ಬಡ ದೇಶವೆಂದೇ ವಿಶ್ವದ ದೃಷ್ಟಿಯಲ್ಲಿ ಒಂದು ಕಾಲದಲ್ಲಿ ಗುರುತಿಸಿಕೊಂಡಿದ್ದ ಭಾರತವೀಗ ಅಭಿವೃದ್ಧಿಶೀಲ ದೇಶವಾಗಿ ಗಮನ ಸೆಳೆಯುತ್ತಿದೆ. ಕೃಷಿ, ತಂತ್ರಜ್ಞಾನ ಸೇರಿದಂತೆ ಎಲ್ಲದರಲ್ಲಿಯೂ ಕೂಡಾ ನಮ್ಮ ದೇಶವೀಗ ಗಮನಾರ್ಹವಾಗಿ ಸಾಧನೆ ಮಾಡುತ್ತಾ ಬಂದಿದೆ. ಒಂದು ಕಾಲದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಭಾಹ್ಯಾಕಾಶ ವಿಜ್ಞಾನ ಮುಂತಾದವುಗಳತ್ತ ಹೊರಳಿ ನೋಡಲೂ ಸಾಧ್ಯವಾಗದಂಥಾ ಸ್ಥಿತಿಯಲ್ಲಿದ್ದ ದೇಶವಿದು. ಇಂಥಾ ನೆಲದಲ್ಲಿ ಇಸ್ರೋ ಆರಂಭವಚಾದಾಗ ಜಾಗತಿಕ ಮಟ್ಟದ್ದಲ್ಲಿ ಮಂದಿ ಮುಸಿ ಮುಸಿ ನಕ್ಕಿದ್ದಿದೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಮುಂದುವರೆದು ಬಂದ ಫಲವಾಗಿಯೇ ಈವತ್ತಿಗೆ ಭಾರತ ವಿಶ್ವ ವಿಜ್ಞಾನ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ದಶಕಗಳ ಕಾಲ ಅವುಡುಗಚ್ಚಿ ಮಾಡುತ್ತಾ ಬಂದಿರುವಂಥಾ ಅದೆಷ್ಟೋ ಆವಿಷ್ಕಾರಗಳು ಒಂದು ಕಡೆಯಿಂದ ದೇಶದ ಅಭಿವೃದ್ಧಿಗೆ ಪೂರಕವಾಗಿ, ಮತ್ತೊಂದು ದಿಕ್ಕಿನಿಂದ ವಿಶ್ವ ಮಟ್ಟದಲ್ಲಿ ಭಾರತಕ್ಕೊಂದು ಘನತೆ ಗೌರವ ಸಿಕ್ಕಿದೆ.
ಭಾರತೀಯ ವಿಜ್ಞಾನ ರಂಗ ಈವತ್ತಿಗೆ ಏರಿರುವ ಎತ್ತರ ಕಂಡು ಈ ಜಗತ್ತಿನ ಮುಂದುವರೆದ ದೇಶಗಳೇ ಅಚ್ಚರಿಯ ನೋಟ ಬೀರುತ್ತಿವೆ. ಒಂದು ಕಾಲದಲ್ಲಿ ವಿಜ್ಞಾನದ ಸಂಶೋಧನೆಗಳೇನಿದ್ದರೂ ತಮ್ಮದೇ ಸ್ವತ್ತೆಂಬಂಥಾ ಶ್ರೀಮಂತ ದೇಶವೆನ್ನಿಸಿಕೊಂಡಿದ್ದ ಅಮೆರಿಕದಂಥಾವುಗಳಿಗಿತ್ತು. ಹಂತ ಹಂತರವಾಗಿ ಬಡ ದೇಶಗಳೆನ್ನಿಸಿಕೊಂಡಿದ್ದ ದೇಶಗಳೇ ಅದನ್ನು ಸುಳ್ಳು ಮಾಡುತ್ತಾ ಸಾಗಿ ಬಂದಿವೆ. ಆ ಸಾಧನೆಯ ಹಾದಿಯಲ್ಲಿ ಭಾರತವಿಂದು ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿಯಂತೂ ಇಸ್ರೋ ಎಂಬುದು ನಾಸಾವನ್ನೆ ಸರಿಗಟ್ಟಿನಿಂತಿದೆ. ಇದೀಗ ಭಾರತದಲ್ಲಿ ಎಂತೆಂಧಾ ವೈಜ್ಞಾನಿಕ ಆವಿಷ್ಕಾಶರಗಳು ನಡೆಯಬಹುದೆಂಬ ಬಗ್ಗೆ ಅಮೆರಿಕಾದಂಥಾ ಅಮೆರಿಕಾ ದೇಶವೇ ಬೆರಗಾಗಿ ನೋಡಲಾರಂಭಿಸಿದೆ. ಹೀಗೆ ಬೆಳೆದು ನಿಂತಿರುವ ಭಾರತೀಯಹ ವಿಜ್ಞಾನ ರಂಗ ಹಲವು ಟಿಸಿಲು, ಕೊಂಬೆ ಕೋವೆಗಳೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಬಾಹ್ಯಾಕಾಶದಲ್ಲಿ ಬಂಪರ್ ಬೆಳೆ
