ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾಗೆ ಹೃದಯಘಾತವಾಗಿದ್ದು ಕೊನೆಯುಸಿರೆಳೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನ ಬ್ಯಾಂಕಾಕ್‍ಗೆ ತೆರಳಿದ್ರಂತೆ. ಆಗ ತೀವ್ರ ಹೃದಯಘಾತವಾಗಿದ್ದು ಉಸಿರು ನಿಲ್ಲಿಸಿದ್ದಾರೆಂಬ ಸುದ್ದಿ ತಿಳಿದುಬಂದಿದೆ. ಈ ಸುದ್ದಿ ಇಡೀ ಕರುನಾಡನ್ನೇ ಬೆಚ್ಚಿಬೀಳಿಸಿದೆ.
ದೇವರು ಎನಿಸಿಕೊಂಡವನು ಇದ್ದಾನಾ ? ಈ ಪ್ರಶ್ನೆ ಕೇಳಬೇಕು. ದೇವರು ಕರುಣಾಮಯಿ ಅಂತಾರೆ. ಆದರೆ, ಆ ಭಗವಂತ ಪದೇ ಪದೇ ನಾನು ನಿಷ್ಕರುಣಿ, ಕ್ರೂರಿ ಅನ್ನೋದನ್ನ ಪ್ರೂ ಮಾಡುತ್ತನೇ ಇದ್ದಾನೆ. ಅಪ್ಪುನಾ ಕಳೆದುಕೊಂಡಿರುವ ನೋವಿನಿಂದ ದೊಡ್ಮನೆ ಕುಟುಂಬ ಇನ್ನೂ ಹೊರಬಂದಿಲ್ಲ. ಆಗಲೇ ಮತ್ತೊಂದು ಆಘಾತ ದೊಡ್ಮನೆ ಕುಟುಂಬವನ್ನ ಕುಸಿದು ಬೀಳುವಂತೆ ಮಾಡಿದೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಹೃದಯಾಘಾತವಾಗಿದ್ದು ಅಣ್ಣಾವ್ರ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಸುದ್ದಿ ಕೇಳಿ ಇಡೀ ಕರುನಾಡು ಶಾಕ್‍ಗೆ ಒಳಗಾಗಿದೆ. ಭಗವಂತ ನೀನೆಷ್ಟು ಕ್ರೂರಿ? ಇನ್ನೆಷ್ಟು ಬಲಿ ಬೇಕು ನಿಂಗೆ ಅಂತ ಕೇಳ್ತಾ ಆ ದೇವರಿಗೆ ಹಿಡಿಶಾಪ ಹಾಕ್ತಿದ್ದಾರೆ.
ಅಂದ್ಹಾಗೇ, ವಿಜಯ ರಾಘವೇಂದ್ರ ಹಾಗೂ ಸ್ಪಂದನ ಪರಸ್ಪರ ಪ್ರೀತಿಸಿ ಕುಟುಂಬದ ಒಪ್ಪಿಗೆಯ ಮೇರೆಗೆ ಬಾಳಬಂಧನಕ್ಕೆ ಒಳಗಾಗಿದ್ದರು. 2007ರಲ್ಲಿ ಹಸೆಮಣೆ ಏರಿದ್ದ ಈ ಜೋಡಿಯ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಶೌರ್ಯ ಎಂಬ ಮಗನಿದ್ದಾನೆ. ಮುದ್ದಿನ ಮಗನ ಜೊತೆ ರಾಮ-ಸೀತೆಯಂತೆ ಬದುಕುತ್ತಿದ್ದ ಇವರ ಬಾಳಲ್ಲಿ ವಿಧಿ ಯಾಕಿಂಗ್ ಆಡಿದ್ನೋ ಏನೋ ಗೊತ್ತಿಲ್ಲ. ಸ್ಪಂದನಾ ಅಗಲಿಕೆಯಿಂದ ವಿಜಯ್ ಕುಸಿದುಬಿದ್ದಿದ್ದಾರೆ. ಜೀವದ ಗೆಳತಿ, ಬಾಳಸಂಗಾತಿಯನ್ನು ಕಳೆದುಕೊಂಡು ದಿಕ್ಕುತೋಚದ ಸ್ಥಿತಿಯಲ್ಲಿ ನಿಂತಿದ್ದಾರೆ.