ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

save forest: ಕಾಡು ಉಳಿಸದಿದ್ದರೆ ಕಾಡಲಿವೆ ಭೀಕರ ದಿನಗಳು!

Majja Webdeskby Majja Webdesk
29/04/2025
in Majja Special
Reading Time: 1 min read
save forest: ಕಾಡು ಉಳಿಸದಿದ್ದರೆ ಕಾಡಲಿವೆ ಭೀಕರ ದಿನಗಳು!

-ಕಾಸು ಕೊಟ್ಟರೂ ಸಿಗೋದಿಲ್ಲ ಹನಿ ನೀರು!

-ಪ್ರಕೃತಿ ಏಟು ಕೊಟ್ಟರೆ ತಡೆದುಕೊಳ್ಳೋದುಂಟೇ?  

 

ಇದು ಪ್ರಕೃತಿಯ ಏಟು… ಬೇಸಿಗೆ ಸಂದರ್ಭದಲ್ಲಿ ದಿನದಲ್ಲಿ ಒಂದಷ್ಟು ಹೊತ್ತು ಕರೆಂಟು ಹೋದರೆ ನಾವೆಲ್ಲ ಕಂಗಾಲಾಗಿ ರೊಚ್ಚಿಗೆದ್ದು ಬಿಡುತ್ತೇವೆ. ಆಳೋ ಸರ್ಕಾರಗಳಿಗೆ, ಬೆಸ್ಕಾಂಗೆ ದಂಡಿ ದಂಡಿ ಶಾಪ ಹಾಕುತ್ತಿದ್ದೇವೆ. ಈ ಹಾಹಾಕಾರದ ನಡುವೆಯೇ ತಜ್ಞರು ರಾಜ್ಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂಬ ವಾಸ್ತವವನ್ನು, ಈ ಬಾರಿ ಮಳೆ ಗಣನೀಯವಾಗಿ ಕಡಿಮೆಯಾಗಿರೋದರಿಂದಾಗಿ ಜಲಾಶಗಳೆಲ್ಲ ಖಾಲಿಯಾಗಿರುವ ಬಗ್ಗೆ ಅಂಕಿ ಅಂಶ ನೀಡಿದರೂ ಅದನ್ನು ಕೇಳಿಸಿಕೊಳ್ಳೋ ಸ್ಥಿತಿಯಲ್ಲಿ ನಾವಿಲ್ಲ. ನಮಗೀಗ ದಿನವಹೀ ಕರೆಂಟು ಬೇಕು. ಯಾವುದು ಹೇಗಾದರೂ ಹಾಳು ಬಿದ್ದು ಹೋದರೂ ಪರವಾಗಿಲ್ಲ ಕರೆಂಟು ಮಾತ್ರ ಬೇಕೇಬೇಕೆಂಬ ರಚ್ಚೆ ಹಿಡಿದ ಅಹಮ್ಮಿಕೆ ಬೆರೆತ ಮನಸ್ಥಿತಿ ನಮ್ಮದು. ಆದರಿದು ಪ್ರಕೃತಿ ನಮ್ಮ ವಿಕೃತಿಗಳಿಗೆ ಕೊಟ್ಟಿರುವಂಥಾ ಸಾಂದರ್ಭಿಕ ಏಟೆಂಬುದನ್ನು ನಾವೆಲ್ಲ ಅರಿವಾಗಿಸಿಕೊಳ್ಳದೇ ಹೋದರೆ ಖಂಡಿತವಾಗಿಯೂ ಅತ್ಯಂತ ದುರಂತಕರ ಸನ್ನಿವೇಶಗಳನ್ನು ಕಾಣಬೇಕಾದದ್ದು ನಿಶ್ಚಿತ.

ಈ ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ ಅವನ ಸುತ್ತ ಮುತ್ತ ಪ್ರಾಣಿ ಪಕ್ಷ, ಕಾಡು ಮರ ಕ್ರೀಮಿ ಕೀಟ ನದಿ, ಹಳ್ಳ, ಸರೋವರ, ಸಮುದ್ರ ಸಾಗರ ಗುಡ್ಡ- ಬೆಟ್ಡ, ಗಾಳಿ ಮಳೆ ನೀರು ಮಣ್ಣು ಕಲ್ಲು , ಆಕಾಶ ಬೆಳಕು ಇವೆಲ್ಲವುಗಳು ಇವೆ. ಇವುಗಳಲ್ಲವನ್ನು ಒಳಗೊಂಡ ಸಮೂಹವೇ ಪರಿಸರ ಎನ್ನಬಹುದು. ನಮ್ಮ ಸುತ್ತಮುತ್ತಲೂ ಇರುವ ಪರಿಸರದಲ್ಲಿ ಹರಿಯುವ ನೀರು, ಹಣ್ಣು ಹಂಪಲು ನೀಡುವ ಸಸ್ಯಗಳನ್ನು ವಾಸಿಸಲು ಇರುವ ನೆಲ ಗಿಡ- ಮರಗಳು ಬೆಳೆಯುವ ಹಣ್ಣು ಇವುಗಳೆಲ್ಲ ಇರುವುದು ನಮ್ಮ ಬಳಕೆಗಾಗಿ, ಈ ಎಲ್ಲವನ್ನೂ ಚೆನ್ನಾಗಿಟ್ಟುಕೊಳ್ಳಬೇಕಾದುದು ನಮ್ಮ ಕರ್ತವ್ಯ. ಸಸ್ಯಗಳು ಕೀಟಗಳಿಗೆ ಆಹಾರ ಕೀಟಗಳು ಕಪ್ಪೆಗೆ ಆಹಾರ ಕಪ್ಪೆಗಳು ಹಾವುಗಳಿಗೆ ಆಹಾರ ಹಾವುಗಳು ಹದ್ದುಗಳಿಗೆ ಆಹಾರ ಹೀಗೆ ಪರಿಸರದಲ್ಲಿ ಆಹಾರ ಸರಪಳಿ ಇದೆ. ಪ್ರಕ್ಥತಿಯ ಜೀವಸರಪಳಿಯಲ್ಲಿ ಲಕ್ಕ ಲಕ್ಷ ಜೀವಿಗಳಿರುವಂತೆ ಮನುಷ್ಯನೂ ಒಂದು ಜೀವಿ ಲಕ್ಷೊಪಲಕ್ಷ ಜೀವಿಗಳಂತೆ ಮಾನವಜೀವಿಯೂ ಪ್ರಕೃತಿ ನಿಯಮಗಳನ್ನು ಪಾಲಿಸಿದ್ದರೆ ಬಹುಶಃ ಯಾವದೇ ಸಮಸ್ಯೆಗಳು ಬರುತ್ತಿರಲಿಲ್ಲ ಆದರೆ ಬುದ್ದೀ ಜೀವಿಯಾದ ಮನುಷ್ಯ ಜೀವಿಯು ಪರಿಸರವನ್ನು ತನಗೆ ಸೂಕ್ತವಾದ ರೀತಿಯಲ್ಲಿ ಪರಿವರ್ತನೆ ಮಾಡುತ್ತಾ ಬಂದಿದ್ದಾನೆ.
ನಮ್ಮ ಈ ಭೂಮಿ ಹುಟ್ಟಿರುವುದು ಸರಿ ಸುಮಾರು ಐನೂರು ಕೋಟಿ ವರ್ಷಗಳ ಹಿಂದೆ. ಮಾನವಜೀವಿ ಆಸ್ತಿತ್ವಕ್ಕೆ ಬಂದದ್ದು ಇತ್ತೀಚಿನ ಸುಮಾರು ಇಪ್ಪತ್ತು ಲಕ್ಷ ವರ್ಷಗಳ ಹಿಂದೆ ಇಂದು ಜಗತ್ತಿನ ಮಾನವರ ಸಂಖ್ಯೆ ಎಂಟುನೂರುವ ಕೋಟಿ ಇರಬಹುದು ಹೀಗೆ ಜ್ವರ ಏರಿದಂತೆ ಏರುತ್ತಿರುವ ಜನಕೋಟಿಗಳಿಗೆ ಅಗತ್ಯ ವಸ್ತುಗಳು ಹಾಗೂ ಇತರ ಪದಾರ್ಥಗಳ ಪೂರೈಕೆಗಗಿ ಕಾಡನ್ನು ಕಡಿದು ಕೃಷಿಗೆ ಬಳಸಲಾಗುತ್ತಿದೆ. ಕಟ್ಟಡಗಳನ್ನು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವಿಜ್ಞಾನ ಹಾಗೂ ತಾಂತ್ರಿಕ ಅವಿಷ್ಕಾರಗಳಿಂದಾಗಿ ಗಣಿಗಳು, ಕಾರ್ಖಾನೆಗಳು, ಗಿರಣಿಗಳು ಕೃತಕವಾದ ಬೆಳಕು ನಿಯಂತ್ರಣ ವ್ಯವಸ್ಥೆ ಧೂಳು ತುಂಬಿದ ಗಾಳಿ, ಕೊರತೆ ನೀರು ದಿನೆ ದಿನೆ ಹೆಚ್ಚಾಗುತ್ತಿವೆ. ಇದರಿಂದಾಗಿ ವಾಯುಮಾಲಿನ್ಯ, ಜಲಾಮಾಲಿನ್ಯ ಶಬ್ದ ಮಾಲಿನ್ಯ, ವಿಕಿರಣ ಮಾಲಿನ್ಯಕ್ಕೆ ದಾರಿಯಾಗಿದೆ. ೧೯೮೪ ರಲ್ಲಿ ಮಧ್ಯಪ್ರದೇಶದ ಭೂಪಾಲನಲ್ಲಿ ಸಂಭವಿಸದ ವಿಷಾನಿಲ ಸೋರಿಕೆಯಿಂದಾ ಸಾವಿರಾರು ಜನರು ಮರಣಹೊಂದಿದ ಘಟನೆ ನಮ್ಮ ಕಣ್ಣ ಮುಂದಿದೆ. ಲಕ್ಷಾಂತರ ಕಾರ್ಖಾನೆಗಳಿಂದ ಪ್ರತಿನಿತ್ಯ ಹೊರಬರುವ ವಿಷಪೂರಿತ ಮಲೀನ ನೀರು ನದಿ, ಸಾಗರ ಸೇರಿ ಅಸಂಖ್ಯಾತ ಜಲರಾಶಿಯ ಮಾರಣಹೋಮಕ್ಕೆ ಕಾರಣವಾಗಿದೆ.


ನಮಗೆ ಶುದ್ಧಗಾಳಿಬೇಕು. ಶುಚಿಯಾದ ನೀರುಬೇಕು. ಉರುವಲಿಗಾಗಿ ಕಟ್ಟಿಗೆ, ಬೇಕು. ನಿಸರ್ಗದ ಮೇಲೆ ಮಾನವ ಇಂದು ಸತತವಾಗಿ ದಾಳಿ ಮಾಡುತ್ತಿದ್ದಾನೆ. ಗ್ರಾಮೀಣ ಪ್ರದೇಶಲ್ಲಿ ವಾಸಿಸುವ ಲಕ್ಷಾಂತರ ಜನಕ್ಕೆ ಕುಡಿಯುವ ಶುದ್ಧ ನೀರು ಇಲ್ಲ. ಒಳ್ಳೇಯ ಶೌಚಾಲಯ ವ್ಯವಸ್ಥೆ ಇಲ್ಲ. ಅರಣ್ಯ ಮಾಯವಾಗಿ ಮಳೆಯು ಕಡಿಮೆಯಾಗಿ ನದಿ, ಕೆರೆ ಜಲಾಶಯಗಳು ಹೂಳು ತುಂಬಿ ಹೊಸಹೊಸ ರೋಗರುಜೀನಗಳು ಜನರಲ್ಲಿ ಮನೆ ಮಾಡುತ್ತಿವೆ. ಯಾಕೇ ಹೀಗಾಯಿತು. ಕಾರಣ ಪರಿಸರ ನಾಶ. ಇಂಧನಗಳ ಬಳಕೆಯಿಂದ ಉತ್ಪತ್ತಿಯಾದ ಇಂಗಾಲಾಮ್ಲ ಮತ್ತು ಇಂಗಾಲದ ಮೋನಾಕ್ಸೈಡ ವಾಯು ಮಲಿನತೆಗೆ ಕಾರಣವಾಗಿದೆ. ವಾಯು ಮಲಿನತೆಯಿಂದಾಗಿ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಉಂಟಾಗುತ್ತವೆ. ಇದನ್ನು ತಡೆಯಲು ಸಾಕಷ್ಟು ಪ್ರಮಾಣದ ಮರಗಿಡಗಳನ್ನು ಬೆಳೆಸಬೇಕು.
ನೀರು ಜೀವನಾಧಾರ, ನೀರು ಪರಿಸರದ ಒಂದು ಮುಖ್ಯ ಘಟಕ ಶಕ್ತಿ ಉತ್ಪಾದನೆಗೆ ಸಾಗಾಣಿಕೆ ಬಾಯಾರಿಕೆ ನೀಗಲಷ್ಟೆ ಅಲ್ಲದೇ ಕೃಷಿ ಕೈಗಾರಿಕೋದ್ಯಮಗಳಿಗೆ ಬೇಕು. ನೀರೂ ಅಮೂಲ್ಯ ಸಂಪನ್ಮೂಲ ಕಾರ್ಖಾನೆಗಳಿಂದ ಹೊರಬರುವ ವ್ಯರ್ಥ ವಸ್ತುಗಳು ಬಗರಗಳ ಮನೆಗಳಿಂದ ಮಲಮೂತ್ರಗಳನ್ನೌಳಗೊಂಡ ಹೇಸಿಗೆ ನೀರು ಜಲ ಮಾಲಿನ್ಯಕ್ಕೆ ಮೂಲ ಕಾರಣ ಕಾಮಾಲೆ, ಕಾಲರಾ ಅತೀಬೇಧಿ ಟೈಪ್ಯಾಡ ಮುಂತಾದ ಹತ್ತು ಹಲವು ಕಾಯಿಲೆಗಳಿಗೆ ಮಲೀನ ನೀರೆ ಕಾರಣ. ನೀರಿನ ಬಳಕೆಯ ಮೇಲೆ ಹತೋಟಿ ತರಬೇಕಾದುದು ಅತ್ಯವಶ್ಯಕ ಜಲಕ್ಷಾಮ ಉಂಟಾಗುವ ಕಾಲ ಸನ್ನಿಹಿತವಾಗುತ್ತಿದೆಯೋ ಏನೋ ಎನ್ನುಂತಾಗಿದೆ. ಅಗತ್ಯವಿರುವಷ್ಟು ಮಾತ್ರ ನೀರನ್ನು ಬಳಸಬೇಕು.
ಕೃಷಿ ಭೂಮಿಗಳಲ್ಲಿ ಇಂದು ನಾವು ಹೇರಳವಾಗಿ ಕೋಟನಾಶಕಗಳು ಶೀಲೀಂದ್ರ ನಾಶಕಗಳು ಹಾಗೂ ಕಳೆನಾಶಕಗಳನ್ನು ರಸಗೊಬ್ಬರವನ್ನು ವೀಪರೀತವಾಗಿ ಬಳಸುತ್ತಿದ್ದೇವೆ. ಇಲಿ, ಜಿರಳೆ ಮೊದಲಾದವುಗಳ ಹತೋಟಿಗಾಗಿ ಪಾಷಾಣ ಬಳಸುತ್ತಿದ್ದೇವೆ. ಇಂತಹ ಕೀಟನಾಶಗಳು ಸೇರುವುದು ನಮ್ಮ ದೇಹವನ್ನೇ ಪಿಡುಗು ನಾಶಕಗಳ ಬಳಕೆ ಕಡಿಮೆ ಮಾಡಿ ಆ ಮೂಲಕ ಪರಿಸರ ಮಲೀನತೆ ತಡೆಯಬಹುದು. ಪಾರ್ಥೇನಿಯಂ ಮುಪಟೇರಿಯಂ. ಅಂತರಗಂಗೆ ವಡವಾಟಿ ಹೀಗೆ ಎಲ್ಲೆಡೆ ಕಾಣಿಸುವ ಕಳೆಗಳು ಸಹಿತ ಪರಿಸರ ನಾಶಕ್ಕೆ ಕಾರಣವಾಗಿವೆ. ಕೃಷಿ ಅಭಿವೃದ್ದಿಗೆ ಇವು ಮಾರಕ ಈ ಕಳೆಗಳನ್ನು ನಿಯಂತ್ರಿಸಿ ಪ್ರಕೃತಿಯ ಸಮತೋಲನವನ್ನು ಕಾಪಾಡಿ ಪರಿಸರದ ಹಿತರಕ್ಷಣೆ ಮಾಡಬೇಕು.

ಒಂದು ಮರ ನೆಡುವುದು ಹತ್ತು ಬಾವಿ ತೋಡಿಸಿದ್ದಕ್ಕೆ ಸಮ ಎಂದಿದ್ದಾರೆ. ಹಿರಿಯರು ಅರಣ್ಯ ಗಳು ಇದ್ದರೆ ಮಣ್ಣಿನ ರಕ್ಷಣೆ ಯಾಗುತ್ತದೆ. ನೀರು ವ್ಯರ್ಥವಾಗುವುದಿಲ್ಲ ಪ್ರಾಣಿ ಸಂಕುಲ ಅರಣ್ಯವಿಲ್ಲದೆ ಸಸ್ಯ ಸಂಪತ್ತಿಲ್ಲದೆ ಜೀವಿಸಲಾರದು. ಅರಣ್ಯ ಹಸಿರು ಹೊನ್ನು ಇಂತಹ ಅರಣ್ಯಗಳಿಂದ ನಾವು ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಅದನ್ನು ಕಡಿಯುತ್ತಾ ನಾಶಮಾಡುತ್ತಾ ಬಂದಿದ್ದೇವೆ. ಇದರಿಂದಾಗಿ ವನ್ಯ ಮೃಗಗಳ ವಿಪರೀತ ಕಡಿಮೆಯಾಗುತ್ತಾ ಬಂದಿವೆ. ಇನ್ನು ಕೆಲೌಏ ದಿನಗಳಲ್ಲಿ ನಾವು ವನ್ಯ ಮೃಗಗಳನ್ನು ಚಿತ್ರದಲ್ಲಿ ಮಾತ್ರ ನೋಡುವ ಹಾಗಾದೀತು. ಮಳೆ ಅಪರೂಪವಾಗುತ್ತಿದೆ. ಮಣ್ಣಿನ ಸವೆತ ಇಂದು ಎದುರಿಸುತ್ತಿರುವ ತೀವ್ರತರಹದ ಅಮಯೆಯಾಗಿದೆ. ಇದರಿಂದಾಗಿ ಪರಿಸರಕ್ಕೆ ಬಹಳ ನಷ್ಟ ಉಂಟಾಗಿದೆ.