ಈಗೊಂದಷ್ಟು ವರ್ಷಗಳಿಂದೀಚೆಗೆ ಬಾಹ್ಯಾಕಾಶ ರಂಗದಲ್ಲಿ ಭಾರತದ ಸಾಧನೆ ಗಣನೀಯವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ದೊಡ್ಡ ಮಟ್ಟದದ ಸಾಧನೆಗಳು ಜಗತ್ತನ್ನೇ ನಿಬ್ಬೆರಗಾಗಿಸಿವೆ. ಒಂದೇ ಉಡಾವಣೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉಪಗ್ರಹಗಳ ಉಡಾವಣೆ, ಹೆಚ್ಚಿನ ಪೇಲೋಡ್ ಹೊಂದಿರುವ ರಾಕೆಟ್ ಉಡ್ಡಯನದ ಮೂಲಕ ಭಾರತೀಯ ವಿಜ್ಞಾನಿಗಳು ಜಾಗತಿಕ ಮಟ್ಟದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅನೇಕ ಉಪಗ್ರಹ ಉಡಾವಣೆಯೊಂದಿಗೆ ವಾಣಿಜ್ಯ ದೃಷ್ಟಿಯಿಂದಲೂ ಉಪಗ್ರಹ ಉಡಾವಣೆ ಸೇವೆ ಆರಂಭಿಸುವ ಮಹತ್ವಾಕಾಂಕ್ಷೆಯೊಂದಿಗೆ ಇಸ್ರೋ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ನಮ್ಮ ಬಾಹ್ಯಾಕಾಶ ಸಂಸ್ಥೆಯ ಅಸಲೀ ಸಾಮರ್ಥ್ಯದ ವಿಶ್ವರೂಪ ದರ್ಶನವಾಗಿದೆ. ವರ್ಷವೊಂದರಲ್ಲಿಯೇ ಹತ್ತತ್ತಿರ ನೂರಾ ಮೂವತ್ತು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸೋದೇನು ಸಾಮಾನ್ಯದ ಸಂಗತಿಯಲ್ಲ!
ಹೀಗೆ ಭಾರತದ ಹೆಮ್ಮೆಯ ಇಸ್ರೋ ಬಾಹ್ಯಾಕಾಶಕ್ಕೆ ಸೇರಿಸಿರುವ ಉಪಗ್ರಹಗಳ ಭಾರ ಕೂಡ ವಿಶ್ವಾದ್ಯಂತ ಅಚ್ಚರಿ ಮೂಡಿಸಿರೋದು ಸುಳ್ಳಲ್ಲ. ಇನ್ನುಳಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಕೂಡಾ ಇಸ್ರೋ ಕಡೆಯಿಂದ ಗಮನಾರ್ಹ ಕಾರ್ಯತಂತ್ರಗಳು ನಡೆಯುತ್ತಿದ್ದಾವೆ. ಇಸ್ರೋ ತನ್ನ ಸಂಪ್ರದಾಯವನ್ನು ಮುಂದುವರೆಸುತ್ತಾ ಮತ್ತೊಂದು ವಿದ್ಯಾರ್ಥಿ ಉಪಗ್ರಹವನ್ನು ಕೂಡಾ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈವತ್ತಿಗೂ ಇಸ್ರೋದ ಆವಿಷ್ಕಾರಗಳ ಬಗ್ಗೆ ನಿಖರ ಅಂದಾಜು ನಮಗ್ಯಾರಿಗೂ ಇಲ್ಲ. ಇಕಸ್ರೋ ಚಟುವಟಿಕೆಗಳು ಹೇಗೆಲ್ಲ ವಾಣಿಜ್ಯಕವಾಗಿ ಈ ದೇಶದ ಆರ್ಥಿಕತೆಗೆ ಬಲ ತುಂಬಬಹುದೆಂಬ ದಿಕ್ಕಿನಲ್ಲಿ ಯೋಚಿಸಿದರೆ ಅದೇ ನಮ್ಮ ದೇಶದ ಭವಿಷ್ಯದ ಭರವಸೆಯಾಗಿ ಕಾಣಿಸೋದರಲ್ಲಿ ಯಾವ ಅಚ್ಚರಿಯೂ ಇಲ್ಲ!
ಆವಿಷ್ಕಾರದಿಂದ ಏನುಪಯೋಗ?
