ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

shivakumar swamiji: ಭಿಕ್ಷೆ ಬೇಡಿ ಅಕ್ಷರ ಹಂಚಿದ ಅಪರೂಪದ ಸಂತ!

Majja Webdeskby Majja Webdesk
08/04/2025
in Lifestyle, Majja Special
Reading Time: 1 min read
shivakumar swamiji: ಭಿಕ್ಷೆ ಬೇಡಿ ಅಕ್ಷರ ಹಂಚಿದ ಅಪರೂಪದ ಸಂತ!

-ನಡೆದಾಡುವ ದೇವರ 118ನೇ ಜಯಂತಿ! 

-ಎರಡು ಶತಮಾನಗಳ ಅದ್ಭುತ ಅಚ್ಚರಿ!

‘ನಡೆದಾಡುವ ದೇವರು’, `ಜಗದ ಸಂತ’, `ತ್ರಿವಿಧ ದಾಸೋಹಿ’, ‘ಕರ್ನಾಟಕ ರತ’, ಎಂದೆಲ್ಲ ಭಕ್ತರು ಗೌರವಿಸುತ್ತಿದ್ದ ತುಮಕೂರು ಶ್ರೀಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ನಿರಂಜನ ಸ್ವರೂಪಿ ಡಾ.ಶ್ರೀಶಿವಕುಮಾರ ಸ್ವಾಮೀಜಿಯವರ ೧೧೮ನೇ ಜನ್ಮದಿನವನ್ನು ಕನ್ನಡ ನಾಡಿನಾದ್ಯಂತ ಭಕ್ತಿಭಾವ ದಿಂದ ಆಚರಿಸಲಾಗಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಿ ಜಗದ ಮಹಾಸಂತರನ್ನು ಸ್ಮರಿಸಿದ್ದಾರೆ. ಶ್ರೀಗಳು ೮೮ ವರ್ಷಗಳ ಸನ್ಯಾಸತ್ವವನ್ನು ಪೂರೈಸಿದ್ದರು. ಮಠಾಧ್ಯಕ್ಷರಾಗಿ ೭೭ ವರ್ಷ ಕಾರ್ಯನಿರ್ವಹಿಸಿದ್ದರು. ಈ ಎಲ್ಲವೂ ದಾಖ ಲೆಯೇ ಸರಿ. ಅನ್ನ, ಅರಿವು, ಅಕ್ಷರ, ಅಧ್ಯಾತ್ಮ ನಡೆದಾಡುವ ದೇವರ ೧೧೮ನೇ ಜನ್ಮಜಯಂತಿ ನಿಮಿತ್ತ ಜಗದ ಸಂತನ ಸ್ಮರಣೆ ಅನ್ನ, ಅರಿವು, ಅಕ್ಷರ, ಅಧ್ಯಾತ್ಮ ದಾಸೋಹಿ ಶ್ರೀಶಿವಕುಮಾರ ಸ್ವಾಮೀಜಿ ದಾಸೋಹಿ ಎಂದೇ ಶ್ರೀಶಿವಕುಮಾರ ಸ್ವಾಮೀಜಿ ಲೋಕವಿಖ್ಯಾತರಾಗಿದ್ದರು. ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದ ಗಂಗಮ್ಮ ಮತ್ತು ಪಟೇಲ್ ಹೊನ್ನೇಗೌಡ ದಂಪತಿಯ ೧೩ನೇ ಪುತ್ರರಾಗಿ ೧ನೇ ಏಪ್ರಿಲ್ ೧೯೦೭ ರಂದು ಜನಿಸಿದವರು ಶಿವಣ್ಣ.


