ಮಂಡ್ಯದ ಗಂಡು,ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಸೆಮಣೆ ಏರ್ತಿರೋದು ಗೊತ್ತಿರೋ ವಿಚಾರ. ತಾವು ಪ್ರೀತಿಸಿದ ಅವಿವಾ ಜೊತೆ ಮದುವೆಯ ಬಂಧನಕ್ಕೆ ಒಳಗಾಗ್ತಿರೋ ಅಭಿಶೇಕ್ ಇತ್ತೀಚಿಗಷ್ಟೇ ಗ್ರಾಂಡ್ ಆಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈಗ ತಮ್ಮ ಹಲವು ವರ್ಷದ ಪ್ರೀತಿಯಿಂದ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಹೂರ್ತ ಮತ್ತು ದಿನ ನಿಗಧಿಯಾಗಿದೆ.ಈ ಶುಭ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಅಭಿಷೇಕ್ ರ ಹೊಸ ಜೀವನದ ನಾಂದಿಗೆ ಶುಭಾಶಯ ಕೋರುತ್ತಿದ್ದಾರೆ.
ಇದೇ ಜೂನ್ ೫ ರಂದು ಅವಿವಾ ಜೊತೆ ವಿವಾಹವಾಗಲಿರುವ ಅಭಿ, ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿ ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ಫೋಟೋವನ್ನ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈಗಾಗಲೇ ದಿನಗಣನೆ ಶುರುವಾಗಿರುವ ಹೊತ್ತಲ್ಲೇ
ಮದುವೆ ಡೇಟ್ ಫಿಕ್ಸ್ ಆಗ್ತಿದ್ದಂತೆ, ವಿಶೇಷ ಆಹ್ವಾನ ಪತ್ರಿಕೆ ಹಿಡಿದು ಪ್ರಧಾನಿ ಮೋದಿ ಅವರನ್ನ ನಟ ಅಭಿಷೇಕ್- ಸಂಸದೆ ಸುಮಲತಾ ಅಂಬರೀಶ್ ಭೇಟಿಯಾಗಿ,ಅಭಿಷೇಕ್-ಅವಿವಾ ಅವರ ಮದುವೆ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಖುಷಿಯಿಂದ ಕೆಲ ಸಮಯ ಕಾಲ ಕಳೆದಿದ್ದಾರೆ.
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಇದೇ ಜೂನ್5 ಕ್ಕೆ ಅಭಿಷೇಕ್-ಅವಿವಾ ಮದುವೆ ಕಾರ್ಯಕ್ರಮ ನಡೆಯಲಿದ್ದು, ಸಿನಿಮಾ ರಂಗ-ರಾಜಕೀಯ ರಂಗದ ಗಣ್ಯರು ಮದುವೆಗೆ ಭಾಗಿಯಾಗಲಿದ್ದಾರೆ.