ಈವತ್ತಿಗೂ ಬಾಹ್ಯಾಕಾಶ ಆವಿಷ್ಕಾರಗಳ ಪ್ರಭಾವ ನಮ್ಮ ಮೇಲೆಷ್ಟಿದೆ ಅನ್ನೋದರ ಬಗ್ಗೆ ಹೆಚ್ಚಿನ ಮಂದಿ ಆಲೋಚಿಸುವುದಿಲ್ಲ. ಈವತ್ತಿಗೆ ಕೈಲಿರೋ ಮೊಬೈಲು, ಅದರಲ್ಲಿರೋ ಸಿಗ್ನಲ್ಲು ಮತ್ತು ಹವಾಮಾನ ಮುನ್ಸೂಚನೆ ಸೇರಿದಂತೆ ಎಲ್ಲದರಲ್ಲಿಯೂ ಇಂಥಾ ಆವಿಷ್ಕಾರಗಳ ಋಣ ನಿಸ್ಸಂದೇಹವಾಗಿಯೂ ಇದೆ. ಮಾನ್ಸೂನ್ ಅಥವಾ ಮಳೆಮಾರುತ ತರುವ ಮ ಭಾರತೀಯರ ಬದುಕಿನಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ರಣ ರಣ ಬೇಸಿಗೆಯ ನಂತರದ ತಾಪವನ್ನು ನಿವಾರಿಸುತ್ತದೆ ಎಂಬ ಕಾರಣಕ್ಕಷ್ಟೇ ಅಲ್ಲದೆ, ನಮ್ಮ ದೇಶದ ಕೃಷಿ ಈ ಮಳೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬ ಕಾರಣಕ್ಕೆ ಮಾನ್ಸೂನ್ ಮುಖ್ಯವಾಗುತ್ತದೆ. ಇದೆಲ್ಲದರಿಂದಾಗಿಯೇ ಅದರ ಆಗಮನ, ಸಮಯ ಮತ್ತು ತೀವ್ರತೆಗಳನ್ನು ನಿಖರವಾಗಿ ಊಹಿಸುವುದು ಮಹತ್ವದ ವಿಚಾರವೆನಿಸುತ್ತದೆ. ಮಾನ್ಸೂನ್ ಆಗಮನವನ್ನು ಪ್ರಭಾವಿಸುವ ಅಂಶಗಳನ್ನು ಅಧ್ಯಯನಕ್ಕೊಳಪಡಿಸಿ, ಅದರ ಪಲ್ಲಟಗಳ ಮೂಲಕ ಹವಾಮಾನ ಮುನ್ಸೂಚನೆ ನೀಡುವ ಮೂಲಕ ರೈತರನ್ನು ಬಚಾವು ಮಾಡುವಲ್ಲಿಯೂ ಬಾಹ್ಯಾಕಾಶ ಕ್ಷೇತ್ರದ ಕೊಡುಗೆಯಲ್ಲದೆ ಬೇರೇನೂ ಇಲ್ಲ.
ಆಡಿಹಿಡಿದ ಭಯಾನಕ ಮಳೆಗಾಲದ ಹವಾಮಾನದ ಪಲ್ಲಟಗಳನ್ನು ಅರ್ಥ ಮಾಡಿಕೊಂಡು, ದೇಶದಲ್ಲಿನ ಒಂದಿಡೀ ಮುಂಗಾರು, ಹಿಂಗಾರಿನ ಮಳೆ ಪ್ರಮಾಣವನ್ನು ಅಂದಾಜಿಸೋದು ಕಷ್ಟ ಸಾಧ್ಯ. ವರ್ಷಗಳ ಹಿಂದೆ ನಮ್ಮ ವಜ್ಞಾನಿಗಳು ಅದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ಅದು ಭಾರತೀಯ ಖಗೋಳ ವಿಜ್ಞಾನಿಗಳ ನಿಜವಾದ ಪವರ್ ಅಂದರೂ ತಪ್ಪೇನಿಲ್ಲ. ಭಾರತೀಯ ಖಗೋಳಶಾಸ್ತ್ರಜ್ಞರಿಗೆ ಮೊದಲನೆಯದಾಗಿ ನಮ್ಮ ವಿಜ್ಞಾನಿಗಳ ಕೊಡುಗೆಯನ್ನೂ ಒಳಗೊಂಡಿದ್ದ ಗುರುತ್ವಾಕರ್ಷಣೆಯ ಅಲೆಗಳ ಆವಿಷ್ಕಾರಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತದ್ದು ಮತ್ತು ನಕ್ಷತ್ರಪುಂಜಗಳ ಒಂದು ಸೂಪರ್ ಕ್ಲಸ್ಟರ್ ನ ಅನ್ವೇಷಣೆ ಅವರ ಪ್ರಧಾನ ಗುರಿ. ಸಂಗೀತ, ಕಲೆ ಮತ್ತು ಜ್ಞಾನದ ಭಾರತೀಯ ದೇವತೆಯಾದ ‘ಸರಸ್ವತಿ’ಯ ಹೆಸರನ್ನಿರಿಸಿಕೊಂಡ ಈ ಸೂಪರ್ ಕ್ಲಸ್ಟರ್ ತನ್ನಲ್ಲಿ ಶತಕೋಟಿ ನಕ್ಷತ್ರಗಳು, ಗ್ರಹಗಳು, ಅನಿಲಗಳು, ಡಾರ್ಕ್ ಮ್ಯಾಟರ್ ಮತ್ತು ಇತರ ಆಕಾಶ ಕಾಯಗಳನ್ನು ಒಳಗೊಂಡಿದೆ ಎಂದು ಅಂದಾಜಿಸಲಾಗಿದೆ. ಖಗೋಳಶಾಸ್ತ್ರಜ್ಞರು ಇಂಥಾ ಅನೇಕ ಚಮಾತ್ಕಾರಗಳನ್ನು ಸೃಷ್ಟಿಸುತ್ತಾ ಇಡೀ ಜಗತ್ತೇ ಭಾರತದತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.
