ವಿಕ್ರಾಂತ್ ರೋಣ ಚಿತ್ರದಲ್ಲಿ ಗಡಂಗ್ ರಕ್ಕಮ್ಮನಾಗಿ ಕುಣಿದು ಸಿನಿಮಾ ಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದ ಹೊತ್ತಲ್ಲಿ ಬಾಲಿವುಡ್‍ನ ಹಾಟ್ ಬ್ಯೂಟಿ ಜಾಕ್ವೆಲಿನ್ ವಂಚಕ ಸುಕೇಶ್ ಚಂದ್ರಶೇಖರ್ ವಿಚಾರಕ್ಕೆ ಜಗತ್ತಿನಾದ್ಯಂತ ಸುದ್ದಿಯಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ಸುಕೇಶ್ ಜೊತೆಗಿನ ಸಂಬಂಧ ಹಾಗೂ ಆತನ ವ್ಯವಹಾರಗಳಲ್ಲಿ ಕಿಕ್‍ಬ್ಯೂಟಿ ಕೈಚಳಕ ಇರಬಹುದು ಎನ್ನುವ ಕಾರಣಕ್ಕೆ ಜಾಕ್ವೆಲಿನ್‍ರನ್ನ ಆರೋಪಿಯನ್ನಾಗಿ ಪರಿಗಣಿಸಲಾಯ್ತು. ಅಚ್ಚರಿ ಅಂದರೆ ಜಾಕ್, ನಾಚ್ ಮೇರಿ ರಾಣಿಯ ಕಡೆ ಬೊಟ್ಟು ಮಾಡಿ ತೋರಿಸಿದ್ದಳು. ದಿಲ್‍ಬರ್ ಬ್ಯೂಟಿಗೆ ಸುಕೇಶ್ ಬಗ್ಗೆ ಎಲ್ಲವೂ ತಿಳಿದಿತ್ತು. ಆತ ಮಹಾ ಮೋಸಗಾರ, ನಯವಂಚಕ ಎನ್ನುವ ಸತ್ಯ ಗೊತ್ತಿದ್ರೂ ಕೂಡ, ನನ್ನಿಂದ ಎಲ್ಲವನ್ನೂ ಮುಚ್ಚಿಟ್ಟು ನನಗೂ ಮೋಸ ಆಗುವಂತೆ ಮಾಡಿದ್ಳು. ಹೀಗಂತ ಜಾಕ್ವೆಲಿನ್ ನಟಿ ನೋರಾ ಮೇಲೆ ಹಲ್ಲಲ್ಲು ಕಡಿದಿದ್ದಳು. ಹೀಗಾಗಿ, ಕುಸು ಕುಸು ಅಂತ ಸೊಂಟ ಕುಣಿಸಿಕೊಂಡು ಕಿಕ್ಕೇರಿಸುತ್ತಿದ್ದ ನೋರಾ ಫತೇಹಿಗೆ, ದೆಹಲಿ ಪೊಲೀಸರು ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದರು. ಆಗ ತನಿಖೆ ಎದುರಿಸಿದ ನೋರಾ ಫತೇಹಿ ಗಡಂಗ್ ರಕ್ಕಮನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಳು. ಈ ವಿಚಾರವಾಗಿ ಇತ್ತೀಚೆಗೆ ಕೋರ್ಟ್‍ಗೆ ಹಾಜರಾಗಿದ್ದ ನೋರಾ, ಪರಿಹಾರ ಕಟ್ಟಿಕೊಡುವವರೆಗೂ ಜಾಕಿನಾ ಕೈ ಬಿಡಲ್ಲ ಎಂದಿದ್ದಾರೆ. ವಂಚಕ ಸುಕೇಶ್‍ಗೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ.
ಆರಂಭದಿಂದಲೂ ನಟಿ ನೋರಾ ಇದನ್ನೇ ಹೇಳ್ತಾ ಬರ್ತಿದ್ದಾರೆ. ಸುಕೇಶ್ ಜೊತೆಗೆ ಸಂಬಂಧವಿದೆ ಅನ್ನೋದು ಶುದ್ದಸುಳ್ಳು. ನಾನು ಕೆನಡಾ ಮೂಲದವಳು, ಇಲ್ಲಿ ಒಬ್ಬಂಟಿಯಾಗಿದ್ದೇನೆ ಎನ್ನುವ ಕಾರಣಕ್ಕೆ ನನ್ನನ್ನು ಬಲಿಪಶು ಮಾಡುವ ಕೆಲಸ ಆಗ್ತಿದೆ. ಸುಖಾಸುಮ್ಮನೇ ವಂಚಕ ಸುಕೇಶ್ ಕೇಸ್‍ನಲ್ಲಿ ನನ್ನ ಹೆಸರನ್ನು ಎಳೆದು ತರಲಾಗ್ತಿದೆ ಎಂದು ನೋರಾ ಕಣ್ಣೀರಾಕಿದ್ದಾರೆ.
