ವಾರಿಸು ಚಿತ್ರದ ಸಕ್ಸಸ್ ನ ಖುಷಿಯಲ್ಲಿರುವ ನಿರ್ಮಾಪಕ ದಿಲ್ ರಾಜು ಸಧ್ಯ ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಚಿತ್ರ ನಿರ್ಮಾಣ ಮಾಡ್ತಿದ್ದಾರೆ.ಇದುವರೆಗೆ ಸಾಕಷ್ಟು ಸಿನೆಮಾ ನಿರ್ಮಾಣ ಮಾಡಿ ಯಶಸ್ಸು ಗಳಿಸಿರುವ ಸೌತ್ ಸಿನಿರಂಗದ ಸ್ಟಾರ್ ನಿರ್ಮಾಪಕ ದಿಲ್ ರಾಜು ಈಗ ಯಶ್ ಜೊತೆ ಸಿನೆಮಾ ಮಾಡುವ ಸುಳಿವು ಸಿಕ್ಕಿದೆ.
ಹೌದು ಕೆ.ಜಿ.ಎಫ್ ಚಿತ್ರದ ಮೂಲಕ ದೇಶ ವಿದೇಶಗಳಲ್ಲಿ ಫೇಮಸ್ ಆಗಿರುವ ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನೆಮಾ ಯಾವುದು ಅಂತ ಅಭಿಮಾನಿಗಳು ಎದುರುನೋಡ್ತಿದ್ದಾರೆ. ಆದ್ರೆ ಈವರೆಗೆ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಿಲ್ಲ. ಬದಲಿಗೆ ತಮ್ಮ ಪಾಡಿಗೆ ವರ್ಕೌಟ್ ಮಾಡ್ತಾ ಮುಂದಿನ ಚಿತ್ರಕ್ಕೆ ತೆರೆಮರೆಯಲ್ಲೇ ತಯಾರಿ ನಡೆಸುತ್ತಿದ್ದಾರೆ.
ಇವೆಲ್ಲದಕ್ಕೂ ಇಂಬು ನೀಡುವಂತೆ ನಿರ್ಮಾಪಕ ದಿಲ್ ರಾಜು ಹಾಗು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಅಪ್ಡೇಟ್ ನೀಡಿದೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್. ಹೌದು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಯಶ್ ಅಭಿಮಾನಿಯೊಬ್ಬರು ದಿಲ್ ರಾಜು ಅವರಿಗೆ ಯಶ್ ಜೊತೆ ಸಿನಿಮಾ ನಿರೀಕ್ಷಿಸಬಹುದೇ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ದಿಲ್ ರಾಜು ಪರವಾಗಿ ಉತ್ತರಿಸಿರುವ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಹೌದು ಎನ್ನುವ ಉತ್ತರ ನೀಡುವ ಮೂಲಕ ಸಂಚಲನ ಹುಟ್ಟುಹಾಕಿದೆ.
ಈ ಟ್ವೀಟ್ ನೋಡಿದ್ಮೇಲೆ ಸಾಕಷ್ಟು ಚರ್ಚೆಗಳು ಚಿತ್ರರಂಗದಲ್ಲಿ ಸುದ್ದಿ ಮಾಡ್ತಿವೆ. ದಿಲ್ ರಾಜು ರಾಕಿ ಬಾಯ್ ಕಾಂಬಿನೇಷನ್ ನಲ್ಲಿ ಸಿನ್ಮಾ ಬರೋದು ಪಕ್ಕಾ ನಾ? ಅಥವಾ ಸುಮ್ನೆ ಹೌದು ಅಂತ ಉತ್ತರಿಸಿದ್ರಾ? ಅನ್ನೋ ಪ್ರಶ್ನೆ ಎದ್ದಿರೋದು ಸಹಜ. ಆದ್ರೆ ಈ ಪ್ರಶ್ನೆಗೆ ದಿಲ್ ರಾಜು ಅವರೇ ಉತ್ತರಿಸಿದ್ರೆ ಚಂದ.ಸಧ್ಯ ಒಂದು ವೇಳೆ ಸಿನೆಮಾ ಬಂದ್ರೆ ಯಾವ ಜಾನರಿನದ್ದು? ಹೇಗಿರಲಿದೆ ಚಿತ್ರ ಅನ್ನೋ ಕ್ಯೂರಿಯಾಸಿಟಿ ಅಂತೂ ಮೂಡಿದೆ.