ಶುಕ್ರವಾರ, ಜುಲೈ 4, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಇದು ಹೆಂಗಳೆಯರ ಹಾರ್ಟ್ ಕದ್ದ ಕಿರುತೆರೆಯ ‘ಕಂಠಿ’ ಯ ರಿಯಲ್ ಕಹಾನಿ!

Vishalakshi Pby Vishalakshi P
09/08/2023
in Majja Special
Reading Time: 1 min read
ಇದು ಹೆಂಗಳೆಯರ ಹಾರ್ಟ್ ಕದ್ದ ಕಿರುತೆರೆಯ ‘ಕಂಠಿ’ ಯ ರಿಯಲ್ ಕಹಾನಿ!

ಕಿರುತೆರೆಯಲ್ಲಿ ಪ್ರಸಾರವಾಗ್ತಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಸಿದ್ದತೆ ಬಗ್ಗೆ ಮತ್ತೆ ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ  ಈಗಾಗಲೇ ಈ ಸೀರಿಯಲ್ ಗೆ ಮನಸೋತು ಪ್ರತೀ ಪಾತ್ರವನ್ನ ಪ್ರೇಕ್ಷಕ ವರ್ಗದವರು ತಮ್ಮೊಂದಿಗೆ ಒಬ್ಬರಂತೆ ಕಾಣ್ತಿದ್ದಾರೆ . ಪುಟ್ಟಕ್ಕನಾಗಿ ಹಿರಿಯ ನಟಿ ಉಮಾಶ್ರಿ ನಟಿಸಿದ್ದು, ತಮ್ನ ಮೂರು ಹೆಣ್ಣು ಮಕ್ಕಳನ್ನ ಒಬ್ಬಂಟಿಯಾಗಿ ಮೆಸ್ ನಡೆಸುತ್ತಾ ಬೆಳಸುವ ಪರಿಗೆ ಮನಸೋತಿದ್ದಾರೆ . ಈ ದಾರಾವಾಹಿಯ ನಾಯಕ ಪಾತ್ರದಾರಿ ಕಂಠಿ ಉರುಫ್ ಶ್ರಿಕಂಠನ ಪಾತ್ರವೂ ಅಷ್ಟೇ ಗಮನ ಸೆಳೆದಿದೆ. ಬಡ್ಡಿ ಬಂಗಾರಮ್ಮನ ಪ್ರೀತಿಯ ಮಗನಾಗಿ ಪುಟ್ಟಕ್ಕನ ಮಗಳು ಸ್ನೇಹಳಾ ಪ್ರೀತಿಸಿ ಮದುವೆಯಾಗಿರುವ ಕಂಠಿ ಪಾತ್ರಧಾರಿಯ  ರಿಯಲ್ ಲೈಫ್ ಬಗ್ಗೆ ತಿಳಿಯುವ ಕುತೂಹಲ ಖಂಡಿತವಾಗಿಯೂ ಇದ್ದೇ ಇರತ್ತೆ.ಅದಕ್ಕೆ ಈ ಸ್ಟೋರಿನಾ ನೀವು ಓದಲೇ ಬೇಕು.

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಾಯಕ ಕಂಠಿಯ ನಿಜವಾದ ಹೆಸರು ಧನುಷ್. ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೂ ನಟನೆಯ ಮೇಲೆ ಆಸಕ್ತಿ ಇಟ್ಟುಕೊಂಡಿದ್ದ ಧನುಷ್, ಶಾರ್ಟ್‍ಫಿಲ್ಮ್, ಆಲ್ಬಂ ಹಾಡುಗಳಿಗೆ ಬಣ್ಣ ಹಚ್ಚಿದ್ದರು. ಆದರೆ, ನಟನಾಗಿ ಸ್ಕ್ರೀನ್ ಮೇಲೆ ಮಿಂಚುವ ಕನಸು ಈಡೇರಿದ್ದು ಪುಟ್ಟಕ್ಕನ ಮಕ್ಕಳು ಸೀರಿಯಲ್‍ನಿಂದ. ಸದ್ಯ ಈ ಧಾರಾವಾಹಿಯಿಂದ ಕಿರುತೆರೆ ಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ಕಂಠಿಯಾಗಿ ಕರುನಾಡಿನ ಅಂಗಳದಲ್ಲಿ ದಿಬ್ಬಣ ಹೊರಟು, ಹೆಣೈಕ್ಳ ಹೃದಯ ಕದ್ದಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ‘ಅನಿರೀಕ್ಷಿತ’, ’18+2′ ಕಿರುಚಿತ್ರಗಳನ್ನು, ‘ನನ್ನ ನಗು’ ಎನ್ನುವ ಆಲ್ಬಂ ಹಾಡಿನಲ್ಲೂ ಸಹ ಅಭಿನಯಿಸಿದ್ದರು. ಆದರೆ ಖ್ಯಾತಿ ಕೊಟ್ಟಿದ್ದು ಮಾತ್ರ ಪುಟ್ಟಕ್ಕನ ಮಕ್ಕಳು. ಯಾವ ರೀತಿ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದು ಇವರ ಕನಸಿತ್ತೋ ಅದೇ ರೀತಿಯ ಪಾತ್ರ ಸಿಕ್ಕಿದೆಯಂತೆ. ಕಂಠಿ ಪಾತ್ರಕ್ಕೂ ಧನುಷ್ ವ್ಯಕ್ತಿತ್ವಕ್ಕೂ ಹೋಲಿಕೆ ಇರೋದ್ರಿಂದ ಈ ಪಾತ್ರವನ್ನು ನಿಭಾಯಿಸುವುದು ಸುಲಭವಾಯಿತು ಎನ್ನುತ್ತಾರೆ ಕಿರುತೆರೆ ನಟ ಧನುಷ್.

