ಬಹುನಿರೀಕ್ಷಿತ ಚಿತ್ರ ‘ಯುವ’ ಸಧ್ಯ ಚಿತ್ರರಂಗದಲ್ಲೇ ಕುತೂಹಲ ಹುಟ್ಟು ಹಾಕಿರುವ ಸಿನೆಮಾ. ಇತ್ತೀಚೆಗಷ್ಟೇ ಚಿತ್ರದ ಮೊದಲ ಲುಕ್ ಪೋಸ್ಟರ್ ಹಾಗು ಟೀಸರ್ ನೋಡಿ ಬೆರಗಾಗಿದ್ದ ಅಭಿಮಾನಿಗಳು ಚಿತ್ರದ ಮುಂದಿನ ಅಪ್ಡೇಟ್ ಗಾಗಿ ಕಾದಿದ್ದರು.
ಚೊಚ್ಚಲ ಸಿನೆಮಾ ಯುವ ಗಾಗಿ ಯುವರಾಜ್ ಕುಮಾರ್ ತೆರೆಮರೆಯಲ್ಲಿ ಇಷ್ಟು ದಿನ ಸಕಲ ತಯಾರಿಯಲ್ಲಿ ನಿರತರಾಗಿದ್ದರು.ಡ್ಯಾನ್ಸ್,ಫೈಟ್,ಜಿಮ್,ವರ್ಕ್ ಶಾಪ್ ಹೀಗೆ ಭರ್ಜರಿ ಸಿದ್ದತೆಯೊಂದಿಗೆ ಫಿಡ್ ಅಂಡ್ ಫೈನ್ ಆಗಿ ಯುವ ಹಾಗು ಸಪ್ತಮಿ ಗೌಡ ಜೋಡಿ ತೆರೆಮೇಲೆ ಮಿಂಚಿ ಮೋಡಿ ಮಾಡಲು ರೆಡಿಯಾಗ್ತಿದ್ರು. ಇತ್ತ ಮೊದಲ ಲುಕ್ ಟೀಸರ್ ರಿಲೀಸ್ ಮಾಡಿದ್ದ ಯುವ ತಂಡ ಏನ್ಮಾಡ್ತಿದೆ ಇಷ್ಟು ದಿನ ಅನ್ನೋದಕ್ಕೆ ಉತ್ತರ ಸಿಕ್ಕಿದೆ. ಈಗ ಬಿಗ್ ಅಪ್ಡೇಟ್ ಒಂದನ್ನ ನೀಡಿದೆ ಹೊಂಬಾಳೆ ಫಿಲ್ಮ್ಸ್.
ಎಸ್…Hombale Films ನಿಮಾರ್ಣದ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಯುವ ಸಿನಿಮಾದ ಶೂಟಿಂಗ್ (ಏ.9) ಭಾನುವಾರದಿಂದ ಶುರುವಾಗಿದೆ. ಬೆಂಗಳೂರಿನ ಹೆಚ್‌ಎಂಟಿ ಅಂಗಳದಲ್ಲಿ ಅದ್ದೂರಿ ಸೆಟ್ ಹಾಕಿ ಫಸ್ಟ್ ಡೇ ಶೂಟಿಂಗ್ ಶುರು ಮಾಡಲಾಗಿದೆ. ಯುವಗೆ ಡೈರೆಕ್ಟರ್ ಕ್ಲಾಪ್ ಮಾಡ್ತಿದ್ರೆ,ಯುವ ಖಡಕ್ ಲುಕ್ ನ ಫೋಟೋ ವನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಸಧ್ಯ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೆಡ್ಯೂಲ್ ಶೂಟಿಂಗ್ ಏ.9ರಂದು ಶುರುವಾಗಿರೋ ಅಪ್ಡೇಟ್ ನೋಡಿದ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು,ಅಪ್ಪು ಅಂತೆಯೇ ಯುವ ಅಂತ ಮಾತಾಡಿಕೊಳ್ತಿದ್ದಾರೆ.ಇನ್ನು ಚಿತ್ರದ ಕುರಿತು ಯಾವ ಮಾಹಿತಿ ಗಳು ಸಿಗಲಿವೆ ಅನ್ನೋದನ್ನ ಕಾದು ನೋಡ್ಬೇಕಿದೆ.