. ನಿಜವಾಗಿ ಈ ಭೂಮಿಯ ಗಾತ್ರವನ್ನು ಅಳೆಯುವ ಪ್ರಯತ್ನಗಳಾಗಿದ್ದು ಈ ಜಗತ್ತು ವಿಶಾಲ ಸಮುದ್ರ ಯಾನಗಳನ್ನು ಕೈಗೊಂಡ ಸಮಯದಲ್ಲಿಯೇ ಎನ್ನುವ ನಂಬಿಕೆ ವಿಜ್ಞಾನಿಗಳದ್ದು. ಆದರೆ ಅದಕ್ಕಿಂತಲೂ ಮೊದಲೇ ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಸಾಕಷ್ಟು ನಿಖರವಾಗಿ ಭೂಮಿಯ ಗಾತ್ರವನ್ನು ಗ್ರೀಸ್ ದೇಶದ ವಿಜ್ಞಾನಿ ನಿರಟೋಸ್ತನೀಸ್ ಅಳತೆ ಮಾಡಿದ್ದರು ಎಂಬ ವಿಚಾರ ಯಾವತ್ತೋ ಜಾಹೀರಾಗಿದೆ. ಎರಟೋಸ್ತನೀಸ್ ಇಂಥಾ ಅಸಾಧಾರಣ ಸಾಧನೆ ಮಾಡಿದ ಸಮಯದಲ್ಲಿ ಯುರೋಪಿನ ಜನ ಅಮೆರಿಕ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ ಖಂಡಗಳನ್ನಾಗಲಿ ಅಥವಾ ಪೆಸಿಫ಼ಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ವಿವರಗಳನ್ನಾಗಲಿ ಇನ್ನೂ ಕಂಡುಹಿಡಿದಿರಲಿಲ್ಲ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಹಾಗಾದರೆ ಈ ಎರಟೋಸ್ತನೀಸ್ ಯಾರು ಎಂಬ ಪ್ರಶ್ನೆ ಮೂಡಿಕೊಳ್ಳೋದು ಸಹಜ. ಎರಟೋಸ್ತನೀಸ್, ವಿದ್ವಾಂಸ ಮತ್ತು ತತ್ತ್ವಜ್ಞಾನಿ. ಗ್ರೀಕ್ ಸಾಮ್ರಾಜ್ಯದ ಭಾಗವಾಗಿದ್ದ ಸಿರೀನ್ ನಲ್ಲಿ ಕ್ರಿ.ಪೂ.೨೭೬ರಲ್ಲಿ ಜನಿಸಿದ ಮೇಧಾವಿಯೀತ. ಈ ಊರು ಇದೀಗ ಷಾಹತ್ ಎಂಬ ಹೆಸರಿನಲ್ಲಿ ಲಿಬಿಯಾದ ಭಾಗವಾಗಿದೆ. ತಮ್ಮ ಸ್ವಂತ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಎರಟೋಸ್ತನೀಸ್ ತತ್ತ್ವಜ್ಞಾ ನ ಮತ್ತು ಕಾವ್ಯ ಗಳನ್ನು ಅಧ್ಯಯನ ಮಾಡಲು ಅಥೆನ್ಸ್ ಗೆ ಪಯಣಿಸಿದರು. ಎರಟೋಸ್ತನೀಸ್ ಗೆ ಮೂವತ್ತು ವರ್ಷಗಳಾಗಿದ್ದಾಗ ಈಜಿಪ್ಟಿನ ಅಲೆಕ್ಸಾಂಡ್ರಿಯಾವನ್ನು ಆಳುತ್ತಿದ್ದ ಟಾಲ್ಮಿ. ಭೂಮಿಯ ಗಾತ್ರವನ್ನು ಅಳತೆ ಮಾಡುವುದು ಭೂಮಿಯ ಗಾತ್ರವನ್ನು ನಿಖರವಾಗಿ ಅಳತೆ ಮಾಡಿದ್ ದು ಯಾವಾಗ? ಮೊತ್ತಮೊದಲಿಗೆ ಅದನ್ನು ಅಳೆದವರು ಯಾರು? ಅವರು ಯಾವ ರೀತಿ ಅಳೆದರು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುವವರು ಎರಟೋಸ್ತನೀಸ್. ಆತ ಅಲೆಕ್ಸಾಂಡ್ರಿಯಾಕ್ಕೆ ತೆರಳಿ, ಕ್ರಿ. ಪೂ. ೧೯೪ರಲ್ಲಿ ಮರಣ ಹೊಂದುವವರೆಗೂ ಅಲ್ಲಿಯೇ ಜೀವನ ನಡೆಸಿದ್ದರು.
