ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರು ನೋಡ್ತಿರುವ ಸಿನಿಮಾ `ಜೈಲರ್’. ಭಾರತೀಯ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಇದಾಗಿದ್ದು, ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ. ಇನ್ನೊಂದು ವಾರದಲ್ಲಿ `ಜೈಲರ್’ ಅಖಾಡಕ್ಕಿಳಿಯುತ್ತಿದ್ದು, ಸದ್ಯ ಟ್ರೇಲರ್ ರಿಲೀಸ್ ಆಗಿದೆ. ಹೈವೋಲ್ಟೇಜ್ ಆ್ಯಕ್ಷನ್, ಮಾಸ್ ಡೈಲಾಗ್, ಹೊಸ ಮ್ಯಾನರಿಸಂ ಜೊತೆ ಬಂದಿರುವ ಶಿವಾಜಿ ಸಖತ್ ಕಿಕ್ಕೇರಿಸುತ್ತಿದ್ದಾರೆ. ಬಿಡುಗಡೆಯಾದ 24 ಗಂಟೆಯೊಳಗೆ 10ಕ್ಕೂ ಅಧಿಕ ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಜೈಲರ್ ಟ್ರೇಲರ್ ಮಾತ್ರ ಭಜರಂಗಿ ಭಕ್ತರನ್ನ ನಿರಾಸೆಗೊಳ್ಳುವಂತೆ ಮಾಡಿದೆ.
ಗಂಧದಗುಡಿಯ ಭಜರಂಗಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ `ಜೈಲರ್’ ಚಿತ್ರದಲ್ಲಿ ನಟಿಸಿರೋದು ನಿಮಗೆಲ್ಲ ಗೊತ್ತೆಯಿದೆ. ಹೀಗಾಗಿ, ಶಿವಣ್ಣ ಫ್ಯಾನ್ಸ್ `ಜೈಲರ್’ ಟ್ರೇಲರ್ ಬಿಡುಗಡೆಗಾಗಿ ರಜನಿ ಅಭಿಮಾನಿಗಳೊಟ್ಟಿಗೆ ಕಾದುಕುಳಿತಿದ್ದರು. ಸರಪಟಾಕಿ ಹಚ್ಚಿ ಸಂಭ್ರಮಿಸುವುದಕ್ಕೆ ರೆಡಿಯಾಗಿದ್ದರು. ಆದರೆ, ಟ್ರೇಲರ್ ನಲ್ಲಿ ಕರುನಾಡ ಚಕ್ರವರ್ತಿ ಕಾಣಲೇ ಇಲ್ಲ. ಹೀಗಾಗಿ, ಸೆಂಚುರಿಸ್ಟಾರ್ ಫ್ಯಾನ್ಸ್ ಕೊಂಚ ಬೇಜಾರಾಗಿದ್ದಾರೆ. ಒಂದೇ ಒಂದು ಫ್ರೇಮ್‍ನಲ್ಲೂ ನಮ್ಮ ಬಾಸ್‍ನ ತೋರಿಸಲಿಲ್ಲವಲ್ಲ ಅಂತ ಅಪ್‍ಸೆಟ್ ಆಗಿದ್ದಾರೆ. ಅಷ್ಟಕ್ಕೂ, `ಜೈಲರ್’ ಟೀಮ್ ನಮ್ಮ ಶಿವಣ್ಣನ್ನ ಮಾತ್ರ ಹೈಡ್ ಮಾಡಿಲ್ಲ. ಬದಲಾಗಿ ಚಿತ್ರದಲ್ಲಿ ನಟಿಸಿರುವ ಮಲೆಯಾಳಂ ಸೂಪರ್‌ಸ್ಟಾರ್ ಮೋಹನ್‍ಲಾಲ್, ತಮನ್ನಾ, ನಾಗಬಾನು, ಕಿಶೋರ್ ಸೇರಿದಂತೆ ಇನ್ನೂ ಕೆಲವರನ್ನೂ ಟ್ರೇಲರ್‍ನಿಂದ ಕಟ್ ಮಾಡಿದ್ದಾರೆ. ಇದರ ಉದ್ದೇಶ ಕುತೂಹಲ ಹೆಚ್ಚಿಸುವುದಕ್ಕಾಗಿನಾ? ಅಥವಾ ಲುಕ್ಕು-ಗೆಟಪ್ಪುಗಳು ರಿವೀಲ್ ಆಗಿಬಿಡುತ್ತವೆ ಎನ್ನುವ ಭಯಾನಾ ಅನ್ನೋದು ಗೊತ್ತಾಗಿಲ್ಲ.
