ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ತಮ್ಮ 46ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋದು ಗೊತ್ತಿರೋ ವಿಚಾರ. ಟೈಟಲ್ ಇನ್ನೂ ಫಿಕ್ಸ್ ಆಗದ ಈ ಸಿನೆಮಾವನ್ನ ‘K 46‘ಹೆಸರಿನಲ್ಲಿ ಕರೆಯಲಾಗ್ತಿದ್ದು,ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಶನ್ಸ್’ ಮೂಲಕ ಕಲೈಪುಲಿ ಎಸ್. ಥಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ಬೀಡು ಬಿಟ್ಟಿದೆ. ತಮಿಳರ ನೆಲದಲ್ಲಿ ಆಲ್ಮೋಸ್ಟ್ ಚಿತ್ರೀಕರಣವಾಗ್ತಿರೋ ಈ ಚಿತ್ರದಲ್ಲಿ ಒಂದು ವಿಶೇಷತೆ ಇದೆ. ಹೌದು ಕಿಚ್ಚನ ಈ ಸಿನೆಮಾದಲ್ಲಿ, ಸಿನಿಮಾದ ಸೆಟ್‌ನಲ್ಲಿ ಕೆಲಸ ಮಾಡುತ್ತಿರುವ ಶೇಕಡ 80ರಷ್ಟು ಮಂದಿ ಕನ್ನಡದವರಂತೆ. ಹೀಗೆ ತಮಿಳರ ನಾಡಲ್ಲಿ ಇಷ್ಟು ಪ್ರಮಾಣದಲ್ಲಿ ಕನ್ನಡದ ಮಂದಿ ಕೆಲಸಮಾಡಲು ಅವಕಾಶ ಮಾಡಿಕೊಟ್ಟಿದ್ದು ನಮ್ ಕಿಚ್ಚ ಅಂದ್ರೆ ನೀವು ನಂಬಲೇ ಬೇಕು.
ಸುದೀಪ್ ಅವರಿಗಿರೋ ಅತೀವ ಕನ್ನಡ ಪ್ರೀತಿ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಈಗ ಮತ್ತೊಮ್ಮೆ ಮಾಣಿಕ್ಯನ ಕನ್ನಡ ಪ್ರೇಮ ಎಂತಹದ್ದು ಅನ್ನೋದು ಸಾಬೀತಾಗಿದೆ. ‘K 46‘ ಸಿನೆಮಾವನ್ನ ತಮಿಳಿನಲ್ಲೇ ನಿರ್ಮಾಣ ಮಾಡೋದಕ್ಕೆ ಪ್ರೊಡಕ್ಷನ್ ಹೌಸ್ ಮುಂದಾಗಿತ್ತು. ಆದರೆ, ಕಿಚ್ಚ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಚಿತ್ರ ಕನ್ನಡದಲ್ಲಿ ತಯ್ಯಾರಾಗಲಿ, ಆ ಮೇಲೆ ಅದನ್ನು ತಮಿಳಿಗೆ ಡಬ್ ಮಾಡೋಣವೆಂದು ತಿಳಿಸಿದ್ದಾರೆ. ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ನಡೆದರೂ ಕೂಡ ಸೆಟ್‌ನಲ್ಲಿ ಮಾತ್ರ ಅತೀ ಹೆಚ್ಚು ಕನ್ನಡದ ತಂತ್ರಜ್ಞರು ಮತ್ತು ಕಲಾವಿದರೇ ತುಂಬಿಕೊಂಡಿದ್ದಾರೆ. ಆ ಮೂಲಕ ತಮಿಳುನಾಡಿನ ಮಹಾಬಲಿಪುರಂನಲ್ಲೂ ಕನ್ನಡದ ಕಂಪು ಹರಡೋಕೆ ಕಿಚ್ಚ ಪ್ರತ್ಯಕ್ಷ ಕಾರಣವಾಗಿದ್ದಾರೆ.
ಅಜನೀಶ್ ಬಿ. ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣ’ K 46′ ಗೆ ಇದ್ದು, ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.ಈ ಹಿಂದೆ ಬಿಡುಗಡೆಯಾದ ಟೀಸರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು,ಸಿನೆಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಡಿಸೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾಹಿತಿಗಳಿವೆ.