-ಚೀನಾ ಟಿಬೆಟನ್ನು ನುಂಗಿದ್ದೂ ಹೀಗೆಯೇ!
-ಕೊರೋನಾ ಜನಕ ಚೀನಾ ಡೇಂಜರಸ್ ದೇಶ!
ದೋಕ್ಲಾಮ್ ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು ತನ್ನ ಭಾಗದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣವನ್ನು ತಡೆಗಟ್ಟಲು, ಕಳೆದ ಜೂನ್ ೨೬ರಂದು, ಭಾರತದ ಸೇನಾತುಕಡಿಗಳು ಸಿಕ್ಕಿಂ ವಿಭಾಗದಲ್ಲಿರುವ ಚೀನಾ ಗಡಿಯನ್ನು ದಾಟಿ ಮುನ್ನುಗ್ಗುತ್ತಿದ್ದ ಸಮಯದಲ್ಲೇ, ಭಾರತದ ಪ್ರಧಾನಿ ಮೋದಿಯವರು ಅಮೆರಿಕದ ವಾಷಿಂಗ್‌ಟನ್-ಡಿಸಿಯಲ್ಲಿ ಡೋನಾಲ್ಡ್ ಟ್ರಂಪ್ ಆಡಳಿತದ ಅಮೆರಿಕ ಫರ್ಸ್ಟ್ (ಅಮೆರಿಕವೇ ಮೊದಲು) ನೀತಿಯ ಬಗ್ಗೆ ಭಾರತಕ್ಕಿರುವ ಭಿನ್ನಾಭಿಪ್ರಾಯಗಳನ್ನು ಮರೆಮಾಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಮೋದಿ ಮತ್ತವರ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮಾತ್ರವಲ್ಲದೆ ಭಾರತದ ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳೂ ಸಹ ಭಾರತ ಮತ್ತು ಅಮೆರಿಕದ ವ್ಯೂಹಾತ್ಮಕ ಮೈತ್ರಿಯ ರೇಟಿಂಗ್ ಕೆಳಗಿಳಿಯಬಹುದಾದ ಸಾಧ್ಯತೆಯ ಬಗ್ಗೆ ಆತಂಕಗೊಂಡಿದ್ದವು.