ಅವರು ತಮ್ಮ ಜೀವಿತದ ಒಂದು ಘಟ್ಟದಲ್ಲಿ ಪುಸ್ತಕಭಂಡಾರದ ಪ್ರಮುಖ ಗ್ರಂಥಪಾಲಕರ ಹುದ್ದೆಗೆ ಉನ್ನತಿ ಪಡೆದರಲ್ಲದೆ, ಪುಸ್ತಕಭಂಡಾರದ ಪುಸ್ತಕಗಳ ಸಂಗ್ರಹವನ್ನು ಹೆಚ್ಚಿಸಿದ್ದರ ಜೊತೆಗೆ ಟಾಲ್ಮಿಯ ಮಕ್ಕಳಿಗೆ ಬೋಧಕರೂ ಆಗಿದ್ದರು. ಎರಟೋಸ್ತನೀಸ್ ಸಕಲಕಲಾ ವಲ್ಲಭರು. ಅವರು ಗಣಿತ ಮತ್ತು ವಿಜ್ಞಾ ನಗಳಿಗೆ ಬಹುಮುಖ್ಯವಾದ ಅನೇಕ ಕೊಡುಗೆಗಳನ್ನು ನೀಡಿದ್ದಲ್ಲದೆ, ಭೂಗೋಳ, ಸಾಹಿತ್ಯ, ಕಾವ್ಯ ಮತ್ತು ಇತಿಹಾಸಗಳಲ್ಲಿಯೂ ಪರಿಣಿತರಾಗಿದ್ದರು. ಅವರ ಬಹಳಷ್ಟು ಕೊಡುಗೆಗಳ ಮಾಹಿತಿ ಕಾಲಾಂತರದಲ್ಲಿ ಕಳೆದುಹೋಗಿವೆ. ತತ್ತ್ವಜ್ಞ ರಾದ ಕ್ಲಿಯೋಮೆಡೀಸ್, ಪಾಪ್ಪೊ ಮತ್ತು ಸ್ಟ್ರಾಬೋ ಮುಂತಾದವರ ಬರಹಗಳಿಂದ ಅವರ ಕೆಲವು ಕೊಡುಗೆಗಳು ನಮಗೆ ತಿಳಿದುಬಂದಿವೆ. ವಾಸ್ತವದಲ್ಲಿ ಭೂಮಿಯ ಪರಿಧಿಯನ್ನು ಎರಟೋಸ್ತನೀಸ್ ಅಳತೆ ಮಾಡಿದ ವಿಧಾನದ ಸರಳೀಕೃತ ರೂಪವನ್ನು ಕ್ಲಿಯೋಮೆಡೀಸ್ ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಅಳತೆಯ ವಿಧಾನ


ಹೀಗೆ ಮೇಧಾವಿಯಾಗಿದ್ದ ಎರಟೋಸ್ತನೀಸ್ ಭೂಮಿಯ ಗಾತ್ರವನ್ನು ಯಾವ ರೀತಿ ಅಳತೆ ಮಾಡಿದರು? ಎಂಬ ಪ್ರಶಾನೆಗೆ ಥ್ರಿಲ್ ಆಗುವಂಥಾ ಉತ್ತರ ಸಿದ್ಧವಿದೆ. ಆ ಹೊತ್ತಿಗೆಲ್ಲಾ ಭೂಮಿ ಗೋಳಾಕಾರದಲ್ಲಿದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿತ್ತು. ಹಲವಾರು ಮಂದಿ ಅದರ ಪರಿಧಿ ಅಂದರೆ ಸುತ್ತಳತೆಯನ್ನು ಅಳತೆ ಮಾಡುವ ಪ್ರಯತ್ನದಲ್ಲಿ ವಿಫಲರಾಗಿದ್ದರು. ಭೂಮಿಯ ಗಾತ್ರ ಅಳೆಯಲು ಎರಟೋಸ್ತನೀಸ್ ತಮ್ಮ ಜ್ಯಾಮಿತಿಯ ಜ್ಞಾ ನವನ್ನು ಬಳಸಿದರು. ಅಲೆಕ್ಸಾಂಡ್ರಿಯಾದ ದಕ್ಷಿಣ ಭಾಗದಲ್ಲಿದ್ದ ಸೈನೆ ಎನ್ನುವ ಊರಿನಲ್ಲಿ ಸಂಕ್ರಾಂತಿಯ ನಡು ಮಧ್ಯಾಹ್ನದ ಸಮಯದಲ್ಲಿ ಯಾವ ವಸ್ತುವಿನ ನೆರಳೂ ಬೀಳುವುದಿಲ್ಲವೆಂದು ಎರಟೋಸ್ತನೀಸ್ ಅರಿತಿದ್ದರು. ಹೊಳೆಯುವ ಸೂರ್ಯ ಕಿರಣಗಳು ನೇರವಾಗಿ ಬಾವಿಯೊಂದರೊಳಗೆ ಬಿದ್ದು, ಬಾವಿಯ ತಳದಲ್ಲಿರುವ ನೀರಿನ ಮೇಲೆ ಮಾತ್ರವೇ ಪ್ರತಿಫಲನವಾಗುವುದನ್ನೂ, ಅಕ್ಕಪಕ್ಕಗಳಲ್ಲಿ ವಿಸ್ತರಿಸದಿರುವುದನ್ನೂ ಎಲ್ಲರೂ ಕಾಣಬಹುದಿತ್ತು. ಈ ಸಮಯದಲ್ಲಿ ಸೈನೆಯಲ್ಲಿ ಸೂರ್ಯ ನೇರವಾಗಿ ನೆತ್ತಿಯ ಮೇಲಿರುತ್ತಿದ್ದುದೇ ಇದಕ್ಕೆ ಕಾರಣ ಅನ್ನೋದನ್ನು ಅವರು ಕಂಡುಕೊಂಡಿದ್ದರು.
ಅವರಿಗೆ ಜ್ಞಾನೋದಯವಾದ ಸೈನೆಗೆ ಈಗಿನ ಹೆಸರು ಅಸ್ವಾನ್. ಇದು ಕರ್ಕಾಟಕ ಸಂಕ್ರಾಂತಿ ವೃತ್ತದ ಅತಿ ಸಮೀಪದಲ್ಲಿದೆ. ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಈ ಸ್ಥಳದಲ್ಲಿ ಜೂನ್ ಇಪ್ಪತ್ತೊಂದರಂದು ಅಂದರೆ, ಬೇಸಿಗೆಯ ಅಯನ ಸಂಕ್ರಾಂತಿಯಂದು, ನಡು ಮಧ್ಯಾಹ್ನದಲ್ಲಿ ಸೂರ್ಯ ನೇರವಾಗಿ ನೆತ್ತಿಯ ಮೇಲಿರುತ್ತದೆ. ಇದಕ್ಕೆ ವಿರುದ್ಧವಾಗಿ ಅಲೆಕ್ಸಾಂಡ್ರಿಯಾದಲ್ಲಿನ ಬೇಸಿಗೆ ಅಯನ ಸಂಕ್ರಾಂತಿಯ ಮಧ್ಯಾಹ್ನದ ಸೂರ್ಯ ನೇರವಾಗಿ ನೆತ್ತಿಯ ಮೇಲಿದ್ದಂತೆ ಕಂಡಾಗಲೂ, ಅವರು ನೆಟ್ಟಿದ್ದ ಒಂದು ಕಂಬವೂ ಸೇರಿದಂತೆ ಸುತ್ತಮುತ್ತಲಿನ ವಸ್ತುಗಳು, ಸೈನೆಯಲ್ಲಿ ಭಿನ್ನವಾಗಿದ್ದವು.