ಅರಣ್ಯ ಕೃಷಿ ಹೆಚ್ಚಬೇಕು. ಸೌದೆಗಾಗಿ ಅರಣ್ಯ ಕಡಿಯುವುದು ವಿಶೇಷವಾಗಿ ಕಡಿಮೆಯಾಗಬೇಕು. ಕಡಿದಂತಹ ಜಾಗದಲ್ಲಿ ಅವುಗಳ ಪುನರ್ ನಿರ್ಮಾಣವಾಗಬೇಕು. ಪ್ರಾಕೃತಿಕ ಅರಣ್ಯಗಳು ಉಳಿಯಬೇಕಲ್ಲವೇ ಅರಣ್ಯಗಳ ನಷ್ಟದಿಂದ ಪರೋಕ್ಷವಾಗಿ ನಮ್ಮ ಕೆರೆಗಳು ಬತ್ತುತ್ತಿವೆ. ಮರ ಗಿಡಗಳು ಇಲ್ಲವಾಗಿ ಮಳೆ ನೀರು ಸುರಿದಾಗ ನೀರಿನ ಜೊತೆ ಮಣ್ಣು ಕೊಚ್ಚಿಹೋಗಿ ಕೆರೆಯ ತಳದಲ್ಲಿ ಶೇಖರವಾಗುತ್ತದೆ. ಕ್ರಮೇಣವಾಗು ಈ ಹೂಳಿನಿಂದ ಕೆರೆಯು ಹೂತು ಹೋಗುತ್ತದೆ. ಕೆರೆಯು ಇಲ್ಲವೇನೋ ಎನ್ನುವಂತೆ ಕೆರೆಯು ಬತ್ತುತ್ತದೆ ಕೆರೆಗಳ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಅದರಿಂದ ನೀರಿನ ಜೊತೆ ಉತ್ತ, ಹವೆಕೂಡ ದೊರಕುತ್ತದೆ. ಕೆರೆಗಳ ರಕ್ಷಣೆ ನಮ್ಮ ಕರ್ತವ್ಯ. ಮಳೆ ಬೆಳೆ ಇಲ್ಲವಾಗಿ ಉತ್ತಮ ನೆಲೆ ದೊರಕದೆ ತನ್ನ ವಿನಾಶವನ್ನು ತಾನೆ ಕಂಡುಕೊಳ್ಳುವಂತಾಗಿದೆ. ಜನರಲ್ಲಿ ವೃಕ್ಷಪ್ರಜ್ಞೆ ಮೂಡಿಸಬೇಕಾಗುತ್ತವೆ. ಕೇವಲ ಅರಣ್ಯ ಉಳಿಸುವುದಷ್ಟೇ ಅಲ್ಲದೆ ಶಾಲೆ, ಕಾಲೇಜು ಕಛೇರಿ ಕಟ್ಟಡಗಳ ಮುಂದೆ ಇಲ್ಲೆಲ್ಲಾ ಗಿಡಮರ ಬೆಳೆಸುವುದು ಅತ್ಯಗತ್ಯ.