ಮತ್ತೊಂದು ಚಮತ್ಕಾರ
ಈವತ್ತಿಗೂ ಕೂಡಾ ವಿಸ್ತಾರವಾಗಿ ಆವರಿಸಿಕೊಂಡಿರುವ ಸಾಗರದ ನಿಗೂಢಗಳನ್ನು ಪತ್ತೆಹಚ್ಚಲು ಅದೆಷ್ಟೋ ವಿಚಾರಗಳು ತೊಡಕಾಗಿವೆ. ಇಂಥಾ ಸಾಗರವನ್ನು ಅರಿತುಕೊಳ್ಳುವುದು, ಅದರೊಳಗಿನ ಪಲ್ಲಟಗಳನ್ನು ಅರ್ಥ ಮಾಡಿಕೊಳ್ಳೋದು ಬಲು ಕಷ್ಟದ ಕೆಲಸ. ಯಾಕೆಂದರೆ, ಸಾಗರಗಳಲ್ಲಿ ಸಾಕಷ್ಟು ರಹಸ್ಯಗಳು ಬಚ್ಚಿಟ್ಟುಕೊಂಡಿವೆ. ಹಿಂದೂ ಮಹಾಸಾಗರದಲ್ಲಿ ಅಡಗಿದ್ದ ಆ ರೀತಿಯಒಂದು ರಹಸ್ಯವನ್ನು, ಅಂದರೆ ಸಾಗರದಲ್ಲಿ ಏರಿಳಿತ ಉಂಟುಮಾಡುವ ಅಂಶಗಳನ್ನು ನಮ್ಮ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಭೂಕಂಪನ ಅಧ್ಯಯನದಲ್ಲಿ ನಿರತ ಸಂಶೋಧಕರು, ಮಹಾಸಾಗರದ ಕೆಳಗಿನ ಭೂಮಿಯ ದ್ರವ್ಯರಾಶಿಯಲ್ಲಿ ಆದ ಕೊರತೆಯಿಂದ, ಅಸಹಜವಾಗಿ ಉಂಟಾಗುವ ಕಡಿಮೆ ಗುರುತ್ವಾಕರ್ಷಣೆಯ ಒಂದು ಭಾಗವನ್ನು ಇಂಡಿಯನ್ ಓಶನ್ ಜಿಯಾಯಿಡ್ ಲೋ ಎಂದು ಕರೆದುಕೊಂಡು ಅದರ ಬಗ್ಗೆ ವಿಸ್ತಾರವಾದ ಅಧ್ಯಯನ, ಸಂಶೋಧನೆಗಳನ್ನು ಮಾಡಿದ್ದಾರೆ. ಈ ಏರಿಳಿತದ ನಿಜವಾದ ಕಾರಣ ವಿವರಿಸುವಂಥಾ ಒಂದಷ್ಟು ಅನ್ವೇಷಣೆಗಳಾಗಿದ್ದಾವೆ. ಆದರೆ ಅವ್ಯಾವುದಕ್ಕೂ ಕೂಡಾ ಪರಿಪೂರ್ಣತೆ ಇಲ್ಲ. ಅದನ್ನು ಜನ ಕೂಡಾ ಸಂಪೂರ್ಣವಾಗಿ ನಂಬುವಂತಿಲ್ಲ.
