ಘೋಸ್ಟ್… ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ. ಬೀರ್ ಬಲ್ ಚಿತ್ರ ಖ್ಯಾತಿಯ ನಿರ್ದೇಶಕ ಎಂ.ಜಿ ಶ್ರೀನಿವಾಸ್ ಡೈರೆಕ್ಟ್ ಮಾಡಿರುವ ಚಿತ್ರ ಇದಾಗಿದ್ದು, ಸೌತ್, ನಾರ್ತ್ ಸೂಪರ್ ಸ್ಟಾರ್ ಗಳು ಸಮಾಗಮಗೊಂಡಿದ್ದಾರೆ. ಬಾಲಿವುಡ್ನಿಂದ ಅನುಪಮ್ ಖೇರ್, ಮಾಲಿವುಡ್ನಿಂದ ಜಯರಾಮ್ `ಘೋಸ್ಟ್’ ತಂಡ ಸೇರಿಕೊಂಡು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಈಗಾಗಲೇ, ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ನಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ವಿಶೇಷ ಅಂದರೆ, ಮಲೆಯಾಳಂ ಸೂಪರ್ ಸ್ಟಾರ್ ಜಯರಾಮ್ ತಮ್ಮ ಪಾತ್ರಕ್ಕೆ ತಾವೇ ವಾಯ್ಸ್ ಡಬ್ ಮಾಡಿದ್ದಾರೆ. ಇದೇ ಮೊದಲ ಭಾರಿಗೆ ಕನ್ನಡಕ್ಕೆ ಕಾಲಿಟ್ಟಿರೋ ಇವರು, ಡಬ್ಬಿಂಗ್ ಮಾಡಲು ನಿರಾಕರಿಸದೇ, ಕನ್ನಡ ಕಲಿತುಕೊಂಡು ತಮ್ಮ ಪಾತ್ರಕ್ಕೆ ಜೀವತುಂಬುವ ಕೆಲಸ ಮಾಡಿದ್ದಾರೆ. ಈ ವಿಚಾರವನ್ನ ನಿರ್ದೇಶಕ ಶ್ರೀನಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಜಗಜ್ಜಾಹೀರು ಮಾಡಿದ್ದಾರೆ. ಮಲೆಯಾಳಂ ನಟನ ಕನ್ನಡ ಪ್ರೇಮವನ್ನ ಕಂಡು ಕನ್ನಡಿಗರು ಉಘೇ ಉಘೇ ಎನ್ನುತ್ತಿದ್ದಾರೆ.
ಇನ್ನೂ ಬಿಗ್ ಸ್ಕ್ರೀನ್ ಮೇಲೆ ಬಿಗ್ಡ್ಯಾಡಿನಾ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ.`ನೀವು ಗನ್ನಲ್ಲಿ ಎಷ್ಟು ಜನರನ್ನ ಎದುರಿಸಿದ್ದೀರೋ, ಅದಕ್ಕಿಂತ ಜಾಸ್ತಿ ಜನರನ್ನ ನಾನು ಕಣ್ಣಲ್ಲೇ ಎದುರಿಸಿದ್ದೀನಿ’ ಅದಕ್ಕೆ ಅವರು ನನ್ನನ್ನ ಒಜಿ ಅಂತಾರೇ. ಒಜಿ ಅಂದರೆ ಏನ್ಗೊತ್ತಾ ಒರಿಜಿನಲ್ ಗ್ಯಾಂಗ್ಸ್ಟಾರ್, ಹೀಗೊಂದು ಡೈಲಾಗ್ ಬಿಟ್ಟಿರೋ ಸೆಂಚುರಿ ಸ್ಟಾರ್ ಘೋಸ್ಟ್ ಗಾಗಿ ಫ್ಯಾನ್ಸ್ ಒಂಟಿಕಾಲಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಸಿನಿಮಾ ವೆಸ್ಟ್ರನ್ ಸ್ಟೈಲ್ನಲ್ಲಿದೆ, ನಾನು ಮೂರ್ನಾಲ್ಕು ಶೇಡ್ಗಳಲ್ಲಿ ಕಾಣಿಸಿಕೊಳ್ತೀನಿ ಅಂತ ಶಿವಣ್ಣ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿರೋದ್ರಿಂದ `ಘೋಸ್ಟ್’ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಎಂ.ಜಿ ಶ್ರೀನಿವಾಸ್ ಡೈರೆಕ್ಟ್ ಮಾಡಿದ್ದಾರೆ. ಸಂದೇಶ್ ನಾಗರಾಜ್ ಅವ್ರು ಬಹುಕೋಟಿ ಬಂಡವಾಳ ಸುರಿದು ಈ ಚಿತ್ರ ನಿರ್ಮಿಸಿದ್ದಾರೆ.
ಘೋಸ್ಟ್ ಸಿನಿಮಾದ ಪೋಸ್ಟರ್ ಮತ್ತು ಟೀಸರ್ ಹೊಸ ರೀತಿಯ ಅನುಭವ ಕೊಟ್ಟಿದೆ. ಟೀಸರ್ ಅಂತೂ ಬೇಜಾನ್ ಕ್ರೇಜ್ ಹುಟ್ಟು ಹಾಕಿದೆ. ಈ ಸಿನಿಮಾ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸಾಗಲಿದೆ. ಈ ವರ್ಷ ತೆರೆಗೆ ಬರುತ್ತಿರುವ ಶಿವಣ್ಣನ ಮೊದಲ ಚಿತ್ರ ಇದು. ಕಬ್ಜ ಹಾಗೂ ಜೈಲರ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಂಡರಾದರೂ, `ಘೋಸ್ಟ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಹೊಸ ಖದರ್ ನೋಡೋದಕ್ಕೆ ದೊಡ್ಮನೆ ಭಕ್ತರು ಕಾತುರರಾಗಿದ್ದಾರೆ. ದಸರಾ ಹಬ್ಬದಂದು`ಘೋಸ್ಟ್’ ಮೂಲಕ ಭಜರಂಗಿ ಅಖಾಡಕ್ಕೆ ಇಳಿಯೋದು ಫಿಕ್ಸಾಗಿದ್ದು, ಬೆಳ್ಳಿಭೂಮಿಗೆ ನಯಾ ಕಳೆ ಬರೋದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಬೆಳೆಯಾಗೋದಂತೂ ಗ್ಯಾರಂಟಿ.