ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಆಸ್ಕರ್ ಅಂಗಳಕ್ಕೆ ‘ಚಂಪಾರಣ್ ಮಟನ್’ ಎಂಟ್ರಿ ; ರೇಸ್‍ನಲ್ಲಿ ಗೆದ್ದು ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್ ಮುಡಿಗೇರಿಸಿಕೊಳ್ಳುತ್ತಾ? 

Vishalakshi Pby Vishalakshi P
04/08/2023
in Majja Special
Reading Time: 1 min read
ಆಸ್ಕರ್ ಅಂಗಳಕ್ಕೆ ‘ಚಂಪಾರಣ್ ಮಟನ್’ ಎಂಟ್ರಿ ; ರೇಸ್‍ನಲ್ಲಿ ಗೆದ್ದು ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್ ಮುಡಿಗೇರಿಸಿಕೊಳ್ಳುತ್ತಾ? 

ಆರ್ ಆರ್ ಆರ್ ಸಿನಿಮಾ ಆಸ್ಕರ್ ಕಿರೀಟ ಮುಡಿಗೇರಿಸಿಕೊಂಡು ನಯಾ ಚರಿತ್ರೆ ಬರೆದಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ, ‘ಚಂಪಾರಣ್ ಮಟನ್’ ಸಿನಿಮಾ ಆಸ್ಕರ್​ ಪ್ರಶಸ್ತಿಯ ಬಾಗಿಲು ತಟ್ಟಿದೆ. ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು ಹೆಸರುವಾಸಿಯಾದ ಆಸ್ಕರ್‌ನ ಒಂದು ವಿಭಾಗವಾದ ಸ್ಟೂಡೆಂಟ್ ಅಕಾಡೆಮಿ ಅವಾರ್ಡ್ಸ್ 2023 ರ ಸೆಮಿ-ಫೈನಲ್‌ನಲ್ಲಿ ಸ್ಥಾನ ಗಳಿಸಿದೆ. ಬಿಹಾರದ ರಂಜನ್ ಉಮಾಕೃಷ್ಣನ್ ಎಂಬುವವರು ಈ ಚಿತ್ರ ನಿರ್ದೇಶನ ಮಾಡಿದ್ದು,ಚಂದನ್ ಕುಮಾರ್ ಮತ್ತು ಫಾಲಕ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಂಪಾರಣ್ ಮಟನ್  ಚಿತ್ರವು ಲಾಕ್​ಡೌನ್​ ಸಮಯದಲ್ಲಿ ಕೆಲಸ ಕಳೆದುಕೊಂಡು ಮನುಷ್ಯ ಅನುಭವಿಸಿದ ಕಥೆಯನ್ನೊಳಗೊಂಡಿದೆ.  ಕಥಾಹಂದರವು ಹೀರೋ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಇದನ್ನು ಬಿಹಾರದ ವೈಶಾಲಿ, ಮುಜಾಫರ್‌ಪುರ ಮತ್ತು ಬೇಗುಸರಾಯ್ ಪ್ರದೇಶಗಳ ಭಾಷೆಯಾಗಿರುವ ಬಜ್ಜಿಕ  ಉಪಭಾಷೆಯಲ್ಲಿ ರೂಪಿಸಲಾಗಿದೆ.  ಚಂಪಾರಣ್ ಮಟನ್ ನಾಲ್ಕು ವಿಭಾಗಗಳಲ್ಲಿ ಗೌರವಾನ್ವಿತ ನಿರೂಪಣೆ ವಿಭಾಗ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಥಾನ ಗಳಿಸಿದೆ. ಇದು ವಿದ್ಯಾರ್ಥಿ ಅಕಾಡೆಮಿ ಪ್ರಶಸ್ತಿಗಳಲ್ಲಿ ಮಾಡಿದ ಮೊದಲ ಭಾರತೀಯ ಚಲನಚಿತ್ರವಾಗಿದೆ. ವಿವಿಧ ಚಲನಚಿತ್ರ ತರಬೇತಿ ಸಂಸ್ಥೆಗಳಿಂದ ನಾಮನಿರ್ದೇಶನಗೊಂಡ 1700 ಚಲನಚಿತ್ರಗಳೊಂದಿಗೆ, ರಂಜನ್ ಕುಮಾರ್ ಅವರ ನಿರ್ದೇಶನವು ಆಸ್ಕರ್‌ನ ಸೆಮಿಫೈನಲ್ ಸುತ್ತಿಗೆ ತಲುಪಿದ 16 ಚಲನಚಿತ್ರಗಳಲ್ಲಿ ಟಾಪೆಸ್ಟ್​ ಸ್ಥಾನದಲ್ಲಿದೆ.

