ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಎಡಗೈ ಬಳಸುವವರಿಗಾಗಿಯೇ ಹೆಲ್ಮೆಟ್ ಲಾಂಚ್; ಇದು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಇಂಪ್ಯಾಕ್ಟ್!

Vishalakshi Pby Vishalakshi P
12/08/2023
in Majja Special
Reading Time: 1 min read
ಎಡಗೈ ಬಳಸುವವರಿಗಾಗಿಯೇ ಹೆಲ್ಮೆಟ್ ಲಾಂಚ್; ಇದು ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾದ ಇಂಪ್ಯಾಕ್ಟ್!

ಜಗತ್ತಿನಲ್ಲಿ ಪ್ರತಿ ಆಗಸ್ಟ್ 13ರಂದು ‘ಅಂತಾರಾಷ್ಟ್ರೀಯ ಎಡಗೈಯವರ ದಿನ’ವನ್ನು ಆಚರಿಸಲಾಗುತ್ತದೆ. ಇನ್ನು ಇದೇ ಎಡಗೈ ಬಳಸುವವರ ಸುತ್ತ ಕನ್ನಡದಲ್ಲಿ ‘ಎಡಗೈ ಅಪಘಾತಕ್ಕೆ ಕಾರಣ’ ಎಂಬ ಸಿನಿಮಾವೊಂದು ಕೂಡ ತಯಾರಾಗುತ್ತಿದೆ. ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ ‘ವೇಗ’ ಹೆಲ್ಮೆಟ್ ಕಂಪನಿಯವರಿಗೆ ಬಹಳ ಇಷ್ಟವಾಗಿದೆ. ಹೀಗಾಗಿ ಸಿನಿಮಾಗೆ ‘ವೇಗ’ ಹೆಲ್ಮೆಟ್ ಕಂಪನಿ ಸಾಥ್ ಕೊಟ್ಟಿದೆ. ಅದೇಗೇ ಅಂತೀರಾ? ಇದೇ ಆಗಸ್ಟ್ 13ರಂದು ‘ಅಂತಾರಾಷ್ಟ್ರೀಯ ಎಡಗೈ ದಿನ’ದಂದು ‘ವೇಗ’ ಹೆಲ್ಮೆಟ್ ಕಂಪನಿ ಎಗಡೈ ಬಳಸುವವರರಿಗಾಗಿ ಹೊಸ ಹೆಲ್ಮೆಟ್ ಲಾಂಚ್ ಮಾಡುತ್ತಿದೆ.

ಹೌದು, ಈಗ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸಿದ್ದು, ವಿಭಿನ್ನ ಬಗೆಯ ಕಥಾಹಂದರದ ಕನ್ನಡ ಚಿತ್ರಗಳು ಈಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಂತೆ, ‘ಎಡಗೈ ಅಪಘಾತ ಕಾರಣ’ ಸಿನಿಮಾದ ಐಡಿಯಾ, ಕಾನ್ಸೆಪ್ಟ್ ‘ವೇಗ’ ಹೆಲ್ಮೆಟ್ ಕಂಪನಿಯರನ್ನು ತಲುಪಿದೆ. ಹೀಗಾಗಿ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾ ತಂಡದ ಜೊತೆ ‘ವೇಗ’ ಹೆಲ್ಮೆಟ್ ಕಂಪನಿ ಕೈ ಜೋಡಿಸಿದ್ದು, ಎಡಗೈ ಬಳಸುವವರಿಗೆ ಹೊಸ ಹೆಲ್ಮೆಟ್ ಪರಿಚಯಿಸುತ್ತಿದೆ.

ಅಂದಹಾಗೇ ಸಮರ್ಥ್ ಬಿ ಕಡಕೊಳ್ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್-ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ, ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ‘ಹೈಫನ್ ಪಿಕ್ಚರ್ಸ್’ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣವಾಗಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅದ್ದೂರಿ ಪಾರ್ಟಿ ಸಾಂಗಿಗೆ ದಿಗಂತ್ – ಧನ್ಯಾ ಹೆಜ್ಜೆ;ಭರದಿಂದ ಸಾಗಿದ ‘ದಿ ಜಡ್ಜ್ ಮೆಂಟ್’ ಚಿತ್ರೀಕರಣ!

ಅದ್ದೂರಿ ಪಾರ್ಟಿ ಸಾಂಗಿಗೆ ದಿಗಂತ್ - ಧನ್ಯಾ ಹೆಜ್ಜೆ;ಭರದಿಂದ ಸಾಗಿದ ‘ದಿ ಜಡ್ಜ್ ಮೆಂಟ್’ ಚಿತ್ರೀಕರಣ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.