ಹುಟ್ಟಿದೂರಿಗೆ ಸಮೀಪದ ಪಾಲನಹಳ್ಳಿ, ತುಮಕೂರು ತಾಲ್ಲೂಕಿನ ನಾಗವಲ್ಲಿಯಲ್ಲಿ ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ, ತುಮಕೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಹಾಗೂ ಬೆಂಗ ಳೂರಿನಲ್ಲಿ ಪದವಿ ಶಿಕ್ಷಣ (ಬಿಎ ಆನರ್ಸ್) ಪಡೆದರು. ಶಿವಣ್ಣ ಅವರಿಗೆ ೧೯೩೦ರಲ್ಲಿ ಸಿದ್ಧಗಂಗಾ ಮಠದ ಉದ್ಧಾನ ಶಿವಯೋಗಿಗಳು ಸನ್ಯಾಸ ದೀಕ್ಷೆ ನೀಡಿ ‘ಶಿವಕುಮಾರ ಸ್ವಾಮಿ’ ಎಂದು ನಾಮಕರಣ ಮಾಡಿ ದ್ದರು. ತಮ್ಮ ಉತ್ತರಾಧಿಕಾರಿ ಎಂದೂ ಘೋಷಿಸಿ ದ್ದರು. ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದ ಬಳಿಕ ೧೯೪೧ರಲ್ಲಿ ಪೀಠಾರೋಹಣ ಮಾಡಿದರು. ‘ಮಠದಿಂದ ಘಟ ಅಲ್ಲ, ಘಟದಿಂದ ಮಠ’ ಎನ್ನುವ ಮಾತಿಗೆ ಅನ್ವರ್ಥದಂತೆ ಜೀವನ ನಡೆಸಿದ ವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಅಡವೀಸ್ವಾಮಿಗಳ ಪರಂಪರೆಯ ಸಿದ್ಧಗಂಗೆ ಮಠಕ್ಕೆ ತಮ್ಮ ತಪಃಶಕ್ತಿ ಧಾರೆ ಎರೆದವರು ಉದ್ಧಾನ ಶಿವಯೋಗಿಗಳು. ಅವರು ಕಟ್ಟಿದ ಮಹಾಮನೆಯಲ್ಲಿ ಬೆಳಕಿನ ದೀವಿಗೆ ಹಚ್ಚಿ ನಾಡಿನ ಎಲ್ಲೆಡೆಯಿಂದ ಜಾತಿಮತದ ತಾರತಮ್ಯ ಇಲ್ಲದೆ ಮಕ್ಕಳನ್ನು ಕರೆತಂದು ಓದಲು ಕೂರಿಸಿ, ಬದುಕು ರೂಪಿಸಿ ಕೊಳ್ಳಲು ಮಾರ್ಗದರ್ಶನ ಮಾಡಿದವರು ಶಿವ ಕುಮಾರ ಸ್ವಾಮೀಜಿ.
ಶರಣರು ಜನಪ್ರಿಯಗೊಳಿಸಿದ ದಾಸೋಹ ತತ್ವಕ್ಕೆ ಅರಿವು, ಅಧ್ಯಾತ್ಮ, ಅಕ್ಷರವನ್ನೂ ಸೇರಿಸಿದ ಧನ್ಯಜೀವ ಅವರದು. ಮಠದಲ್ಲಿ ವಿದ್ಯೆ ಕಲಿತು ಬದುಕು ಕಟ್ಟಿಕೊಂಡವರ ಸಂಖ್ಯೆಯನ್ನು ಲೆಕ್ಕ ಇಟ್ಟವರಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಬಸವ ಜಯಂತಿ ಯನ್ನು ಹಳ್ಳಿಹಳ್ಳಿಗಳಿಗಳಿಗೆ ಕೊಂಡೊಯ್ದ ಕೀರ್ತಿ ಶಿವಕುಮಾರ ಶ್ರೀಗಳದ್ದು. ಆ ಮೂಲಕ ಜಾತಿಯ ಜಾಡ್ಯದಿಂದ ನಲುಗಿದ್ದ ಹಳ್ಳಿಗಳಲ್ಲಿ ಸಮತೆಯ ದೀಪ ಬೆಳಗಿಸಿದರು. ೧೯೭೯ರಲ್ಲಿ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಗಳು ಶ್ರೀಶಿವಕುಮಾರ ಸ್ವಾಮೀಜಿ ಅವರ ನುಡಿಮುತ್ತುಗಳು ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯ ವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥ ನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ. ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗ ಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗ ಬೇಕಾದರೆ ಕಾಲವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು. ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕುತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿ ಕೊಂಡಿದ್ದೇವೆ.