ಇಂಥಾ ವಾತಾವರಣದಲ್ಲಿ ಭಾರತೀಯ ವಿಜ್ಞಾನಿಗಳು ನಡೆಸಿರುವ ಅನ್ವೇಷಣೆಗಳಿಂದಾಗಿ ನಿಖರವಾದ ಫಾರ್ಮುಲಾ ಸಿಕ್ಕಂತಾಗಿದೆ. ಸದ್ಯಕ್ಕೆ ಭಾರತ ಮತ್ತು ಜರ್ಮನಿಯ ವಿಜ್ಞಾನಿಗಳು ಅಂತಿಮವಾಗಿ ಈ ವಿದ್ಯಮಾನವನ್ನು ಎಲ್ಲರೂ ಒಪ್ಪುವಂತೆ ವಿವರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಅಧ್ಯಯನಗಳು ಸಾಬೀತುಪಡಿಸಿವೆ. ಭೂಮಿಯ ಗರ್ಭದ ಹೊರಗಿರುವ ಒಂದು ಮುಖ್ಯ ಬಿಂದುವಿನ ಮೇಲ್ಭಾಗ ಮತ್ತು ಮಧ್ಯಮ ಆವರಣದಲ್ಲಿ ಹಗುರವಾದ ವಸ್ತುವಿರುತ್ತದೆ. ಆ ವಸ್ತುವೇ ಈ ಎಲ್ಲ ಪಲ್ಲಟಗಳಿಗೂ ಕಾರಣವಾಗಿರಬಹುದೆಂದು ಸಂಶೋಧಕರು ನಾನಾ ಪ್ರಯೋಗಗಳಿಗೆ ಆಧಾರವಾಗಿಸಿಕೊಮಡಿದ್ದಾರೆ. ಈ ಫಾರ್ಮುಲಾ ವಿಶ್ವಾದ್ಯಂತ ಇದೀಗ ಬಹು ಮನ್ನಣೆ ಪಡೆದುಕೊಂಡಿದೆ.
ಹವಾಮಾನ ವೈಪರೀತ್ಯದ ಕಂಟಕ
ಇಡೀ ಜಗತ್ತೀಗ ಜಾಗತಿಕ ತಾಪಮಾನ ಏರಿಕೆಯಿಂದಾದ ಹವಾಮಾನ ವೈಪರೀತ್ಯಗಳಿಂದ ನಲುಗುತ್ತಿದೆ. ಹಾಗಂತ ಪ್ರಕೃತಿಯ ಇಂಥಾ ವೈಪರೀತ್ಯಗಳನ್ನು ಯಾರೂ ಕೂಡಾ ವಾತಾವರಣದ ಆಧಾರದಲ್ಲಿ ಅಂದಾಜಿಸಲು ಸಾಧ್ಯವೇ ಇಲ್ಲ. ಈ ಜಗತ್ತಿನ ವಿಜ್ಞಾನಿಗಳು ನಿರಂತರವಾಗಿ ನಡೆಸಿದ ಸಂಶೋಧನೆ, ಅಧ್ಯಯನಗಳಿಂದಾಗಿಯೇ ಅದೆಲ್ಲ ಜಾಹೀರಾಗಿದೆ. ಅದನ್ನು ಕಂಡುಕೊಳ್ಳುವಲ್ಲಿ ಭಾರತೀಯ ವಿಜ್ಞಾನಿಗಳ ಪಾತ್ರ ಹಿರಿದಾಗಿದೆ. ಇಂಥಾ ಹವಾಮಾನ ನಿಖರವಾಗಿ ಬದಲಾಗುತ್ತಾ ಸಾಗುತ್ತದೆ. ಈ ಬಗ್ಗೆ ಅದೆಷ್ಟೋ ವರ್ಷಗಳ ಕಾಲ ವಿಜ್ಞಾನಿಗಳು ನಡೆಸಿದ ಅಧ್ಯಯನಗಳ ಫಲವಾಗಿಯೇ ವಾತಾವರಣದಲ್ಲಿನ ಬದಲಾವಣೆಯ ಭಯಾನಕ ಮುಖವೊಂದು ಈ ಜಗತ್ತಿನೆದುರು ಅನಾವರಣಗೊಂಡಿದೆ.
ವಿಜ್ಞಾನಿಗಳು ಅಂಥಾ ಸಂಶೋಧನೆಗಳಿಂದ ಯಾವ ಎಚ್ಚರಿಕೆ ಕೊಟ್ಟಿದ್ದರೋ ಅದೆಲ್ಲವೂ ಈಗ ಸರಣಿಯೋಪಾದಿಯಲ್ಲಿ ನಿಜವಾಗುತ್ತಿದೆ. ಹಿಮಾಲಯದಲ್ಲಿನ ಹಿಮನದಿಗಳ ಕರಗುವುದನ್ನು ಆ ಹಿಂದೆಯೇ ಹೇಳಲಾಗಿತ್ತು. ಇದೀಗ ಅದು ನಡೆಯುತ್ತಿದೆ. ಈ ವಿದ್ಯಮಾನ ಹವಾಮಾನ ಬದಲಾವಣೆ ಅನ್ನೋದು ನಮ್ಮ ದೇಶಕ್ಕೆ ಕಂಟಕವಾಗುತ್ತಿರೋದರ ಮುನ್ಸೂಚನೆಯಂತೆ ಭಾಸವಾಗುತ್ತಿದೆ. ಒಂದು ಕಾಲದಲ್ಲಿ ಹೆಚ್ಚಿನ ಮರಗಳ ತಾಣವಾಗಿದ್ದ ನಗರಗಳು ಈಗ ಕಾಂಕ್ರೀಟು ಕಾಡುಗಳಾಗಿವೆ. ಹವಾಮಾನ ಬದಲಾವಣೆಯಿಂದ ಅಥವಾ ಮಾನವನ ಎಗ್ಗಿಲ್ಲದ ಚಟುವಟಿಕೆಗಳ ಕಾರಣದಿಂದಾಗಿ ಪ್ರಾಣಿಗಳ ಆವಾಸಸ್ಥಾನಗಳು ವೇಗವಾಗಿ ನಾಶವಾಗುತ್ತಿವೆ. ಇದೆಲ್ಲದರಿಂದಾಗಿ ಮಾನವ ಪ್ರಾಣಿ ಸಂಘರ್ಷಗಳಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ.