ಪ್ರಾಣಿಗಳ ರಕ್ಷಣೆ ಅರಣ್ಯ ರಕ್ಷಣೆ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅರಣ್ಯ ರಕ್ಷಿಸುವುದೆಂದರೆ ಪ್ರಾಣಿಗಳನ್ನು ರಕ್ಷಿಸಿದಂತೆ ವನ್ಯ ಜೀವಿಗಳು ಆದಾಯದ ಮೂಲಗಳು. ಪರ್ಸ ಬೆಲ್ಟ್ ವ್ಯಾನಿಟಿ ಬ್ಯಾಗ್ ತಯಾರಿಕೆಯಾಗಿ ವನ್ಯ ಜೀವಿಚರ್ಮ ಸುಲಿಯುವುದು ವಿಪರೀತವಾಗಿದೆ. ಪ್ರಾಣಿ ರಕ್ಷಣೆಗೆ ಕಾನೂನು ನೆರವಾಗಬೇಕಾಗಿದೆ. ಸಫಾರಿಗಳನ್ನು ಹೆಚ್ಚು ಹೆಚ್ಚಾಗಿ ನಿರ್ಮಿಸಬೇಕಾಗಿದೆ. ಪ್ರಾಣಿ ಸಂಕುಲನದ ಉಳಿವು ಅಗತ್ಯ ವನ್ಯ ಸೀವಿ ಸಂರಕ್ಷಣೆ ಅಧ್ಯಯನದ ವಿಷಯವಾಗಬೇಕಾಗಿದೆ. ಮಕ್ಕಳಿಗೆ ಶೈಕ್ಷಣಿಕ ವಿಷಯವಾಗಿ ವನ್ಯ ಜೀವಿ ಕುರಿತು ಪಾಠಗಳಿರಬೇಕು. ವನ್ಯ ಜೀವಿಗಳ ಚರ್ಮ ಗರಿಕೊಂಬು ಮುಂತಾದವುಗಳಿಂದ ಮಾಡಿದ ವಸ್ತುಗಳನ್ನು ಪ್ರೌತ್ಸಾಹಿಸಬಾರದು. ಅಭಯಾರಣ್ಯಗಳನ್ನು ನಿರ್ಮಿಸಬೇಕು. ಪಕ್ಷಿ ವೀಕ್ಷಣೆ ವನ್ಯ ಜೀವಿಗಳಿಗೆ ಸಂಬಂಧಿಸಿದ ಅಂಚೆ ಚೀಟಿ ಸಂಗ್ರಹ ಮೊದಲಾದ ಹವ್ಯಾಸ ಬೆಳೆಸಬೇಕು ಪ್ರಕೃತಿಯಲ್ಲಿನ ಒಲವು ಹೆಚ್ಚಿದಂತೆಲ್ಲ ಸಂರಕ್ಷಣೆ ತಾನಾಗಿಯೇ ಆಗುತ್ತದೆ. ಪರಿಸರವೂ ಹತೋಟಿಯಲ್ಲಿರುತ್ತದೆ.
ನಮ್ಮ ದೇಶದಲ್ಲಿ ಕೈಗಾರಿಕೆಗಳು ಬೃಹತ್ ವಿದ್ಯುತ್ ಸ್ಥಾವರಗಳಿವೆ ವಾಯು ಮಾಲಿನತೆಗ ಕೈಗಾರಿಕೆಗಳಿಂದ ಬರುವ ದಟ್ಟವಾದ ಹೊಗೆ ಉಷ್ಣ ವಿದ್ಯುತ್ ಸ್ಥಾವರದಿಂದ ಬರುವ ಕಲ್ಲಿದ್ದಲು ಸುಟ್ಟು ದೂಳು ಇವೆಲ್ಲ ಕಾರಣ. ವಾಹನಗಳಿಂದ ಹೊರಬರುವ ಹೊಣೆಯೂ ಅಷ್ಟೆ ಕಾರಣ ಅಣುವಿಕಿರಣ. ಅಣು ವಿದ್ಯುತ್ ಸ್ಥಾವರಗಳಲ್ಲಿ ಏಕೀಕರಣ ಜನ್ಯ ವಸ್ತು ಸಹ ಬಹಳ ಅಪಾಯಕಾರಿ ನಮ್ಮ ದೇಶದ ಜಲಸಂಪತ್ತಿನ ಶೇಕಡಾ ೭೦ ಭಾಗ ಮಲೀನತೆಯಿಂದಾ ನರಳುತ್ತದೆ. ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳುವುದು ಇಂದಿನ ಅತ್ಯಗತ್ಯತಳಲ್ಲೊಂದು.ಪರಿಸರ ಶಿಕ್ಷಣ: ಪರಿಸರ ಸಂರಕ್ಷಣೆ ಪರಿಸರ ನಾಶದ ಅರಿವಿಗಾಗಿ ಪರಿಸರ ಶಿಕ್ಷಣ ಅತ್ಯಗತ್ಯ ೧೯೭೨ ರಲ್ಲಿ ಸ್ಟಾಕ್ ಹೋಂ ಎಂಬಲ್ಲಿ ಮಾನವ ಪರಿಸರ ಎಂಬ ವಿಷಯದ ಬಗ್ಗೆ ಅಂತರ್ ರಾಷ್ಟ್ತ್ರೀಯ ಸಮ್ಮೇಳನ ನಡೆದಾಗ ಪರಿಸರ ಶಿಕ್ಷಣದ ಕಲ್ಪನೆ ಮೂಡಿ ಬಂದಿದ್ದು ವಿಶೇಷ. ಶೈಕ್ಷಣಿಕ ಕಾರ್ಯಕ್ರಮಗಳನ್ನು ಇದರ ಸಲುವಾಗಿ ರೂಪಿಸಬಹುದು. ಪರಿಸರ ಕುರಿತು ಭಾಷಣ ಚರ್ಚೆ ಏರ್ಪಡಿಸಬಹುದು. ವಿಚಾರ ಸಂಕೀರಣಗಳನ್ನು ನಡೆಸಬಹುದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಸ್ತು ಪ್ರದರ್ಶನ ಏರ್ಪಡಿಸಬಹುದು. ಪರಿಸರ ಮಾಲಿನ್ಯ ದಿಂದಾಗುವ ದುಷ್ಪರಿಣಾಮಗಳನ್ನು ಕುರಿತ ಚಲನಚಿತ್ರ ತಯಾರಿಸಿ ಪ್ರದರ್ಶಿಸಬಹುದು. ನಾಟಕ ಪ್ರದರ್ಶನ ಸೂಕ್ತ ರಸ್ತೆಗಳಲ್ಲಿ ಗೋಡೆಗಳ ಮೇಲೆ ಜನರಲ್ಲಿ ತಿಳುವಳಿಕೆ ಮೂಡಿಸುವ ವಿಚಾರವಿರುವ ಬಿತ್ತಿಚಿತ್ರ ಅಂಟಿಸಬಹುದು. ಸಮಸ್ಯೆಗಳ ಅಧ್ಯಯನವನ್ನು ಸಮಸ್ಯೆಗಳ ಪರಿಹಾರಕ್ಕಾಗಿ ಯತ್ನಿಸಬಹುದು.