ಈಗಾಗಲೇ ಸೀರಿಯಲ್, ಆಲ್ಬಂ ಸಾಂಗ್ ಮತ್ತು ಕಿರುಚಿತ್ರಗಳಲ್ಲಿ ನಟಿಸಿರುವ ಧನುಷ್ ಗೆ ಚಲನಚಿತ್ರಗಳಲ್ಲಿ ನಟಿಸುವ ಹಲವಾರು ಆಫರ್ ಗಳು ಬರುತ್ತಿವೆಯಂತೆ. ಆದರೆ ಧನುಷ್ ಕಂಠಿಯಂತಹ ಉತ್ತಮ ಪಾತ್ರದ ನಿರೀಕ್ಷೆಯಲ್ಲಿದ್ದು,ಅಂತಹ ಪಾತ್ರ ಅರಸಿ ಬಂದ್ರೆ ಶೀಘ್ರದಲ್ಲೇ ಧನುಷ್ ಬೆಳ್ಳಿಪರದೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆ ಎಲ್ಲಾ ಲಕ್ಷಣಗಳು ಧನುಷ್ ರಲ್ಲಿವೆ ಅನ್ನೋದರಲ್ಲಿ ನೋ ಡೌಟ್.


ಮೆಸ್ಸು ಮೆಸ್ಸು ಎನ್ನುತ್ತಾ ಸ್ನೇಹಾ ಹಿಂದೆ ಬಿದ್ದು, ಸುಳ್ಳು ಹೇಳಿ ಪ್ರೀತಿಸಿ, ಆಕೆಯನ್ನು ಮದುವೆಯಾಗಿ, ಸ್ನೇಹಗಾಗಿ ಏನು ಬೇಕಾದ್ರೂ ಮಾಡ್ತೀನಿ ಎನ್ನುವ ಕಂಠಿಯ ಪಾತ್ರಕ್ಕೆ ಹುಡುಗೀರು ಕ್ಲೀನ್ ಬೋಲ್ಡ್ ಆಗಿರೋದು ನಿಜ. ಹೋದಲ್ಲಿ ಬಂದಲ್ಲಿ ಮುತ್ತಿಕೊಂಡು ಮುತ್ತಿಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ತಿರೋದು ಸತ್ಯ. ಜೊತೆಗೆ ತಮ್ಮ ಡ್ರೀಮ್ ಬಾಯ್ ಹೀಗೆ ಇರ್ಬೇಕು ಅಂತಲೂ ಕನಸು ಕಾಣುತ್ತಿದ್ದಾರೆ. ಇನ್ನೂ ಕಂಠಿ ಅಭಿಮಾನಿಗಳು ರಿಯಲ್ ಲೈಫ್ ನಲ್ಲೂ ಕಂಠಿ ಮತ್ತು ಸ್ನೇಹ ಇಬ್ಬರೂ ಮದುವೆಯಾದರೆ ಚೆಂದ ಎನ್ನುತ್ತಿದ್ದಾರೆ. ನೋಡೋಣ ಎಷ್ಟೋ ಜೋಡಿಗಳು ಆನ್‍ಸ್ಕ್ರೀನಲ್ಲಿ ಒಂದಾಗಿ ಕೊನೆಗೂ ಆಫ್‍ಸ್ಕ್ರೀನ್‍ನಲ್ಲೂ ಜೋಡಿಗಳಾಗಿದ್ದಾರೆ. ಅದೃಷ್ಟ ಇದ್ದರೆ, ಹಣೆಬರಹದಲ್ಲಿ ಬರೆದಿದ್ದರೆ ಇಬ್ಬರು ಮದುವೆ ಆದ್ರೂ ಆಗ್ಬೋದು ಯಾರಿಗ್ ಗೊತ್ತು ಅಲ್ಲವೇ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ತಲೈವಾ ವಿರುದ್ದ ತಿರುಗಿ ಬಿದ್ದರಲ್ಲ ದಳಪತಿ ಅಭಿಮಾನಿಗಳು!

ತಲೈವಾ ವಿರುದ್ದ ತಿರುಗಿ ಬಿದ್ದರಲ್ಲ ದಳಪತಿ ಅಭಿಮಾನಿಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.