ಹಾಗಾದರೆ, ವಿಜ್ಞಾನಿಗಳು ಇಂಥಾ ಭಯಾನಕ ಪಲ್ಲಟಗಳನ್ನು ಕಂಡು ಹಿಡಿದು ಜನರಿಗೆ ಎಚ್ಚರಿಸೋ ಕೆಲಸವನ್ನು ಮಾತ್ರವೇ ಮಾಡುತ್ತಾರಾ? ಅಂದುಕೊಂಡರೆ, ಹವಾಮಾನ ಬದಲಾವಣೆಯ ಪರಿಣಾಮದಿಂದ ತಪ್ಪಿಸಿಕೊಳ್ಳೋದು ಹೇಗೆ, ಮುನಿದುಕೊಂಡಿರೋ ಪ್ರಕೃತಿಯನ್ನು ಶಾಂತವಾಗಿಸೋದು ಹೇಗೆಂಬ ಫಾರ್ಮುಲಾಗಳನ್ನೂ ಅವರು ಕಂಡುಕೊಂಡಿದ್ದಾರೆ. ಇದುವೇ ವಿಜ್ಞಾನದ ನಿಜವಾದ ಸಾರ್ಥಕತೆಯಾಗಿ ಗೋಚರಿಸುತ್ತದೆ. ಇನ್ನು ಈ ಜಗತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೀವ ಬಲಿ ಪಡೆಯುತ್ತಿರುವ ಕ್ಯಾನ್ಸರ್ ನಂಥಾ ಮಹಾ ಮಾರಿಯ ವಿರುದ್ಧವೂ ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳು ಸಮರ ಸಾರುತ್ತಾ ಬರುತ್ತಿದ್ದಾರೆ. ಹೇಗಾದರೂ ಮಾಡಿ ಇದಕ್ಕೆ ನಿಖರವಾದ ಮದ್ದು ಕಂಡು ಹಿಡಿಯಬೇಕು. ಎಂಬ ಪ್ರಯತ್ನ ಮೆಡಿಕಲ್ ಸೈನ್ಸ್ ಕಡೆಯಿಂದ ನಡೆಯುತ್ತಿದೆ. ಆ ಕಾಯಲೆಯ ರೂಪು ರೇಷೆ ಪತ್ತೆ ಹಚ್ಚುವಲ್ಲಿ ಈ ಕ್ಷಣಕ್ಕೂ ಭಾರತೀಯ ವಿಜ್ಞಾನಿಗಳು ನಿರತರಾಗಿದ್ದಾರೆ.
ಕ್ಯಾನ್ಸರ್ ವಿರುದ್ಧ ಸಮರ
ಕ್ಯಾನ್ಸರ್ ಜಗತ್ತಿನಲ್ಲಿ ಅತೀ ಹೆಚ್ಚು ಜೀವಗಳನ್ನು ನರಳಿಸಿ ಬಲಿ ಪಡೆಯುತ್ತಿರುವ ಮಹಾ ಮಾರಿ. ಪ್ರಪಂಚದಾದ್ಯಂತ ಒಟ್ಟಾರೆ ಆರು ಸಾವು ಸಂಭವಿಸಿದರೆ, ಅದರಲ್ಲೊಂದು ಕ್ಯಾನ್ಸರ್ ಬಲಿಯಾಗಿರುತ್ತದೆ. ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳ ವಿಜ್ಞಾನಿಗಳು ಕ್ಯಾನ್ಸರ್ ಅನ್ನು ಹಿಮ್ಮೆಟ್ಟಿಸಿ, ಔಷಧಿ ಪತ್ತೆಹಚ್ಚುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕ್ಯಾನ್ಸರ್ ವಿರುದ್ಧದ ಈ ಯುದ್ಧದಲ್ಲಿ ಭಾರತೀಯ ವಿಜ್ಞಾನಿಗಳು ವೀರ ಯೋಧರಂತೆ ಭಾಗಿಯಾಗಿದ್ದಾರೆ. ಒಟಾರೆ ಈ ವರೆಗೆ ಕ್ಯಾನ್ಸರ್ ಬಗ್ಗೆ ನಡೆದಿರುವ ಸಂಶೋಧನೆಗಳಲ್ಲಿ ಭಾರತದ ಕೊಡುಗೆ ಸಾಕಷ್ಟಿದೆ. ಇಂಥಾ ಅಧ್ಯಯನಗಳು ನೈಸರ್ಗಿಕ ಪರಿಹಾರಗಳನ್ನು ಕಂಡುಕೊಂಡಿವೆ. ಇಂಥಾ ಸಂಶೋಧನೆಗಳು ಚಿತ್ರವಿಚಿತ್ರವಾದ ಪರಿಹಾರಗಳ ಸಂಭಾವ್ಯತೆಯನ್ನು ನಿಖರವಾಗಿಯೇ ಸೂಚಿಸಿವೆ.