ಪರಿಸರ ಸಂರಕ್ಷಣೆ ಎಲ್ಲಾ ನಾಗರಿಕರ ಕರ್ತವ್ಯ ಪ್ರಜ್ಞಾವಂತನಾದವನು ಪರಿಸರ ಸಮಸ್ಯೆಗಳನ್ನು ತಡೆಗಟ್ಟುವ ಕಾರ್ಯದಲ್ಲಿ ತೋಡಗುತ್ತಾನೆ. ಪರಿಸರ ಸಂರಕ್ಷಣೆಗೆ ಎಲ್ಲಾ ರಾಜ್ಯ ಸರಕಾರಗಳು ಕಂಕಣಬದ್ಧವಾಗಬೇಕು. ನಮ್ಮ ಪರಿಸರ ನಾವೇ ನಿರ್ಮೂಲನೆಗೊಳಿಸಿದರೆ ಮುಂದಿನ ಪೀಳಿಗೆ ನಮ್ಮನ್ನಯ ಶಪಿಸದೇ ಪರಿಸರ ಸಂರಕ್ಷಣೆ ಒಂದು ವಿಧದಲ್ಲಿ ನಮ್ಮ ಸಂರಕ್ಷಣೆಯೇ ಆಗಿದೆ. ಅಂದಮೇಲೆ ನಾವೆಲ್ಲಾ ಕೂಡಿ ಪರಿಸರ ಕಾಪಾಡೋಣ ಪರಿಸರ ಸಂರಕ್ಷಣೆಗೆ ನಮ್ಮ ಕೈಲಾದಷ್ಟು ನೆರವಾಗೋಣ ಅಲ್ಲವೇ? ರಾಜಧಾನಿ ಬೆಂಗಳೂರಿನಲ್ಲಿ ವಾಟರ್ ಮಾಫಿಯಾ ತಲೆ ಎತ್ತುವ ಆತಂಕ ಎದುರಾಗಿದೆ. ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ತತ್ವಾರದ ಭೀತಿ ಎದುರಾಗಲಿದೆ ಎಂದು ಜಲಮಂಡಳಿಯು ಘೋಷಿಸುತ್ತಿದ್ದಂತೆ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವವರು ಮೈ ಕೊಡವಿಕೊಂಡು ಎದ್ದು ಕುಳಿತಿದ್ದಾರೆ. ಮೊದಲೇ ಬೆಂಗಳೂರು ಮಹಾನಗರಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ನಗರಕ್ಕೆ ಕುಡಿಯುವ ನೀರು ಒದಗಿಸುವ ಕೆಆರ್‌ಎಸ್ ಭರ್ತಿಯಾಗಿದ್ದರೂ ಸಮರ್ಪಕವಾಗಿ ಎಲ್ಲ ಕಡೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗದೆ ಕೊಳವೆ ಬಾವಿಗಳು, ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಅಕ್ಟೋಬರ್ ವೇಳೆಗೆ ಜಲಾಶಯ ಬತ್ತಿ ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆಯಿರುವುದರಿಂದ ನೀರು ಸರಬರಾಜು ಮಾಡುವುದು ಸವಾಲಾಗಿ ಪರಿಣಮಿಸಿದೆ.
ನಗರದಲ್ಲಿ ೮.೫ ಲಕ್ಷ ನೀರಿನ ಸಂಪರ್ಕಗಳಿವೆ. ೧೨ ಸಾವಿರ ಕೊಳವೆ ಬಾವಿಗಳಿವೆ. ೧.೫ ಟಿಎಂಸಿ ನೀರು ತಿಂಗಳ ಬೇಡಿಕೆಯಿದೆ. ೧೫ ಟಿಎಂಸಿ ನೀರು ಜೂನ್‌ವರೆಗೆ ಅಗತ್ಯವಿದೆ. ಕೃಷ್ಣರಾಜ ಜಲಾಶಯದಲ್ಲಿ ೧೫ ಟಿಎಂಸಿ ನೀರನ್ನು ಸಂಗ್ರಹವಾಗಿಟ್ಟುಕೊಳ್ಳಬೇಕೆಂದು ಜಲಮಂಡಳಿ ಮನವಿ ಮಾಡಿದೆ. ಕಾರಣ ನೀರಿನ ಅಭಾವ ತಲೆದೋರುವ ಮುನ್ಸೂಚನೆ ಇದಾಗಿದೆ. ಈ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಖಾಸಗಿ ನೀರಿನ ಟ್ಯಾಂಕರ್‌ಗಳವರು ಮುಂದಾಗುವ ಸಾಧ್ಯತೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ೧೧೦ ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಲು ಸಾಧ್ಯವಾಗಿಲ್ಲ. ಅಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಒದಗಿಸಲಾಗುತ್ತದೆ. ಕೆಲವೆಡೆ ಅಂತರ್ಜಲ ಬತ್ತಿ ನೀರು ದೊರೆಯುತ್ತಿಲ್ಲ. ಕೆಲವೆಡೆ ಬೋರ್‌ವೆಲ್‌ನಲ್ಲಿ ದೊರೆಯುತ್ತಿರುವ ನೀರು ಕುಡಿಯಲು ಯೋಗ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ನೀರಿನ ಅಭಾವ ತಲೆದೋರಿದರೆ ಮುಂದೇನು ಎಂಬ ಆತಂಕ ನಗರವಾಸಿಗಳನ್ನು ಕಾಡತೊಡಗಿದೆ.