ಸ್ವಾಮೀಜಿ ಸಾರ್ಥಕ ಬದುಕಿನ ಮೈಲಿಗಲ್ಲು ೧೯೦೭ರ ಏಪ್ರಿಲ್ ೧ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿ ಜನನ. ೧೯೧೩-೨೭: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಮೆಟ್ರಿಕ್ಯುಲೇಶನ್ ತೇರ್ಗಡೆ. ೧೯೨೭-೩೦: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ. ೧೯೩೦ರ ಮಾ.೩ರಂದು ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ. ೧೯೪೧ರ ಜ.೧೧ರಂದು ಉದ್ಧಾನಶಿವಯೋಗಿ ಗಳು ಲಿಂಗೈಕ್ಯ, ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ. ೧೯೬೩: ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಶ್ರೀಮಠದಲ್ಲಿ ಪ್ರಾರಂಭ, ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ. ೧೯೬೫: ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಸ್ವೀಕಾರ. ೧೯೭೦: ಡಿ.೨೭ರಂದು ಬೆಂಗಳೂರಿನಲ್ಲಿ ನಡೆದ ೪೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ.
೧೯೭೮-೭೯: ಗ್ರಾಮಾಂತರ ಬಸವ ಜಯಂತಿ ಯೋಜನೆ ಪ್ರಾರಂ. ೧೯೮೮: ಸಿದ್ಧಲಿಂಗ ಸ್ವಾಮೀಜಿಯವರನ್ನು ಉತ್ತರಾಧಿಕಾರಿಯಾಗಿ ನೇಮಕ. ೧೯೯೭: ಶ್ರೀಗಳವರ ಪೀಠಾರೋಹಣ, ವಜ್ರಮಹೋತ್ಸವ, ಸಂಸ್ಕೃತ ಕಾಲೇಜಿನ ಅಮೃತ ಮಹೋತ್ಸವ, ವಿದ್ಯಾರ್ಥಿ ನಿಲಯ , ಪ್ರಸಾದ ನಿಲಯ ಉದ್ಘಾಟನೆ. ೨೦೦೫: ೯೮ನೇ ಜನ್ಮದಿನೋತ್ಸವ, ಪಟ್ಟಾಧಿಕಾರದ ಅಮೃತ ಮಹೋತ್ಸವ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ. ೨೦೦೯: ಶತಮಾನೋತ್ಸವ ಉದ್ಘಾಟನೆ, ಕೃಷಿ ಸಮಾವೇಶ, ಮಹಿಳಾ ಸಾಹಿತ್ಯ ಸಮಾವೇಶ, ಧಾರ್ಮಿಕ ಸಮಾವೇಶ. ೨೦೧೧: ಸಿದ್ಧಲಿಂಗ ಶ್ರೀಗಳಿಗೆ ಮಠದ ಅಧ್ಯಕ್ಷ ಪದವಿಯ ವರ್ಗಾವಣೆ ಅಧಿಕಾರ ಹಸ್ತಾಂತರ. ೨೦೧೨: ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ. ೨೦೧೩: ಪಟ್ಟಾಧಿಕಾರವಾಗಿ ೮೦ ವರ್ಷದ ಅಮೃತ ಮಹೋತ್ಸವ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. ೨೦೧೫ರ ಜುಲೈ ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಂಘಟಿಸಿದರು. ಕಾರ್ಯಕ್ರಮದಲ್ಲಿ ಭಾಷಣ ಅಷ್ಟೇ ಅಲ್ಲ ಕಾವ್ಯವಾಚನವೂ ಇರಬೇಕು ಎಂದು ತೀರ್ಮಾನಿಸಿದರು.