ಚಿತ್ರ ಆಸ್ಕರ್ ಅಂಗಳ ಪ್ರವೇಶಿಸಿರುವ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ  ನಟಿ ಫಾಲಕ್ ಖಾನ್,  ಚಿತ್ರವು ಬಿಹಾರದ ಜನರ ಅದಮ್ಯ ಮನೋಭಾವವನ್ನು ಸುಂದರವಾಗಿ ಬಿಂಬಿಸುತ್ತದೆ ಎಂದಿದ್ದಾರೆ.  ಇಡೀ ತಂಡಕ್ಕೆ ಮತ್ತು ಈ ಸಾಧನೆಗೆ ನಾನು ಕೃತಜ್ಞಳಾನಗಿದ್ದೇನೆ. ಇದು ನಾವೆಲ್ಲರೂ ಮಾಡಿದ ಕಠಿಣ ಪರಿಶ್ರಮದ ಫಲಿತಾಂಶ ಎಂದರು.  ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಂಜನ್  ಉಮಾಕೃಷ್ಣನ್, ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಆರ್ಥಿಕವಾಗಿ ಧ್ವಂಸಗೊಂಡಿರುವ ಗ್ರಾಮೀಣ ಕುಟುಂಬದ ಕಥೆಯನ್ನು ಹೇಳಿದರು. ಮಟನ್ ಅನ್ನು ರೂಪಕವಾಗಿ ಬಳಸಲಾಗಿದೆ.  40 ವರ್ಷಗಳ ನಂತರ  ಭಾರತೀಯ ಚಲನಚಿತ್ರವು ಈ ವಿಭಾಗದಲ್ಲಿ ಪ್ರಶಸ್ತಿಗಳ ರೇಸ್‌ಗೆ ತಲುಪಿರುವುದು ತುಂಬಾ ಹೆಮ್ಮೆ ತಂದಿದೆ.  ಈ ಶ್ರಮದ ಹಿಂದೆ ವಿಧು ಬಿನೋದ್ ಚೋಪ್ರಾ ಅವರ ಸಾಧನೆ ಇದೆ ಎಂದಿದ್ದಾರೆ.

ಇನ್ನು ಮೂವತ್ತು ದಿನಗಳಲ್ಲಿ ಆರು ಸಿನಿಮಾಗಳ ಅಂತಿಮ ಪ್ರವೇಶವನ್ನು ನಿರ್ಧರಿಸಲಾಗುವುದು. ಸೆಮಿಫೈನಲ್‌ನಲ್ಲಿ 17 ಚಿತ್ರಗಳ ನಡುವೆ ಸ್ಪರ್ಧೆ (Competition) ಏರ್ಪಟ್ಟಿದೆ ಮತ್ತು 2400 ಚಿತ್ರಗಳ ಪರಿಶೀಲನೆಯ ನಂತರ ಈ ಹಂತಕ್ಕೆ ತಲುಪಿದೆ. ಇನ್ನು ಈ ಪ್ರಶಸ್ತಿಯ ಕುರಿತು ಹೇಳುವುದಾದರೆ, ಅರ್ಜೆಂಟೀನಾ, ಬೆಲ್ಜಿಯಂ ಮತ್ತು ಜರ್ಮನಿಯಂತಹ ದೇಶಗಳ ಚಲನಚಿತ್ರಗಳನ್ನು ಒಳಗೊಂಡಿರುವ ಸೆಮಿ-ಫೈನಲ್‌ನಲ್ಲಿ ಚಂಪಾರಣ್ ಮಟನ್ ಒಂದಾಗಿದೆ.  ಪ್ರಪಂಚದಾದ್ಯಂತದ ಚಲನಚಿತ್ರ ತರಬೇತಿ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರ್ಧ ಗಂಟೆ ಅವಧಿಯದ್ದಾಗಿದೆ ಚಂಪಾರಣ್​ ಮಟನ್​ ಚಿತ್ರ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
‘ಮನೆ ಬಳಿ ಬರ್ಬೇಡಿ’ ಅಂದಿದ್ಯಾರಿಗೆ ಚುಟು ಚುಟು ಹುಡುಗಿ?

'ಮನೆ ಬಳಿ ಬರ್ಬೇಡಿ' ಅಂದಿದ್ಯಾರಿಗೆ ಚುಟು ಚುಟು ಹುಡುಗಿ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.