ಈ ಹಿಂದೆ `ಜೈಲರ್’ ಟೀಮ್ ಚಿತ್ರದ ತಾರಾಬಳಗವನ್ನ ಒಂದು ವಿಡಿಯೋ ಮೂಲಕ ಇಂಟ್ರುಡ್ಯೂಸ್ ಮಾಡಿಕೊಟ್ಟಿತ್ತು. ಆ ವಿಡಿಯೋದಲ್ಲಿ ನಮ್ಮ ಮಾಸ್ ಲೀಡರ್ ಶಿವಣ್ಣನ ಲುಕ್ ರಿವೀಲ್ ಆಗಿತ್ತು. ಒಂದೇ ಒಂದು ಫ್ರೇಮ್‍ನಲ್ಲಿ ಬಂದಂತಹ ಬಂಗಾರ ಸನ್ ಆಫ್ ಬಂಗಾರದ ಮನುಷ್ಯನ್ನ ನೋಡಿ ದೊಡ್ಮನೆ ಭಕ್ತರು ಫುಲ್ ಫಿದಾ ಆಗಿದ್ದರು. ಹೀಗಾಗಿಯೇ, ಟ್ರೇಲರ್‍ಗಾಗಿ ಎದುರುನೋಡುತ್ತಾ ಕುಳಿತಿದ್ದರು. ಸದ್ಯ, ಟ್ರೇಲರ್ ನಿಂದ ನಿರಾಸೆಯಾಗಿದೆ, ಆದರೆ `ಜೈಲರ್’ ಸಿನಿಮಾ ನಿರಾಸೆ ತರಿಸಲ್ಲ ಎನ್ನುವ ನಂಬಿಕೆ ಭಜರಂಗಿ ಭಕ್ತರಿಗಿದೆ. ಈಗಾಗಲೇ ಶಿವಣ್ಣ ಹೇಳಿಕೊಂಡಿರುವಂತೆ `ಜೈಲರ್’ ಚಿತ್ರದಲ್ಲಿ ಪುಟ್ಟ ಪಾತ್ರ. ಬಟ್ ಸೂಪರ್‍ಸ್ಟಾರ್ ರಜನಿಕಾಂತ್ ಅವ್ರೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ಶಿವಣ್ಣ ಧನ್ಮೋಸ್ಮಿ ಅಂತಾರೆ. ಕ್ಲೈಮ್ಯಾಕ್ಸ್ ವೇಳೆಗೆ ತನ್ನ ಪಾತ್ರದ ಆಗಮನವಾಗಲಿದ್ದು, 10ರಿಂದ 11 ನಿಮಿಷಗಳ ಕಾಲ `ಜೈಲರ್’ ಚಿತ್ರದಲ್ಲಿ ತಲೈವಾ ಜೊತೆಗೆ ತಲ್ಲಣ ಸೃಷ್ಟಿಸ್ತಾರೆ ಸೆಂಚುರಿಸ್ಟಾರ್
ಅಂದ್ಹಾಗೇ, `ಜೈಲರ್’ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ. `ಕಾವಾಲಯ್ಯ’ ಹಾಡಿನ ಕ್ರೇಜ್ ಇಡೀ ಜಗತ್ತು ಮುಟ್ಟಿರೋದ್ರಿಂದ ವಲ್ಡ್‍ವೈಡ್ ಮಂದಿ ಈ ಸಿನಿಮಾಗಾಗಿ ಎದುರುನೋಡ್ತಿದ್ದಾರೆ. ಪಡೆಯಪ್ಪನ ಜೊತೆಗೆ ಪ್ಯಾನ್ ಇಂಡಿಯಾ ಸ್ಟಾರ್ ಗಳೆಲ್ಲಾ ಸ್ಕ್ರೀನ್ ಶೇರ್ ಮಾಡಿರೋದ್ರಿಂದ ಕುತೂಹಲ ಮುಗಿಲುಮುಟ್ಟಿದೆ. ರಜನಿ ಹಾದಿಯಾಗಿ ಜಾಕಿಶ್ರಾಫ್, ಶಿವಣ್ಣ, ಮೋಹನ್‍ಲಾಲ್, ಸುನೀಲ್, ನಾಗಬಾಬು, ರಮ್ಯಾಕೃಷ್ಣ ಹೀಗೆ `ಜೈಲರ್’ ಭಾಗವಾಗಿರುವ ಎಲ್ಲಾ ತಾರೆಯರ ಲುಕ್ಕು-ಗೆಟಪ್ ಕಲಾಭಿಮಾನಿಗಳ ನಿದ್ದೆಗೆಡಿಸಿದೆ. ಬೀಸ್ಟ್ ಡೈರೆಕ್ಟರ್ ನೆಲ್ಸನ್ `ಜೈಲರ್’ ಮೂಲಕ ಬ್ಯಾಂಗ್ ಮಾಡೋದು, ವಲ್ಡ್‍ವೈಡ್ ಈ ಸಿನಿಮಾ ನಿಲ್ಲಿಸೋದು ಗ್ಯಾರಂಟಿ ಎನ್ನಲಾಗ್ತಿದೆ. ಅನಿರುದ್ದ್ ರವಿಚಂದ್ರನ್ ಸಂಗೀತ, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದ್ದು, ಸನ್‍ಪಿಕ್ಚರ್ ಸಂಸ್ಥೆ ನೂರಾರು ಕೋಟಿ ಬಂಡವಾಳ ಸುರಿದು ಈ ಸಿನಿಮಾ ತಯ್ಯಾರಿಸಿದೆ. ಆಗಸ್ಟ್ 10ರಂದು ತಮಿಳು, ತೆಲುಗು, ಹಿಂದಿಯಲ್ಲಿ `ಜೈಲರ್’ ಆರ್ಭಟ ಶುರುವಾಗಲಿದೆ.