ಬೇಸಿಗೆಯ ಅಯನ ಸಂಕ್ರಾಂತಿಯ ನಡು ಮಧ್ಯಾಹ್ನದಲ್ಲಿ, ಉತ್ತರಾರ್ಧ ಗೋಳದಲ್ಲಿರುವ ಸೈನೆ ಮತ್ತು ಅಲೆಕ್ಸಾಂಡ್ರಿಯಾ ಊರುಗಳಲ್ಲಿ ವಸ್ತುಗಳಿಂದ ಉಂಟಾಗುವ ನೆರಳಿನ ಕೋನದಲ್ಲಿ ವ್ಯತ್ಯಾಸ ಇದೆ ಎನ್ನುವ ವಿಚಾರ ಎರಟೋಸ್ತನೀಸ್ಗೆ ತಿಳಿದಿತ್ತು. ಸ್ಟೇಡಿಯಾ ಈಜಿಪ್ಟಿನ ಸುಮಾರು ನೂರಾ ಐವತ್ತೇಳು ಮೀಟರ್ಗೆ ಸಮಾನವಾದ, ದೂರವನ್ನು ಅಳೆಯುವ ಗ್ರೀಕಿನ ಅಳತೆ ಈ ದೂರವು ಭೂಮಿಯ ವೃತ್ತದ ಕೋನವಾಗಿತ್ತು. ೭.೨ ಡಿಗ್ರಿಗೆ ಸಮನಾದ ಕೋನಕ್ಕೆ ಸಮನಾಗಿತ್ತು. ಈ ಕೋನದ ಕಂಸದ ಉದ್ದವನ್ನು ಇಡೀ ವೃತ್ತದೊಂದಿಗೆ ಹೋಲಿಸಿ, ಭೂಮಿಯ ಪರಿಧಿಯನ್ನು ೨೫೦,೦೦೦ ಸ್ಟೇಡಿಯಾಗಳೆಂದು ಎರಟೋಸ್ತನೀಸ್ ಲೆಕ್ಕ ಮಾಡಿದರು. ಭೂಮಿಯ ಮಧ್ಯದಲ್ಲಿ ಎರಡು ಊರುಗಳಿಂದ ಉಂಟಾದ ಕಂಸದಿಂದ ಮೂಡಿದ ಕೋನ. ಅಲೆಕ್ಸಾಂಡ್ರಿಯಾ ಮತ್ತು ಸೈನೆಗಳ ನಡುವಿನ ದೂರ ೫೦೦೦ ಸ್ಟೇಡಿಯಾ. ಎರಡು ಊರುಗಳ ನಡುವಿನ ದೂರ ಉಂಟುಮಾಡಿದ ಕೋನ ಅವರು ಅಳತೆಮಾಡಿದಂತೆ ೭.೨೦. ಆದ್ದರಿಂದ, ಭೂಮಿಯ ಪರಿಧಿ ೨೫೦,೦೦೦ ಸ್ಟೇಡಿಯಾ ಎಂಬುದು ಇದರರ್ಥ.
ಆದರೆ, ಇಂಥಾ ಅನೇಕ ಅಳತೆಯ ಪ್ರಯತ್ನಗಳು ಈ ವರೆಗೂ ಸಾಕಷ್ಟು ನಡೆಯುತ್ತಾ ಬಂದಿವೆ. ಈವತ್ತಿಗೆರ ನಾವೆಲ್ಲ ಬೇರೆ ಗ್ರಹಗಳಲ್ಲಿಯೂ ಜೀವಿಗಳಿದ್ದಾವಾ ಅಂತ ಹುಡುಕಲು ಮುಂದಾಗಿದ್ದೇವೆ. ಆದರೆ ನಾವು ನಿಂತ ಭೂಮಿಯ ಬಗೆಗಿನ ವಿಚಾರಗಳೇ ನಮ್ಮ ಅರಿವಿಗೆ ಬಂದಿಲ್ಲ. ವಿಜ್ಞಾನಿಗಳು ಶತಮಾನಗಳಿಂದೀಚೆಡಗೆ ಸಾಕಷ್ಟು ಅಧ್ಯಯನ, ಸಂಶೋಧನೆ ನಡೆಸಿದರೂ ಭೂಮಿಯ ಅಚ್ಚರಿಯನ್ನು ಸಂಪೂರ್ಣವಾಗಿ ಬಯಲಾಗಿಸಲು ಸಾಧ್ಯವಾಗಿಲ್ಲ. ಬಹುಶಃ ಭೂಮಿ ಇರುವವರೆಗೂ ಅದು ಸಾಧ್ಯವಾಗುವುದೂ ಇಲ್ಲ. ಯಾಕೆಂದರೆ, ಅದು ಮೊಗೆದಷ್ಟೂ ಮುಗಿಯದ ಅಕ್ಷಯ ಪಾತ್ರೆ!

Tags: #earthsecrets#natur#wonderearth#wonderfacts#wondersofearth

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
success story of isro: ಇಸ್ರೋದ ಮೊದಲ ರಾಕೆಟ್ ಬಂದಿದ್ದು ಸೈಕಲ್ಲಿನಲ್ಲಿ!

success story of isro: ಇಸ್ರೋದ ಮೊದಲ ರಾಕೆಟ್ ಬಂದಿದ್ದು ಸೈಕಲ್ಲಿನಲ್ಲಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.