ಇಂತಹ ಪರಿಸ್ಥಿತಿಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವವರು ಒಂದಕ್ಕೆ ನಾಲ್ಕರಷ್ಟು ಹಣ ಪಡೆದು ನೀರು ಸರಬರಾಜು ಮಾಡಲು ಮುಂದಾಗುವುದರಲ್ಲಿ ಅನುಮಾನವಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ನಿಗದಿತ ಮಳೆಯಾಗದಿದ್ದರೆ, ಜಲಾಶಯಗಳಿಗೆ ನೀರು ಬರದಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ ವಾಟರ್ ಮಾಫಿಯಾ ತಲೆ ಎತ್ತುವುದರಲ್ಲಿ ಆಶ್ಚರ್ಯವಿಲ್ಲ. ಭೂ ಮಾಫಿಯಾ, ಗಣಿ ಮಾಫಿಯಾ, ಮರಳು ಮಾಫಿಯಾ, ತೈಲ ಮಾಫಿಯಾ ಈ ಎಲ್ಲವನ್ನೂ ಮೀರಿಸುವ ಮಟ್ಟಕ್ಕೆ ಜಲ ಮಾಫಿಯಾ ಬೆಳೆದರೂ ಆಶ್ಚರ್ಯ ಪಡಬೇಕಾಗಿಲ್ಲ. ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಆವರಿಸಿದೆ. ಕಾವೇರಿ ಜಲಾನಯನ ಪ್ರದೇಶಗಳಿಂದ ನಿಗದಿತ ಮಳೆಯಾಗಿಲ್ಲ, ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ. ಜಲಾನಯನ ಪ್ರದೇಶಗಳಲ್ಲಿ ಬೆಳೆಗಳಿಗೆ ನೀರಿನಲ್ಲ. ಜನ-ಜಾನುವಾರುಗಳಿಗೂ ಕುಡಿಯಲು ನೀರು ದೊರೆಯುತ್ತಿಲ್ಲ. ಇನ್ನು ರಾಜಧಾನಿಯಲ್ಲಿರುವ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ಜಲಮಂಡಳಿಗೆ ಸವಾಲಾಗಿದೆ.
ಕಳೆದ ಹಲವಾರು ವರ್ಷಗಳಲ್ಲಿ ಕೂಡ ಇದೇ ರೀತಿ ಜಲಕ್ಷಾಮ ತೀವ್ರವಾಗಿ ಕಾಡಿತ್ತು. ಏಪ್ರಿಮ್, ಮೇ ತಿಂಗಳಲ್ಲಿ ಕೆಆರ್‌ಎಸ್ ಜಲಾಶಯ ಸಂಪೂರ್ಣ ಖಾಲಿಯಾಗಿ ಹೇಮಾವತಿ ಜಲಾಶಯದ ಮೂಲಕ ನೀರು ಹರಿಸಲಾಗಿತ್ತು. ಪ್ರಸ್ತುತ ಕಾವೇರಿ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಜನರು ಕುಡಿಯಲು, ಕೃಷಿಗೆ ಕೆಆರ್‌ಎಸ್ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಬೆಂಗಳೂರಿಗೆ ತಿಂಗಳಿಗೆ ೧.೫ ಟಿಎಂಸಿ ನೀರಿನಂತೆ ಮುಂದಿನ ಜೂನ್‌ವರೆಗೆ ೧೫ ಟಿಎಂಸಿ ನೀರು ಅಗತ್ಯವಿದೆ. ಅದನ್ನು ಶೇಖರಿಸಿಡಬೇಕಾದ ಅನಿವಾರ್ಯತೆಯಿದೆ. ಈ ಹಂತದಲ್ಲಿ ನೀರಿನ ಬಗ್ಗೆ, ಪರಿಸರದ ಬಗ್ಗೆ ಸರಿಯಾದ ಕಾಳಜಿ ವಹಿಸದಿದ್ದರೆ ಕಲ್ಪಿಸಿಕೊಳ್ಳಲೂ ಆಗದ ಕಷ್ಟದ ದಿನಗಳು ನಮಗೆದುರಾಗಲಿರೋದು ಖರೇ…

Tags: #animals#environment#forrest#interestingfacts

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
hot water river in amazon forest: ಅಮೇಜಾನ್ ಕಾಡಿನೊಳಗಿದೆ ಸದಾ ಕುದಿಯೋ ನದಿ!

hot water river in amazon forest: ಅಮೇಜಾನ್ ಕಾಡಿನೊಳಗಿದೆ ಸದಾ ಕುದಿಯೋ ನದಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.