ಈಗಾಗಲೇ ಟ್ರೈಲರ್ ಹಾಗು ಹಾಡಿನ ಮೂಲಕ ಸುದ್ದಿಯಾಗಿರುವ ಪೆಂಟಗನ್ ಚಿತ್ರದ ಥೀಮ್ ಸಾಂಗ್ ರಿಲೀಸ್ ಆಗಿದೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿರುವ ಖ್ಯಾತ ಗಾಯಕಿ ಅನನ್ಯ ಭಟ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡು ಇಡೀ ಚಿತ್ರದ ಐದು ಕಥೆಗಳನ್ನ ಬೆಸೆಯುವ ಅರ್ಥ ಗರ್ಬಿತ ಗೀತೆಯಾಗಿ ಹೊರಹೊಮ್ಮಿದೆ. ನಿರ್ದೇಶಕ ರಾಘು ಶಿವಮೊಗ್ಗ ಸಾಹಿತ್ಯ ರಚಿಸಿರುವ’ ಸೂತಕದ ಕಾರ್ಮೋಡ ‘… ಎಂಬ ಸಾಲಿನಿಂದ ಆರಂಭವಾಗುವ ಈ ಥೀಮ್ ಸಾಂಗಿ ನಲ್ಲಿ ದೃಶ್ಯಗಳೂ ಕೂಡ ಚಿತ್ರದ ಮೇಲಿನ ಭರವಸೆ ಯನ್ನ ದುಪ್ಪಟ್ಟಾಗಿಸುವಂತಿವೆ. ಝೇಂಕಾರ್ ಮ್ಯೂಸಿಕ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಒಂದೇ ದಿನಕ್ಕೆ ಮಿಲಿಯನ್ ವೀವರ್ಸ್ ಗಳನ್ನ ದಾಟಿ ಜನಮನ್ನಣೆ ಪಡೆದುಕೊಳ್ತಿದೆ.
ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡುವ ಜೊತೆಗೆ ಇಡೀ ಚಿತ್ರದ ನಿರ್ಮಾಣದ ಸಾರಥ್ಯವನ್ನೂ ವಹಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ , ರವಿಶಂಕರ್ ಸೇರಿದಂತೆ ಹೆಸರಾಂತ ನಟರ ತಾರಾ ಬಳಗದಲ್ಲಿ ಪೆಂಟಗನ್ ಸುಂದರವಾಗಿ ಮೂಡಿಬಂದಿದೆ.
ಪೆಂಟಗನ್ ಚಿತ್ರದಿಂದ ಹೊರ ಬಂದಿರುವ ಟ್ರೈಲರ್ ಜಲಕ್ ಹಾಗು ಹಾಡುಗಳು ಈಗಾಗಲೇ ಹಿಟ್ ಆಗಿವೆ. ದಕ್ಷಿಣ ಭಾರತದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ರೆ, ಹಲವರು ಟ್ರೈಲರ್ ಲಿಂಕ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾರೆ. ನಟ,ನಿರ್ದೇಶಕ,ನಿರ್ಮಾಪಕ ರಿಷಬ್ ಶೆಟ್ಟಿ , ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ, ನಿರ್ದೇಶಕರಾದ ತರುಣ್ ಸುಧೀರ್, ಶಶಾಂಕ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಪೆಂಟಗನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದು ಪ್ರಯೋಗಾತ್ಮಕ ಸಿನೆಮಾವಲ್ಲ,ಇದೊಂದು ಪಕ್ಕಾ ಕಮರ್ಷಿಯಲ್ ಸಿನ್ಮಾ ಎನ್ನುವ ಗುರುದೇಶ ಪಾಂಡೆ ನೋಡುಗರಿಗೆ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂಬ ಭರವಸೆ ನೀಡುತ್ತಾರೆ.
ಈಗಾಗಲೇ ತಿಳಿದಿರುವಂತೆ ಪೆಂಟಗನ್ ನಲ್ಲಿ ಹಲವು ವಿಶೇಷಗಳಿವೆ ಯಾಕಂದ್ರೆ ಈ ಚಿತ್ರದಲ್ಲಿರುವ ಐದು ಕಥೆಗಳಿಗೆ,ಐದು ನಿರ್ದೇಶಕರ ಆಕ್ಷನ್ ಕಟ್ ಇದೆ. ಹಾಗೇಯೆ, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡದ ಶ್ರಮ ಇದೇ ಏ. 7 ಕ್ಕೆ ಥಿಯೇಟರ್ ನ ಪರದೆ ಮೇಲೆ ಅನಾವರಣಗೊಳ್ಳಲಿದೆ.