-ಮಾರಣಾಂತಿಕ ಕಾಯಿಲೆಯ ಬಗ್ಗೆ ವ್ಯಾಪಕ ಅಪಪ್ರಚಾರ!
-ಬೇಸಿಗೆಯಲ್ಲೇ ಬಂದೆರಗೋ ಡೆಡ್ಲಿ ವೈರಸ್!
ರಾಜ್ಯಾದ್ಯಾಂತ ದಡಾರ-ರುಬೆಲ್ಲಾ ಎಂಬ ಗಂಭೀರ ರೋಗ ಹರಡಿಕೊಂಡಿದೆ ಇದರ ನಿರ್ಮೂಲನೆಗಾಗಿ ಸರ್ಕಾರ ಸಮರೋಪಾದಿಯಲ್ಲಿ ಉಚಿತವಾಗಿ ಲಸಿಕೆ ಹಾಕುವ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಔಷಧಿಯನ್ನು ಟೆಂಡರ್ ಮೂಲಕ ಖರೀದಿಸುವಂತೆ ಕೆಲವು ಸಂಸ್ಥೆಗಳಿಗೆ ಸರ್ಕಾರ ಆಹ್ವಾನ ನೀಡಿತ್ತು. ಟೆಂಡರ್ ಸಿಗದೆ ಇರುವ ಖಾಸಗಿ ಕಂಪನಿಗಳು ದಡಾರ-ರುಬೆಲ್ಲಾ ಲಸಿಕೆ ವಿರುದ್ಧ ಅಪಪ್ರಚಾರ ಸಾರಿದವು. ಇದರ ಪರಿಣಾಮವಾಗಿ ಉಡುಪಿ ಕುಂದಾಪುರ, ಭಟ್ಕಳ್, ಹುಬ್ಬಳಿ, ಧಾರವಾಡ ನಗರಗಳಲ್ಲಿ ಜನ ಭಯಭೀತರಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕತೊಡಗಿದರು.
ಅದರಲ್ಲೂ ಒಂದು ಜನಾಂಗದವರು ಈ ಲಸಿಕೆಯಿಂದ ಸಂತಾನ ಶಕ್ತಿ ತ್ತದೆಂಬಂಥಾ ಸುದ್ದಿಯನ್ನು ನಂಬಿ ಕೊಂಡಿದ್ದರು. ಕೇಂದ್ರ ಸರ್ಕಾರಂದು ಸಮುದಾಯವನ್ನು ದುರ್ಬಲಗೊಳಿಸಲು ಈ ಲಸಿಕೆ ಹಾಕುತ್ತಿದೆ. ದಯವಿಟ್ಟು ಯಾರು ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂಬಂತೆ ವಾಟ್ಸ್‌ಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಸಂದೇಶವನ್ನು ಹರಿಯ ಬಿಟ್ಟು ಜನ ಕಂಗಾಲಾಗುವಂತೆ ಮಾಡಿದವು. ಜನರು ಇದರಿಂದ ಗೊಂದಲಕ್ಕೀಡಾಗಿ ಲಸಿಕೆ ಹಾಕುವುದನ್ನೇ ತಿರಸ್ಕರಿಸಿದರು. ಇದೊಂದು ಮೂಢನಂಬಿಕೆ ಹೇಗೆ ಹರಡಿತು ಏನೋ ಗೊತ್ತಾಗಲಿಲ್ಲಾ ಆದರೂ ಜನ ಸರ್ಕಾರದ ಯೋಜನೆಯನ್ನು ಹಾಳು ಮಾಡುವುದಕ್ಕೆ ಇಂತಹ ಕುತಂತ್ರಗಳನ್ನು ಹೆಣೆಯೋದು ಸಾಮಾನ್ಯವಾಗಿದೆ.
ಅಪಪ್ರಚಾರದ ಭರಾಟೆ

ಸಾಮಾಜಿಕ ಜಾಲತಾಣಗಳನ್ನು ನಂಬುವುದರಲ್ಲಿ ಸದಾ ಮುಂದು ಸಾಮಾಜಿಕ ಕಳಕಳಿಯನ್ನು ಮರೆತವರು ರಾಜಕೀಯ ಹುನ್ನಾರದಿಂದ ಜನತೆಯ ಮನಶಾಂತಿಯನ್ನು ಕದಡುವುದು ಯಾವ ನ್ಯಾಯ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳು ಈ ಯೋಜನೆಯನ್ನು ಬೆಂಬಲಿಸಬೇಕಾಗಿತ್ತು, ದುರಾದೃಷ್ಟವೆಂದರೆ ವಿರೋಧ ಪಕ್ಷಗಳು ಇದರ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ರಾಜಕೀಯ ನಾಯಕರೆ ಕಂಡ ಕಂಡಲ್ಲಿ ಇದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ದಡಾರ್ ಲಸಿಕೆ ವಿರುದ್ಧ ಮಾತನಾಡಿ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಸಿದ್ಧರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹಾಳುಗೆಡುವುತ್ತಿದ್ದಾರೆ. ಸಾಮಾಜಿಕ ಜಾಲತಾನಗಳಲ್ಲಿ ಸಂಧೇಶಗಳನ್ನು ಬಿಡುವ ಮನಸ್ಥಿತಿಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅರಿಯಬೇಕು. ಒಂದು ಜನಾಂಗದ ಭಾವನೆಗಳಿಗೆ ದಕ್ಕೆ ತರುವುದು ಸಾಮಾಜಿಕ ಐಕ್ಯತೆಯನ್ನು ಹಾಳುಗೆಡುವುದು ತರವಲ್ಲ. ಈ ವದಂತಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಾದಂತ ಹರಡಿದೆ.
