ನಟ ಲೂಸ್ ಮಾದ ಯೋಗಿ ಮತ್ತು ಹೆಡ್ಬುಷ್ ನಿರ್ದೇಶಕ ಶೂನ್ಯಾ ಅವರ ಕಾಂಬಿನೆಷನ್ ಅಲ್ಲಿ ಸ್ಟೈಲಿಶ್ ಗ್ಯಾಂಗ್ ಸ್ಟಾರ್ ಸಿನೆಮಾವೊಂದು ಮೂಡಿಬರ್ತಿದೆ. ಈ ಚಿತ್ರಕ್ಕೆ ‘ರೋಸಿ’ ಎಂಬ ಟೈಟಲ್ ಫಿಕ್ಸ್ ಆಗಿದೆ. ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮ ಇತ್ತೀಚಿಗಷ್ಟೇ ನಡೆದಿದ್ದು,ಅಧಿಕೃತ ವಾಗಿ ಸಿನೆಮಾ ಪ್ರಾರಂಭವಾಗಿರುವ ಬಗ್ಗೆ ಚಿತ್ರತಂಡವೇ ಘೋಷಿಸಿದೆ.
ಟೈಟಲ್ ಪೋಸ್ಟರ್ ನಲ್ಲಿ ಯೋಗಿ ಲುಕ್ ತುಂಬಾನೇ ಖಡಕ್ ಆಗಿ ಕಾಣ್ತಾ ಇದ್ದು, ಸ್ಟೈಲಿಶ್ ಗ್ಯಾಂಗ್ ಸ್ಟಾರ್ ಯೋಗಿ ರೋಸಿ ಯಲ್ಲಿ ಢಿಪರೆಂಟ್ ಗೆಟಪ್ ನಲ್ಲಿ ಕಣ್ಸ್ತಿದ್ದಾರೆ.
ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯೋಗಿ, ಡಾಲಿ ಧನಂಜಯ್ ಅವರಿಗೆ ಧನ್ಯವಾದ ಅರ್ಪಿಸಿದರು. ಹಾಗು ಡಾಲಿ ಮತ್ತು ತಮ್ಮ ನಡುವಿನ ಸ್ನೇಹದ ವಿಶೇಷ ಭಾಂದವ್ಯದ ಬಗ್ಗೆ ಹಂಚಿಕೊಂಡ್ರು.
ತಾವು ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಲ್ಲಿಯ ವರೆಗೂ ತಮ್ಮ ಸಿನಿಪಯಣದ ಬಗ್ಗೆ ಅನುಭವ ಹಂಚಿಕೊಂಡ ಯೋಗಿ,ಮೊದಲ ಗುರು ನಿರ್ದೇಶಕ ಸೂರಿವರ ಬೆಂಬಲ ಮತ್ತು ಸ್ಪೂರ್ತಿ ಗೆ ಧನ್ಯವಾದ ಹೇಳಿದ್ರು. ಈವರೆಗೂ ತಾವು ಅಭಿನಯಿಸಿದ ಚಿತ್ರಗಳ ಬಗ್ಗೆ ನೆನಪು ಮಾಡಿಕೊಳ್ಳುತ್ತಾ ಭವಿಷ್ಯದಲ್ಲಿ ಉತ್ತಮ ಚಿತ್ರ ಮಾಡುವ ಭರವಸೆ ಇದೆ ಎಂದರು.
ರಾಜೇಶ್ ಅವರ ಬೆಂಬಲದೊಂದಿಗೆ ಗ್ಯಾಂಗ್ಸ್ಟರ್ ಸಿನಿಮಾ ರೋಸಿ ಬಗ್ಗೆ ವಿವರಿಸುತ್ತಾ, ‘ನಾನು ರೋಮ್ಯಾಂಟಿಕ್ ಚಿತ್ರಗಳು ಮತ್ತು ಹಾಸ್ಯಮಯ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸಿದೆ. ಆದರೆ, ಅವು ನಿಜವಾಗಿಯೂ ನನ್ನ ಪರವಾಗಿ ಕೆಲಸ ಮಾಡಲಿಲ್ಲ. ಆದ್ರೆ ನನ್ನ ಬೆಂಬಲಕ್ಕೆ ಅಭಿಮಾನಿಗಳು ನಿಂತಿದ್ದಕ್ಕೆ ಧನ್ಯವಾದ ಹೇಳಿದ್ರು. ಹಾಗೆ ಮಾತು ಮುಂದುವರೆಸುತ್ತಾ ಹಾಗಾಗಿ ಗ್ಯಾಂಗ್ಸ್ಟರ್ ಸಿನಿಮಾ ಮಾಡುವ ನನ್ನ ಮೂಲಕ್ಕೆ ಮರಳಬೇಕು ಎಂದು ನಾನು ಭಾವಿಸಿದೆ. ರೋಸಿ ಒಂದು ಟಿಪಿಕಲ್ ಗ್ಯಾಂಗ್ಸ್ಟರ್ ಚಿತ್ರವಲ್ಲ, ಇದು ನಿಜ ಜೀವನದ ಘಟನೆಯನ್ನು ಆಧರಿಸಿಲ್ಲ. ಇದು ಆನಂದದಾಯಕ ಸವಾರಿಯಾಗಿರುತ್ತದೆ’ ಎಂದು ಯೋಗಿ ಹೇಳುವ ಮೂಲಕ ರೋಸಿ ಚಿತ್ರದ ಮೇಲಿನ ಭರವಸೆಯನ್ನ ಹೆಚ್ಚಿಸಿದ್ದಾರೆ.
ಟೈಟಲ್ ಪೋಸ್ಟರ್ ನಲ್ಲಿ ಯೋಗಿ ಲುಕ್ ನೋಡಿದ್ಮೆಲಂತೂ ಚಿತ್ರದ ಮೇಲಿನ ನಿರೀಕ್ಷೆಗಳಿಗೆ ಇನ್ನಷ್ಟು ಗರಿ ಬಂದಂತಾಗಿರೋದಂತು ನಿಜ.