ಜನಪ್ರಿಯ ನಿರೂಪಕಿ,ಬಿಗ್ ಬಾಸ್ ಕನ್ನಡ ಸೀಸನ್ ೭ ರ ಸ್ಪರ್ಧಿ,ಹಾಗು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಒಡತಿಯೂ ಆಗಿರುವ ಚೈತ್ರಾ ವಾಸುದೇವನ್ ತಮ್ಮ 7 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿರೋದು ಗೊತ್ತಿರೋ ವಿಚಾರ. ಇತ್ತೀಚೆಗಷ್ಟೇ ಈ ಬಗ್ಗೆ ಚೈತ್ರಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಕೆಲವರು ಈಗೋ ಇಶ್ಯೂಗಳಿಂದ ಹೀಗಾಗಿರಬೇಕು ಅಂತ ಮಾತಾಡಿಕೊಳ್ತಿದ್ರು. ಈಗ ಈ ವದಂತಿಗಳಿಗೆಲ್ಲಾ ಚೈತ್ರಾ ವಾಸುದೇವನ್ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡುತ್ತಾ, ಈಗೋ ಇಶ್ಯೂಗಳಿಂದ ವಿಚ್ಛೇದನ ಪಡೆದಿದ್ದೇವೆ ಎಂದು ಕೆಲವರು ಮಾತನಾಡ್ತಿದ್ದಾರೆ. ‘’ಹೆಚ್ಚಿನ ಜನರು ಯೋಚಿಸುವಂತೆ ನಾನು ಮತ್ತು ನನ್ನ ಪತಿ ಅಹಂಕಾರದ ಸಮಸ್ಯೆಗಳಿಂದ ಬೇರೆಯಾಗಲಿಲ್ಲ. ಸತ್ಯ ಮತ್ತು ನಾನು 2017ರಲ್ಲಿ ವಿವಾಹವಾದೆವು. ಅನ್ಯೋನ್ಯವಾಗಿ ಬಾಳಲು ಸುಮಾರು 5 ವರ್ಷಗಳ ಕಾಲ ತುಂಬಾ ಪ್ರಯತ್ನಪಟ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಬೇರೆ ಬೇರೆಯಾಗಲು ನಿರ್ಧಾರ ಮಾಡಿದ್ವಿ. ಕೆಲವು ತಿಂಗಳ ಹಿಂದೆ ನಾವು ವಿಚ್ಛೇದನ ಪಡೆದ್ವಿ’’ ಅಂತ ಚೈತ್ರಾ ಹೇಳಿಕೊಂಡಿದ್ದಾರೆ. ಆಡಿಕೊಳ್ಳುತ್ತಿದ್ದವರ ಬಾಯಿಗೆ ಬೀಗ ಹಾಕುವ ಕೆಲಸ ಮಾಡಿದ್ದಾರೆ.
ವಿಚ್ಛೇದನದ ಬಗ್ಗೆ ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದ ಪೋಸ್ಟ್
”ಎಲ್ಲರಿಗೂ ನಮಸ್ಕಾರ.. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ / ದ್ವೇಷ ಬೇಡ ಎಂದು ನಿಮ್ಮನ್ನ ವಿನಂತಿಸಿಕೊಳ್ಳುತ್ತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ಮುಂದೆ ಮುಂದುವರೆಸಲು ಬಯಸುತ್ತೇನೆ. ನಿಮ್ಮ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತೇನೆ” ಎಂದು ಚೈತ್ರಾ ವಾಸುದೇವನ್ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.