ನಮ್ಮ ರಾಜ್ಯದ ಜನರು ರುಬೆಲ್ಲಾ ಮತ್ತು ದಡಾರ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಜನರಲ್ಲಿ ತಪ್ಪು ಕಲ್ಪನೆಯನ್ನು ಹುಟ್ಟು ಹಾಕುತ್ತುರುವ ಸಾಮಾಜಿಕ ಜಾಲತಾನಗಳು ಇಂತಹ ಕೆಲಸವನ್ನು ಮಾಡಬಾರದು ಸಾಮಾಜಿಕ ಜಾಲತಾನಗಳು ಜನರಿಗೆ ಒಳ್ಳೆಯ ಸಂಧೆಶಗಳನ್ನು ರವಾನಿಸಬೇಕು. ಜನರಲ್ಲಿ ಅನಗತ್ಯ ಆತಂಕವನ್ನು ಹುಟ್ಟಿಸಬಾರದು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಪ್ರಜ್ಞಾವಂತರು ಬುದ್ಧಿವಂತರು ಆಗಿರುತ್ತಾರೆ. ಅವರು ಇಂತ ಸಂಧೇಶಗಳನ್ನು ರವಾನಿಸಬಾರದು ಅವುಗಳನ್ನು ಗ್ರೂಪ್‌ಗಳಲ್ಲಿ ಶೇರ್ ಮಾಡಿಕೊಳ್ಳಬಾರದು. ಸಾರ್ವಜನಿಕರಲ್ಲಿ ಒಳ್ಳೆಯ ಸಂಧೇಶಗಳನ್ನು ಬಿತ್ತುವುದಕ್ಕೆ ಇರುವ ಜಾಲತಾಣಗಳು ದಾರಿ ತಪ್ಪಿಸಬಾರದು. ದಡಾರ್-ರುಬೆಲ್ಲಾ ರೋಗಗಳಿಗೆ ಲಸಿಕೆ ಹಾಕಿಸುವುದನ್ನು ಸಾರ್ವಜನಿಕರು ಮರೆಯಬಾರದು ಇದರಿಂದ ಯಾವುದೆ ಅಪಾಯವಿಲ್ಲ. ಔಷದಿ ಕಂಪನಿಗಳು ಮಾಡುವ ಈ ಹುಣ್ಣಾರವನ್ನು ನಂಬಬೇಡಿ ರುಬೆಲ್ಲಾ-ದಡಾರ್ ರೋಗಗಳು ನಿಮ್ಮ ಮಕ್ಕಳಿಗೆ ಮಾರಕ ಕಾಯಿಲೆಗಳಾಗಿವೆ. ಇವುಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಸರ್ಕಾರ ಯೋಜನೆ ಜಾರಿಗೆ ತಂದಿದೆ ಎಂಬುದನ್ನು ಮರೆಯಬಾರದು.
ದಡಾರ ಅಂದ್ರೇನು?

ಹಾಗಾದರೆ, ಈ ದಡಾರ ಅಂದರೇನು? ಅದು ನಿಜಕ್ಕೂ ಅಷ್ಟೊಂದು ಮಾರಣಾಂತಿಕ ಕಾಯಿಲೆಯಾ? ನಮ್ಮ ದೇಶದಲ್ಲಿ ಈ ಕಾಯಿಲೆಯ ಸ್ಥಿತಿಗತಿ ಹೇಗಿದೆ? ಇಂಥಾ ಹತ್ತಾರು ಪ್ರಶ್ನೆಗಳು ಕಾಡುತ್ತವೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಡಾರ ಒಂದು ಸಾಂಕ್ರಾಮಿಕ ರೋಗ. ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣ. ಪಾರಾಮಿಕ್ಸೋ ಗುಂಪಿಗೆ ಸೇರಿದ ಮೋರ್ಬಿಲಿ ಎಂಬ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಅಂತ ಕರೆಯುತ್ತಾರೆ. ಈ ಕಾಯಿಲೆ ಬಹುವಾಗಿ ಮಕ್ಕಳನ್ನು ಕಾಡುತ್ತದೆ. ಅತ್ಯಂತ ವೇಗತರವಾದ ಸಾಂಕ್ರಾಮಿಕವಾಗಿ ಹರಡಿ ತೀವ್ರ ಸ್ವರೂಪ ಪಡೆದು ಕಾಡುತ್ತದೆ. ಆದರೆ ಇದು ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸೋದಿಲ್ಲ. ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಕಾಡುವ ಈ ರೋಗ ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಈ ಕಾಯಿಲೆಯ ರೋಗ ಲಕ್ಷಣಗಳನ್ನು ಮೊದಲೇ ಪತ್ತೆ ಮಾಡಿದರೆ ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮತ್ತೆ ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮು ತೀವ್ರವಾಗಿ ಉಲ್ಬಣಿಸುತ್ತದೆ. ಇದಾಗಿ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಐದು ದಿನಗಳ ಬಳಿಕ ಮಗುವಿನ ಮುಖ ಕುತ್ತಿಗೆಗಳ ಮೇಲೆ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ, ತೊಡೆ, ಕಾಲುಗಳ ವರೆಗೂ ಹರಡುತ್ತವೆ. ಇಂಥಾ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದರೆ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ. ಈ ಹಂತದಲ್ಲಿ ಹೆಚ್ಚುಕಮ್ಮಿಯಾದರೆ ಅನಾಹುತವಾದರೂ ಅಚ್ಚರಿಯೇನಿಲ್ಲ.
ಹರಡುವ ಪರಿ