ಇನ್ನುಳಿದಂತೆ ಭಾರತದ ಐಟಿ ಕ್ಷೇತ್ರಕ್ಕೂ ಕೂಡಾ ಭಾರತೀಯ ವಿಜ್ಞಾನಿಗಳ ಕೊಡುಗೆ ಗಣನೀಯ ಪ್ರಮಾಣದಲ್ಲಿದೆ. ಭಾರತದ ಐಒಟಿ ತಂತ್ರಜ್ಞಾನದ ಕನಸನ್ನು ನನಸಾಗಿಸುವ ಭಾರತ ನಿರ್ಮಿತ ಟ್ರಾನ್ಸಿಸ್ಟರ್ ಒಂದು ಪ್ರಧಾನ ಪಾತ್ರ ವಹಿಸುತ್ತಿದೆ. ಚಂಡೀಘಡದಲ್ಲಿನ ಇಸ್ರೋ ಅರೆವಾಹಕ ಪ್ರಯೋಗಾಲಯದ ಸಹಭಾಗಿತ್ವದಲ್ಲಿ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಸಂಪೂರ್ಣ ಸ್ವದೇಶಿ ಬೈಪೋಲಾರ್ ಜಂಕ್ಷನ್ ಟ್ರಾನ್ಸಿಸ್ಟರ್ ಅನ್ನು ಸೃಷ್ಟಿಸಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನ್ಯಾನೋವಿದ್ಯುನ್ಮಾನ ಕೇಂದ್ರ ಸಾಧಿಸಿರುವ ಪ್ರಮುಖ ಸಾಧನೆ. ಇದೀಗ ಭಾರತದ್ದೇ ಟ್ರಾನ್ಸಿಸ್ಟರ್ ಸಿದ್ಧವಾಗಿರುವ ಕಾರಣದಿಂದಾಗಿ ಬಹುರಾಷ್ಟ್ರೀಯ ಅರೆವಾಹಕ ತಯಾರಕರ ಮೇಲೆ ಅವಲಂಬನೆ ತಪ್ಪಿದಂತಾಗಿದೆ. ಇದು ಮುಂದಿನ ದಿನಗಳ್ಲ್ಲಿ ಬಾಹ್ಯಾಕಾಶ ಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಸಾಧ್ಯತೆಗಳಿದ್ದಾವೆ.
ಕ್ಷಯದ ವಿರುದ್ಧ ಸಮರ
ಭಾರತದಲ್ಲಿಂದು ನಾನಾ ಆರೋಗ್ಯ ಸಮಸ್ಯೆಗಳು ವ್ಯಾಪಕವಾಗಿವೆ. ಕ್ಷಯ ರೋಗಕ್ಕೂ ಕೂಡಾ ಇಲ್ಲಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಲಿಕಯಾಗುತ್ತಿದ್ದಾರೆ. ವಿಶ್ವ ಕ್ಷಯರೋಗ ಪ್ರಮಾಣದಲ್ಲಿ ಭಾರvವೀಗ ಮುಂಚೂಣಿಯಲ್ಲಿದೆ. ವರ್ಷವೊಂದರಲ್ಲೇ ಕ್ಷಯರೋಗಕ್ಕೆ ನಮ್ಮ ದೇಶದಲ್ಲಿ ನಾಲಕ್ಕು ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆಂದರೆ, ಅದರ ತೀವ್ರತೆ ಎಂಥಾದ್ದೆಂದು ಯಾರಿಗಾದರೂ ಅರ್ಥವಾಗುತ್ತದೆ. ಇಂಥಾ ಮಾರಕ ರೋಗದ ಮೇಲೆ ನಮ್ಮ ವಿಜ್ಞಾನಿಗಳು ಸಮರ ಸಾರಿದ್ದಾರೆ. ಕ್ಷಯರೋಗ ಸೃಷ್ಟಿಸುವ ಬ್ಯಾಕ್ಟೀರಿಯಾದ ಔಷಧ ನಿರೋಧಕ ತಳಿಗಳು ವಿಜ್ಞಾನಿಗಳನ್ನು ಕಂಗೆಡಿಸಿವೆ. ಅದರ ಪ್ರತಿರೋಧವನ್ನು ಹಿಮ್ಮುಖಗೊಳಿಸುವ ವಿಧಾನಗಳನ್ನು ಅನ್ವೇಶಿಸಲು ನಮ್ಮ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಓ.ಬಿ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ಕೊಂದು ರೋಗಿಗಳನ್ನು ಬಚಾವು ಮಾಡುವ ಫಾರ್ಮುಲಾಕ್ಕಾಗಿ ಅನ್ವೇಷಣೆ ತೀವ್ರಗೊಂಡಿದೆ.
