ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಪ್ರಥಮ ಬಾರಿಗೆ ಸಿನೆಮಾ ನಿರ್ದೇಶನ ಮಾಡುತ್ತಾ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಆರಂಭಿಸಿರೋದು ಗೊತ್ತಿರೋ ವಿಚಾರ. ಮ್ಯೂಸಿಕ್ ವಿಷಯದಲ್ಲಿ ಮೋಡಿ ಮಾಡಿ,ನೋ ಕಾಂಪ್ರಮೈಸ್ ಅನ್ನೋ ಅರ್ಜುನ್ ಜನ್ಯ ಮೊದಲ ಬಾರಿಗೆ ಸಿನೆಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಅಂದ್ರೆ ಆ ಚಿತ್ರದ ಬಗ್ಗೆ ನಿರೀಕ್ಷೆ ಗಳು ಹುಟ್ಟೋದು ಸಹಜ.
ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿರುವ 45 ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಯಾಕಂದ್ರೆ ಅಷ್ಟರ ಮಟ್ಟಿಗೆ ಜನ್ಯ ಅವರ ಸಂಗೀತ ನಿರ್ದೇಶನ ಎಲ್ಲರಿಗೂ ಮ್ಯಾಜಿಕ್ ಮಾಡಿದೆ. ಈಗ ಇವರ ಚೊಚ್ಚಲ ನಿರ್ದೇಶನದ 45 ಚಿತ್ರಕ್ಕೆ ,ರಿಯಲ್ ಸ್ಟಾರ್ ಉಪೇಂದ್ರ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ,ರಾಜ್ ಬಿ ಶೆಟ್ಟಿ ನಾಯಕರಾಗಿ ಆಯ್ಕೆಯಾಗಿದ್ದರು. ಇನ್ನು ಇವರಿಗೆ ನಾಯಕಿ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಈ ಹಿಂದೆ ಹತ್ತಾರು ನಾಯಕಿಯರ ಹೆಸರೂ ಸಹ ಕೇಳಿಬಂದಿತ್ತು. ಈಗ ೪೫ ಗೆ ಕಿರುತೆರೆ ಲೋಕದ ಸುಂದರಿ ಕೌಸ್ತುಭ ಮಣಿ ನಾಯಕಿಯಾಗಿ ಫೈನಲ್ ಆಗಿದ್ದಾರೆ.ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿದೆ.
ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನರಸಿ ರಾಧೆ’, ಜೀ ತೆಲುಗಿನ ಪ್ರಸಿದ್ದ ಧಾರಾವಾಹಿ ಹಾಗೂ ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದು,ನಟನೆಯ ಅನುಭವ ಹೊಂದಿದ್ದಾರೆ.ಇನ್ನುಳಿದಂತೆ `45′ ಚಿತ್ರ ಅನೇಕ ವಿಶೇಷತೆಗಳನ್ನು ಹೊಂದಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ. ಈ ಸಿನಿಮಾಗೆ ರಮೇಶ್ ರೆಡ್ಡಿ ಬಂಡವಾಳ ಹೊಡಿ ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಾಣಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ಸದ್ಯಕ್ಕಂತೂ ನಾಯಕಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು,ಮುಂದಿನ ಅಪ್ಡೇಟ್ ಗಳನ್ನ ಚಿತ್ರತಂಡವೇ ಹೊರಹಾಕಬೇಕು.