ರಾತ್ರಿ ಬಸವೇಶ್ವ ರರ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇದರಿಂದ ತತ್ವಬೋಧನೆಯ ಜೊತೆಯಲ್ಲಿಯೇ ಜನರಲ್ಲಿ ಸಾಮಾಜಿಕ ಪ್ರಜ್ಞೆಯೂ ಬೆಳೆಯಿತು. ಶ್ರೀಗಳ ಬದುಕಿನ ಪ್ರಮುಖ ಸಾಧನೆಯು ಘಟ್ಟವಾಗಿಯೂ ಈ ಗ್ರಾಮಾಂತರ ಬಸವ ಜಯಂತಿ ಕಾರ್ಯ ಕ್ರಮವನ್ನು ಕಾಣಬಹುದು. ಅಂದು ಶ್ರೀಗಳು ಹಾಕಿದ ಬುನಾದಿ ಇಂದಿಗೂ ಮುಂದು ವರಿದಿದೆ. ಅಕ್ಷರ ಜ್ಞಾನದ ಶಿಕ್ಷಣವಷ್ಟೇ ಅಲ್ಲ ಬದುಕಿಗೆ ಅಗತ್ಯವಾದ ಶಿಕ್ಷಣವನ್ನೂ ಸ್ವಾಮೀಜಿ ಮಕ್ಕಳಿಗೆ ಕಲಿಸಿದ್ದಾರೆ. ಮಠದ ಹೊಲ ತೋಟಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನೂ ತೊಡಗಿಸುವ ಮೂಲಕ ಅವರಿಗೆ ಕಾಯಕ ಮತ್ತು ಶ್ರಮ ಸಂಸ್ಕೃತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು. ಉದ್ದಾನ ಶಿವಯೋಗಿಗಳ ಕಾಲದಲ್ಲಿ ಅಂದರೆ, ೧೯೪೦-೪೧ರಲ್ಲಿ ಮಠದಲ್ಲಿ ೬೦ ವಿದ್ಯಾರ್ಥಿಗಳು ಮಾತ್ರ ಇದ್ದರು. ಈ ಸಂಖ್ಯೆಯನ್ನು ಸ್ವಾಮೀಜಿ ಹೆಚ್ಚಿಸುತ್ತಲೇ ಹೋದರು.
೧೯೭೯ರಲ್ಲಿ ಮಠಕ್ಕೆ ಸಂಜೆಯ ಪ್ರಾರ್ಥನೆ ವೇಳೆಗೆ ಬಂದಿದ್ದ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ, ‘ಒಂದೇ ಮಠದ ಆಶ್ರಯದಲ್ಲಿ ಉಚಿತ ಊಟ, ವಸತಿ ಪಡೆದು ಇಷ್ಟೊಂದು ಮಕ್ಕಳು ಓದುತ್ತಿರುವುದನ್ನು ನಾನು ಇಲ್ಲಿಯೇ ಮೊದಲು ಕಂಡಿದ್ದು’ ಎಂದು ಉದ್ಗರಿ ಸಿದ್ದರು. ಆಗ ೩೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಸಾಮಾನ್ಯ ವ್ಯಕ್ತಿಯಿಂದ ಮೊದಲ್ಗೊಂಡು ನಡೆದಾಡುವ ದೇವರ ೧೧೮ನೇ ಜನ್ಮಜಯಂತಿ ನಿಮಿತ್ತ ಜಗದ ಸಂತನ ಸ್ಮರಣೆ ೭(೨ನೇ ಪುಟದಿಂದ) ಪ್ರಧಾನಮಂತ್ರಿವರೆಗೆ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಕೀರ್ತಿ ಈ ಮಹಾಸಂತರದ್ದು. ಜ್ಞಾನ, ಶಿಕ್ಷಣ, ಸಮಾಜಸೇವೆ, ಧಾರ್ಮಿಕ ಮತ್ತು ಅಧ್ಯಾತ್ಮಿಕ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದ್ದ ಶ್ರೀಗಳು ೨೧ನೇ ಜನವರಿ ೨೦೧೯ರ ಪುಷ್ಯ ಶುದ್ಧ ಹುಣ್ಣಿಮೆಯ ದಿನ, ತಮ್ಮ ನೂರಾ ಹನ್ನೊಂದನೆಯ ವಯಸ್ಸಿನಲ್ಲಿ, ಶಿವ ಸಾಯುಜ್ಯ ಹೊಂದಿದರು. ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸ್ವಾಮೀಜಿಯವರ ಅಗಲಿಕೆ ಭಕ್ತ ಸಮೂಹವನ್ನು ಶೋಕ ಸಾಗರದಲ್ಲಿ ಮುಳುಗಿ ಸಿದ್ದರೂ ಸ್ವಾಮೀಜಿ ತೋರಿದ ಬೆಳಕು ಸದಾ ಜೊತೆ ಇರುತ್ತದೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನಡೆದಾಡುವ ದೇವರ ೧೧೮ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣವಿದೆ.

*

ಭಕ್ತಾದಿಗಳು ಶ್ರೀಗಳ ಹುಟ್ಟು ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಿದ್ದಾರೆ ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕ ರ್ಯಗಳು ಸಾಂಗೋಪಾಂಗವಾಗಿ ನೆರವೇರಿದವು ಮುಂಜಾನೆಯೇ ಶ್ರೀಗಳ ಗದ್ದಿಗೆಗೆ ರುದ್ರಾಭಿಷೇಕ, ಪುಷ್ಪ ವೃಷ್ಟಿ ಮತ್ತು ಅರ್ಚಕರಿಂದ ಮಂತ್ರ ಪಠಣ ಕಾರ್ಯಗಳು ನಡೆದಿದೆ. ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡರು. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ಜರುಗಿದೆ ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ನೆರವೇರಿಸಿದರು. ಇಂದು ಸುಮಾರು ೨ ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿ ಶ್ರೀಗಳನ್ನು ಸ್ಮರಿಸಿ ಭಕ್ತಿಭಾವ ಸಮರ್ಪಿಸಿದರು. ಭಕ್ತಾದಿಗಳಿಗೆ ವಿವಿಧೆಡೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿಸಲಾಗಿತ್ತು.

Tags: #freeeducation#inspiration#karnataka#shivakumaraswamiji#siddagangamata

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
nityananda new controversy: ಅಮೇಜಾನ್ ಕಾಡಿಗೆ ಕಣ್ಣಿಟ್ಟ ನಿತ್ಯಾನಂದ!

nityananda new controversy: ಅಮೇಜಾನ್ ಕಾಡಿಗೆ ಕಣ್ಣಿಟ್ಟ ನಿತ್ಯಾನಂದ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.