ಜಾಕ್ವೆಲಿನ್ ವಿರುದ್ದದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ದೆಹಲಿಯ ಪಟಿಯಾಲ ಹೌಸ್‍ಕೋರ್ಟ್‍ಗೆ ಬಂದಿದ್ದ ದಿಲ್‍ಬರ್ ಬ್ಯೂಟಿ, ಈ ಪ್ರಕರಣದಿಂದ ಮಾನಸಿಕವಾಗಿ ಸಾಕಷ್ಟು ಕಿರಿಕಿರಿ ಅನುಭವಿಸಿದ್ದೇನೆ. ಈ ಘಟನೆಯಿಂದ ನನ್ನ ವರ್ಚಸ್ಸಿಗೆ ಕುತ್ತು ಬಂದಿದ್ದು, ಹತ್ತಾರು ಆಫರ್ ಗಳನ್ನು ಕಳೆದುಕೊಂಡಿದ್ದೇನೆ. ನನ್ನ ಹೆಸರು ಹಾಳು ಮಾಡಿ, ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ತಂದ ಕಾರಣಕ್ಕೆ ಜಾಕ್ವೆಲಿನ್ ಪರಿಹಾರ ಕಟ್ಟಿಕೊಡಲೇಬೇಕು. ಈ ಹಿನ್ನಲೆಯಲ್ಲೇ ನಾನು ಅರ್ಜಿ ಸಲ್ಲಿಸಿದ್ದೇನೆಂದ ನೋರಾ, ಸುಕೇಶ್ ನಂಗೆ ಪರಿಚಯನೇ ಇಲ್ಲ. ಖಾಸಗಿ ಕಾರ್ಯಕ್ರಮಕ್ಕೆ ಇನ್ವೈಟ್ ಮಾಡಿದಾಗ ಗೆಸ್ಟ್ ಆಗಿ ಹೋಗಿಬಂದಿದ್ದೆ ಅಷ್ಟೇ ಅಂತ ಹಳೆಯ ಮಾತೊಂದನ್ನು ಪುನರ್ ಉಚ್ಚರಿಸಿದರು.
ಅಚ್ಚರಿ ಅಂದರೆ ನಟಿ ನೋರಾ ನಂಗೆ ಸುಕೇಶ್ ಗೊತ್ತೆಯಿಲ್ಲ ಅಂತಾರೇ. ಆದರೆ, ವಂಚಕ ಸುಕೇಶ್ ನನ್ನ ಹಳೆಯ ಗರ್ಲ್‍ಫ್ರೆಂಡ್ ಎನ್ನುವ ಮಾತನ್ನ ಒಪ್ಪಿಕೊಂಡಿದ್ದಾನೆ. ಆಕೆ ಏನ್ ಕೇಳ್ತಾಳೋ ಎಲ್ಲವನ್ನೂ ಕೊಡಿಸಿದ್ದೇನೆ. ಆದರೆ, ಜಾಕ್ವೆಲಿನ್ ನನ್ನ ಲೈಫ್‍ನಲ್ಲಿ ಬಂದಿದ್ದು ನೋರಾಗೆ ಇಷ್ಟವಿರಲಿಲ್ಲ. ಹೀಗಾಗಿ, ಜಾಕ್ ಕಂಡ್ರೆ ಉರಿದುರಿದು ಬೀಳ್ತಿದ್ದಳು. ಈಗಲೂ ಅದನ್ನೇ ಮಾಡ್ತಿದ್ದಾಳೆ. ಜಾಕ್ವೆಲಿನ್ ಬಗ್ಗೆ ಇಲ್ಲಸಲ್ಲದನ್ನೆಲ್ಲಾ ಪೊಲೀಸರ ಮುಂದೆ ಹೇಳಿಕೊಳ್ಳುತ್ತಿದ್ದಾಳೆ. ಹೀಗಂತ ನಮ್ಮ ವಕೀಲರ ಮೂಲಕ ಪತ್ರವೊಂದನ್ನ ಜೈಲಿನಿಂದಲೇ ಬಿಡುಗಡೆ ಮಾಡಿಸಿದ್ದಾನೆ. ಅಷ್ಟಕ್ಕೂ, ಇದರಲ್ಲಿ ಯಾರದ್ದು ಸರೀ, ಯಾರದ್ದು ತಪ್ಪು? ಗೊತ್ತಿಲ್ಲ. ಸದ್ಯ ಸುಕೇಶ್ ತಿಹಾರ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಉದ್ಯಮಿಯೊಬ್ಬರ ಪತಿಯನ್ನ ಜೈಲಿನಿಂದ ಬಿಡಿಸೋದಾಗಿ ನಂಬಿಸಿ ಬರೋಬ್ಬರಿ 200 ಕೋಟಿ ವಂಚಿಸಿರುವ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ. ಇವನ ಸಂಗಡ ಸ್ನೇಹ- ಪ್ರೀತಿ ಇತ್ಯಾದಿ ಇತ್ಯಾದಿ ವಿಚಾರಕ್ಕೆ ಜಾಕ್, ನೋರಾ, ಸೇರಿದಂತೆ ಬಾಲಿವುಡ್‍ನ ಸಾಕಷ್ಟು ಜನ ನಟಿಮಣಿಯರು ತನಿಖೆ ಎದುರಿಸುತ್ತಿದ್ದಾರೆ. ಈ ಪ್ರಕರಣ ಅದೆಲ್ಲಿಗೆ ಹೋಗಿ ಮುಟ್ಟುತ್ತೋ? ಇನ್ನೂ ಯಾರೆಲ್ಲ ನಟಿಮಣಿಯರ ಮುಖವಾಡ ಕಳಚುತ್ತೋ ಆ ಮುಂಬೈ ಬೀದಿಗೆ ಗೊತ್ತು