ಕೇವಲ ಬಾಹ್ಯಾಕಾಶ, ಕಾಯಿಲೆಗೆ ಔಷಧ ಮಾತ್ರವಲ್ಲದೇ ಸಾಮಾಜಿಕವಾಗಿ ತುರ್ತಿನ ಸಂಗತಿಗಳತ್ತಲೂ ನಮ್ಮ ವಿಜ್ಞಾನಿಗಳು ಗಮನ ಹರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ತ್ಯಾಜ್ಯವನ್ನು ನಿರ್ವಹಿಸುವುದು ದೊಡ್ಡ ಸವಾಲು. ಇದು ಜಲಮೂಲಗಳನ್ನು ಮಲಿನಗೊಳಿಸುತ್ತದೆ, ಪರಿಸರವನ್ನು ಹಾಳುಗೆಡವುತ್ತದೆ. ಪ್ರಾಕೃತಿಕ ಸೌಂದರ್ಯಕ್ಕೂ ಕಂಟಕವಾಗುತ್ತದೆ. ಇದರ ಬೆನ್ನಲ್ಲಿಯೇ ಈಗ ಎಲ್ಲೆಡೆಗಳಲ್ಲಿ ಇ ತ್ಯಾಜ್ಯ ಪ್ರಮಾಣ ಹೆಚ್ಚುತ್ತಿದೆ.ಂಥಾ ತ್ಯಾಜ್ಯಗಳನ್ನು ಮರುಬಳಕೆ ಮಾಡಲು ವಿಜ್ಞಾನಿಗಳು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇದರೊಂದಿಗೆ ವಿಷಕಾರಿ ಅಂಶ ವಾತಾವರಣ ಸೇರೋದನ್ನು ತಡೆಯಲು ಶ್ರಮಿಸುತ್ತಿದ್ದಾರೆ. ಇದಲ್ಲದೇ, ಜೈವಿಕ ತ್ಯಾಜ್ಯದ ನಿವಾರಣೆಗೆ ತಂತ್ರಜ್ಞಾನದ ಮೂಲಕ ಶಾಶ್ವತ ಪರಿಹಾರ ಹುಡುಕೋ ಪ್ರಯತ್ನವೂ ಚಾಲ್ತಿಯಲ್ಲಿದೆ.
ಹೀಗೆ ಇದೀಗ ಭಾರತೀಯ ಖಗೋಳ ಶಾಸ್ತ್ರಜ್ಞರು, ವಿಜ್ಞಾನಿಗಳು ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಹುಡುಕುತ್ತಾ ಹೋದರೆ ಭಾರತದಲ್ಲಿ ಪ್ರಾಚೀನ ಕಾಲದಲ್ಲಿಯೂ ಖಗೋಳ ವಿಜ್ಞಣಿಗಳಿದ್ದ ಅಂಶ ಪತ್ತೆಯಾಗುತ್ತದೆ. ಭಾರತದ ಪಾಚೀನ ವಿಜ್ಞಾನ ಖಗೊಳಶಾಸ್ತ್ರ, ರಸಾಯನಶಾಸ್ತ್ರ, ಆಯುರ್ವೇದ, ಸಸ್ಯ ವಿಜ್ಞಾನ, ಭೌತವಿಜ್ಞಾನ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹರಡಿಕೊಂಡಿದೆ. ಭಾರಧ್ವಾಜ ಮುನಿಗಳು ವೈಮಾನಿಕ ಶಾಸ್ತ್ರವನ್ನು ಬರೆದಿದ್ದಾರೆ ಎಂಬುದು ನಿಜ ಅನ್ನೋ ವಾದವಿದೆ. ಯಂತ್ರಗಳನ್ನೂ ನಿರ್ಮಾಣ ಮಾಡಿದ್ದರಾ ಅಥವಾ ಈಗಿನಂತೆ ಅದು ಪುಷ್ಪಕ ಎಂಬುದಕ್ಕೆ ನಿಖರ ಉತ್ತರಗಳಿಲ್ಲ. ಇಂಥಾ ವಾದದ ಬಗ್ಗೆ ಪರ ವಿರೋಧಗಳಿದ್ದರೂ ಆಧುನಿಕ ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು ವಿಶ್ವಾದ್ಯಂತ ಮನ್ನಣೆ ಪಡೆದಿರೋದಂತೂ ಸತ್ಯ!