ಸ್ಯಾಂಡಲ್ ವುಡ್ ನಲ್ಲಿ ಇತ್ತಿಚೆಗೆ ಹೊಸ ಹೊಸ ಪ್ರಯೋಗಗಳ ಮೂಲಕ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಸೆಟ್ಟೇರ್ತಿವೆ. ಕ್ಯಾಚೀ ಟೈಟಲ್ , ಕಥೆ,ನಿರೂಪಣೆ ಮೂಲಕ ಹೊಸ ಹೊಸ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.ಹಾಗೇಯೇ ಉತ್ತಮ ಕಂಟೆಂಟ್ ಹೊಂದಿರುವ ದೈವ ಸಿನೆಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಸೀಕ್ರೆಟ್ ಆಫ್ ಬರ್ತ್ ಎಂಬ ಅಡಿಬರಹ ಹೊಂದಿರುವ ದೈವ ಚಿತ್ರದ ಪೋಸ್ಟರ್ ಅನ್ನು ಡಾಲಿ ಧನಂಜಯ್ ಬಿಡುಗಡೆ ಮಾಡಿ ಚಿತ್ರತಂಡ ಕ್ಕೆ ಶುಭಹಾರೈಸಿದ್ದಾರೆ.
ಎಂ.ಜೆ ಚಿತ್ರದ ನಿರ್ದೇಶನ ಮಾಡಿದ್ದು, ಕಲ್ಪವೃಕ್ಷ ಕ್ರಿಯೇಷನ್ಸ್ ಲಾಂಛನದಲ್ಲಿ ಜಯಮ್ಮ ಪದ್ಮರಾಜ್ ನಿರ್ಮಿಸುತ್ತಿದ್ದಾರೆ.ಮಲೆನಾಡಿನ ಸುಂದರ ಜಾಗಗಳಲ್ಲಿ ಶೂಟಿಂಗ್ ನಡೆಸಲು ಯೋಜನೆ ರೂಪಿಸಿಕೊಂಡಿರುವ ದೈವ ಚಿತ್ರತಂಡ ಮೇ ೨ ನೇ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದೆ.
ನವೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಇರುವ ಈ ಚಿತ್ರಕ್ಕೆ ಈಶ್ವರ್ ಮಲ್ನಾಡ್ ಹಾಡುಗಳನ್ನು ಬರೆದಿದ್ದು, ವಿಜೇತ್ ಮಂಜಯ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜು ಶಿರಾ ಛಾಯಾಗ್ರಹಣ, ಚಂದ್ರ ಮೌರ್ಯ ಸಹ ನಿರ್ದೇಶನ ಹಾಗೂ ಭೂಷಣ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎಂ.ಜೆ, ಅರುಣ್ ಬಚ್ಚನ್, ಸತೀಶ್, ನೀತು ರಾಯ್ ಮುಂತಾದವರು ‘ದೈವ’ ಚಿತ್ರದ ತಾರಾಬಳಗದಲ್ಲಿರುವ ದೈವ ಚಿತ್ರದ ಮುಂದಿನ ಜಲಕ್ ಗಳಿಗಾಗಿ ಸಿನಿಪ್ರಿಯರು ಕಾದಿದ್ದಾರೆ.