ಸ್ಯಾಂಡಲ್ ವುಡ್ ನಲ್ಲೀಗ ವಿಭಿನ್ನ ಜಾರ್ ನ ಸಿನೆಮಾಗಳ ಜಾತ್ರೇಯೇ ಶುರುವಾಗಿದೆ.ತರಹೇವಾರಿ ಕಥೆ ಹೇಳೋ ಸಿನ್ಮಾ ಗಳು ಸಾಲು ಸಾಲಾಗಿ ಸೆಟ್ಟೇರ್ತಿವೆ. ಇನ್ನೇನಿದ್ರು ಪ್ರೇಕ್ಷಕರು ನೋಡಿ ಎಂಜಾಯ್ ಮಾಡೊ ಕೆಲಸವೊಂದು ಬಾಕಿ ಇದೆ. ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ , ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಟನೆಯ ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರ ‘ರಾಮನ ಅವತಾರ’ತೆರೆಗೆ ಬರಲು ಸಜ್ಜಾಗ್ತಿದೆ.
ಹೌದು ಢಿಫರೆಂಟ್ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದು ತಮ್ಮದೆ ಆದ ಅಭಿಮಾನಿ ಬಳಗ ಹೊಂದಿರುವ ರಿಷಿ, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ. ಶುಭ್ರ ಅಯ್ಯಪ್ಪ ಹಾಗೂ ಪ್ರಣಿತಾ ಸುಭಾಷ್ ಜೊತೆ ಬಣ್ಣ ನಾಯಕನಾಗಿ ನಟಿಸಲಿದ್ದಾರೆ.
ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು,ಇದು ಇವರ ನಿರ್ದೇಶನದ ಚೊಚ್ಚಲ ಸಿನೆಮಾ.ನಿರ್ದೇಶಕ ಸಿಂಪಲ್ ಸುನಿ ಕ್ಯಾಂಪಸ್ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ ಅನುಭವವಿರುವ, ವಿಕಾಸ್ ಪಂಪಾಪತಿ ತಮ್ಮದೇ ಆದ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಮಾಡಿದ್ದಾರೆ.ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ ನಾಗಿ ಬಡ್ತಿ ಪಡೆಯುತ್ತಾ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ಗಿಳಿದಿದ್ದಾರೆ.
ಉಡುಪಿ, ಬೆಂಗಳೂರು ಸುತ್ತುಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಶೂಟೊಂಗ್ ಕಂಪ್ಲೀಟ್ ಮಾಡಿಕೊಮಡಿರುವ ರಾಮನ ಅವತಾರ ಚಿತ್ರತಂಡ ಸದ್ಯ ಗ್ರಾಫಿಕ್ಸ್,ಮ್ಯೂಸಿಕ್ ನಲ್ಲಿ ಬ್ಯುಸಿಯಿದೆ.
ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಛಾಯಾಗ್ರಹಣವಿದೆ.
ಈ ಸಿನಿಮಾಗೆ , ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಕಲನವಿದೆ. ಇನ್ನು ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಮನ ಅವತಾರ ಸಿನ್ಮಾವನ್ನ ಜೂನ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದೆ ಚಿತ್ರತಂಡ.